ತಾಲ್ಲೂಕಿನ ಹಿರೇಹಳ್ಳಿಯಲ್ಲಿ ಭಾರೀ ಹೋರಿ ಬೆದರಿಸೋ ಸ್ಪರ್ಧೆ..!

ತಾಲ್ಲೂಕಿನ ಹಿರೇಹಳ್ಳಿಯಲ್ಲಿ ಭಾರೀ ಹೋರಿ ಬೆದರಿಸೋ ಸ್ಪರ್ಧೆ..!

ಮುಂಡಗೋಡ; ತಾಲೂಕಿನ ಹಿರೇಹಳ್ಳಿಯಲ್ಲಿ ಭಾರೀ ಹೋರಿ ಬೆದರಿಸೋ ಸ್ಪರ್ಧೆ ಏರ್ಪಡಿಸಲಾಗಿತ್ತು. ಸುತ್ತ ಮುತ್ತಲ ತಾಲೂಕು ಜಿಲ್ಲೆಗಳಿಂದ ಬಂದಿದ್ದ ಸ್ಪರ್ಧಾ ಹೋರಿಗಳು ರೋಮಾಂಚಕ ಕ್ಷಣಗಳಿಗೆ ಸಾಕ್ಷಿಯಾದವು. ಜಿಲ್ಲೆ ಹೊರಜಿಲ್ಲೆಗಳಿಂದ ಬಂದಿದ್ದ ನೂರಾರು ಹೋರಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ವು. ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಹೋರಿಗಳ ಅಭಿಮಾನಿಗಳು ಕುಣಿದು ಕುಪ್ಪಳಿಸಿದ್ರು. ತಮ್ಮ ನೆಚ್ಚಿನ ಹೋರಿಗಳು ಕಣದಲ್ಲಿ ಇಳಿಯುತ್ತಲೇ ಕೇಕೆ ಹಾಕಿ ಸಂಭ್ರಮಿಸಿದ್ರು. ಇನ್ನು ಹಾಗೆ ಕಣದಲ್ಲಿ ಬಿಟ್ಟ ಹೋರಿಗಳನ್ನು ಹಿಡಿಯಲು ಯುವಕರ ದಂಡೇ ಅಲ್ಲಿ ನೆರೆದಿತ್ತು. ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಹೋರಿಗಳಿಗೆ ಬಹುಮಾನ ನೀಡಲಾಯಿತು.

42 ಲಕ್ಷ ರೂ. ಲಪಟಾಯಿಸಿದ್ದ ಶಿರಸಿಯ ವ್ಯಕ್ತಿ ಅಂದರ್..!

42 ಲಕ್ಷ ರೂ. ಲಪಟಾಯಿಸಿದ್ದ ಶಿರಸಿಯ ವ್ಯಕ್ತಿ ಅಂದರ್..!

ಶಿರಸಿ: ವ್ಯಕ್ತಿಯ ಗಮನ ಬೇರೆಡೆ ಸೆಳೆದು ಬರೋಬ್ಬರಿ 42 ಲಕ್ಷ ರೂ. ವಂಚಿಸಿದ್ದ ಪ್ರಕರಣವನ್ನು ಶಿರಸಿ ಪೊಲೀಸರು ಬೇಧಿಸಿದ್ದಾರೆ. 42 ಲಕ್ಷ ರೂ. ವಂಚಿಸಿದ್ದ ಶಿರಸಿಯ ಮೊಹಮದ್ ಇಬ್ರಾಹಿಂ ಕಲಬುರ್ಗಿ @ರೆಡ್ಡಿ (45) ಎಂಬುವ ಆರೋಪಿಯನ್ನು ಬಂಧಿಸಿದ್ದಾರೆ. ರಾಮನಬೈಲ್ ಮೂಲದ ವ್ಯಕ್ತಿಯಾಗಿರೋ ಮೊಹಮ್ಮದ್ ಕಾರ್ ಬ್ರೋಕರ್ ಆಗಿದ್ದ. ತೆಲಂಗಾಣದಲ್ಲಿ ಕೈಚಳಕ ತೋರಿದ್ದ ಈತನ ಮೇಲೆ ತೆಲಂಗಾಣ ಪೊಲೀಸರು ಪ್ರಕರಣವನ್ನು ದಾಖಲಿಸಿದ್ದರು ಶಿರಸಿ ಡಿವೈಎಸ್ಪಿ ಹಾಗೂ ಸಿಪಿಐ, ಶಹರ ಠಾಣೆ ಪಿಎಸೈ ಸಹಕಾರದೊಂದಿಗೆ ಆರೋಪಿಯನ್ನು ಪತ್ತೆ ಹಚ್ಚಲಾಗಿದೆ. ****************************************************************************** ಜಾಹೀರಾತುಗಳು

