ಕಾತೂರು ಬಳಿ ಬೈಕ್ ಗೆ ಗುದ್ದಿದ ಬೊಲೆರೋ, ಬೈಕ್ ಸವಾರ ಗಂಭೀರ..!


ಮುಂಡಗೋಡ ತಾಲೂಕಿನ ಕಾತೂರು ಬಳಿ ಹಿಟ್ ಆಂಡ್ ರನ್ ಕೇಸ್ ಆಗಿದೆ. ಬೊಲೆರೋ ವಾಹನ ಬೈಕ್ ಗೆ ಗುದ್ದಿ ಪರಾರಿಯಾಗುತ್ತಿದ್ದ ವೇಳೆ ಸಾರ್ವಜನಿಕರೇ ವಾಹನವನ್ನು ತಡೆದು ನಿಲ್ಲಿಸಿದ್ದಾರೆ. ಇನ್ನು ಘಟನೆಯಲ್ಲಿ ಇಬ್ಬರು ಬೈಕ್ ಸವಾರರಿಗೆ ಗಾಯವಾಗಿದೆ. ಅದ್ರಲ್ಲಿ ಓರ್ವ ಗಂಭೀರ ಗಾಯಗೊಂಡಿದ್ದಾನೆ.

ಅಂದಹಾಗೆ, ಕಾತೂರು ಬಳಿಯ ಶಿರಸಿ ಹುಬ್ಬಳ್ಳಿ ರಸ್ತೆಯಲ್ಲಿ ಈ ಘಟನೆ ನಡೆದಿದ್ದು. ಗಾಯಗೊಂಡಿರೋ ಬೈಕ್ ಸವಾರರನ್ನು ಚಳಗೇರಿಯ ರವಿ ರಾಮಲಿಂಗ್ ಸಾಳುಂಕೆ(26) ಖಾನು ಗೌಳಿ ಅಂತಾ ಗುರುತಿಸಲಾಗಿದೆ. ಇದ್ರಲ್ಲಿ ರವಿ ಸಾಳುಂಕೆ ಗಂಭೀರ ಗಾಯಗೊಂಡಿದ್ದಾನೆ ಅನ್ನೊ ಮಾಹಿತಿ ಬಂದಿದೆ. ಗಾಯಾಳುಗಳನ್ನು ಮುಂಡಗೋಡ ತಾಲೂಕಾಸ್ಪತ್ರೆಗೆ ರವಾನಿಸಲಾಗಿದೆ.

ಸದ್ಯ ಮುಂಡಗೋಡ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು ಮುಂದಿನ ಕ್ರಮ ಕೈಗೊಂಡಿದ್ದಾರೆ.

error: Content is protected !!