ಮುಂಡಗೋಡ ತಾಲೂಕಿನ ಹುನಗುಂದ ವೀರೇಶ್ವರ ವಿವಿದ್ದೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘದ ಚುನಾವಣೆ ನಡೆಯಿತು. ಒಟ್ಟೂ 12 ಸದಸ್ಯ ಬಲದ ಸಹಕಾರ ಸಂಘಕ್ಕೆ ಈಗಾಗಲೇ 9 ಜನ ಅವಿರೋಧವಾಗಿ ಆಯ್ಕೆಯಾಗಿದ್ದು, ಇಂದು ಮೂರು ಸ್ಥಾನಗಳಿಗೆ ಚುನಾವಣೆ ನಡೆಯಿತು.
ಜಾತ್ಯಾತೀತ ಒಕ್ಕೂಟದ ಅಭ್ಯರ್ಥಿಗಳು ಚುನಾವಣೆಯಲ್ಲಿ ಜಯಶಾಲಿಯಾದ್ರು. ಅದ್ರಲ್ಲಿ ಅರಷಿಣಗೇರಿಯ ಇಬ್ಬರು ಹಾಗೂ ಹುನಗುಂದದ ಓರ್ವ ಸದಸ್ಯರು ಚುನಾಯಿತರಾದ್ರು.
ಇನ್ನು ಹುನಗುಂದ, ಅತ್ತಿವೇರಿ, ಅಗಡಿ, ಅರಷಿಣಗೇರಿ, ಹುಲಿಹೊಂಡ ಗ್ರಾಮಗಳನ್ನೊಳಗೊಂಡ ಸೊಸೈಟಿಗೆ ನೂತನವಾಗಿ ಆಯ್ಕೆಗೊಂಡಿರೋ ಸದಸ್ಯರ ಪಟ್ಟಿ ಈ ಕೆಳಗಿನಂತಿದೆ.
ಹುನಗುಂದದಿಂದ..
ಹುನಗುಂದ ಭಾಗದಿಂದ ಆರು ಜನ ಸದಸ್ಯರು ಆಯ್ಕೆಯಾಗಿದ್ದು ಸಿದ್ದಪ್ಪ ಮಹದೇವಪ್ಪ ಹಡಪದ್, ಯಲ್ಲಪ್ಪ ಬಸಪ್ಪ ಶಿವಳ್ಳಿ, ನಾಗವ್ವ ರಾಮಚಂದ್ರ ಬುದ್ದಣ್ಣನವರ್, ಗೌರವ್ವ ಸಹದೇವಪ್ಪ ಆಸ್ತಕಟ್ಟಿ, ಫಕ್ಕೀರಪ್ಪ ಕುಂಕೂರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ, ಅದ್ರಂತೆ ಅಬ್ದುಲ್ ರೆಹಮಾನ್ ಹಕೀಂ ಇಂದು ನಡೆದ ಚುನಾವಣೆಯಲ್ಲಿ 14 ಮತಗಳ ಅಂತರದಿಂದ ನಿಜಗುಣಿ ಬಸಪ್ಪ ಬಿಸನಳ್ಳಿ ವಿರುದ್ಧ ಗೆಲುವು ಸಾಧಿಸಿದ್ದಾರೆ.
ಅಗಡಿ ಗ್ರಾಮದಿಂದ..
ಇನ್ನು ಅಗಡಿ ಗ್ರಾಮದಿಂದ ಎಚ್.ಎಂ. ನಾಯ್ಕ್, ಮಲ್ಲೇಶ ಲಮಾಣಿ, ಜೇಮ್ಲಪ್ಪ ಲಮಾಣಿ ಈಗಾಗಲೇ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಹುಲಿಹೊಂಡದಿಂದ..
ಹಾಗೆ, ಹುಲಿಹೊಂಡ ಗ್ರಾಮದಿಂದ ಹನ್ಮಂತ್ ಕಂಬಾರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಅರಷಿಣಗೇರಿ ಗ್ರಾಮದಿಂದ..
ಹಾಗೆ ನೋಡಿದ್ರೆ ಈ ಸಹಕಾರ ಸಂಘದ ಚುನಾವಣೆಯ ಅಸಲೀ ಕಾವು ಅರಷಿಣಗೇರಿ ಗ್ರಾಮದಲ್ಲಿ ಜೋರಾಗಿತ್ತು. ಇಲ್ಲಿ ತುರುಸಿನ ಸ್ಪರ್ಧೆ ಏರ್ಪಟ್ಟು ದೇವರಾಜ್ ಲಮಾಣಿ ಹಾಗೂ ಅಶೋಕ ಹಸರಂಬಿ ಚುನಾವಣೆಯಲ್ಲಿ ಗೆದ್ದು ಬಂದಿದ್ದಾರೆ.
ಅಸಲು, ಪಕ್ಷಾತೀತವಾಗಿ ನಡೆದ ಈ ಚುನಾವಣೆಯಲ್ಲಿ ಬೆಳಗಿನಿಂದಲೂ ಮತದಾರರು ಮತ ಚಲಾಯಿಸಿದ್ರು. ಸಂಜೆ ನಾಲ್ಕೂವರೆ ಅಷ್ಟೊತ್ತಿಗೆ ಮೂರೂ ಕ್ಷೇತ್ರಗಳ ಫಲಿತಾಂಶ ಹೊರಬಿದ್ದು ಜಯಭೇರಿ ಬಾರಿಸಿದ ಅಭ್ಯರ್ಥಿಗಳ ಸಂಭ್ರಮಾಚರಣೆ ಜೋರಾಗಿತ್ತು.