ಸಿಎಂ ತವರು ಕ್ಷೇತ್ರ ಶಿಗ್ಗಾವಿಯಲ್ಲಿ ಡಿಕೆಶಿ ರಣಕಹಳೆ: ಜೆಸಿಬಿ‌ ಮೂಲಕ ಹೂಮಳೆಗೈದ “ಕೈ” ಕಾರ್ಯಕರ್ತರು..!

ಸಿಎಂ ತವರು ಕ್ಷೇತ್ರ ಶಿಗ್ಗಾವಿಯಲ್ಲಿ ಡಿಕೆಶಿ ರಣಕಹಳೆ: ಜೆಸಿಬಿ‌ ಮೂಲಕ ಹೂಮಳೆಗೈದ “ಕೈ” ಕಾರ್ಯಕರ್ತರು..!

ಹಾವೇರಿ: ಸಿಎಂ ಬಸವರಾಜ್ ಬೊಮ್ಮಾಯಿ ತವರು ಕ್ಷೇತ್ರ ಶಿಗ್ಗಾವಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಈಗಿಂದಲೇ ರಣಕಹಳೆ ಮೊಳಗಿಸಿದ್ದಾರೆ. ಹಾನಗಲ್ ಉಪಚುನಾವಣೆಯಲ್ಲಿ ಪ್ರಚಂಡ ಜಯ ಸಾಧಿಸಿ, ಸಿಎಂಗೆ ಠಕ್ಕರ್ ಕೊಟ್ಟಿರೋ ಕೈ ಪಡೆ ಈಗ ಶಿಗ್ಗಾವಿಯಲ್ಲೂ ಅದೇ ಮಾದರಿಯ ಗೆಲುವಿಗೆ ಈಗಿಂದಲೇ ತಯಾರಿ ಶುರುವಿಟ್ಟಿದೆಯಾ ಅನ್ನೊ ಪ್ರಶ್ನೆ ಏಳುವಂತೆ ಮಾಡಿದೆ. ಹೀಗಾಗಿ, ಇಂದು ಹಾವೇರಿ ಜಿಲ್ಲೆಗೆ ಭೇಟಿ ನೀಡಿರೋ ಡಿಕಶಿಗೆ ಶಿಗ್ಗಾವಿಯಲ್ಲಿ ಅದ್ದೂರಿ ಸ್ವಾಗತ ನೀಡಲಾಯಿತು. ಡಿಕೆಶಿ ಶಿಗ್ಗಾವಿ ಪಟ್ಟಣಕ್ಕೆ ಎಂಟ್ರಿ ನೀಡುತ್ತಲೇ ಜೆಸಿಬಿಗಳಲ್ಲಿ ನಿಂತು ಹೂ ಮಳೆಗರೆದು ಸ್ವಾಗತ ಕೋರಿದ ಕಾಂಗ್ರೆಸ್ ಕಾರ್ಯಕರ್ತರು, ಕಾಂಗ್ರೆಸ್ ಪರ ಘೋಷಣೆಗಳ ಸುರಿಮಳೆಗೈದರು. ಇನ್ನು, ಹಾನಗಲ್ ಗೆ ತೆರಳೋ ಮುನ್ನ ಶಿಗ್ಗಾವಿಗೆ ಆಗಮಿಸಿದ ಡಿಕೆ ಶಿವಕುಮಾರ್ ಗೆ ಅದ್ದೂರಿ ಸ್ವಾಗತ ನೀಡಲಾಯಿತು. ಅಂದಹಾಗೆ, ಹಾನಗಲ್ ನೂತನ ಶಾಸಕ ಶ್ರೀನಿವಾಸ್ ಮಾನೆಗೆ ಶಿಗ್ಗಾವುಯಲ್ಲಿ ಸನ್ಮಾನ ಸಮಾರಂಭ ಏರ್ಪಡಿಸಲಾಗಿತ್ತು. ಹೀಗಾಗಿ, ಶಿಗ್ಗಾವಿಯ ಚೆನ್ನಮ್ಮ ಸರ್ಕಲ್ ನಲ್ಲಿ ನಡೆಯುತ್ತಿರೋ ಸನ್ಮಾನ ಸಮಾರಂಭದಲ್ಲಿ ಡಿ.ಕೆ.ಶಿವಕುಮಾರ್ ಭಾಗವಹಿಸಿ ಮಾತನಾಡಿದ್ರು. ಈ ವೇಳೆ ಕೆಪಿಸಿಸಿ...

