ಮುಂಡಗೋಡ: ಬಿಜೆಪಿಯೊಂದಿಗೆ ಮೈತ್ರಿ ಹಿನ್ನೆಲೆಯಲ್ಲಿ JDS ವಿರುದ್ಧ ಉತ್ತರ ಕನ್ನಡದ ಬಹುತೇಕ ಅಲ್ಪಸಂಖ್ಯಾತ ಮುಖಂಡರು ಆಕ್ರೋಶಗೊಂಡಿದ್ದಾರೆ. ಜಾತ್ಯಾತೀತ ಜನತಾದಳದಲ್ಲಿದ್ದ ಹಲವು ಮುಖಂಡರು ಹೆಚ್ ಡಿಕೆ ವಿರುದ್ಧ ತಿರುಗಿ ಬಿದ್ದಿದ್ದು ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ. ಮುಂಡಗೋಡಿನಲ್ಲಿ ಪಬ್ಲಿಕ್ ಫಸ್ಟ್ ನೊಂದಿಗೆ ಮಾತನಾಡಿದ ಜೆಡಿಎಸ್ ಮುಖಂಡ ಮುನಾಫ್ ಮಿರ್ಜಾನಕರ್, ಕುಮಾರಸ್ವಾಮಿಯವರ ಜೊತೆ ನಾವೇಲ್ಲ ನಿಕಟ ಸಂಪರ್ಕ ಹೊಂದಿದ್ದೇವು, ಅಲ್ಪಸಂಖ್ಯಾತರು ಜೆಡಿಎಸ್ ಜೊತೆ ಪಕ್ಷಕ್ಕಾಗಿ ದುಡಿದಿದ್ದೇವು. ಆದ್ರೆ, ನಮಗೆ ಹೇಳದೇ ಕೇಳದೇ ಜೆಡಿಎಸ್ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದು ನಮಗೆ ಬೇಸರ ತರಿಸಿದೆ. ಹೀಗಾಗಿ, ನಾವೇಲ್ಲ ಅಲ್ಪಸಂಖ್ಯಾತ ಜಿಲ್ಲಾ ಹಾಗೂ ತಾಲೂಕು ಮುಖಂಡರು ಜೆಡಿಎಸ್ ಗೆ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರ್ಪಡೆಗೊಂಡಿದ್ದೇವೆ ಅಂತಾ ತಿಳಿಸಿದ್ರು. ಮುಂದಿನ ದಿನಗಳಲ್ಲಿ ಜಿಲ್ಲೆಯ ಬಹುತೇಕ ಅಲ್ಪಸಂಖ್ಯಾತ ನಾಯಕರು ಕಾಂಗ್ರೆಸ್ ಸಮಾವೇಶದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತೇವೆ ಅಂತಾ ತಿಳಿಸಿದ್ರು.
Top Stories
ಮಹಾರಾಷ್ಟ್ರದಿಂದ ಕಬ್ಬು ಕಟಾವಿಗೆ ಬಂದಿದ್ದ ಅಪ್ರಾಪ್ತೆಯನ್ನ ಆ ಹುಡುಗ ಅತ್ಯಾಚಾರ ಮಾಡಿದ್ನಾ..? ಹಾಗಿದ್ರೆ ಕೇಸ್ ಏನಾಯ್ತು..?
ಟ್ಯಾಕ್ಸ್ ವಸೂಲಿಯಲ್ಲಿ ಮುಂಡಗೋಡ ತಾಲೂಕು ರಾಜ್ಯಕ್ಕೇ ಪ್ರಥಮ..! ತಾಪಂ ಗ್ರಾಪಂ ಅಧಿಕಾರಿ, ಸಿಬ್ಬಂದಿಗಳ ಸಾಧನೆ..!!
ಮುಂಡಗೋಡ ಬೆಂಡಿಗೇರಿ ಪೆಟ್ರೊಲ್ ಬಂಕ್ ಹತ್ತಿರ ಬೈಕ್ ಅಪಘಾತ, ವೃದ್ದನ ಕಾಲು ಕಟ್..!
ಮಳಗಿ-ಬನವಾಸಿ ರಸ್ತೆಯಲ್ಲಿ ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ, ಓರ್ವ ಸ್ಥಳದಲ್ಲೇ ಓರ್ವ ಸಾವು, ಮತ್ತೋರ್ವ ಗಂಭೀರ..!
NMD ಕಿಡ್ನ್ಯಾಪ್ ಕೇಸ್, ಮತ್ತೆ ಐವರು ಆರೋಪಿಗಳು ಅಂದರ್, ಪೊಲೀಸರು ಆರೋಪಿಗಳಮದ್ಯೆ ಭಾರೀ ಕಾಳಗ..! ಗುಂಡೇಟು..!
