ಮುಂಡಗೋಡ ತಾಲೂಕಿನ ಸಾಲಗಾಂವ್ ಬಾಣಂತಿದೇವಿ ಜಾತ್ರೆ ವಿದ್ಯುಕ್ತ ಚಾಲನೆ ಪಡೆದುಕೊಂಡಿದೆ. ಇವತ್ತಿಂದ ಮೂರು ದಿನ ಜಾತ್ರೆಯ ಸದ್ದು ಗದ್ದಲ ಇದ್ದೇ ಇರತ್ತೆ. ಅದ್ರ ಜೊತೆ ಜಾತ್ರೆಯ ಅಂಗಳದಲ್ಲಿ ಅನಧಿಕೃತವಾಗಿ ನಡೆಯುವ ಅಡ್ಡ ದಂಧೆಗಳೂ ಕೂಡ ಹುಟ್ಟಿಕೊಂಡು ಜಾತ್ರೆಗೆ ಬರುವ ಸಭ್ಯಸ್ಥರಿಗೆ ಮಾರಕವಾಗ್ತಿವೆ. ಬಹುಶಃ ಖಾಕಿ ಪಡೆಗೆ ಇದೇಲ್ಲ ಗೊತ್ತಿದೆಯೋ ಇಲ್ವೊ ನಮಗಂತೂ ಗೊತ್ತಿಲ್ಲ. ಆದ್ರೆ, ಜಾತ್ರೆಗೆ ಹೋದ ಅನೇಕ ಜನ ಸಭ್ಯಸ್ಥರು ಅಲ್ಲಿನ “ಅಂಧಾ” ಗೇಮ್ ನೋಡಿ ವಿಡಿಯೋ ಕಳಿಹಿಸಿ “ಪಬ್ಲಿಕ್ ಫಸ್ಟ್” ಗೆ ಮಾಹಿತಿ ನೀಡಿದ್ದಾರೆ. ಅಂದಹಾಗೆ, ಈ ಆಟದ ಹೆಸರು ನಮಗಂತೂ ಗೊತ್ತಿಲ್ಲ. ಆದ್ರೆ, ಇಲ್ಲಿ ಹಣ ಅನ್ನೋದು ಹೊಳೆಯಂತೆ ಹರಿಯುತ್ತಿದೆ. ಪವಾಡಗಳ ಸನ್ನಿಧಾನ..! ನಿಮಗೆ ನೆನಪಿರಲಿ, ಬಾಣಂತಿದೇವಿಯ ಸನ್ನಿಧಾನದಲ್ಲಿ ಬಹುತೇಕ ಮುಂಡಗೋಡ ತಾಲೂಕಿನ ಸುತ್ತ ಮುತ್ತಲಿನ ಭಕ್ತರು ಬಂದಿರ್ತಾರೆ. ಬಾಣಂತಿದೇವಿಗೆ ಹರಕೆ ಹೊತ್ತು ತೆಪ್ಪದ ತೇರಿನ ದರ್ಶನ ಪಡೀತಾರೆ. ಅಲ್ದೆ ಪುಟ್ಟ ಪುಟ್ಟ ಕಂದಮ್ಮಗಳನ್ನು ಕೆರೆಯಲ್ಲಿ ತೇಲಿ ಬಿಟ್ಟು ಹರಕೆ ತೀರಿಸ್ತಾರೆ. ಅಸಲು, ಬಾಣಂತಿದೇವಿಯ ಚಮತ್ಕಾರ,...
Top Stories
NMD ಕಿಡ್ನ್ಯಾಪ್ ಕೇಸ್, ಮತ್ತೆ ಐವರು ಆರೋಪಿಗಳು ಅಂದರ್, ಪೊಲೀಸರು ಆರೋಪಿಗಳಮದ್ಯೆ ಭಾರೀ ಕಾಳಗ..! ಗುಂಡೇಟು..!
NMD ಜಮೀರ್ ಬಾಯ್ ಸೇಫ್..! ಗದಗ ರಿಂಗ್ ರೋಡಲ್ಲಿ ಬಿಟ್ಟು ಹೋದ ಕಿಡ್ನ್ಯಾಪರ್ಸ್..! ಐವರು ಆರೋಪಿಗಳ ಹೆಡೆಮುರಿ ಕಟ್ಟಿದ್ರಾ ಮುಂಡಗೋಡ ಪೊಲೀಸ್ರು..?
ಮುಂಡಗೋಡಿನ NMD ಗ್ರೂಪ್ ಮಾಲೀಕನ ಮೇಲೆ ದುಷ್ಕರ್ಮಿಗಳ ಅಟ್ಯಾಕ್
ಟಿಬೇಟಿಯನ್ ಕಾಲೋನಿ ಬಳಿ ಬೈಕ್ ಗಳ ನಡುವೆ ಡಿಕ್ಕಿ, ಓರ್ವ ಸವಾರ ಸ್ಥಳದಲ್ಲೇ ಸಾವು, ಮತ್ತೋರ್ವ ಗಂಭೀರ..!