ಮತ್ತೊಬ್ಬ ಅಪ್ಪು ಅಭಿಮಾನಿ ಸಾವು..! ಪುನೀತ್ ನಿಧನದಿಂದ ಊಟವನ್ನೇ ತ್ಯಜಿಸಿದ್ದ ಅಭಿಮಾನಿ..!!

ಮತ್ತೊಬ್ಬ ಅಪ್ಪು ಅಭಿಮಾನಿ ಸಾವು..! ಪುನೀತ್ ನಿಧನದಿಂದ ಊಟವನ್ನೇ ತ್ಯಜಿಸಿದ್ದ ಅಭಿಮಾನಿ..!!

ನಟ, ಪವರ್ ಸ್ಟಾರ್ ಪುನೀತ್ ರಾಜಕುಮಾರ್ ವಿಧಿವಶರಾದ ಹಿನ್ನೆಲೆಯಲ್ಲಿ ಮತ್ತೊಬ್ಬ ಅಭಿಮಾನಿ ಸಾವು ಕಂಡಿದ್ದಾನೆ. ಚಾಮರಾಜನಗರದಲ್ಲಿ ಮತ್ತೊಬ್ಬ ಪುನೀತ್ ಅಭಿಮಾನಿ ಸಾವು ಕಂಡಿದ್ದು, ಶಿವಮೂರ್ತಿ(31) ಮೃತ ಅಭಿಮಾನಿಯಾಗಿದ್ದಾನೆ. ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಪಟ್ಟಣದ ಭೀಮನಗರ ನಿವಾಸಿಯಾಗಿದ್ದ ಈತ, ಪುನೀತ್ ರಾಜ್ ಕುಮಾರ್ ಹಠಾತ್ ನಿಧನದಿಂದ ಆಘಾತಕ್ಕೆ ಒಳಗಾಗಿದ್ದ, ಅಲ್ಲದೇ ನೆಚ್ಚಿನ‌ ನಟನ ಸಾವಿನಿಂದ ಊಟ ತ್ಯಜಿಸಿದ್ದ ಹೀಗಾಗಿ, ಕಳೆದ ಒಂದು ವಾರದಿಂದ ಊಟವಿಲ್ಲದೆ ಕ್ಷೀಣಗೊಂಡಿದ್ದ ಶಿವಮೂರ್ತಿಯ ಆರೋಗ್ಯ ಸಂಪೂರ್ಣ ಹದಗೆಟ್ಟಿತ್ತು. ಈ ಕಾರಣಕ್ಕಾಗಿ ನೆನ್ನೆ ರಾತ್ರಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದ್ರೆ, ಚಿಕಿತ್ಸೆ ಫಲಕಾರಿಯಾಗದೇ ಇಂದು ಬೆಳಿಗ್ಗೆ ಮೃತಪಟ್ಟಿದ್ದಾನೆ. ಶಿವಮೂರ್ತಿ ಹಲವು ಬಾರಿ ಪುನೀತ್ ರನ್ನ ಭೇಟಿಯಾಗುತ್ತಿದ್ದ, ಅಪ್ಪು ಕಂಡರೆ ಶಿವಮೂರ್ತಿಗೆ ಪಂಚಪ್ರಾಣವಾಗಿತ್ತು. ಅಪ್ಪು ನಿಧನದ ಬಳಿಕ ಪುನೀತ್ ಜೊತೆ ತೆಗೆಸಿಕೊಂಡಿದ್ದ ಪೋಟೋ ನೋಡಿ ಕಣ್ಣೀರು ಹಾಕುತ್ತಿದ್ದ ಅಭಿಮಾನಿ. *************************************** ಜಾಹೀರಾತುಗಳು