NMD ಜಮೀರ್ ಬಾಯ್ ಸೇಫ್..! ಗದಗ ರಿಂಗ್ ರೋಡಲ್ಲಿ ಬಿಟ್ಟು ಹೋದ ಕಿಡ್ನ್ಯಾಪರ್ಸ್..! ಐವರು ಆರೋಪಿಗಳ ಹೆಡೆಮುರಿ ಕಟ್ಟಿದ್ರಾ ಮುಂಡಗೋಡ ಪೊಲೀಸ್ರು..?
ಮುಂಡಗೋಡಿನ NMD ಗ್ರೂಪ್ ಮಾಲೀಕನ ಮೇಲೆ ದುಷ್ಕರ್ಮಿಗಳ ಅಟ್ಯಾಕ್
ಟಿಬೇಟಿಯನ್ ಕಾಲೋನಿ ಬಳಿ ಬೈಕ್ ಗಳ ನಡುವೆ ಡಿಕ್ಕಿ, ಓರ್ವ ಸವಾರ ಸ್ಥಳದಲ್ಲೇ ಸಾವು, ಮತ್ತೋರ್ವ ಗಂಭೀರ..!
ಮುಂಡಗೋಡಿನ ಮುಲ್ಲಾ ಓಣಿಯ ಬಾವಿಯಲ್ಲಿ ವ್ಯಕ್ತಿಯ ಶವ ಪತ್ತೆ..! ಆತ್ಮಹತ್ಯೆನಾ..?
ಮುಂಡಗೋಡಿನ ಅಂಗನವಾಡಿಯಲ್ಲಿ ಹಾವು ಕಚ್ಚಿದ್ದ ಬಾಲಕಿ ಕಿಮ್ಸ್ ನಲ್ಲಿ ಸಾವು..!
ಮುಂಡಗೋಡಿನಲ್ಲಿ ಅಂಗನವಾಡಿಗೆ ಹೋಗಿದ್ದ ಪುಟ್ಟ ಬಾಲಕಿಗೆ ಕಚ್ಚಿದ ಹಾವು..!
ಹಳೇ ದ್ವೇಷದ ಹಿನ್ನಲೆ ಇಬ್ಬರಿಗೆ ಚಾಕು ಇರಿತ
ಇಂದೂರು ಸೊಸೈಟಿ ಚುನಾವಣೆ: ಭರ್ಜರಿ ಗೆಲುವು ಸಾಧಿಸಿದ ಕಾಂಗ್ರೆಸ್ ಬೆಂಬಲಿತರು..! ರೈತ ಒಕ್ಕೂಟಕ್ಕೆ ಮೂರು ಸ್ಥಾನಗಳು ಮಾತ್ರ..!
ಇಂದೂರು ಸೊಸೈಟಿ ಚುನಾವಣೆ ಅಚ್ಚರಿ ಫಲಿತಾಂಶ: ಮಾಜಿ ಜಿಪಂ ಸದಸ್ಯ ರವಿಗೌಡ ಪಾಟೀಲ್ ಸೋಲು..!
ಚವಡಳ್ಳಿ ಸೊಸೈಟಿ ಚುನಾವಣೆ: 11 ರಲ್ಲಿ ಕಾಂಗ್ರೆಸ್ ಬೆಂಬಲಿತರದ್ದೇ ಭರ್ಜರಿ ಗೆಲುವು..! ಬಿಜೆಪಿಗೆ ದಕ್ಕಿದ್ದು ಒಂದೇ ಒಂದು ಸ್ಥಾನ..!
ಮುಂಡಗೋಡ LSMP ಸೊಸೈಟಿ ಚುನಾವಣೆಯಲ್ಲಿ ಕಾಂಗ್ರೆಸ್ ಮೇಲುಗೈ, 12 ರ ಪೈಕಿ 9 ರಲ್ಲಿ ಕೈ ಬೆಂಬಲಿತರ ಗೆಲುವು..!
ಹುಬ್ಬಳ್ಳಿ ಸಿಲಿಂಡರ್ ಬ್ಲಾಸ್ಟ್: ಮತ್ತೋರ್ವ ಅಯ್ಯಪ್ಪ ಮಾಲಾಧಾರಿ ಸಾವು, ಸಾವಿನ ಸಂಖ್ಯೆ ಮೂರಕ್ಕೆ ಏರಿಕೆ..!
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ವಿಧಿವಶ ಹಿನ್ನೆಲೆ, ಶುಕ್ರವಾರ ಸರ್ಕಾರಿ ರಜೆ ಘೋಷಣೆ..! ಶಾಲಾ ಕಾಲೇಜುಗಳಿಗೆ ರಜೆ..!
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ವಿಧಿವಶ..! ನಾಳೆಯ ಬೆಳಗಾವಿ ಕೈ ಕಾರ್ಯಕ್ರಮ ರದ್ದು..!
