ಮತ್ತೆ ಅಖಾಡಕ್ಕೆ ಧುಮುಕತ್ತಾ ಹಿಂದು ಹುಲಿ..? ಯತ್ನಾಳ್ ಜೊತೆಗೆ ದೆಹಲಿಗೆ ತೆರಳಿದ ಅನಂತಕುಮಾರ್ ಹೆಗಡೆ..! ಭಾರೀ ಕುತೂಹಲ ಮೂಡಿಸಿದ ನಡೆ..!!

ಉತ್ತರ ಕನ್ನಡ ಬಿಜೆಪಿಗೆ ಮತ್ತೆ ಆನೆಬಲ ಬರುವ ಎಲ್ಲಾ ಲಕ್ಷಣಗಳು ಗೋಚರಿಸ್ತಿವೆ. ಬಿಜೆಪಿಯ ಪೈಯರ್ ಬ್ರ್ಯಾಂಡ್ ಅನಂತಕುಮಾರ್ ಹೆಗಡೆ ಮತ್ತೆ ಚುನಾವಣಾ ರಾಜಕೀಯಕ್ಕೆ ಧುಮುಕುವ ಎಲ್ಲಾ ಲಕ್ಷಣಗಳು ಕಾಣ್ತಿವೆ. ಯಾಕಂದ್ರೆ ಇವತ್ತು ಅನಂತಣ್ಣ ಹೈಕಮಾಂಡ್ ಭೇಟಿಯಾಗಲು ದೆಹಲಿಗೆ ತೆರಳಿದ್ದಾರೆ. ಜೊತೆಗೆ ಮತ್ತೋರ್ವ ಪೈಯರ್ ಬ್ರ್ಯಾಂಡ್ ಬಸನಗೌಡ ಪಾಟೀಲ್ ಯತ್ನಾಳ್, ಕೊಪ್ಪಳ ಸಂಸದ ಸಂಗಣ್ಣ ಕರಡಿ ಜೊತೆಯಾಗಿ ರವಿವಾರ ದೆಹಲಿಯ ವಿಮಾನ ಹತ್ತಿದ್ದಾರೆ.

ಬಿಜೆಪಿಯಲ್ಲಿ ಭಿನ್ನಮತ ತಾರಕಕ್ಕೆ ಏರಿದ ಹಿನ್ನೆಲೆಯಲ್ಲಿ ಹೈಕಮಾಂಡ್ ನಿಂದ ಬುಲಾವ್ ಬಂದ ಸಲುವಾಗಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ನವದೆಹಲಿಗೆ ತೆರಳಿದ್ದಾರೆ. ಜೊತೆಗೆ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ಅನಂತಕುಮಾರ್ ಹೆಗಡೆ, ಕೊಪ್ಪಳ ಸಂಸದ ಸಂಗಣ್ಣ ಕರಡಿ ಜೊತೆಗೂಡಿ ದೆಹಲಿಗೆ ತೆರಳಿದ್ದಾರೆ.

