ಮುಂಡಗೋಡ ತಾಲೂಕಿನ ಚವಡಳ್ಳಿ ಗ್ರಾಮ ಪಂಚಾಯತಿಗೆ ನೂತನ ಉಪಾಧ್ಯಕ್ಷರಾಗಿ ಪ್ರದೀಪ್ ಚೌವ್ಹಾಣ ಅವಿರೋಧ ಆಯ್ಕೆಯಾಗಿದ್ದಾರೆ.

13 ಸದಸ್ಯ ಬಲದ ಚವಡಳ್ಳಿ ಪಂಚಾಯತಿಯಲ್ಲಿ, ಈ ಹಿಂದಿನ ಉಪಾಧ್ಯಕ್ಷ ಸುನಿಲ್ ರಾಠೋಡ್ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಇಂದು ಚುನಾವಣೆ ನಡೆದಿತ್ತು. ಉಪಾಧ್ಯಕ್ಷ ಸ್ಥಾನಕ್ಕೆ ಲೋಕಪ್ಪ ಕೋಣನಕೇರಿ ಹಾಗೂ ಪ್ರದೀಪ್ ಚವ್ಹಾಣ್ ನಾಮಪತ್ರ ಸಲ್ಲಿಸಿದ್ದರು‌. ಆದ್ರೆ ಕೊನೆ ಕ್ಷಣದಲ್ಲಿ ಲೋಕಪ್ಪ ಕೋಣನಕೇರಿ ನಾಮಪತ್ರ ವಾಪಸ್ ಪಡೆದ ಹಿನ್ನೆಲೆಯಲ್ಲಿ ಪ್ರದೀಪ್ ಚವ್ಹಾಣ್ ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆ ಆದಂತಾಗಿದೆ.

ಇನ್ನು ಚುನಾವಣಾಧಿಕಾರಿಯಾಗಿ ಎಂ.ಎಸ್. ಕುಲಕರ್ಣಿ ಕಾರ್ಯನಿರ್ವಹಿಸಿದ್ರು.

error: Content is protected !!