ಮುಂಡಗೋಡಿನ ಮುಲ್ಲಾ ಓಣಿಯ ಬಾವಿಯಲ್ಲಿ ವ್ಯಕ್ತಿಯ ಶವ ಪತ್ತೆ..! ಆತ್ಮಹತ್ಯೆನಾ..?
ಮುಂಡಗೋಡಿನ ಅಂಗನವಾಡಿಯಲ್ಲಿ ಹಾವು ಕಚ್ಚಿದ್ದ ಬಾಲಕಿ ಕಿಮ್ಸ್ ನಲ್ಲಿ ಸಾವು..!
ಮುಂಡಗೋಡಿನಲ್ಲಿ ಅಂಗನವಾಡಿಗೆ ಹೋಗಿದ್ದ ಪುಟ್ಟ ಬಾಲಕಿಗೆ ಕಚ್ಚಿದ ಹಾವು..!
ಹಳೇ ದ್ವೇಷದ ಹಿನ್ನಲೆ ಇಬ್ಬರಿಗೆ ಚಾಕು ಇರಿತ
ಇಂದೂರು ಸೊಸೈಟಿ ಚುನಾವಣೆ: ಭರ್ಜರಿ ಗೆಲುವು ಸಾಧಿಸಿದ ಕಾಂಗ್ರೆಸ್ ಬೆಂಬಲಿತರು..! ರೈತ ಒಕ್ಕೂಟಕ್ಕೆ ಮೂರು ಸ್ಥಾನಗಳು ಮಾತ್ರ..!
ಇಂದೂರು ಸೊಸೈಟಿ ಚುನಾವಣೆ ಅಚ್ಚರಿ ಫಲಿತಾಂಶ: ಮಾಜಿ ಜಿಪಂ ಸದಸ್ಯ ರವಿಗೌಡ ಪಾಟೀಲ್ ಸೋಲು..!
ಚವಡಳ್ಳಿ ಸೊಸೈಟಿ ಚುನಾವಣೆ: 11 ರಲ್ಲಿ ಕಾಂಗ್ರೆಸ್ ಬೆಂಬಲಿತರದ್ದೇ ಭರ್ಜರಿ ಗೆಲುವು..! ಬಿಜೆಪಿಗೆ ದಕ್ಕಿದ್ದು ಒಂದೇ ಒಂದು ಸ್ಥಾನ..!
ಮುಂಡಗೋಡ LSMP ಸೊಸೈಟಿ ಚುನಾವಣೆಯಲ್ಲಿ ಕಾಂಗ್ರೆಸ್ ಮೇಲುಗೈ, 12 ರ ಪೈಕಿ 9 ರಲ್ಲಿ ಕೈ ಬೆಂಬಲಿತರ ಗೆಲುವು..!
ಹುಬ್ಬಳ್ಳಿ ಸಿಲಿಂಡರ್ ಬ್ಲಾಸ್ಟ್: ಮತ್ತೋರ್ವ ಅಯ್ಯಪ್ಪ ಮಾಲಾಧಾರಿ ಸಾವು, ಸಾವಿನ ಸಂಖ್ಯೆ ಮೂರಕ್ಕೆ ಏರಿಕೆ..!
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ವಿಧಿವಶ ಹಿನ್ನೆಲೆ, ಶುಕ್ರವಾರ ಸರ್ಕಾರಿ ರಜೆ ಘೋಷಣೆ..! ಶಾಲಾ ಕಾಲೇಜುಗಳಿಗೆ ರಜೆ..!
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ವಿಧಿವಶ..! ನಾಳೆಯ ಬೆಳಗಾವಿ ಕೈ ಕಾರ್ಯಕ್ರಮ ರದ್ದು..!
ಮುಂಡಗೋಡ ಗಡಿ ಭಾಗದ ಹಾನಗಲ್ ತಾಲೂಕಿನ ಕೊಪ್ಪರಸಿಕೊಪ್ಪದಲ್ಲಿ ನಡೀತು ಭಯಾನಕ, ಅಮಾನುಷ ಘಟನೆ
ಹುಬ್ಬಳ್ಳಿ ಸಿಲಿಂಡರ್ ಸ್ಪೋಟದಲ್ಲಿ ಗಾಯಗೊಂಡಿದ್ದ ಇಬ್ಬರು ಅಯ್ಯಪ್ಪ ಮಾಲಾಧಾರಿಗಳು ಸಾವು..!
ತಡಸ ಕ್ರಾಸ್ ಬಳಿ ಭೀಕರ ಅಪಘಾತ, ಒಂದೇ ಕುಟುಂಬದ ನಾಲ್ವರು ದುರಂತ ಸಾವು..!
