ಮುಂಡಗೋಡ: ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಬದಲಾವಣೆ ಮಾಡುವಂತೆ ಒತ್ತಾಯಿಸಿ ಖುದ್ದು ಕಾಂಗ್ರೆಸ್ ಕಾರ್ಯಕರ್ತರೇ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಅವರಿಗೆ ಅಲವತ್ತುಕೊಂಡು ಮನವಿ ಅರ್ಪಿಸಿದ ಘಟನೆ ನಡೆದಿದೆ.
ಸರ್ವಾಧಿಕಾರಿ ಅಧ್ಯಕ್ಷರಾ..?
ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಕಾರ್ಯ ವೈಖರಿ ಕೆಲವು ಕಾರ್ಯಕರ್ತರಿಗೆ ಹಾಗೂ ಮುಖಂಡರಿಗೆ ಬೇಸರ ಮೂಡಿಸಿದ್ದು ಸರ್ವಾಧಿಕಾರಿ ಧೋರಣೆ ತೋರುತ್ತಿದ್ದಾರೆ. ಸರ್ವಾಧಿಕಾರಿ ಧೋರಣೆಯಿಂದ ಕಾರ್ಯಕರ್ತರು ಕಂಗಾಲಾಗಿದ್ದು ಲೋಕಸಭಾ ಚುನಾವಣೆಗೂ ಮುನ್ನವೆ ಈಗೀನ ಅಧ್ಯಕ್ಷ ಜ್ಞಾನದೇವ ಗುಡಿಹಾಳ ಅವರನ್ನು ಬದಲಾವಣೆ ಮಾಡಬೇಕು ಆ ಹುದ್ದೆಗೆ ಹೊಸ ಅಧ್ಯಕ್ಷರನ್ನು ನೇಮಕ ಮಾಡಿ ತಾಲೂಕಿನ ಎಲ್ಲ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿ ನೂತನ ಅಧ್ಯಕ್ಷರ ಆಯ್ಕೆ ಮಾಡಬೇಕು ಹಾಗೂ ಇತ್ತೀಚೆಗೆ ಪಕ್ಷದ ಕಚೇರಿಯಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಶೇ.90ರಷ್ಟು ಕಾರ್ಯಕರ್ತರು ಅಧ್ಯಕ್ಷರ ಬದಲಾವಣೆಗೆ ಠರಾವು ಮಾಡಿದ್ದಾರೆ. ಕೂಡಲೆ ಅಧ್ಯಕ್ಷರ ಬದಲಾವಣೆ ಮಾಡುವಂತೆ ಅವರು ನೀಡಿದ ಮನವಿಯಲ್ಲಿ ತಿಳಿಸಿದ್ದಾರೆ.
ಈ ವೇಳೆ ಧರ್ಮರಾಜ ನಡಗೇರಿ,ಬಸವರಾಜ ಸಂಗಮೇಶ್ವರ, ಹುಲಗಪ್ಪ ಭೋವಿ, ಹನ್ಮಂತ ವಡ್ಡರ, ಡಾಕಪ್ಪ ಲಮಾಣಿ, ಶರೀಪಸಾಬ ಅಮಂಗಾವ, ಬಸವರಾಜ ಭೋವಿ, ಮಂಜುನಾಥ ಹೂವಪ್ಪನವರ ಸೇರಿದಂತೆ ಇಪ್ಪತ್ತಕ್ಕೂ ಹೆಚ್ಚು ಜನರು ಸಹಿ ಹಾಕಿದ ಮನವಿಯನ್ನು ಸಲ್ಲಿಸಿದ್ದಾರೆ.