ಗೆದ್ದುಬಂದು ಜಿಲ್ಲೆಗೆ ಚಿಕಿತ್ಸೆ ನೀಡಬೇಕು: ಕೈ ಅಭ್ಯರ್ಥಿ ಡಾ.ಅಂಜಲಿಗೆ ರಾಘವೇಶ್ವರ ಶ್ರೀ ಆಶೀರ್ವಾದ
ಗೋಕರ್ಣ: ‘ಆರಿಸಿ ಬಂದು ಜಿಲ್ಲೆಗೆ ಚಿಕಿತ್ಸೆ ನೀಡಬೇಕು’ ಎಂದು ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್ ಅವರಿಗೆ ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ಆಶೀರ್ವಾದ ನೀಡಿದರು. ಗೋಕರ್ಣದ ಅಶೋಕೆಯಲ್ಲಿ ಡಾ.ಅಂಜಲಿ ಅವರು ರಾಘವೇಶ್ವರ ಶ್ರೀಗಳನ್ನ ಭೇಟಿಯಾದರು. ಈ ವೇಳೆ ಫಲಪುಷ್ಪ ನೀಡಿ ಗುರು ಗೌರವ ಸಲ್ಲಿಸಿದರು. ಶ್ರೀಗಳು ಕೆಲ ಹೊತ್ತು ಚುನಾವಣೆ ಹಾಗೂ ಜಿಲ್ಲೆಗೆ ಸಂಬಂಧಿಸಿದಂತೆ ಚರ್ಚೆ ನಡೆಸಿದರು. ಕೊನೆಯಲ್ಲಿ ಡಾ.ಅಂಜಲಿ ಅವರಿಗೆ ಮಂತ್ರಾಕ್ಷತೆ ನೀಡಿ ಆಶೀರ್ವದಿಸಿದ ಅವರು, ‘ಮನಃಪೂರ್ವಕವಾಗಿ ಆಶೀರ್ವದಿಸುವೆ. ಗೆದ್ದುಬಂದರೆ ತಮ್ಮಿಂದ ಕ್ಷೇತ್ರಕ್ಕೂ ಒಳ್ಳೆಯದಾಗಲಿ’ ಎಂದು ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ನಿವೇದಿತ್ ಆಳ್ವಾ ಮತ್ತವರ ಕುಟುಂಬ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಾಯಿ ಗಾಂವ್ಕರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭುವನ್ ಭಾಗ್ವತ್, ಜಿ.ಪಂ ಮಾಜಿ ಸದಸ್ಯ ಪ್ರದೀಪ್ ನಾಯಕ ದೇವರಭಾವಿ, ಕೆಪಿಸಿಸಿ ಮಾಜಿ ಕಾರ್ಯದರ್ಶಿ ಗೋಪಾಲಕೃಷ್ಣ ನಾಯಕ ಮುಂತಾದವರು ಇದ್ದರು.
ಬಾಚಣಕಿ ಬಳಿ ಅಪಘಾತ, ಅರಷಿಣಗೇರಿಯ ವ್ಯಕ್ತಿ ಸ್ಥಳದಲ್ಲೇ ಸಾವು..!
ಮುಂಡಗೋಡ ತಾಲೂಕಿನ ಬಾಚಣಕಿ ಬಳಿ ಲಾರಿ ಹಾಗೂ ಸ್ಕೂಟಿ ನಡುವೆ ಭೀಕರ ಅಪಘಾತ ಸಂಭವಿಸಿದೆ. ಪರಿಣಾಮ ಅರಷಿಣಗೇರಿಯ ಸ್ಕೂಟಿ ಸವಾರ ಸ್ಥಳದಲ್ಲೇ ಸಾಚನ್ನಪ್ಪಿದ್ದಾನೆ. ಬಸವರಾಜ್ ಶಿವನಗೌಡರ್ (50) ಎಂಬುವ ಸ್ಲೂಟಿ ಸವಾರನೇ ಅಪಘಾತದಲ್ಲಿ ಮೃತಪಟ್ಟಿದ್ದು, ಸಂಜೆ ಮುಂಡಗೋಡಿನಿಂದ ಸ್ಕೂಟಿ ಮೇಲೆ ಅರಷಿಣಗೇರಿಗೆ ಬರುತ್ತಿದ್ದಾಗ ಲಾರಿ ಡಿಕ್ಕಿಯಾಗಿದೆ. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಪಕ್ಷಕ್ಕೆ ದ್ರೋಹ ಮಾಡಿದವ್ರು ಯಾವತ್ತೂ ಉದ್ಧಾರ ಆಗಲ್ಲ- ರೂಪಾಲಿ ನಾಯ್ಕ್