ನಂದಿಕಟ್ಟಾ ಗ್ರಾಮದಲ್ಲೊಂದು ಕರುಳು ಹಿಂಡುವ ಘಟನೆ..! ನೀರಿನ ಟ್ಯಾಂಕಿಗೆ ಬಿದ್ದು 2 ವರ್ಷದ ಕಂದಮ್ಮ ಬಲಿ..!

ನಂದಿಕಟ್ಟಾ ಗ್ರಾಮದಲ್ಲೊಂದು ಕರುಳು ಹಿಂಡುವ ಘಟನೆ..! ನೀರಿನ ಟ್ಯಾಂಕಿಗೆ ಬಿದ್ದು 2 ವರ್ಷದ ಕಂದಮ್ಮ ಬಲಿ..!

ಮುಂಡಗೋಡ: ತಾಲೂಕಿನ ನಂದಿಕಟ್ಟಾ ಗ್ರಾಮದಲ್ಲೊಂದು ಹೃದಯ ವಿದ್ರಾವಕ ಘಟನೆ ನಡೆದಿದೆ. ಎರಡು ವರ್ಷದ ಕಂದಮ್ಮ ನೀರಿನ ಟ್ಯಾಂಕ್ ನಲ್ಲಿ ಬಿದ್ದು ಸಾವನ್ನಪ್ಪಿದೆ. ನಂದಿಕಟ್ಟಾ ಗ್ರಾಮದ ಶಾಂತಾರಾಮ ಕಮ್ಮಾರ ಅವರ ಎರಡು ವರ್ಷದ ಗಂಡು ಮಗು ದುರಂತಕ್ಕೀಡಾಗಿದೆ. ಘಟನೆ ಹೇಗಾಯ್ತು..? ಇಂದು ದೀಪಾವಳಿ ಅಮವಾಸ್ಯೆ ನಿಮಿತ್ತ ಶಾಂತಾರಾಮ ಕಮ್ಮಾರ್ ತನ್ನ ಮುದ್ದು ಕಂದನಿಗೆ ತಿಂಡಿ, ತಿನಿಸು ಕೊಡಿಸಲು ಕಿರಾಣಿ ಅಂಗಡಿಗಳಿಗೆ ಅಲೆದಾಡಿದ್ದಾರೆ. ಬೆಳಗ್ಗಿನಿಂದಲೂ ಮಗ ಅದೇನು ಕೇಳ್ತಾನೋ ಅದನ್ನೇಲ್ಲ ತಿನಿಸುಗಳನ್ನು ಕೊಡಿಸಿ ಖುಶಿ ಪಟ್ಟಿದ್ದಾರೆ‌‌. ಸಂಜೆ ಅಮವಾಸ್ಯೆಯ ಪೂಜೆಯನ್ನೂ ಮುಗಿಸಿದ್ದಾರೆ. ಆದ್ರೆ, ಸಂಜೆ 6 ಗಂಟೆಯಷ್ಟೊತ್ತಿಗೆ ಮಗ ಮತ್ತೇನೋ ತಿನಿಸು ಕೇಳಿದ್ದಾನೆ. ಹೀಗಾಗಿ, ಮಗುವಿಗೆ ತಿನಿಸು ತರಲು, ಮಗುವನ್ನು ಮನೆಯಲ್ಲೇ ಬಿಟ್ಟು ಅಂಗಡಿಗೆ ತೆರಳಿದ್ದಾರೆ ಶಾಂತಾರಾಮ್ ಕಮ್ಮಾರ್. ವಾಪಸ್ ಬಂದಾಗ..! ಹಾಗೆ, ಅಂಗಡಿಗೆ ಹೋಗಿ ತಿನಿಸು ತಂದು ಇನ್ನೇನು ಮಗುವಿಗೆ ಕೊಡಬೇಕು ಅಂತಾ ಹಂಬಲಿಸಿ ಬಂದಿದ್ದ ತಂದೆ ಮಗುವನ್ನು ಹುಡುಕಾಡಿದ್ದಾರೆ. ಆದ್ರೆ, ಮಗು ಎಲ್ಲೂ ಕಂಡೇ ಇಲ್ಲ‌. ಹೀಗಾಗಿ, ಇಲ್ಲೊ ಎಲ್ಲೋ ಆಟ...

