ಟಿಬೇಟಿಯನ್ ಕಾಲೋನಿಗೆ ಮಕ್ಕಳ ಪ್ರವಾಸಕ್ಕೆಂದು ಬಂದಿದ್ದ ಬಸ್ ಗೆ ಬೈಕ್ ಡಿಕ್ಕಿ, ಇಬ್ಬರಿಗೆ ಗಾಯ

ಮುಂಡಗೋಡ ತಾಲೂಕಿನ ಯಲ್ಲಾಪುರ ರಸ್ತೆಯ ಟಿಬೇಟಿಯನ್ ಕ್ಯಾಂಪ್ ನಂಬರ್ ಒಂದರ ಹತ್ತಿರ ಬಸ್ ಗೆ ಬೈಕ್ ಡಿಕ್ಕಿಯಾಗಿ ಇಬ್ಬರಿಗೆ ಗಾಯವಾಗಿದೆ. ಗೋವಾ ದಿಂದ ವಾಪಾಸ್ ಹಿಂತಿರುಗಿ ಬರುತ್ತಿದ್ದ ಬೈಕ್ ಸವಾರರಿಬ್ಬರು ಶಾಲಾ ಪ್ರವಾಸಕ್ಕೆಂದು ಬಂದಿದ್ದ KSRTC ಬಸ್ ಗೆ ಡಿಕ್ಕಿ ಹೊಡೆದಿದ್ದಾರೆ.

ತಕ್ಷಣ ಸ್ಥಳಕ್ಕೆ ಧಾವಿಸಿದ 108 ಅಂಬ್ಯುಲೆನ್ಸ್ ಹಾಗೂ ಸಿಬ್ಬಂದಿಗಳಾದ ಧನರಾಜ್ ಸಿ ತುರ್ತು ವೈದ್ಯಕೀಯ ತಂತ್ರಜ್ಞ ಹಾಗೂ ಚಾಲಕ ಶ್ರೀಧರ್ ಸವಾರರಿಗೆ ಪ್ರಥಮ ಚಿಕಿತ್ಸೆ ಕೊಟ್ಟು ಮುಂಡಗೋಡ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಓರಿಸ್ಸಾ ಹಾಗೂ ಅಸ್ಸಾಂ ಮೂಲದ ಬೈಕ್ ಸವಾರ ರಾಕೇಶ್ ಸ್ವೈನ್ (33) ಹಾಗೂ ಹಿಂಬದಿ ಸವಾರ ಸುನಂದಿತ ಪಾಲ್ (32) ಇವರಿಬ್ಬರಿಗೂ ಸಣ್ಣ ಪುಟ್ಟ ಗಾಯಗಳಾಗಿದೆ.

ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

error: Content is protected !!