ಮುಂಡಗೋಡ: ಪಕ್ಷಕ್ಕೆ ದ್ರೋಹ ಮಾಡಿದವ್ರು ಯಾವತ್ತಿಗೂ ಉದ್ಧಾರ ಆಗಲ್ಲ ಅಂತಾ ಬಿಜೆಪಿ ರಾಜ್ಯ ಉಪಾಧ್ಯಕ್ಷೆ, ಮಾಜಿ ಶಾಸಕಿ ರೂಪಾಲಿ ನಾಯ್ಕ್, ಪರೋಕ್ಷವಾಗಿ ಬಿಜೆಪಿ ಶಾಸಕ ಶಿವರಾಮ್ ಹೆಬ್ಬಾರ್ ವಿರುದ್ಧ ತೀವ್ರ ವಾಗ್ದಾಳಿ ಮಾಡಿದ್ರು. ಪಟ್ಟಣದ ದೈವಜ್ಞ ಕಲ್ಯಾಣ ಮಂಟಪದಲ್ಲಿ ಬುಧವಾರ ನಡೆದ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವ್ರು, ಪಕ್ಷದಲ್ಲಿ ಬಂದು ಸ್ಥಾನಮಾನ ಪಡೆದು, ಪಕ್ಷದ ಶಾಲು ಹಾಕಿಕೊಂಡು ಮೆರೆದವರು ಈಗ ಮತ್ತೆ ಪಕ್ಷ ಬಿಡುತ್ತಿದ್ದಾರೆ. ಅಲ್ಲದೇ ಪಕ್ಷದ ಕಾರ್ಯಕರ್ತರಿಗೆ ಆತಂಕಗೊಳಿಸುವ ವಾತಾವರಣ ನಿರ್ಮಿಸುತ್ತಿದ್ದಾರೆ. ಅಂತವರು ದಮ್ಮು, ತಾಕತ್ತು ಇದ್ರೆ ತಕ್ಷಣವೇ ಪಕ್ಷ ಬಿಡಲಿ, ಅದನ್ನ ಬಿಟ್ಟು ಇಲ್ಲೇ ಇದ್ದುಕೊಂಡು ಆಟ ಆಡುವುದನ್ನ ನಿಲ್ಲಿಸಲಿ ಅಂತಾ ಪರೋಕ್ಷವಾಗಿ ಶಿವರಾಮ್ ಹೆಬ್ಬಾರ ವಿರುದ್ಧ ಗುಡುಗಿದ್ರು. ಇನ್ನು ಸಮಾವೇಶ ಉದ್ಘಾಟಿಸಿ ಮಾತನಾಡಿದ ಬಿಜೆಪಿಯ ಉತ್ತರ ಕನ್ನಡ ಲೋಕಸಭಾ ಅಭ್ಯರ್ಥಿ, ವಿಶ್ವೇಶ್ವರ ಹೆಗಡೆ ಕಾಗೇರಿ, ಪಕ್ಷ ಬಿಡುವವರು ಬಿಟ್ಟು ಹೋಗಲಿ, ಬಿಜೆಪಿ ಯಾರದ್ದೋ ಒಬ್ಬರ ಮೇಲೆ ನಿಂತಿಲ್ಲ. ನಮ್ಮಲ್ಲಿ ಗಟ್ಟಿಮನಸಿನ ಕಾರ್ಯಕರ್ತರಿದ್ದಾರೆ. ಅವ್ರು...
ಮುಂಡಗೋಡಿನಲ್ಲಿ ಬಿಜೆಪಿ ಸಮಾವೇಶ..! ಬಿಜೆಪಿ ಶಾಸಕ ಹೆಬ್ಬಾರರ ಭಾವಚಿತ್ರವೇ ನಾಪತ್ತೆ..! ಬಿಜೆಪಿಗೆ ಬೇಡವಾದ್ರಾ ಹೆಬ್ಬಾರ್..?
ಮುಂಡಗೋಡಿನಲ್ಲಿಂದು ಬಿಜೆಪಿ ಕಾರ್ಯಕರ್ತರ ಸಮಾವೇಶ ನಡೆಯುತ್ತಿದೆ. ಉತ್ತರ ಕನ್ನಡ ಲೋಕಸಭಾ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಸಮಾವೇಶದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಆದ್ರೆ, ಈ ಸಮಾವೇಶದ ವೇದಿಕೆಯಲ್ಲಿ ಹಾಕಿರೋ ಬ್ಯಾನರ್ ನಲ್ಲಿ ಬಿಜೆಪಿ ಶಾಸಕ ಶಿವರಾಮ್ ಹೆಬ್ಬಾರ್ ರವರ ಭಾವಚಿತ್ರವನ್ನೇ ಹಾಕಿಲ್ಲ. ಅಂದಹಾಗೆ, ಇಂದು ನಡೆಯುತ್ತಿರೋ ಸಮಾವೇಶದಲ್ಲಿ ಬಹುತೇಕ ಜಿಲ್ಲಾ ನಾಯಕರು ಭಾಗವಹಿಸಿಲಿದ್ದಾರೆ ಎನ್ನಲಾಗ್ತಿದೆ. ಈ ಕಾರಣಕ್ಕಾಗಿನೇ, ವೇದಿಕೆಯ ಬ್ಯಾನರನಲ್ಲಿ ರಾಷ್ಟ್ರ ನಾಯಕರು, ರಾಜ್ಯ ನಾಯಕರು ಹಾಗೂ ಜಿಲ್ಲಾಮಟ್ಟದ ನಾಯಕರುಗಳ ಭಾವಚಿತ್ರ ಹಾಕಲಾಗಿದೆ. ಜೊತೆಗೆ ಬಿಜೆಪಿಯ ಮಾಜಿ ಶಾಸಕರುಗಳ ಭಾವಚಿತ್ರವನ್ನೂ ಹಾಕಲಾಗಿದೆ. ಆದ್ರೆ, ಯಲ್ಲಾಪುರ ಕ್ಷೇತ್ರದಲ್ಲೇ ನಡೆಯುತ್ತಿರೋ ಸಮಾವೇಶದಲ್ಲಿ ಸ್ಥಳೀಯ ಬಿಜೆಪಿ ಶಾಸಕರ ಭಾವಚಿತ್ರವನ್ನೇ ಹಾಕಿಲ್ಲ. ಬಿಜೆಪಿಗೆ ಬೇಡವಾದ್ರಾ ಹೆಬ್ಬಾರ್..? ಅಸಲು, ಮುಂಡಗೋಡಿನ ಬಿಜೆಪಿ ಸಮಾವೇಶದಲ್ಲಿ ಹೆಬ್ಬಾರರ ಭಾವಚಿತ್ರ ಹಾಕದೇ ಇರೋದು ಭಾರೀ ಕುತೂಹಲಕ್ಕೆ ಕಾರಣವಾಗಿದೆ. ಬಹುಶಃ ಶಿವರಾಮ್ ಹೆಬ್ಬಾರರು ಇಲ್ಲಿನ ಬಿಜೆಪಿಗೆ ಬೇಡವಾದ್ರಾ ಅನ್ನೋ ಪ್ರಶ್ನೆ ಏಳುವಂತೆ ಮಾಡಿದೆ.
ಶಿರಸಿಯಲ್ಲಿ ಕಾರ್ಯಕರ್ತರ ಸಭೆಯಲ್ಲಿ ಕೈ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್ ಮಾತು..!
ಶಿರಸಿ: ನಮ್ಮ ನೆಲ, ನಮ್ಮ ಜಲ ರಕ್ಷಣೆಯ ಜೊತೆಗೆ ನಮ್ಮ ಸಂಸ್ಕೃತಿಯನ್ನ ಜಗತ್ತಿಗೆ ಪರಿಚಯಿಸುವ ಕೆಲಸ ಮಾಡುವ ಹಂಬಲವಿದೆ; ಇದು ನನ್ನ ಗ್ಯಾರಂಟಿಯಾಗಿದ್ದು, ಇದಕ್ಕಾಗಿ ನಿಮ್ಮ ಆಶೀರ್ವಾದ ಬೇಕಿದೆ ಎಂದು ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್ ಮನವಿ ಮಾಡಿದರು. ಶಿರಸಿಯ ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಂಡಿದ್ದ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ನಮ್ಮ ಜನರ ಜಮೀನು ನಮ್ಮವರಿಗೇ ಸಿಗಬೇಕು. ಅವರಿಗೆ ಅವರ ಹಕ್ಕು ದೊರಕಿಸಿಕೊಡುವ ಕಾರ್ಯ ಮಾಡಬೇಕಿದೆ. ನಮ್ಮ ಜನರಿಗೆ ಉದ್ಯೋಗ ದೊರಕಬೇಕಿದೆ. ಉತ್ತರ ಕನ್ನಡದ ವಿವಿಧ ಸಂಸ್ಕೃತಿಗಳನ್ನ ರಾಷ್ಟ್ರ- ಅಂತರರಾಷ್ಟ್ರೀಯ ಮಟ್ಟಕ್ಕೆ ಪರಿಚಯಿಸುವ ಕಾರ್ಯವಾಗಬೇಕಿದೆ. ಆ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲು ಈ ಸ್ಪರ್ಧೆಯಾಗಿದೆ ಎಂದರು. ಇದು ಬಿಜೆಪಿ- ಕಾಂಗ್ರೆಸ್ ಚುನಾವಣೆಯಲ್ಲ, ಯಾರಿಗೂ ಅವಮಾನ ಮಾಡುವ ಚುನಾವಣೆಯಲ್ಲ. ಸೋಲು- ಗೆಲುವಿನ ಚುನಾವಣೆಯೂ ಅಲ್ಲ. ಬಡವರಿಗೆ ಆಗುತ್ತಿರುವ ಅನ್ಯಾಯಕ್ಕೆ ಸಂಸತ್ ನಲ್ಲಿ ಧ್ವನಿಯಾಗುವ ಚುನಾವಣೆ. ಜಿಲ್ಲೆಯ ಬಿಜೆಪಿ ಅಭ್ಯರ್ಥಿ ಆರು ಬಾರಿ ಗೆದ್ದು ಬಂದಿರುವವರು. ಅವರು ಹಿರಿಯರು, ಅವರ...
ಶಿವರಾಮ್ ಹೆಬ್ಬಾರ್ ಅಸಲಿ ಆಟ ಶುರು, ಕಾಂಗ್ರೆಸ್ ಸೇರಲ್ವಂತೆ ಸಾಹೇಬ್ರು..!
