ಹಾವೇರಿ ಜಿಲ್ಲೆಯ ಹಿರೆಕೆರೂರಿನ ಹಂಸಬಾವಿ ಹೋರಿ ಬೆದರಿಸುವ ಹಬ್ಬದಲ್ಲಿ ದುರಂತ ಸಂಭವಿಸಿದೆ. ಹೋರಿ ತಿವಿದು ಯುವಕನೋರ್ವ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಹಾವೇರಿ ಜಿಲ್ಲೆಯ ಹಿರೇಕೆರೂರ ತಾಲೂಕಿನ ಹಂಸಭಾವಿ ಗ್ರಾಮದಲ್ಲಿ ನಡೆದ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಘಟನೆ ನಡೆದಿದೆ. ಅರಳೀಕಟ್ಟಿ ಗ್ರಾಮದ ಮಂಜಪ್ಪ ಚನ್ನಪ್ಪನವರ(38), ಮೃತ ಯುವಕನಾಗಿದ್ದು, ಘಟನೆಯಲ್ಲಿ ಇನ್ನಿಬ್ಬರಿಗೆ ಗಂಭೀರ ಗಾಯವಾಗಿದೆ. ಅಲ್ದೆ, 16 ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳುಗಳನ್ನು ಹಾವೇರಿ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಹೀಗಾಗಿ, ಹೋರಿ ಬೆದರಿಸುವ ಹಬ್ಬವನ್ನು ಪೊಲೀಸರು ಬಂದ್ ಮಾಡಿಸಿದ್ದಾರೆ. ಹಂಸಭಾವಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣವಾಗಿದೆ.
Top Stories
NMD ಕಿಡ್ನ್ಯಾಪ್ ಕೇಸ್, ಮತ್ತೆ ಐವರು ಆರೋಪಿಗಳು ಅಂದರ್, ಪೊಲೀಸರು ಆರೋಪಿಗಳಮದ್ಯೆ ಭಾರೀ ಕಾಳಗ..! ಗುಂಡೇಟು..!
NMD ಜಮೀರ್ ಬಾಯ್ ಸೇಫ್..! ಗದಗ ರಿಂಗ್ ರೋಡಲ್ಲಿ ಬಿಟ್ಟು ಹೋದ ಕಿಡ್ನ್ಯಾಪರ್ಸ್..! ಐವರು ಆರೋಪಿಗಳ ಹೆಡೆಮುರಿ ಕಟ್ಟಿದ್ರಾ ಮುಂಡಗೋಡ ಪೊಲೀಸ್ರು..?
ಮುಂಡಗೋಡಿನ NMD ಗ್ರೂಪ್ ಮಾಲೀಕನ ಮೇಲೆ ದುಷ್ಕರ್ಮಿಗಳ ಅಟ್ಯಾಕ್
ಟಿಬೇಟಿಯನ್ ಕಾಲೋನಿ ಬಳಿ ಬೈಕ್ ಗಳ ನಡುವೆ ಡಿಕ್ಕಿ, ಓರ್ವ ಸವಾರ ಸ್ಥಳದಲ್ಲೇ ಸಾವು, ಮತ್ತೋರ್ವ ಗಂಭೀರ..!
ಮುಂಡಗೋಡಿನ ಮುಲ್ಲಾ ಓಣಿಯ ಬಾವಿಯಲ್ಲಿ ವ್ಯಕ್ತಿಯ ಶವ ಪತ್ತೆ..! ಆತ್ಮಹತ್ಯೆನಾ..?
ಮುಂಡಗೋಡಿನ ಅಂಗನವಾಡಿಯಲ್ಲಿ ಹಾವು ಕಚ್ಚಿದ್ದ ಬಾಲಕಿ ಕಿಮ್ಸ್ ನಲ್ಲಿ ಸಾವು..!
ಮುಂಡಗೋಡಿನಲ್ಲಿ ಅಂಗನವಾಡಿಗೆ ಹೋಗಿದ್ದ ಪುಟ್ಟ ಬಾಲಕಿಗೆ ಕಚ್ಚಿದ ಹಾವು..!
ಹಳೇ ದ್ವೇಷದ ಹಿನ್ನಲೆ ಇಬ್ಬರಿಗೆ ಚಾಕು ಇರಿತ
ಇಂದೂರು ಸೊಸೈಟಿ ಚುನಾವಣೆ: ಭರ್ಜರಿ ಗೆಲುವು ಸಾಧಿಸಿದ ಕಾಂಗ್ರೆಸ್ ಬೆಂಬಲಿತರು..! ರೈತ ಒಕ್ಕೂಟಕ್ಕೆ ಮೂರು ಸ್ಥಾನಗಳು ಮಾತ್ರ..!