ಬೆಡಸಗಾಂವ್ ಸಹಕಾರಿ ಸಂಘದ ಚುನಾವಣೆ ನಡೆದ್ರೂ ಮತ ಎಣಿಕೆಗೆ ಬ್ರೇಕ್..! ಹೈಕೋರ್ಟ್ ತಡೆಯಾಜ್ಞೆ..!
ಸಾಲಗಾಂವ್ ಬಾಣಂತಿದೇವಿ ಜಾತ್ರೆಯಲ್ಲಿ “ಕಲರ್ ಕಲರ್ ಬಾಲ್” ದಂಧೆಯದ್ದೇ ಕಾರುಬಾರು.. ಸಿಂಗಂ ಸಾಹೇಬ್ರೇ ಗಮನಿಸಿ..!
ಗಣೇಶಗುಡಿಯಲ್ಲಿ ರೆಸಾರ್ಟ್, ಹೋಂ ಸ್ಟೇ ಮಾಲೀಕರಿಗೆ ಮಾದಕ ದ್ರವ್ಯದ ಕಾನೂನು ತಿಳುವಳಿಕೆ ನೀಡಿದ ಪೊಲೀಸರು..!
ರಾಮನಗರ ಪೊಲೀಸ್ ಠಾಣಾ ವ್ಯಾಪ್ತಿಯ ಗಣೇಶಗುಡಿ ಗ್ರಾಮದಲ್ಲಿ ಮಾದಕ ದ್ರವ್ಯ ಮತ್ತು ಕಾನೂನು ತಿಳುವಳಿಕೆ ಕಾರ್ಯಕ್ರಮ ಪೊಲೀಸ್ ಇಲಾಖೆಯಿಂದ ಹಮ್ಮಿಕೊಳ್ಳಲಾಗಿತ್ತು. ಗಣೇಶಗುಡಿ ಗ್ರಾಮದ ಸುತ್ತ ಮುತ್ತಲಿನ ಎಲ್ಲಾ ಹೋಂ ಸ್ಟೇ ಮತ್ತು ರೆಸಾರ್ಟ್ ಹಾಗೂ ಜಲ ಕ್ರೀಡಾ ಕೇಂದ್ರಗಳ ಗೈಡ್ಸ್ ಮತ್ತು ಮಾಲೀಕರು, ವ್ಯವಸ್ಥಾಪಕರನ್ನು ಕರೆಸಿ ಮಾದಕ ದ್ರವ್ಯ ಮತ್ತು ಕಾನೂನು ತಿಳುವಳಿಕೆ ನೀಡಲಾಯಿತು. ಕಾರ್ಯಕ್ರಮದಲ್ಲಿ ರಾಮನಗರ ಠಾಣೆ ಪಿಎಸ್ ಐ ಬಸವರಾಜ್ ಮಬನೂರು ಮಾದಕ ದ್ರವ್ಯ ಹಾಗೂ ಅದರಿಂದಾಗುವ ಅನಾಹುತಗಳು, ಹಾಗೂ ಅದಕ್ಕೆ ಸಂಬಂಧಿಸಿದ ಕಾನೂನು ತಿಳುವಳಿಕೆ ನೀಡಿದ್ರು.
ಹುನಗುಂದ ಸೊಸೈಟಿಯ 3 ಕ್ಷೇತ್ರಗಳ ಚುನಾವಣೆ ಫಲಿತಾಂಶ ಪ್ರಕಟ, ಜಾತ್ಯಾತೀತ ಒಕ್ಕೂಟದ ಅಭ್ಯರ್ಥಿಗಳಿಗೆ ಗೆಲುವು, 9 ಸದಸ್ಯರ ಅವಿರೋಧ ಆಯ್ಕೆ..!
ಮುಂಡಗೋಡ ತಾಲೂಕಿನ ಹುನಗುಂದ ವೀರೇಶ್ವರ ವಿವಿದ್ದೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘದ ಚುನಾವಣೆ ನಡೆಯಿತು. ಒಟ್ಟೂ 12 ಸದಸ್ಯ ಬಲದ ಸಹಕಾರ ಸಂಘಕ್ಕೆ ಈಗಾಗಲೇ 9 ಜನ ಅವಿರೋಧವಾಗಿ ಆಯ್ಕೆಯಾಗಿದ್ದು, ಇಂದು ಮೂರು ಸ್ಥಾನಗಳಿಗೆ ಚುನಾವಣೆ ನಡೆಯಿತು. ಜಾತ್ಯಾತೀತ ಒಕ್ಕೂಟದ ಅಭ್ಯರ್ಥಿಗಳು ಚುನಾವಣೆಯಲ್ಲಿ ಜಯಶಾಲಿಯಾದ್ರು. ಅದ್ರಲ್ಲಿ ಅರಷಿಣಗೇರಿಯ ಇಬ್ಬರು ಹಾಗೂ ಹುನಗುಂದದ ಓರ್ವ ಸದಸ್ಯರು ಚುನಾಯಿತರಾದ್ರು. ಇನ್ನು ಹುನಗುಂದ, ಅತ್ತಿವೇರಿ, ಅಗಡಿ, ಅರಷಿಣಗೇರಿ, ಹುಲಿಹೊಂಡ ಗ್ರಾಮಗಳನ್ನೊಳಗೊಂಡ ಸೊಸೈಟಿಗೆ ನೂತನವಾಗಿ ಆಯ್ಕೆಗೊಂಡಿರೋ ಸದಸ್ಯರ ಪಟ್ಟಿ ಈ ಕೆಳಗಿನಂತಿದೆ. ಹುನಗುಂದದಿಂದ.. ಹುನಗುಂದ ಭಾಗದಿಂದ ಆರು ಜನ ಸದಸ್ಯರು ಆಯ್ಕೆಯಾಗಿದ್ದು ಸಿದ್ದಪ್ಪ ಮಹದೇವಪ್ಪ ಹಡಪದ್, ಯಲ್ಲಪ್ಪ ಬಸಪ್ಪ ಶಿವಳ್ಳಿ, ನಾಗವ್ವ ರಾಮಚಂದ್ರ ಬುದ್ದಣ್ಣನವರ್, ಗೌರವ್ವ ಸಹದೇವಪ್ಪ ಆಸ್ತಕಟ್ಟಿ, ಫಕ್ಕೀರಪ್ಪ ಕುಂಕೂರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ, ಅದ್ರಂತೆ ಅಬ್ದುಲ್ ರೆಹಮಾನ್ ಹಕೀಂ ಇಂದು ನಡೆದ ಚುನಾವಣೆಯಲ್ಲಿ 14 ಮತಗಳ ಅಂತರದಿಂದ ನಿಜಗುಣಿ ಬಸಪ್ಪ ಬಿಸನಳ್ಳಿ ವಿರುದ್ಧ ಗೆಲುವು ಸಾಧಿಸಿದ್ದಾರೆ. ಅಗಡಿ ಗ್ರಾಮದಿಂದ.. ಇನ್ನು ಅಗಡಿ ಗ್ರಾಮದಿಂದ...
ಟಿಬೇಟಿಯನ್ ಕಾಲೋನಿಗೆ ಮಕ್ಕಳ ಪ್ರವಾಸಕ್ಕೆಂದು ಬಂದಿದ್ದ ಬಸ್ ಗೆ ಬೈಕ್ ಡಿಕ್ಕಿ, ಇಬ್ಬರಿಗೆ ಗಾಯ
ಮುಂಡಗೋಡ ತಾಲೂಕಿನ ಯಲ್ಲಾಪುರ ರಸ್ತೆಯ ಟಿಬೇಟಿಯನ್ ಕ್ಯಾಂಪ್ ನಂಬರ್ ಒಂದರ ಹತ್ತಿರ ಬಸ್ ಗೆ ಬೈಕ್ ಡಿಕ್ಕಿಯಾಗಿ ಇಬ್ಬರಿಗೆ ಗಾಯವಾಗಿದೆ. ಗೋವಾ ದಿಂದ ವಾಪಾಸ್ ಹಿಂತಿರುಗಿ ಬರುತ್ತಿದ್ದ ಬೈಕ್ ಸವಾರರಿಬ್ಬರು ಶಾಲಾ ಪ್ರವಾಸಕ್ಕೆಂದು ಬಂದಿದ್ದ KSRTC ಬಸ್ ಗೆ ಡಿಕ್ಕಿ ಹೊಡೆದಿದ್ದಾರೆ. ತಕ್ಷಣ ಸ್ಥಳಕ್ಕೆ ಧಾವಿಸಿದ 108 ಅಂಬ್ಯುಲೆನ್ಸ್ ಹಾಗೂ ಸಿಬ್ಬಂದಿಗಳಾದ ಧನರಾಜ್ ಸಿ ತುರ್ತು ವೈದ್ಯಕೀಯ ತಂತ್ರಜ್ಞ ಹಾಗೂ ಚಾಲಕ ಶ್ರೀಧರ್ ಸವಾರರಿಗೆ ಪ್ರಥಮ ಚಿಕಿತ್ಸೆ ಕೊಟ್ಟು ಮುಂಡಗೋಡ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಿದ್ದಾರೆ. ಓರಿಸ್ಸಾ ಹಾಗೂ ಅಸ್ಸಾಂ ಮೂಲದ ಬೈಕ್ ಸವಾರ ರಾಕೇಶ್ ಸ್ವೈನ್ (33) ಹಾಗೂ ಹಿಂಬದಿ ಸವಾರ ಸುನಂದಿತ ಪಾಲ್ (32) ಇವರಿಬ್ಬರಿಗೂ ಸಣ್ಣ ಪುಟ್ಟ ಗಾಯಗಳಾಗಿದೆ. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಅನಧೀಕೃತ ಇಟ್ಟಿಗೆ ಭಟ್ಟಿಯ ನೀರಿನ ತೊಟ್ಟಿಗೆ ಬಿದ್ದು ಬಲಿಯಾಯ್ತು ಮೂರು ವರ್ಷದ ಪುಟ್ಟ ಕಂದಮ್ಮ..!