ಇದು ನಿಜಕ್ಕೂ ಮುಂಡಗೋಡ ಯಲ್ಲಾಪುರ ಬಿಜೆಪಿ ಪಾಲಿಗೆ ಬಿಸಿ ತುಪ್ಪವಾದ ಸುದ್ದಿ. ಬಿಜೆಪಿ ಶಾಸಕ ಶಿವರಾಮ್ ಹೆಬ್ಬಾರ್ ಸದ್ಯ ಕಾಂಗ್ರೆಸ್ ಸೇರೋದಿಲ್ಲ. ಬದಲಾಗಿ, ಹೆಬ್ಬಾರ್ ರವರ ಸುಪುತ್ರ ವಿವೇಕ್ ಹೆಬ್ಬಾರ್ ಇನ್ನೇನು ಕೆಲವೇ ದಿನಗಳಲ್ಲಿ ಕೈ ಹಿಡಿಯಲಿದ್ದಾರೆ ಅನ್ನೋದು ಕನ್ಪರ್ಮ್ ಆಗ್ತಿದೆ. ಈ ಮೂಲಕ ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಪಕ್ಷದಲ್ಲಿದ್ದುಕೊಂಡೇ ಅಕ್ಷರಶಃ ತಟಸ್ತರಾಗಿ ಕಮಲ ಪಾಳಯಕ್ಕೆ ಡಿಚ್ಚಿ ಕೊಡುವ ಎಲ್ಲಾ ತಯಾರಿ ಮಾಡಿಕೊಂಡಿದ್ದಾರಂತೆ ಹೆಬ್ಬಾರ್ ಸಾಹೇಬ್ರು..! ಹಳ್ಳಿ ಹಳ್ಳಿಗಳಲ್ಲೂ ಸಭೆ..! ಇಂತಹದ್ದೊಂದು ಕಾರ್ಯತಂತ್ರ ರೂಪಿಸಿಕೊಂಡಿರೋ ಶಿವರಾಮ್ ಹೆಬ್ಬಾರ್, ಸದ್ಯ ಇಡೀ ಯಲ್ಲಾಪುರ ಕ್ಷೇತ್ರದ ಹಳ್ಳಿ ಹಳ್ಳಿಗಳಿಗೆ ಭೇಟಿ ನೀಡ್ತಿದಾರೆ. ಜೊತೆಗೆ ತಮ್ಮ ಸುಪುತ್ರ ವಿವೇಕ ಹೆಬ್ಬಾರ್ ಕಾಂಗ್ರೆಸ್ ಸೇರ್ಪಡೆಯ ಬಗ್ಗೆ ಚರ್ಚಿಸಿ, ತಮ್ಮ ಬೆಂಬಲಿಗರನ್ನು ಮಗನ ಜೊತೆ ಕಾಂಗ್ರೆಸ್ ಸೇರಲು ಸೂಚನೆ ನೀಡ್ತಿದಾರೆ ಅನ್ನೋ ಮಾಹಿತಿ ಬರ್ತಿದೆ. ಈ ಸಂಬಂಧ ಮುಂಡಗೋಡ ತಾಲೂಕಿನಲ್ಲೂ ಕಳೆದ ಹಲವು ದಿನಗಳಿಂದ ಕಾರ್ಯಕರ್ತರ ಸಭೆ ನಡೆಸ್ತಿದಾರೆ. ಇದ್ರಲ್ಲಿ ಈಗಾಗಲೇ ಬಹುತೇಕರು ಹೆಬ್ಬಾರ್ ರ ಕಾರ್ಯತಂತ್ರಕ್ಕೆ ಜೈ...
ಶಿಗ್ಗಾವಿಯಲ್ಲಿ ಕಾಂಗ್ರೆಸ್ ಶಕ್ತಿ ಪ್ರದರ್ಶನ, ಕೈ ಅಭ್ಯರ್ಥಿ ವಿನೋದ್ ಅಸೂಟಿಗೆ ಭವ್ಯ ಸ್ವಾಗತ..!