ಶಿರಸಿಯಲ್ಲಿ ಒಂಟಿ‌ ಮಹಿಳೆಯ ಚಿನ್ನದ ಸರ ದೋಚಿಕೊಂಡು ಪರಾರಿಯಾದ ಕಳ್ಳರು..!

ಶಿರಸಿಯಲ್ಲಿ ಒಂಟಿ‌ ಮಹಿಳೆಯ ಚಿನ್ನದ ಸರ ದೋಚಿಕೊಂಡು ಪರಾರಿಯಾದ ಕಳ್ಳರು..!

ಶಿರಸಿ: ನಗರದ ಭತ್ತದ‌ ಓಣಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಒಂಟಿ ಮಹಿಳೆಯ ಚಿನ್ನ ದೋಚಿಕೊಂಡು ಕಳ್ಳರು ಪರಾರಿಯಾಗಿದ್ದಾರೆ. ಉಷಾ ದಾಮೋದರ ಪೈ ಎಂಬುವ ಮಹಿಳೆಯೇ ಚಿನ್ನ ಕಳೆದುಕೊಂಡವರು. ಬಿಳಿ ಕಾರಿನಲ್ಲಿ ಬಂದ ದರೋಡೆಕೋರರು, ಕುಮಟಾಕ್ಕೆ ಹೋಗುವ ಮಾರ್ಗ ಕೇಳಿ ಮಹಿಳೆಯ ಕುತ್ತಿಗೆಯಲ್ಲಿನ ಸರ ಹರಿದು ಪರಾರಿಯಾಗಿದ್ದಾರೆ. ಸುಮಾರು 1,10,000 ರೂಪಾಯಿ ಮೌಲ್ಯದ ಚಿನ್ನದ ಸರ ದೋಚಿದ್ದಾರೆ. ಶಿರಸಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ***************************************

ಹಾನಗಲ್ ಕ್ಷೇತ್ರದಲ್ಲಿ ಬಿಜೆಪಿ ಸೋಲು; ಉಸ್ತುವಾರಿ ಹೊತ್ತಿದ್ದ ಮುರುಗೇಶ್ ನಿರಾಣಿ ಸಾಹೇಬ್ರು ಏನ್ ಹೇಳಿದ್ರು ಗೊತ್ತಾ..?

ಹಾನಗಲ್ ಕ್ಷೇತ್ರದಲ್ಲಿ ಬಿಜೆಪಿ ಸೋಲು; ಉಸ್ತುವಾರಿ ಹೊತ್ತಿದ್ದ ಮುರುಗೇಶ್ ನಿರಾಣಿ ಸಾಹೇಬ್ರು ಏನ್ ಹೇಳಿದ್ರು ಗೊತ್ತಾ..?