ಮುಂಡಗೋಡ ತಾಲೂಕಿನಲ್ಲಿ ಅನಧೀಕೃತ ಇಟ್ಟಿಗೆ ಭಟ್ಟಿಗಳ ಹಾವಳಿಗೆ ಕಡಿವಾಣ ಹಾಕ್ತಿನಿ ಅಂತ ಜಿದ್ದಿಗೆ ಬಿದ್ದಿದ್ದ ಮಾನ್ಯ ತಹಶೀಲ್ದಾರ್ ಸಾಹೇಬ್ರು ಅದ್ಯಾಕೋ ಏನೋ ಗಪ್ ಚುಪ್ ಆಗಿದ್ದಾರೆ. ಹೀಗಾಗಿನೇ ಮುಂಡಗೋಡ ತಾಲೂಕಿನಲ್ಲಿ ಸದ್ಯ ಮತ್ತದೇ ಅನಧೀಕೃತ ಇಟ್ಟಿಗೆ ಭಟ್ಟಿಗಳ ಭರಪೂರ ದಂಧೆ ಶುರುವಾಗಿದೆ. ಹೆಜ್ಜೆಗೊಂದರಂತೆ ಭಟ್ಟಿಗಳು ಜನ್ಮತಾಳುತ್ತಿವೆ. ಅದ್ರ ಜೊತೆ ನಡೆಯಬಾರದ ಬಹುದೊಡ್ಡ ದುರಂತವೊಂದು ಲಕ್ಕೊಳ್ಳಿಯ ಅನಧೀಕೃತ ಇಟ್ಟಿಗೆ ಭಟ್ಟಿಯಲ್ಲಿ ನಡೆದು ಹೋಗಿದೆ. ಇಂತದ್ದೇ ಇಟ್ಟಿಗೆ ಭಟ್ಟಿಯೊಂದರಲ್ಲಿ ಕಾರ್ಮಿಕರ ಪುಟ್ಟ ಮಗು ಅಮಾನುಷವಾಗಿ ಬಲಿಯಾಗಿದೆ. ಅದು ಮೂರು ವರ್ಷದ ಕಂದ..! ಮೂರು ವರ್ಷ ವಯಸ್ಸಿನ ಪುಟ್ಟ ಕಂದಮ್ಮ ಇಂತದ್ದೇ ಅನಧೀಕೃತ ಇಟ್ಟಿಗೆ ಭಟ್ಟಿಯಲ್ಲಿನ ನೀರಿನ ಗುಂಡಿಗೆ ಬಿದ್ದು ದಾರುಣವಾಗಿ ಪ್ರಾಣ ಕಳೆದುಕೊಂಡಿದೆ. ಇಟ್ಟಿಗೆ ಕೆಲಸಕ್ಕೆಂದು ಬಂದ ಇಂದೂರಿನ ಬಡ ಕಾರ್ಮಿಕರ ಆಕ್ರಂಧನ ಅಕ್ಷರಶಃ ಅರಣ್ಯ ರೋಧನವಾಗಿದೆ. ಯಾಕಂದ್ರೆ, ಈ ದುರಂತ ಕೇಸನ್ನೇ ಇಡಿ ಇಡಿಯಾಗಿ ಮುಚ್ಚಿ ಹಾಕುವ ಸಂಚು ನಡಿತಿದೆ ಅನ್ನೋ ಮಾಹಿತಿ ಇದೆ. ಲಕ್ಕೊಳ್ಳಿಯಲ್ಲಿ..! ಅಂದಹಾಗೆ, ಇದು ನಡೆದದ್ದು ಮುಂಡಗೋಡ...
ಕಾಮಗಾರಿ ಬಿಲ್ ಪಾಸ್ ಮಾಡಲು ಲಂಚ, ಶಿಗ್ಗಾವಿಯ ಇಬ್ಬರು ಇಂಜಿನೀಯರುಗಳು ಲೋಕಾ ಬಲೆಗೆ..!
