ಮುಂಡಗೋಡ: ನಿಜಕ್ಕೂ ಇದು ವಿಶೇಷದಲ್ಲಿ ಅತಿ ವಿಶೇಷ ಪ್ರಕರಣ, ಶಾಸಕ ಶಿವರಾಮ್ ಹೆಬ್ಬಾರ್ ರವರ ಪ್ರಯತ್ನದ ಫಲವಾಗಿ ಜಾರಿಯಾದ ಮಹತ್ವದ ತೀರ್ಮಾನ. ಕಣಜೀರಿಗೆ ಹುಳು ಕಡಿತಕ್ಕೆ ಒಳಗಾಗಿ ಮೃತಪಟ್ಟ ಮುಂಡಗೋಡ ತಾಲೂಕಿನ ಮೈನಳ್ಳಿ ಗ್ರಾಮದ ದನಗರ ಗೌಳಿ ಸಮುದಾಯದ ಯುವಕ ಜನ್ನು ದೂಳು ಕೊಕರೆ ಕುಟುಂಬಕ್ಕೆ ಬರೋಬ್ಬರಿ 15 ಲಕ್ಷ ರೂ. ಪರಿಹಾರ ಬಂದು ದೊರಕಿದೆ.
ಮುಂಡಗೋಡ ಪ್ರವಾಸಿ ಮಂದಿರದಲ್ಲಿ ಇಂದು, ಶಾಸಕ ಶಿವರಾಮ ಹೆಬ್ಬಾರ್, ಮೃತ ಯುವಕ ಜನ್ನು ದೂಳು ಕೊಕರೆ ಅವರ ಕುಟುಂಬಸ್ಥರಿಗೆ 15 ಲಕ್ಷ ರೂಪಾಯಿಯ ಪರಿಹಾರ ಧನದ ಚೆಕ್ ಹಸ್ತಾಂತರಿಸಿದರು.
ಈ ವೇಳೆ ಅರಣ್ಯ ಇಲಾಖೆಯ ಅಧಿಕಾರಿಗಳು ಸೇರಿದಂತೆ ಹಲವು ಮುಖಂಡರು ಹಾಜರಿದ್ದರು.