ಇಂದೂರು ಸೊಸೈಟಿ ಚುನಾವಣೆ ಅಚ್ಚರಿ ಫಲಿತಾಂಶ: ಮಾಜಿ ಜಿಪಂ ಸದಸ್ಯ ರವಿಗೌಡ ಪಾಟೀಲ್ ಸೋಲು..!
ಚವಡಳ್ಳಿ ಸೊಸೈಟಿ ಚುನಾವಣೆ: 11 ರಲ್ಲಿ ಕಾಂಗ್ರೆಸ್ ಬೆಂಬಲಿತರದ್ದೇ ಭರ್ಜರಿ ಗೆಲುವು..! ಬಿಜೆಪಿಗೆ ದಕ್ಕಿದ್ದು ಒಂದೇ ಒಂದು ಸ್ಥಾನ..!
ಮುಂಡಗೋಡ LSMP ಸೊಸೈಟಿ ಚುನಾವಣೆಯಲ್ಲಿ ಕಾಂಗ್ರೆಸ್ ಮೇಲುಗೈ, 12 ರ ಪೈಕಿ 9 ರಲ್ಲಿ ಕೈ ಬೆಂಬಲಿತರ ಗೆಲುವು..!
ಹುಬ್ಬಳ್ಳಿ ಸಿಲಿಂಡರ್ ಬ್ಲಾಸ್ಟ್: ಮತ್ತೋರ್ವ ಅಯ್ಯಪ್ಪ ಮಾಲಾಧಾರಿ ಸಾವು, ಸಾವಿನ ಸಂಖ್ಯೆ ಮೂರಕ್ಕೆ ಏರಿಕೆ..!
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ವಿಧಿವಶ ಹಿನ್ನೆಲೆ, ಶುಕ್ರವಾರ ಸರ್ಕಾರಿ ರಜೆ ಘೋಷಣೆ..! ಶಾಲಾ ಕಾಲೇಜುಗಳಿಗೆ ರಜೆ..!
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ವಿಧಿವಶ..! ನಾಳೆಯ ಬೆಳಗಾವಿ ಕೈ ಕಾರ್ಯಕ್ರಮ ರದ್ದು..!
ಮುಂಡಗೋಡ ಗಡಿ ಭಾಗದ ಹಾನಗಲ್ ತಾಲೂಕಿನ ಕೊಪ್ಪರಸಿಕೊಪ್ಪದಲ್ಲಿ ನಡೀತು ಭಯಾನಕ, ಅಮಾನುಷ ಘಟನೆ
ಹುಬ್ಬಳ್ಳಿ ಸಿಲಿಂಡರ್ ಸ್ಪೋಟದಲ್ಲಿ ಗಾಯಗೊಂಡಿದ್ದ ಇಬ್ಬರು ಅಯ್ಯಪ್ಪ ಮಾಲಾಧಾರಿಗಳು ಸಾವು..!
ತಡಸ ಕ್ರಾಸ್ ಬಳಿ ಭೀಕರ ಅಪಘಾತ, ಒಂದೇ ಕುಟುಂಬದ ನಾಲ್ವರು ದುರಂತ ಸಾವು..!
ಬೆಡಸಗಾಂವ್ ಸಹಕಾರಿ ಸಂಘದ ಚುನಾವಣೆ ನಡೆದ್ರೂ ಮತ ಎಣಿಕೆಗೆ ಬ್ರೇಕ್..! ಹೈಕೋರ್ಟ್ ತಡೆಯಾಜ್ಞೆ..!
ಹಂಸಬಾವಿ ಹೋರಿ ಹಬ್ಬದಲ್ಲಿ ಹೋರಿ ತಿವಿದು ಯುವಕ ಸಾವು, ಇಬ್ಬರು ಗಂಭೀರ, 16ಜನರಿಗೆ ಗಾಯ, ಹಬ್ಬವೇ ಬಂದ್..!
ಈಶ್ವರಪ್ಪನವ್ರೇ, ಗಾಜಿನ ಮನೇಲಿ ನಿಂತು, ಮತ್ತೊಬ್ಬರ ಮನೆ ಮೇಲೆ ಕಲ್ಲು ಎಸಿಬೇಡಿ- ಬಿಜೆಪಿ ನಾಯಕ ಈಶ್ವರಪ್ಪ ವಿರುದ್ಧ ಶಿವರಾಂ ಹೆಬ್ಬಾರ್ ಎಚ್ಚರಿಕೆ..!