ಶಿಗ್ಗಾವಿ: ಕಾಮಗಾರಿಗಳ ಬಿಲ್ ಪಾಸ್ ಮಾಡಲು ಲಂಚ ಪಡೆಯುತ್ತಿದ್ದ ಲಂಚಬಾಕ ಇಬ್ಬರು ಇಂಜಿನೀಯರುಗಳನ್ನು ಲೋಕಾಯುಕ್ತರು ರೆಡ್ ಹ್ಯಾಂಡ್ ಆಗಿ ಹಿಡಿದು ಬಂಧಿಸಿದ್ದಾರೆ. ಗುತ್ತಿಗೆದಾರರು ಕೈಗೊಂಡ ಕಾಮಗಾರಿಗಳ ಬಿಲ್ ಪಾಸ ಮಾಡಲು ಲಂಚ ಪಡೆಯುತ್ತಿದ್ದ ಶಿಗ್ಗಾವಿ ಏತ ನೀರಾವರಿ ಉಪವಿಭಾಗದ ಧಾರವಾಡ ಕಚೇರಿಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಮಂಜುನಾಥ ಬಿ ಹಾಗೂ ಕಿರಿಯ ಇಂಜಿನಿಯರ್ ಪ್ರಕಾಶ ಹೊಸಮನಿ ಬಂಧಿತ ಆರೋಪಿಗಳು. ಅಂದಹಾಗೆ, ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಎಳ್ಳೆಮಕ್ಕಿಯ ಪ್ರಥಮ ದರ್ಜೆ ಗುತ್ತಿಗೆದಾರ ಬಾಲಕೃಷ್ಣ ಪುಂಡಲೀಕ ನಾಯ್ಕ, ಹಾವೇರಿ ಜಿಲ್ಲೆಯ ಹೊಟ್ಟೂರು-ಬಿಸನಳ್ಳಿ, ಶಡಗರವಳ್ಳಿ-ಸಿದ್ದರಾಮೇಶ್ವರಗುಡ್ಡ ಹಾಗೂ ತೋರೂರು-ಹನಕನಹಳ್ಳಿ ರಸ್ತೆ ಕಾಮಗಾರಿಗಳನ್ನು ನಿರ್ವಹಿಸಿದ್ದು, ಸದರಿ ಕಾಮಗಾರಿಗಳ ಬಿಲ್ಗಳನ್ನು ಮೇಲಾಧಿಕಾರಿಗಳಿಗೆ ಕಳಿಸಲು ಶಿಗ್ಗಾವಿ ಏತ ನೀರಾವರಿ ಉಪವಿಭಾಗ 1 ಮತ್ತು 2, ಧಾರವಾಡ ಕಚೇರಿಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಮಂಜುನಾಥ ಬಿ ಹಾಗೂ ಕಿರಿಯ ಇಂಜಿನಿಯರ್ ಪ್ರಕಾಶ ಹೊಸಮನಿ ಈಗಾಗಲೇ ಫಸ್ಟ & ಪಾರ್ಟಿ ಬಿಲ್ಲನ್ನು ಪಾಸ್ ಮಾಡಲು ಫೋನ್ ಪೇ ಮೂಲಕ ಒಟ್ಟು 83,೦೦೦/- ಗಳ...
ಮತ್ತೆ ಅಖಾಡಕ್ಕೆ ಧುಮುಕತ್ತಾ ಹಿಂದು ಹುಲಿ..? ಯತ್ನಾಳ್ ಜೊತೆಗೆ ದೆಹಲಿಗೆ ತೆರಳಿದ ಅನಂತಕುಮಾರ್ ಹೆಗಡೆ..! ಭಾರೀ ಕುತೂಹಲ ಮೂಡಿಸಿದ ನಡೆ..!!
ಉತ್ತರ ಕನ್ನಡ ಬಿಜೆಪಿಗೆ ಮತ್ತೆ ಆನೆಬಲ ಬರುವ ಎಲ್ಲಾ ಲಕ್ಷಣಗಳು ಗೋಚರಿಸ್ತಿವೆ. ಬಿಜೆಪಿಯ ಪೈಯರ್ ಬ್ರ್ಯಾಂಡ್ ಅನಂತಕುಮಾರ್ ಹೆಗಡೆ ಮತ್ತೆ ಚುನಾವಣಾ ರಾಜಕೀಯಕ್ಕೆ ಧುಮುಕುವ ಎಲ್ಲಾ ಲಕ್ಷಣಗಳು ಕಾಣ್ತಿವೆ. ಯಾಕಂದ್ರೆ ಇವತ್ತು ಅನಂತಣ್ಣ ಹೈಕಮಾಂಡ್ ಭೇಟಿಯಾಗಲು ದೆಹಲಿಗೆ ತೆರಳಿದ್ದಾರೆ. ಜೊತೆಗೆ ಮತ್ತೋರ್ವ ಪೈಯರ್ ಬ್ರ್ಯಾಂಡ್ ಬಸನಗೌಡ ಪಾಟೀಲ್ ಯತ್ನಾಳ್, ಕೊಪ್ಪಳ ಸಂಸದ ಸಂಗಣ್ಣ ಕರಡಿ ಜೊತೆಯಾಗಿ ರವಿವಾರ ದೆಹಲಿಯ ವಿಮಾನ ಹತ್ತಿದ್ದಾರೆ. ಬಿಜೆಪಿಯಲ್ಲಿ ಭಿನ್ನಮತ ತಾರಕಕ್ಕೆ ಏರಿದ ಹಿನ್ನೆಲೆಯಲ್ಲಿ ಹೈಕಮಾಂಡ್ ನಿಂದ ಬುಲಾವ್ ಬಂದ ಸಲುವಾಗಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ನವದೆಹಲಿಗೆ ತೆರಳಿದ್ದಾರೆ. ಜೊತೆಗೆ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ಅನಂತಕುಮಾರ್ ಹೆಗಡೆ, ಕೊಪ್ಪಳ ಸಂಸದ ಸಂಗಣ್ಣ ಕರಡಿ ಜೊತೆಗೂಡಿ ದೆಹಲಿಗೆ ತೆರಳಿದ್ದಾರೆ. ಟಿಕೆಟ್ ಸಲುವಾಗಿ ಬುಲಾವ್..? ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಮೂವರೂ ಬಿಜೆಪಿ ನಾಯಕರು ಜೊತೆಗೂಡಿ ದೆಹಲಿಗೆ ತೆರಳಿದ್ದು ಭಾರೀ ಕುತೂಹಲಕ್ಕೆ ಕಾರಣವಾಗಿದೆ. ಬರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಸಾಧ್ಯವೇ ಇಲ್ಲ ಅಂತಾ ಬಹುತೇಕ ರಾಜಕೀಯದಿಂದ...
