ಶಿಗ್ಗಾವಿ ಬಳಿ ಕಾರು ಅಪಘಾತ: ಇಬ್ಬರು ಸ್ಥಳದಲ್ಲೇ ಸಾವು, ಐವರಿಗೆ ಗಂಭೀರ ಗಾಯ

ಶಿಗ್ಗಾವಿ : ಕಾರೊಂದು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಇಬ್ಬರು ಯುವಕರು ಮೃತಪಟ್ಟು ಐದು ಜನರು ತೀವ್ರ ಗಾಯಗೊಂಡ ಘಟನೆ ಶಿಗ್ಗಾವಿ- ಹನುಮರಹಳ್ಳಿ ರಸ್ತೆಯಲ್ಲಿ ಶನಿವಾರ ಬೆಳಗಿನ ಜಾವ ನಡೆದಿದೆ

ಮರಕ್ಕೆ ಡಿಕ್ಕಿ ಹೊಡೆದ ಕಾರಿನಲ್ಲಿ ಒಟ್ಟು ಏಳು ಜನ ಪ್ರಯಾಣಿಸುತ್ತಿದ್ದರು ಎನ್ನಲಾಗಿದ್ದು,
ಮೃತರು ಸವಣೂರ ತಾಲ್ಲೂಕಿನ ಬೇವಿನಹಳ್ಳಿ ಗ್ರಾಮದ ನೀಲಪ್ಪ ಮೂಲಿಮನಿ (23), ಸುದೀಪ್ ಕೋಟಿ (19)
ಮೃತ ದುರ್ದೈವಿಗಳಾಗಿದ್ದಾರೆ, ಐದು ಜನ ತೀವ್ರ ಗಾಯಗೊಂಡಿದ್ದು ಶಿಗ್ಗಾವಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬೇವನಹಳ್ಳಿ ಇಂದ ನಂದಗಡಕ್ಕೆ ತೆರಳುತ್ತಿದ್ದರು ಎನ್ನಲಾಗಿದ್ದು ಘಟನೆಯಲ್ಲಿ ಸ್ವಿಫ್ಟ್ ಡಿಸೈರ್ ಕಾರು ನಜ್ಜುಗುಜ್ಜಾಗಿದ್ದು ಸ್ಥಳಕ್ಕೆ ಅಗ್ನಿಶಾಮಕ ದಳದ ಸಂಬಂಧಿಗಳು ಹಾಗೂ ಶಿಗ್ಗಾವಿ ಪೊಲೀಸ್ ರು ಬೇಟಿ ನೀಡಿ ಕಾರ್ಯಾಚರಣೆಯಲ್ಲಿ ನಿರತರಾಗಿದ್ದರು.

error: Content is protected !!