ಶಿರಸಿ: ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನಮಗೆ ಹಣ ಕೊಟ್ಟಿದೆ ಎಂದು ಮಾಜಿ ಸಚಿವ ಈಶ್ವರಪ್ಪ ಹೇಳಿಕೆಗೆ ಶಾಸಕ ಶಿವರಾಮ ಹೆಬ್ಬಾರ್ ಖಡಕ್ ತಿರುಗೇಟು ನೀಡಿದ್ದಾರೆ. ಶಿರಸಿಯಲ್ಲಿ ಮಾದ್ಯಮದವರೊಂದಿಗೆ ಮಾತನಾಡುತ್ತಿದ್ದ ಹೆಬ್ಬಾರ್, ಬೇರೆ ಬೇರೆ ರಾಜ್ಯದಲ್ಲಿ ಬಿಜೆಪಿಯವರೆ ಕಾಂಗ್ರೆಸ್ ಶಾಸಕರನ್ನ ಖರೀದಿ ಮಾಡಿದ್ದಾರಲ್ಲ ಅವರಿಗೆಲ್ಲಾ ಎಷ್ಟೆಷ್ಟು ಕೋಟಿ ಹಣ ನೀಡಿದ್ದಾರೆಂಬುದನ್ನು ಈಶ್ವರಪ್ಪ ಬಹಿರಂಗ ಪಡಿಸಲಿ ಅಂತಾ ತಿರುಗೇಟು ನೀಡಿದ್ದಾರೆ. ಉತ್ತರಕನ್ನಡ ಜಿಲ್ಲೆಯ ಶಿರಸಿಯಲ್ಲಿ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಶಿವರಾಮ ಹೆಬ್ಬಾರ್, ಉತ್ತರ ಪ್ರದೇಶ ಹಾಗೂ ಹಿಮಾಚಲ ಪ್ರದೇಶದಲ್ಲಿ ಬಿಜೆಪಿಯವರು ಕಾಂಗ್ರೆಸ್ನವರಿಗೆ ಎಷ್ಟು ಹಣ ಕೊಟ್ಟಿದ್ದಾರೆ ಎನ್ನುವುದನ್ನು ಕೇಳಬೇಕಾಗುತ್ತದೆ. ಉತ್ತರಪ್ರದೇಶದಲ್ಲಿ ಏನು ಅಡ್ಡಮತದಾನವಾಯಿತು ಅಲ್ಲಿ ಎಷ್ಟೆಷ್ಟು ಇನ್ವೆಸ್ಟಮೆಂಟ್ ಮಾಡಿದ್ದಾರಂತಾ ಕೇಳಬೇಕಾಗುತ್ತದೆ ಅಂತಾ ಖಾರವಾಗೇ ತಿವಿದ್ರು. ಈಶ್ವರಪ್ಪನ ಮಾತನ್ನು ಬಿಜೆಪಿಯಲ್ಲಿ ಯಾರೂ ಗಂಭೀರವಾಗಿ ಪರಿಗಣಿಸುತ್ತಿಲ್ಲ. ಅವರ ಮಾತಿಗೆ ಬೆಲೆಯಿಲ್ಲದಂತಾಗಿದೆ. ಈ ಹಿಂದೆ ಇದೆ ಈಶ್ವರಪ್ಪ ಏನೆಲ್ಲಾ ಮಾಡಿಕೊಂಡು ರಾಜೀನಾಮೆ ನೀಡಿದ್ದಾರೆ ಎನ್ನುವುದು ರಾಜ್ಯದ ಜನರಿಗೆ ಚೆನ್ನಾಗಿ ಗೊತ್ತು, ಈಶ್ವರಪ್ಪನವರಿಗೂ ಗೊತ್ತಿದೆ. ರಾಜ್ಯದಲ್ಲಿ...
ಮುಂಡಗೋಡ ತಾಲೂಕಿನಲ್ಲಿ ಮಂಗನ ಕಾಯಿಲೆ ಕಟ್ಟೇಚ್ಚರ, ಜಾಗ್ರತೆ ವಹಿಸುವಂತೆ ವೈದ್ಯಾಧಿಕಾರಿಗಳ ಪ್ರಕಟಣೆ..!