ಶಿರಸಿಯ ಸಹಸ್ರಲಿಂಗದಲ್ಲಿ ಈಜಲು ತೆರಳಿದ್ದ ಐವರು ನಾಪತ್ತೆ, ಓರ್ವನ ಶವ ಹೊರ ತೆಗೆದ ಅಗ್ನಿಶಾಮಕ ಸಿಬ್ಬಂದಿಗಳು..!
ಶಿರಸಿಯ ಸಹಸ್ರಲಿಂಗದಲ್ಲಿ ಈಜಲು ಹೋಗಿದ್ದ ಐವರು ನೀರಿನಲ್ಲಿ ಮುಳುಗಿ ನಾಪತ್ತೆಯಾಗಿರೋ ಘಟನೆ ನಡೆದಿದೆ. ರವಿವಾರ ರಜೆಯ ಸಲುವಾಗಿ ಈಜಲು ತೆರಳಿದ್ದ ಒಂದೇ ಕುಟುಂಬದ ಐವರು ನೀರಲ್ಲಿ ನಾಪತ್ತೆಯಾಗಿದ್ದಾರೆ. ನಾಪತ್ತೆಯಾದವರಲ್ಲಿ ಓರ್ವನ ಶವ ಪತ್ತೆಯಾಗಿದೆ. ರಾಮನಬೈಲಿನ ಮೌಲಾನ ಮಹಮ್ಮದ್ ಸಲೀಮ್ ಕಲೀಲ್ ರೆಹಮಾನ್ (44), ರಾಮನಬೈಲಿನ ನಾದಿಯಾ ನೂರ್ ಅಹಮದ್ ಶೇಖ್ (20), ಕಸ್ತೂರಬಾ ನಗರದ ವಿದ್ಯಾರ್ಥಿ ಮಿಸ್ಟಾ ತಬಸುಮ್ (21), ರಾಮನಬೈಲಿನ ನಬಿಲ್ ನೂರ್ ಅಹಮದ್ ಶೇಖ್(22) ಹಾಗೂ ರಾಮನಬೈಲಿನ ವಿದ್ಯಾರ್ಥಿ ಉಮರ್ ಸಿದ್ದಿಕ್ ನಾಪತ್ತೆಯಾಗಿದ್ದಾರೆ. ಇದ್ರಲ್ಲಿ ಸಲೀಮ್ ಕಲೀಲ್ ರೆಹಮಾನ್ (44) ಮೃತ ವ್ಯಕ್ತಿಯ ಶವ ಪತ್ತೆಯಾಗಿದೆ. ಉಳಿದವರ ಪತ್ತೆಗಾಗಿ ಶೋಧ ಕಾರ್ಯ ನಡೆಸಲಾಗ್ತಿದೆ. ಶಿರಸಿ ಗ್ರಾಮೀಣ ಠಾಣೆ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿಯಿಂದ ಶೋಧ ಕಾರ್ಯ ನಡೆಯುತ್ತಿದೆ. ಶಿರಸಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಾಚಣಕಿ ವಿದ್ಯಾರ್ಥಿನಿ ಜನಪದ ಗಾಯನ ಸ್ಪರ್ಧೆಯಲ್ಲಿ ರಾಜ್ಯ ಮಟ್ಟದಲ್ಲಿ ಪ್ರಥಮ..! ಗ್ರಾಮಸ್ಥರ ಹರ್ಷ
ಮುಂಡಗೋಡ ತಾಲೂಕಿನ ಬಾಚಣಕಿಯ ಗ್ರಾಮೀಣ ಪ್ರತಿಭೆಯೊಂದು ಸಾಧನೆ ಮಾಡಿದೆ. ಜನಪದ ಗೀತಗಾಯನ ಸ್ಪರ್ಧೆಯಲ್ಲಿ ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡದು ಮುಂಡಗೋಡ ತಾಲೂಕಿಗೆ ಕೀರ್ತಿ ತಂದಿದ್ದಾಳೆ. ಅಂದಹಾಗೆ ಬಾಚಣಕಿ ಗ್ರಾಮದ ಅನುಪಮ ನಾಗಪ್ಪ ಕೊಂಡಿಕೊಪ್ಪ ಎಂಬುವವಳೆ ಸಾಧನೆಗೈದ ವಿದ್ಯಾರ್ಥಿನಿ. ಸದ್ಯ ಮುಂಡಗೋಡ ಲೊಯೊಲಾ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡ್ತಿರೋ ವಿದ್ಯಾರ್ಥಿನಿ ತಾಲೂಕಾ ಮಟ್ಟ, ಜಿಲ್ಲಾ ಮಟ್ಟ, ವಿಭಾಗ ಮಟ್ಟದಲ್ಲಿಯೂ ಪ್ರಶಸ್ತಿ ಪಡೆದು ಸದ್ಯ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಳು. ಇಂದು ಬೆಂಗಳೂರಿನ ಕ್ರೈಸ್ಟ್ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾಳೆ. ಹೀಗಾಗಿ ಬಾಚಣಕಿ ಗ್ರಾಮದ ಹಲವು ಮುಖಂಡರು, ಶಾಲಾ ಆಡಳಿತ ಮಂಡಳಿ, ಶಿಕ್ಷಕರು ಸೇರಿದಂತೆ ಹಲವರು ವಿದ್ಯಾರ್ಥಿನಿಗೆ ಅಭಿನಂದಿಸಿದ್ದಾರೆ.
ಮಳಗಿ ಧರ್ಮಾ ಜಲಾಶಯದಲ್ಲಿ ಶಿರಸಿಯ ವ್ಯಕ್ತಿ ನೀರುಪಾಲು, ಅಗ್ನಿಶಾಮಕ ಸಿಬ್ಬಂದಿಯಿಂದ ಶೋಧ ಕಾರ್ಯ..!
ಮುಂಡಗೋಡ ತಾಲೂಕಿನ ಮಳಗಿ ಧರ್ಮಾ ಜಲಾಶಯದಲ್ಲಿ ಈಜಲು ತೆರಳಿದ್ದ ವ್ಯಕ್ತಿಯೋರ್ವ ನೀರು ಪಾಲಾಗಿದ್ದಾನೆ. ನಾಲ್ಕೈದು ಸ್ನೇಹಿತರೊಂದಿಗೆ ಜಲಾಶಯಕ್ಕೆ ಬಂದಿದ್ದ ಶಿರಸಿಯ ವ್ಯಕ್ತಿ ನೀರಲ್ಲಿ ಮುಳುಗಿದ್ದು, ಅಗ್ನಿಶಾಮಕ ಸಿಬ್ಬಂದಿಯಿಂದ ಶೋಧ ಕಾರ್ಯ ನಡೆಸಲಾಗ್ತಿದೆ. ಶಿರಸಿ ಸಮೀಪದ ಅಂಡಗಿಯ ಅಜೀದ್ ಗುಡೂಸಾಬ್(34) ಎಂಬುವ ವ್ಯಕ್ತಿಯೇ ಜಲಾಶಯದಲ್ಲಿ ನಾಪತ್ತೆಯಾಗಿದ್ದಾನೆ. ಈತ ಇಂದು ಶಿರಸಿಯಿಂದ ತನ್ನ ಸ್ನೇಹಿತರ ಜೊತೆ ಮಳಗಿಯ ಧರ್ಮಾ ಜಲಾಶಯದ ಸೊಬಗು ಸವಿಯಲು ಬಂದಿದ್ದ. ಈ ವೇಳೆ ಈಜಲು ನೀರಿಗೆ ಇಳಿದ ಸಂದರ್ಭದಲ್ಲಿ ನೀರಲ್ಲೇ ನಾಪತ್ತೆಯಾಗಿದ್ದಾನೆ. ಹೀಗಾಗಿ, ತಕ್ಷಣವೇ ಮುಂಡಗೋಡ ಅಗ್ನಿಶಾಮಕ ಸಿಬ್ಬಂದಿಗೆ ಕರೆ ಮಾಡಿದ್ದು, ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿಗಳು ಬಂದಿದ್ದಾರೆ. ನಾಪತ್ತೆಯಾದವನಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ಇನ್ನು ಮುಂಡಗೋಡ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದ್ದಾರೆ.