ಮುಂಡಗೋಡ: ಉಸ್ತುವಾರಿ ಸಚಿವ ಮಂಕಾಳು ವೈದ್ಯರು ಇವತ್ತು ಮುಂಡಗೋಡಿಗೆ ಬರುವ ಕಾರ್ಯಕ್ರಮವಿತ್ತು. ತಾಲೂಕಿನ ಎಲ್ಲಾ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆ ಹಮ್ಮಿಕೊಂಡಿದ್ರು.

ಅಸಲು, ಸಭೆ ಬೆಳಿಗ್ಗೆ 10 ಗಂಟೆಗೆ ಏರ್ಪಾಟಾಗಿತ್ತು. ಬಹುತೇಕ ತಾಲೂಕಿನ ಎಲ್ಲಾ ಇಲಾಖೆಗಳ ಅಧಿಕಾರಿಗಳು ಸಚಿವರ ಆಗಮನಕ್ಕಾಗಿ ಕಾದು ಕುಳಿತಿದ್ದಾರೆ. ಆದ್ರೆ ಉಸ್ತುವಾರಿ ಮಂತ್ರಿಗಳು ಮಾತ್ರ 10 ಗಂಟೆ ಹೋಗಲಿ, ಮದ್ಯಾನವಾದ್ರೂ ಪತ್ತೆಯಿಲ್ಲ. ಹೀಗಾಗಿ, ಅಧಿಕಾರಿಗಳು ತಮ್ಮೇಲ್ಲ ಕೆಲಸ ಕಾರ್ಯಗಳನ್ನೂ ಬದಿಗಿಟ್ಟು ಸಚಿವರನ್ನು ಕಾಣಲು ಇನ್ನೂ ಕಾಯುತ್ತಿದ್ದಾರೆ.

ಕಾರ್ಯಕರ್ತರೂ ಕಂಗಾಲು..!
ಇನ್ನು, ಉಸ್ತುವಾರಿ ಸಚಿವರ ಆಗಮನಕ್ಕಾಗಿ ಬೆಳಿಗ್ಗೆ 10 ಗಂಟೆಯಿಂದಲೇ ಕಾರ್ಯಕರ್ತರು ಪ್ರೆಶ್ ಹೂಮಾಲೆ ಹಿಡಿದು ಕಾಯುತ್ತಿದ್ದಾರೆ. ಆದ್ರೆ, ಸಚಿವರ ಪತ್ತೆಯಿರದ ಕಾರಣ ಹೂಮಾಲೆಯ ಜೊತೆಗೆ ಕಾರ್ಯಕರ್ತರೂ ಕೂಡ ಬಾಡಿ ಹೋಗಿದ್ದಾರೆ. ಆದ್ರೆ, ಉಸ್ತುವಾರಿ ಮಿನಿಸ್ಟರ್ ಮಾತ್ರ ಇನ್ನೂ ಬರಲೇ ಇಲ್ಲ.

error: Content is protected !!