ಮುಂಡಗೋಡ: ಅಕ್ಕ ಪಕ್ಕದ ತಾಲೂಕುಗಳಲ್ಲಿ ಮಂಗನ ಕಾಯಿಲೆ ಪ್ರಕರಣಗಳು ವರದಿಯಾಗುತ್ತಿದ್ದು ಜನರು ಜಾಗೃತಿಯಿಂದ ವಹಿಸುವಂತೆ ತಾಲೂಕಾಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ನರೇಂದ್ರ ಪವಾರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸೋಂಕಿತ ಉಣ್ಣೆಗಳು ಕಚ್ಚುವುದರಿಂದ ಮನುಷ್ಯರಿಗೆ ಮಂಗನ ಕಾಯಿಲೆ ಬರುತ್ತದೆ. ಇದು ಮನುಷ್ಯರಿಂದ ನೇರವಾಗಿ ಮನುಷ್ಯರಿಗೆ ಹರಡುವುದಿಲ್ಲ. ಈ ವೈರಲ್ ಜ್ವರವನ್ನು ಸೂಕ್ತ ಚಿಕಿತ್ಸೆ ಮೂಲಕ ಗುಣಪಡಿಸಬಹುದು ಜನರು ಅನವಶ್ಯಕವಾಗಿ ಕಾಡಿಗೆ ಹೋಗಬಾರದು. ಕಾಡಿನಿಂದ ಒಣ ದರಕು.ತರಗೆಲೆ ಮನೆಗೆ,ತೋಟಕ್ಕೆ ತರಬಾರದು.ಕಾಯಿಲೆಯಿಂದ ಸತ್ತ ಮಂಗಗಳಲ್ಲಿ ಇರುವ ಉಣ್ಣೆಗಳು ತರಗೆಲೆಗಳಲ್ಲಿ ಇರುತ್ತವೆ. ಮಂಗನ ಕಾಯಲೆ ಮಾರಣಾಂತಿಕ ಕಾಯಿಲೆಯಾಗಿದೆ. ಕಾಡಿಗೆ ಹೋಗಲೇಬೇಕಾದ ಸಂದರ್ಭವಿದ್ದಲ್ಲಿ ಶೂ ಅಥವಾ ಗಂಬೂಟು ಧರಿಸುವುದು,ಮೈತುಂಬಾ ಬಟ್ಟೆ ಧರಿಸುವುದು.ಡೇಪಾ ಎಣ್ಣೆಯನ್ನು ಹಚ್ಚಿಕೊಂಡು ಹೋಗುವುದು, ಬಂದ ನಂತರ ಬಿಸಿನೀರು ಸ್ನಾನ ಮಾಡುವುದು. ಉಣ್ಣೆ ಹತ್ತಿಕೊಂಡಿದೆಯೋ ಎ೦ದು ಪರೀಕ್ಷಿಸಿಕೊಳ್ಳಬೇಕು.ಸತತ 8,10ದಿನಗಳಿಂದ ಬಿಡದೇ ಬರುವ ಜ್ವರ,ವಿಪರೀತ ತಲೆನೋವು,ಕೈಕಾಲು ನೋವು, ಸೊಂಟನೋವು, ಮೂಗು, ಬಾಯಿ, ಗುದದ್ವಾರದಿಂದ ರಕ್ತಸ್ರಾವ ಖಾಯಿಲೆಯ ಲಕ್ಷಣಗಳು ಆಗಿರುತ್ತವೆ. ಮಂಗಗಳು ಸತ್ತಿದ್ದು ಕಂಡು ಬಂದಲ್ಲಿ ಹತ್ತಿರದ ಆರೋಗ್ಯ ಕೇಂದ್ರಕ್ಕೆ ತಿಳಿಸುವಂತೆ...
ಬೆಂಗಳೂರು “ಕೇಫೆ” ಬಾಂಬ್ ಸ್ಫೋಟ ಕೇಸ್ ಬಿಜೆಪಿಯದ್ದೇ ಚುನಾವಣಾ ಸಂಚು: ಮುಂಡಗೋಡಿನಲ್ಲಿ ಸಚಿವ ಮಂಕಾಳು ವೈದ್ಯ ಆರೋಪ..!
ಬೆಂಗಳೂರು ಬಾಂಬ್ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಮಂಕಾಳು ವೈದ್ಯ ಗಂಭೀರ ಆರೋಪ ಮಾಡಿದ್ದಾರೆ. ಇದು ಚುನಾವಣೆಗಾಗಿ ಬಿಜೆಪಿಯವರು ಮಾಡಿರೋ ಸಂಚು ಅನ್ನೊ ವ್ಯಾಕ್ಯಾನ ಮಾಡಿರೋ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರು, ಬಿಜೆಪಿಯವರು ಚುನಾವಣೆಗಾಗಿ ಏನ್ ಬೇಕಾದ್ರೂ ಮಾಡ್ತಾರೆ ಅಂತಾ ಆರೋಪಿಸಿದ್ರು. ಅವರು, ಮುಂಡಗೋಡಿನ ಪ್ರವಾಸಿ ಮಂದಿರದಲ್ಲಿ ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದರು, ಚುನಾವಣೆ ಹೊತ್ತಲ್ಲಿ ಮತದಾರರ ಗಮನ ಸೆಳೆಯಲು ಯಾರು, ಯಾವ ಪಕ್ಷದವರು ಏನ್ ಮಾಡ್ತಾರೆ ಅಂತಾ ನಿಮಗೂ ಗೊತ್ತಿದೆ, ಎಲ್ಲರಿಗೂ ಗೊತ್ತಿದೆ. ಈ ಕೃತ್ಯ ಯಾರದ್ದು ಅಂತಾ ಇಡೀ ಜಗತ್ತಿಗೇ ಗೊತ್ತಿದೆ. ಹೀಗಾಗಿ, ಯಾರೂ ಭಯ ಪಡುವ ಅಗತ್ಯವಿಲ್ಲ. ನಮ್ಮ ಸರ್ಕಾರ ಅದ್ಯಾರೇ ಈ ಕೃತ್ಯದಲ್ಲಿ ಭಾಗಿಯಾಗಿದ್ರೂ ಖಂಡಿತವಾಗಿ ಕಠಿಣ ಕ್ರಮ ಜರುಗಿಸುತ್ತದೆ ಅಂತಾ ಸಚಿವ್ರು ತಿಳಿಸಿದ್ರು. ಬಿಜೆಪಿಯವ್ರದ್ದೇ ಸಂಚು ಆರೋಪ..! ಇನ್ನು, ಹಾಗಿದ್ರೆ ನಿಮ್ಮ ಪ್ರಕಾರ ಬೆಂಗಳೂರು ಬಾಂಬ್ ಸ್ಪೋಟ ಪ್ರಕರಣವನ್ನು ಮಾಡಿಸಿದ್ದು ಯಾರು ಅಂತಾ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವ ಮಂಕಾಳು ವೈದ್ಯ, ಇದೇಲ್ಲ...