ಶಿಗ್ಗಾವಿ; ಧಾರವಾಡ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ ಶಿಗ್ಗಾವಿಯಲ್ಲಿಂದು ಕಾಂಗ್ರೆಸ್ಸಿನ ಬೃಹತ್ ಶಕ್ತಿ ಪ್ರದರ್ಶನ ನಡೆಯಿತು. ಮೊದಲ ಬಾರಿಗೆ ಶಿಗ್ಗಾವಿಗೆ ಪ್ರಚಾರಕ್ಕೆಂದು ಬಂದಿದ್ದ ಕಾಂಗ್ರೆಸ್ ಅಭ್ಯರ್ಥಿ ವಿನೋದ ಅಸೂಟಿಗೆ ಅದ್ದೂರಿಯಾಗಿ ಸ್ವಾಗತಿಸಲಾಯಿತು. ಶಿಗ್ಗಾವಿಯಲ್ಲಿರುವ ಮಹಾತ್ಮರ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಿದ ವಿನೋದ ನಂತರ ವಿವಿಧ ದರ್ಗಾ ಹಾಗೂ ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸಿದರು. ನಂತರ ನಡೆದ ಬಹಿರಂಗ ಸಭೆಯಲ್ಲಿ ಹಾನಗಲ್ ಶಾಸಕ ಶ್ರೀನಿವಾಸ ಮಾನೆ, ಹಾವೇರಿ ಶಾಸಕ ರುದ್ರಪ್ಪ ಲಮಾಣಿ, ಮಾಜಿ ಸಂಸದ ಐ ಜಿ ಸನದಿ, ಪಠಾಣ, ಅನಿಲ ಪಾಟೀಲ, ಶಾಕೀರ ಸನದಿ, ಸೇರಿದಂತೆ ಅನೇಕ ನಾಯಕರು ಭಾಗವಹಿಸಿದ್ದರು. ಶಿಗ್ಗಾವಿಯಲ್ಲಿ ಕಾಂಗ್ರೆಸ್ ಅಲೆ ಸೃಷ್ಟಿಯಾಗಿದ್ದು, ಇಲ್ಲಿನ ಮತದಾರರು ಮತ ಹಾಕುವ ಮೂಲಕ ಹೆಚ್ಚಿನ ಮತಗಳ ಅಂತರದಲ್ಲಿ ಗೆಲ್ಲಿಸುತ್ತಾರೆ ಎಂದು ಮುಖಂಡರು ವಿಶ್ವಾಸ ವ್ಯಕ್ತಪಡಿಸಿದರು.
ಎದುರಾಳಿ ಬಿಜೆಪಿ ಮನೆ ಬಿಟ್ಟು, ನಮ್ಮ ಮನೆಗೆ ಬರುವವರನ್ನು ಸ್ವಾಗತಿಸೋಣ..! ಹೆಬ್ಬಾರ್ ಕಾಂಗ್ರೆಸ್ ಸೇರ್ಪಡೆಗೆ ಕೈ ಅಭ್ಯರ್ಥಿ ಅಂಜಲಿ ನಿಂಬಾಳ್ಕರ್ ಸ್ವಾಗತ..!!
ಮುಂಡಗೋಡ: ಚುನಾವಣೆಯೆಂಬ ಪರೀಕ್ಷೆ ಬಂದಿದೆ. ಎದುರಾಳಿ ಬಿಜೆಪಿ ಮನೆಯನ್ನ ಬಿಟ್ಟು ನಮ್ಮ ಮನೆಗೆ ಬರಲು ಹೊರಟಿರುವವರಿಗೆ ಸ್ವಾಗತ ಮಾಡಬೇಕಿದೆ. ಕಾಂಗ್ರೆಸ್ ಎಂಬುದು ದೊಡ್ಡ ಸಮುದ್ರ. ನಮಗೆ ಎಲ್ಲವನ್ನೂ ಅರಗಿಸಿಕೊಳ್ಳುವ ಶಕ್ತಿ ಇದೆ. ಯಾವ ಟೈಮ್ ನಲ್ಲಿ ಯಾವ ಆಪರೇಷನ್ ಮಾಡಬೇಕೆಂಬುದೂ ನನಗೆ ಗೊತ್ತಿದೆ ಎಂದು ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್ ಹೇಳಿದರು. ಮುಂಡಗೋಡಿನಲ್ಲಿ ಹಮ್ಮಿಕೊಂಡಿದ್ದ ಲೋಕಸಭಾ ಚುನಾವಣಾ ಪೂರ್ವಸಿದ್ಧತಾ ಸಭೆಯಲ್ಲಿ ಮಾತನಾಡಿದ ಅವರು, ಪಕ್ಷದಲ್ಲಿ ಎಷ್ಟೇ ಗುಂಪಿದ್ದರೂ, ವೈಮಸ್ಸಿದ್ದರೂ ಲೋಕಸಭಾ ಚುನಾವಣೆಯಲ್ಲಿ ಒಗ್ಗಟ್ಟಾಗಿ ದುಡಿಯುತ್ತೀರೆಂಬ ವಿಶ್ವಾಸವಿದೆ. ವಿವಿಧ ಧರ್ಮ- ಸಂಸ್ಕೃತಿಗಳಿದ್ದರೂ ಮುಂಡಗೋಡದಲ್ಲಿ ಎಲ್ಲರೂ ಒಂದಾಗಿ ಬಾಳುತ್ತಿದ್ದಾರೆ. ಕಾಂಗ್ರೆಸ್ ಎಂದರೆ ನನ್ನ ಕುಟುಂಬವಿದ್ದಂತೆ. ಇಲ್ಲಿ ಎಲ್ಲರ ಮಾತಿಗೂ ಬೆಲೆ ಇದೆ. ಪಕ್ಷ ನಿಮ್ಮ ಹಿಂದಿದೆ, ಕಾರ್ಯಕರ್ತರೂ ಪಕ್ಷದೊಂದಿಗೆ ಇರಬೇಕು. ಹಿಂದುಳಿದ ತಾಲೂಕು, ಜಿಲ್ಲೆಯ ಅಭಿವೃದ್ಧಿಗೆ ಸಂಸತ್ ನಲ್ಲಿ ಮಾತನಾಡಲು ಪಕ್ಷದ ಸಂಸದರು ಬೇಕೇ ಬೇಕು. ಇದಕ್ಕಾಗಿ ನನ್ನನ್ನ ನಿಮ್ಮ ಮನೆ ಮಗಳೆಂದು ಆಶೀರ್ವದಿಸಿ ಎಂದು ಮನವಿ ಮಾಡಿದರು. ಮಾಜಿ...