ಟಿಕೆಟ್ ಸಲುವಾಗಿ ಬುಲಾವ್..?
ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಮೂವರೂ ಬಿಜೆಪಿ ನಾಯಕರು ಜೊತೆಗೂಡಿ ದೆಹಲಿಗೆ ತೆರಳಿದ್ದು ಭಾರೀ ಕುತೂಹಲಕ್ಕೆ ಕಾರಣವಾಗಿದೆ. ಬರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಸಾಧ್ಯವೇ ಇಲ್ಲ ಅಂತಾ ಬಹುತೇಕ ರಾಜಕೀಯದಿಂದ ದೂರ ಉಳಿದಿದ್ದ ಅನಂತಕುಮಾರ್ ಹೆಗಡೆ ಮತ್ತೆ ಆ್ಯಕ್ಟಿವ್ ಆಗಿ ದೆಹಲಿಗೆ ತೆರಳಿದ್ದು ಭಾರೀ ಸಂಚಲನಕ್ಕೆ ಕಾರಣವಾಗಿದೆ. ಬಹುಶಃ ಟಿಕೆಟ್ ಫಿಕ್ಸ್ ಮಾಡಲೆಂದೇ ಮತ್ತೆ ದೆಹಲಿಗೆ ಕರೆಸಿಕೊಳ್ತಿದೆಯಾ ಹೈಕಮಾಂಡ್..? ಗೊತ್ತಿಲ್ಲ. ಆದ್ರೆ, ಮತ್ತೆ ಹಿಂದು ಹುಲಿ ಬಿಜೆಪಿಯ ಬಾವುಟ ಎತ್ತಿ ಹಿಡಿಯಲು ಸನ್ನದ್ಧರಾಗುವ ಸಾಧ್ಯತೆ ನಿಚ್ಚಳವಾದಂತಿದೆ.

ಯತ್ನಾಳ್ ಗೆ ಬುಲಾವ್..!
ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಪಕ್ಷದ ಆಂತರಿಕ ವಿಚಾರಗಳನ್ನು ಬಹಿರಂಗವಾಗಿ ಮಾತನಾಡಿರುವ ಸಲುವಾಗಿ ಹೈಕಮಾಂಡ್ ಕೆಂಗಣ್ಣಿಗೆ ಗುರಿಯಾಗಿದ್ದಾರೆ ಎನ್ನಲಾಗ್ತಿದೆ. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹಾಗೂ ಬಿಎಸ್ ವೈ ವಿರುದ್ಧ ಬಹಿರಂಗವಾಗೇ ಗುಟುರು ಹಾಕ್ತಿರೋ ಯತ್ನಾಳ್ ರಿಗೆ ಪಕ್ಷದ ವರಿಷ್ಠರಿಂದ ಬುಲಾವ್ ಬಂದಿದೆ ಎನ್ನಲಾಗಿದೆ. ಹೀಗಾಗಿ, ಸೋಮವಾರ ದೆಹಲಿಯಲ್ಲಿ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ನಡ್ಡಾ, ಗೃಹ ಸಚಿವ ಅಮಿತಾ ಶಾರನ್ನು ಯತ್ನಾಳ್ ಭೇಟಿಯಾಗಲಿದ್ದಾರೆ ಎನ್ನಲಾಗ್ತಿದೆ.

ಇನ್ನು, ಲೋಕಸಭಾ ಚುನಾವಣೆಯಲ್ಲಿ ಟಿಕೇಟ್ ತಪ್ಪುವ ಭೀತಿ ವಿಚಾರವಾಗಿ ಸಂಗಣ್ಣ ಕರಡಿ ಸಹ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗ್ತಿದೆ. ಆದ್ರೆ ಇದೇಲ್ಲದರ ನಡುವೆ ಮತ್ತೆ ಅನಂತಣ್ಣ ದೆಹಲಿಗೆ ತೆರಳಿರೋ ಹಿಂದೆ ಮತ್ತೆ ಅಭ್ಯರ್ಥಿಯಾಗುವ ಹಂಬಲ ಇದೆಯಾ..? ಇನ್ನಷ್ಟೆ ತಿಳಿದು ಬರಬೇಕಿದೆ. ಒಟ್ನಲ್ಲಿ ಸೋಮವಾರ ದೆಹಲಿಯಲ್ಲಿ ಬಿಜೆಪಿ ಹಿರಿಯರನ್ನು ಭೇಟಿಯಾಗಲಿರೋ ಅನಂತಕುಮಾರ್ ಹೆಗಡೆ ಮುಂದಿನ ತೀರ್ಮಾನಗಳ ಬಗ್ಗೆ ಚರ್ಚಿಸಲಿದ್ದಾರೆ ಎನ್ನಲಾಗ್ತಿದೆ.

error: Content is protected !!