ಮುಂಡಗೋಡ ತಾಲೂಕಿನಲ್ಲಿ ಮಂಗನ ಕಾಯಿಲೆ ಕಟ್ಟೇಚ್ಚರ, ಜಾಗ್ರತೆ ವಹಿಸುವಂತೆ ವೈದ್ಯಾಧಿಕಾರಿಗಳ ಪ್ರಕಟಣೆ..!

ಮುಂಡಗೋಡ: ಅಕ್ಕ ಪಕ್ಕದ ತಾಲೂಕುಗಳಲ್ಲಿ ಮಂಗನ ಕಾಯಿಲೆ ಪ್ರಕರಣಗಳು ವರದಿಯಾಗುತ್ತಿದ್ದು ಜನರು ಜಾಗೃತಿಯಿಂದ ವಹಿಸುವಂತೆ ತಾಲೂಕಾಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ನರೇಂದ್ರ ಪವಾರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸೋಂಕಿತ ಉಣ್ಣೆಗಳು ಕಚ್ಚುವುದರಿಂದ ಮನುಷ್ಯರಿಗೆ ಮಂಗನ ಕಾಯಿಲೆ ಬರುತ್ತದೆ. ಇದು ಮನುಷ್ಯರಿಂದ ನೇರವಾಗಿ ಮನುಷ್ಯರಿಗೆ ಹರಡುವುದಿಲ್ಲ. ಈ ವೈರಲ್ ಜ್ವರವನ್ನು ಸೂಕ್ತ ಚಿಕಿತ್ಸೆ ಮೂಲಕ ಗುಣಪಡಿಸಬಹುದು
ಜನರು ಅನವಶ್ಯಕವಾಗಿ ಕಾಡಿಗೆ ಹೋಗಬಾರದು. ಕಾಡಿನಿಂದ ಒಣ ದರಕು.ತರಗೆಲೆ ಮನೆಗೆ,ತೋಟಕ್ಕೆ ತರಬಾರದು.ಕಾಯಿಲೆಯಿಂದ ಸತ್ತ ಮಂಗಗಳಲ್ಲಿ ಇರುವ ಉಣ್ಣೆಗಳು ತರಗೆಲೆಗಳಲ್ಲಿ ಇರುತ್ತವೆ. ಮಂಗನ ಕಾಯಲೆ ಮಾರಣಾಂತಿಕ ಕಾಯಿಲೆಯಾಗಿದೆ. ಕಾಡಿಗೆ ಹೋಗಲೇಬೇಕಾದ ಸಂದರ್ಭವಿದ್ದಲ್ಲಿ ಶೂ ಅಥವಾ ಗಂಬೂಟು ಧರಿಸುವುದು,ಮೈತುಂಬಾ ಬಟ್ಟೆ ಧರಿಸುವುದು.ಡೇಪಾ ಎಣ್ಣೆಯನ್ನು ಹಚ್ಚಿಕೊಂಡು ಹೋಗುವುದು, ಬಂದ ನಂತರ ಬಿಸಿನೀರು ಸ್ನಾನ ಮಾಡುವುದು. ಉಣ್ಣೆ ಹತ್ತಿಕೊಂಡಿದೆಯೋ ಎ೦ದು ಪರೀಕ್ಷಿಸಿಕೊಳ್ಳಬೇಕು.ಸತತ 8,10ದಿನಗಳಿಂದ ಬಿಡದೇ ಬರುವ ಜ್ವರ,ವಿಪರೀತ ತಲೆನೋವು,ಕೈಕಾಲು ನೋವು, ಸೊಂಟನೋವು, ಮೂಗು, ಬಾಯಿ, ಗುದದ್ವಾರದಿಂದ ರಕ್ತಸ್ರಾವ ಖಾಯಿಲೆಯ ಲಕ್ಷಣಗಳು ಆಗಿರುತ್ತವೆ.
ಮಂಗಗಳು ಸತ್ತಿದ್ದು ಕಂಡು ಬಂದಲ್ಲಿ ಹತ್ತಿರದ ಆರೋಗ್ಯ ಕೇಂದ್ರಕ್ಕೆ ತಿಳಿಸುವಂತೆ ಅವರು ಪ್ರಕಟಣೆಯ ಲ್ಲಿ ತಿಳಿಸಿದ್ದಾರೆ.

error: Content is protected !!