ಶಾಸಕ ಶಿವರಾಮ ಹೆಬ್ಬಾರ್ ಕಾಂಗ್ರೆಸ್ ಸೇರ್ಪಡೆಗೆ ಕೈ ಕಾರ್ಯಕರ್ತರಿಂದ ವಿರೋಧ..! ಹೆಬ್ಬಾರ್ ವಿರುದ್ಧ ಪೋಸ್ಟರ್ ಅಂಟಿಸಿ ಆಕ್ರೋಶ ಹೊರ ಹಾಕಿದ ಕಾರ್ಯಕರ್ತರು..!!
ಶಿರಸಿ: ಬಿಜೆಪಿ ಶಾಸಕ ಶಿವರಾಮ ಹೆಬ್ಬಾರ್ ಕಾಂಗ್ರೆಸ್ ಸೇರ್ಪಡೆಗೆ ಕಾಂಗ್ರೆಸ್ ಕಾರ್ಯಕರ್ತರಿಂದ ಭಾರೀ ವಿರೋಧ ವ್ಯಕ್ತವಾಗಿದೆ. ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಪೋಸ್ಟರ್ ಅಂಟಿಸಿ ವಿರೋಧ ವ್ಯಕ್ತಪಡಿಸಿದ್ದಾರೆ “ಕೈ” ಕಾರ್ಯಕರ್ತರು. ಶಿರಸಿಯಲ್ಲಿರುವ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶಿವರಾಮ್ ಹೆಬ್ಬಾರ್ ವಿರುದ್ಧ ಪೋಸ್ಟರ್ ಅಂಟಿಸಿರುವ ಕೈ ಕಾರ್ಯಕರ್ತರು, “ನಮ್ಮ ಪಕ್ಷ, ನಮ್ಮ ಹಕ್ಕು, ಭ್ರಷ್ಟರಿಗಿಲ್ಲಿ ಜಾಗವಿಲ್ಲ” ಎಂದು ಪೋಸ್ಟರ್ ಅಂಟಿಸಿದ್ದಾರೆ. ಕಾಂಗ್ರೆಸ್ ನಿಂದ ಬಾಂಬೆ ಟೀಂ ಜತೆ ಬಿಜೆಪಿಗೆ ಹೋಗಿ ಸಚಿವರಾಗಿದ್ದ ಹೆಬ್ಬಾರ್ ಸಾಹೇಬ್ರು, ಈಗ ಮತ್ತೆ ಕೆಲವು ಅಸಮಾಧಾನದ ಕಾರಣ ಕಾಂಗ್ರೆಸ್ ಬಾಗಿಲು ತಟ್ಟುತ್ತಿದ್ದಾರೆ. ಹೀಗಾಗಿ, ಹೆಬ್ಬಾರ್ ಕಾಂಗ್ರೆಸ್ ಸೇರ್ಪಡೆಗೆ ಸದ್ದಿಲ್ಲದೇ ವಿರೋಧ ವ್ಯಕ್ತವಾಗಿದೆ. ಸಚಿವರು, ಶಾಸಕರು ಮಾತ್ರವಲ್ಲದೇ ಕಾರ್ಯಕರ್ತರಿಂದಲೂ ವಿರೋಧ ವ್ಯಕ್ತವಾಗಿದ್ದು, ಇಂದು ಶಿರಸಿಯಲ್ಲಿ ಕಾಂಗ್ರೆಸ್ ಲೋಕಸಭೆ ಅಭ್ಯರ್ಥಿ ಅಂಜಲಿ ನಿಂಬಾಳ್ಕರ್ ಉಪಸ್ಥಿತಿಯಲ್ಲಿ ಕಾಂಗ್ರೆಸ್ ನಾಯಕರ ಸಭೆ ನಡೆಯಲಿದ್ದು, ಸಭೆಗೆ ಮುಂಚಿತವಾಗಿ ಹೆಬ್ಬಾರ್ ವಿರುದ್ಧ ಪೊಸ್ಟರ್ ಅಂಟಿಸಿ ಆಕ್ರೋಶ ಹೊರಹಾಕಿದ್ದಾರೆ ಕೈ ಕಾರ್ಯಕರ್ತರು.