ಗಣೇಶಗುಡಿಯಲ್ಲಿ ರೆಸಾರ್ಟ್, ಹೋಂ ಸ್ಟೇ ಮಾಲೀಕರಿಗೆ ಮಾದಕ ದ್ರವ್ಯದ ಕಾನೂನು ತಿಳುವಳಿಕೆ ನೀಡಿದ ಪೊಲೀಸರು..!

ರಾಮನಗರ ಪೊಲೀಸ್ ಠಾಣಾ ವ್ಯಾಪ್ತಿಯ ಗಣೇಶಗುಡಿ ಗ್ರಾಮದಲ್ಲಿ ಮಾದಕ ದ್ರವ್ಯ ಮತ್ತು ಕಾನೂನು ತಿಳುವಳಿಕೆ ಕಾರ್ಯಕ್ರಮ ಪೊಲೀಸ್ ಇಲಾಖೆಯಿಂದ ಹಮ್ಮಿಕೊಳ್ಳಲಾಗಿತ್ತು.

ಗಣೇಶಗುಡಿ ಗ್ರಾಮದ ಸುತ್ತ ಮುತ್ತಲಿನ
ಎಲ್ಲಾ ಹೋಂ ಸ್ಟೇ ಮತ್ತು ರೆಸಾರ್ಟ್ ಹಾಗೂ ಜಲ ಕ್ರೀಡಾ ಕೇಂದ್ರಗಳ ಗೈಡ್ಸ್ ಮತ್ತು ಮಾಲೀಕರು, ವ್ಯವಸ್ಥಾಪಕರನ್ನು ಕರೆಸಿ ಮಾದಕ ದ್ರವ್ಯ ಮತ್ತು ಕಾನೂನು ತಿಳುವಳಿಕೆ ನೀಡಲಾಯಿತು.

ಕಾರ್ಯಕ್ರಮದಲ್ಲಿ ರಾಮನಗರ ಠಾಣೆ ಪಿಎಸ್ ಐ ಬಸವರಾಜ್ ಮಬನೂರು ಮಾದಕ ದ್ರವ್ಯ ಹಾಗೂ ಅದರಿಂದಾಗುವ ಅನಾಹುತಗಳು, ಹಾಗೂ ಅದಕ್ಕೆ ಸಂಬಂಧಿಸಿದ ಕಾನೂನು ತಿಳುವಳಿಕೆ ನೀಡಿದ್ರು.