ಮುಂಡಗೋಡ ಬ್ಲಾಕ್ ಕಾಂಗ್ರೆಸ್ ನಲ್ಲಿ ಕೋಲಾಹಲ, ಬ್ಲಾಕ್ “ಕೈ” ಅಧ್ಯಕ್ಷರ ಬದಲಾವಣೆಗಾಗಿ ಕಾರ್ಯಕರ್ತರ ಮನವಿ..!
ಮುಂಡಗೋಡ: ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಬದಲಾವಣೆ ಮಾಡುವಂತೆ ಒತ್ತಾಯಿಸಿ ಖುದ್ದು ಕಾಂಗ್ರೆಸ್ ಕಾರ್ಯಕರ್ತರೇ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಅವರಿಗೆ ಅಲವತ್ತುಕೊಂಡು ಮನವಿ ಅರ್ಪಿಸಿದ ಘಟನೆ ನಡೆದಿದೆ. ಸರ್ವಾಧಿಕಾರಿ ಅಧ್ಯಕ್ಷರಾ..? ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಕಾರ್ಯ ವೈಖರಿ ಕೆಲವು ಕಾರ್ಯಕರ್ತರಿಗೆ ಹಾಗೂ ಮುಖಂಡರಿಗೆ ಬೇಸರ ಮೂಡಿಸಿದ್ದು ಸರ್ವಾಧಿಕಾರಿ ಧೋರಣೆ ತೋರುತ್ತಿದ್ದಾರೆ. ಸರ್ವಾಧಿಕಾರಿ ಧೋರಣೆಯಿಂದ ಕಾರ್ಯಕರ್ತರು ಕಂಗಾಲಾಗಿದ್ದು ಲೋಕಸಭಾ ಚುನಾವಣೆಗೂ ಮುನ್ನವೆ ಈಗೀನ ಅಧ್ಯಕ್ಷ ಜ್ಞಾನದೇವ ಗುಡಿಹಾಳ ಅವರನ್ನು ಬದಲಾವಣೆ ಮಾಡಬೇಕು ಆ ಹುದ್ದೆಗೆ ಹೊಸ ಅಧ್ಯಕ್ಷರನ್ನು ನೇಮಕ ಮಾಡಿ ತಾಲೂಕಿನ ಎಲ್ಲ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿ ನೂತನ ಅಧ್ಯಕ್ಷರ ಆಯ್ಕೆ ಮಾಡಬೇಕು ಹಾಗೂ ಇತ್ತೀಚೆಗೆ ಪಕ್ಷದ ಕಚೇರಿಯಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಶೇ.90ರಷ್ಟು ಕಾರ್ಯಕರ್ತರು ಅಧ್ಯಕ್ಷರ ಬದಲಾವಣೆಗೆ ಠರಾವು ಮಾಡಿದ್ದಾರೆ. ಕೂಡಲೆ ಅಧ್ಯಕ್ಷರ ಬದಲಾವಣೆ ಮಾಡುವಂತೆ ಅವರು ನೀಡಿದ ಮನವಿಯಲ್ಲಿ ತಿಳಿಸಿದ್ದಾರೆ. ಈ ವೇಳೆ ಧರ್ಮರಾಜ ನಡಗೇರಿ,ಬಸವರಾಜ ಸಂಗಮೇಶ್ವರ, ಹುಲಗಪ್ಪ ಭೋವಿ, ಹನ್ಮಂತ ವಡ್ಡರ, ಡಾಕಪ್ಪ ಲಮಾಣಿ, ಶರೀಪಸಾಬ...
ತಾಲೂಕಿನ ಅಧಿಕಾರಿಗಳ ಕಿವಿ ಹಿಂಡಿದ ಉಸ್ತುವಾರಿ ಮಂತ್ರಿ, ಹಾರಿಕೆ ಉತ್ತರ ನೀಡಿದ್ರೆ ನೆಟ್ಟಗಿರಲ್ಲ, ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಂಕಾಳು ವೈದ್ಯ ಖಡಕ್ ಎಚ್ಚರಿಕೆ..!
ಮುಂಡಗೋಡ: ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಮುಂಡಗೋಡ ತಹಶೀಲ್ದಾರ್ ಕಚೇರಿಯಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಿದ್ರು. ಸಭೆಯಲ್ಲಿ ತಾಲೂಕಿನ ಎಲ್ಲಾ ಇಲಾಖೆಗಳ ಅಧಿಕಾರಿಗಳೊಂದಿಗೆ ಅಭಿವೃದ್ಧಿ ವಿಷಯಗಳ ಕುರಿತು ಚರ್ಚಿಸಿದ ಸಚಿವ್ರು, ಕೆಲವು ಅಧಿಕಾರಿಗಳ ಕಿವಿ ಹಿಂಡಿದ್ರು. ಗೃಹಲಕ್ಷ್ಮೀ ಯೋಜನೆ ಬಿಸಿ..! ಸಭೆಯಲ್ಲಿ ಬಹುತೇಕ ಗ್ಯಾರಂಟಿ ಯೋಜನೆಗಳ ಅನುಷ್ಟಾನಗಳ ಕುರಿತು ಅಧಿಕಾರಿಗಳೊಂದಿಗೆ ಮಾಹಿತಿ ಪಡೆದ ಸಚಿವ ಮಂಕಾಳು ವೈದ್ಯ, ಅನುಷ್ಟಾನದಲ್ಲಿ ಕೊಂಚವಾದ್ರೂ ಯಡವಟ್ಟು ಆಗಿದ್ರೆ ಸಹಿಸಲ್ಲ ಅನ್ನೋ ಸ್ಪಷ್ಟ ಸಂದೇಶ ರವಾನಿಸಿದ್ರು. ಫಲಾನುಭವಿಗಳಿಗೆ ಗ್ಯಾರಂಟಿ ಯೋಜನೆ ಸಿಕ್ಕಿಲ್ಲ ಎಂದು ತಾಲೂಕಿನಿಂದ ಬೆಂಗಳೂರಿಗೆ ಹೋಗಿ ಮುಖ್ಯಮಂತ್ರಿ ಇಲ್ಲವೆ ಇತರೆ ಸಚಿವರ ಬಳಿ ಹೇಳಿದರೆ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂಬರ್ಥ ಅಂತಾ ಖಡಕ್ಕಾಗಿ ಅಧಿಕಾರಿಗಳಿಗೆ ಕಿವಿ ಹಿಂಡಿದ್ರು. ಪ್ರಭಾರ CDPO ಜಟಾಪಟಿ..! ಸಭೆಯಲ್ಲಿ, ಗೃಹಲಕ್ಷ್ಮೀ ಯೋಜನೆಯ ಅನಿಷ್ಟಾನದ ಕುರಿತು ಪ್ರಭಾರ ಸಿಡಿಪಿಓ ರನ್ನು ಪ್ರಶ್ನಿಸಿದ ಸಚಿವ್ರು, ಗೃಹಲಕ್ಷ್ಮೀ ಯೊಜನೆಯಡಿಯಲ್ಲಿ ತಾಲೂಕಿನ ಫಲಾನಭವಿಗಳ ಸಂಖ್ಯೆ ಎಷ್ಟು..? ಅಂತಾ ಕೇಳಿದ್ರು. ಪ್ರತಿ ತಿಂಗಳು...
ಮದ್ಯಾನವಾದ್ರೂ ಮುಂಡಗೋಡಿಗೆ ಬಾರದ ಉಸ್ತುವಾರಿ ಸಚಿವ ಮಂಕಾಳು ವೈದ್ಯ..! ಅಧಿಕಾರಿಗಳು, ಕಾರ್ಯಕರ್ತರು ಸಚಿವರಿಗಾಗಿ ಕಾದು ಕಾದು ಸುಸ್ತು..!
ಮುಂಡಗೋಡ: ಉಸ್ತುವಾರಿ ಸಚಿವ ಮಂಕಾಳು ವೈದ್ಯರು ಇವತ್ತು ಮುಂಡಗೋಡಿಗೆ ಬರುವ ಕಾರ್ಯಕ್ರಮವಿತ್ತು. ತಾಲೂಕಿನ ಎಲ್ಲಾ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆ ಹಮ್ಮಿಕೊಂಡಿದ್ರು. ಅಸಲು, ಸಭೆ ಬೆಳಿಗ್ಗೆ 10 ಗಂಟೆಗೆ ಏರ್ಪಾಟಾಗಿತ್ತು. ಬಹುತೇಕ ತಾಲೂಕಿನ ಎಲ್ಲಾ ಇಲಾಖೆಗಳ ಅಧಿಕಾರಿಗಳು ಸಚಿವರ ಆಗಮನಕ್ಕಾಗಿ ಕಾದು ಕುಳಿತಿದ್ದಾರೆ. ಆದ್ರೆ ಉಸ್ತುವಾರಿ ಮಂತ್ರಿಗಳು ಮಾತ್ರ 10 ಗಂಟೆ ಹೋಗಲಿ, ಮದ್ಯಾನವಾದ್ರೂ ಪತ್ತೆಯಿಲ್ಲ. ಹೀಗಾಗಿ, ಅಧಿಕಾರಿಗಳು ತಮ್ಮೇಲ್ಲ ಕೆಲಸ ಕಾರ್ಯಗಳನ್ನೂ ಬದಿಗಿಟ್ಟು ಸಚಿವರನ್ನು ಕಾಣಲು ಇನ್ನೂ ಕಾಯುತ್ತಿದ್ದಾರೆ. ಕಾರ್ಯಕರ್ತರೂ ಕಂಗಾಲು..! ಇನ್ನು, ಉಸ್ತುವಾರಿ ಸಚಿವರ ಆಗಮನಕ್ಕಾಗಿ ಬೆಳಿಗ್ಗೆ 10 ಗಂಟೆಯಿಂದಲೇ ಕಾರ್ಯಕರ್ತರು ಪ್ರೆಶ್ ಹೂಮಾಲೆ ಹಿಡಿದು ಕಾಯುತ್ತಿದ್ದಾರೆ. ಆದ್ರೆ, ಸಚಿವರ ಪತ್ತೆಯಿರದ ಕಾರಣ ಹೂಮಾಲೆಯ ಜೊತೆಗೆ ಕಾರ್ಯಕರ್ತರೂ ಕೂಡ ಬಾಡಿ ಹೋಗಿದ್ದಾರೆ. ಆದ್ರೆ, ಉಸ್ತುವಾರಿ ಮಿನಿಸ್ಟರ್ ಮಾತ್ರ ಇನ್ನೂ ಬರಲೇ ಇಲ್ಲ.
ಸಾಲಗಾಂವ್ ಸಮೀಪದ ಜೋಗೇಶ್ವರ ಹಳ್ಳದ ಬಳಿ ಲಾರಿಗಳ ನಡುವೆ ಮುಖಾಮುಕಿ ಡಿಕ್ಕಿ, ಇಬ್ಬರು ಚಾಲಕರಿಗೆ ಗಾಯ..!
ಮುಂಡಗೋಡ ತಾಲೂಕಿನ ಜೋಗೇಶ್ವರ ಹಳ್ಳದ ಸಮೀಪ ಭೀಕರ ರಸ್ತೆ ಅಪಘಾತವಾಗಿದೆ. ಘಟನೆಯಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿರೋ ಘಟನೆ ನಡೆದಿದೆ. ಡಿಕ್ಕಿಯ ರಭಸಕ್ಕೆ ಎರಡೂ ಲಾರಿಗಳ ಮುಂಬಾಗ ಸಂಪೂರ್ಣ ಜಖಂ ಆಗಿದೆ. ಶಿರಸಿ ಕಡೆಯಿಂದ ಬರುತ್ತಿದ್ದ ಲಾರಿ, ಮುಂಡಗೋಡ ಕಡೆಯಿಂದ ಹೊರಟಿದ್ದ ಲಾರಿ ನಿಯಂತ್ರಣ ತಪ್ಪಿ ಪರಸ್ಪರ ಮುಖಾಮುಕಿ ಡಿಕ್ಕಿಯಾಗಿದೆ. ಪರಿಣಾಮ ಲಾರಿ ಚಾಲಕರು ಇಬ್ಬರಿಗೂ ಗಾಯವಾಗಿದೆ. ಇನ್ನು ಗಾಯಗೊಂಡ ಲಾರಿ ಚಾಲಕರನ್ನು ಕಲಬುರ್ಗಿಯ ಮೌನೇಶ್ ಡೋಲಿ, ಶಿರಸಿಯ ಮಹೇಶ್ ಶಂಕರ್ ಪರಪರ್ ಅಂತಾ ಗುರುತಿಸಲಾಗಿದೆ. ಸದ್ಯ ಗಾಯಾಳುಗಳನ್ನು ಮುಂಡಗೋಡ ತಾಲೂಕಾಸ್ಪತ್ರೆಗೆ ದಾಖಲಿಸಲಾಗಿದ್ದು, ಮುಂಡಗೋಡ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ರಾಜಕೀಯ ತೊಳಲಾಟಗಳ ನಡುವೆಯೂ ಕ್ಷೇತ್ರದ ಜನರ ಕಾಳಜಿ ಮೆರೆದ ಶಾಸಕ ಹೆಬ್ಬಾರ್..!
ಮುಂಡಗೋಡ: ತಮ್ಮ ಬಿಡುವಿಲ್ಲದ ರಾಜಕೀಯ ತೊಳಲಾಟಗಳ ನಡುವೆಯೂ ಯಲ್ಲಾಪುರ ಕ್ಷೇತ್ರದ ಶಾಸಕ ಶಿವರಾಮ್ ಹೆಬ್ಬಾರ್ ಕ್ಷೇತ್ರದ ಜನರ ದುಃಖ ದುಮ್ಮಾನಗಳನ್ನು ಮರೆತಿಲ್ಲ. ಬದಲಾಗಿ, ಕ್ಷೇತ್ರದ ಜನರ ನೋವಿನಲ್ಲಿ ಭಾಗಿಯಾಗಿದ್ದಾರೆ. ಅಂದಹಾಗೆ, ಇಂದಷ್ಟೇ ನಿಧನರಾದ ಮುಂಡಗೋಡ ತಾಲೂಕಿನ ಉಗ್ಗಿನಕೇರಿ ಗ್ರಾಮದ ಹಿರಿಯ ಸಹಕಾರಿ ಧುರೀಣ ಬಸಯ್ಯ ನಡುವಿನಮನಿ ಯವರ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದುಕೊಂಡ್ರು. ಅಲ್ದೆ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ರು. ರಾಜ್ಯಸಭಾ ಚುನಾವಣೆ ಹಿನ್ನೆಲೆಯಲ್ಲಿ ಬೆಂಗಳೂರಿಗೆ ತೆರಳಿದ್ದ ಶಾಸಕ ಶಿಚರಾಮ್ ಹೆಬ್ಬಾರ್, ರಾಜ್ಯಸಭಾ ಚುನಾವಣೆಯಲ್ಲಿ ಮತದಾನ ಮಾಡದೇ ಗೈರಾಗಿದ್ದರು. ಇನ್ನೇನು ಸಂಜೆಯಷ್ಟೊತ್ತಿಗೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬಹುದಾಗಿದ್ದ ಮಾತುಗಳೂ ಕೇಳಿಬಂದಿದ್ದವು. ಆದ್ರೆ, ಸದ್ಯ ಶಾಸಕ ಶಿವರಾಮ್ ಹೆಬ್ಬಾರ್ ಸ್ವ ಕ್ಷೇತ್ರಕ್ಕೆ ವಾಪಸ್ ಬಂದಿದ್ದು, ಮುಂದಿನ ನಡೆಯ ಬಗ್ಗೆ ಕುತೂಹಲ ಕೆರಳಿಸಿದೆ.
ಉಗ್ನಿಕೇರಿಯ ಸಹಕಾರಿ ಧುರೀಣ ಬಸಯ್ಯ ನಡುವಿನಮನಿ (ಹಂಡೆ ಬಸಯ್ಯ) ವಿಧಿವಶ..!
ಮುಂಡಗೋಡ ತಾಲೂಕಿನ ಹಿರಿಯ ಸಹಕಾರಿ ಧುರೀಣ, ಉಗ್ನಿಕೇರಿ ಗ್ರಾಮದ ಬಸಯ್ಯ ಫಕ್ಕೀರಯ್ಯ ನಡುವಿನಮನಿ(86) ವಿಧಿವಶರಾಗಿದ್ದಾರೆ. ವಯೋಸಹಜ ಅನಾರೋಗ್ಯದಿಂದ ಬಳಲಿ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಸಯ್ಯ ನಡುವಿನಮನಿ, ಇಂದು ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ ಅಂತಾ ಕುಟುಂಬದ ಮೂಲಗಳು ಮಾಹಿತಿ ನೀಡಿದ್ದಾರೆ. ಇಂದೂರು ಸೊಸೈಟಿಯ ಅಧ್ಯಕ್ಷರಾಗಿ, ಮುಂಡಗೋಡ PLD ಬ್ಯಾಂಕಿನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಮೃತರು, ತಾಲೂಕಿನ ಸಹಕಾರಿ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ್ದರು. ಹಂಡೆ ಬಸಯ್ಯ ಅಂತಲೇ ತಾಲೂಕಿನಲ್ಲಿ ಚಿರಪರಿಚಿತರಾಗಿದ್ದರು. ಮೃತರು ಮೂವರು ಸಹೋದರರು, ಮೂವರು ಸಹೋದರಿಯರು, ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂದು ಬಳಗವನ್ನು ಅಗಲಿದ್ದಾರೆ. ಮೃತರ ಅಗಲಿಕೆಗೆ ತಾಲೂಕಿನ ಹಲವರು ಸಂತಾಪ ಸೂಚಿಸಿದ್ದಾರೆ. ಅಂದಹಾಗೆ, ನಾಳೆ ಮದ್ಯಾನ 1 ಗಂಟೆಗೆ ತಾಲೂಕಿನ ಉಗ್ನಿಕೇರಿಯಲ್ಲಿ ಮೃತರ ಅಂತ್ಯಕ್ರಿಯೆ ನೆರವೇರಲಿದೆ ಅಂತಾ ತಿಳಿದು ಬಂದಿದೆ.