ಹಾನಗಲ್ ಉಪ ಚುನಾವಣೆ ಫಲಿತಾಂಶ ಸಾರ್ವತ್ರಿಕ ಚುನಾವಣೆ ಮೇಲೆ ಪರಿಣಾಮ‌ ಬೀರಲ್ಲ ಅಂತಾ ಕೈಗಾರಿಕೆ ಸಚಿವ ಮುರುಗೇಶ್ ನಿರಾಣಿ ಪ್ರತಿಪಾದಿಸಿದ್ದಾರೆ. ಬಾಗಲಕೋಟೆ ಜಿಲ್ಲೆ ಬೀಳಗಿಯಲ್ಲಿ ಹೇಳಿಕೆ ನೀಡಿರೋ ಸಚಿವ, ಹಾನಗಲ್ ಕ್ಷೇತ್ರದಲ್ಲೂ ಗೆಲುವಿನ ವಿಶ್ವಾಸ ಇತ್ತು, ಮತದಾರರ ನಿರ್ಧಾರಕ್ಕೆ ತಲೆಬಾಗುತ್ತೇವೆ. ಸೋಲಿನ ಕಾರಣದ ಬಗ್ಗೆ ಆತ್ಮಾವಲೋಕನ‌ ಮಾಡುತ್ತೇವೆ.ಹಾನಗಲ್ ನಲ್ಲಿ ಸೋಲು ಆಗಿದೆ. ಮಾಜಿ ಸಿಎಂ ಒಬ್ಬರು ಈ ಫಲಿತಾಂಶ ಮುಂದಿನ ಚುನಾವಣೆ ದಿಕ್ಸೂಚಿ ಎಂದಿದ್ದಾರೆ. ಅವರು ಮುಖ್ಯಮಂತ್ರಿ ಇದ್ದಾಗಲೂ ಉಪ ಚುನಾವಣೆಯಲ್ಲಿ ಸೋತಿದ್ರು. ಸಿಎಂ ಬಸವರಾಜ್ ಬೊಮ್ಮಾಯಿ ಸರ್ವತೋಮುಖ‌ ಅಭಿವೃದ್ದಿಗೆ ಒತ್ತು ನೀಡಿದ್ದಾರೆ. ಎಲ್ಲ ಶಾಸಕರನ್ನ ವಿಶ್ವಾಸಕ್ಕೆ ತೆಗೆದುಕೊಂಡು ಹೋಗ್ತಿದ್ದಾರೆ, 2023 ರ ಚುನಾವಣೆಯಲ್ಲಿ ಪೂರ್ಣಬಹುಮತದ ಸರ್ಕಾರ ತರುವಲ್ಲಿ ಯಶಸ್ವಿ ಆಗುತ್ತಾರೆ ಅಂತಾ ವಿಶ್ವಾಸ ವ್ಯಕ್ತ ಪಡಿಸಿದ್ರು. *************************************** ಜಾಹೀರಾತುಗಳು

ಎಸಿಬಿ ಬಲೆಗೆ ಬಿದ್ದ PSI, ಬೈಕ್ ಹತ್ತಿ ಎಸ್ಕೇಪ್; ಪೊಲೀಸರನ್ನೇ ಬೆನ್ನತ್ತಿ ಹಿಡಿದ ಜನ..!

ಎಸಿಬಿ ಬಲೆಗೆ ಬಿದ್ದ PSI, ಬೈಕ್ ಹತ್ತಿ ಎಸ್ಕೇಪ್; ಪೊಲೀಸರನ್ನೇ ಬೆನ್ನತ್ತಿ ಹಿಡಿದ ಜನ..!

ತುಮಕೂರು: ಗುಬ್ಬಿ ತಾಲೂಕು ಸಿ.ಎಸ್.ಪುರ ಠಾಣೆಯಲ್ಲಿ ಇಂದ ಸಾರ್ವಜನಿಕರೇ ದಂಗಾಗುವಂತಹ ಘಟನೆ ನಡೆದಿದೆ‌‌. ಎಸಿಬಿ ದಾಳಿಯಿಂದ ತಪ್ಪಿಸಿಕೊಂಡು ಪಿಎಸ್ ಐ ಓಡಿ ಹೋಗಿದ್ದಾನೆ. ಹೀಗಾಗಿ, ಹಾಗೆ ತಪ್ಪಿಸಿಕೊಂಡು ಓಡಿ ಹೋಗುತ್ತಿದ್ದ ಪಿಎಸ್ ಐ ರನ್ನು ಹಿಡಿಯಲು ಸಾರ್ವಜನಿಕರೇ ಬೆನ್ನತ್ತಿದ್ದಾರೆ. ಹಾಗೇ ಎಸಿಬಿಯಿಂದ ತಪ್ಪಿಸಿಕೊಂಡು ಓಡಿಹೋದ ಪಿಎಸ್ ಐ ಹೆಸರು, ಸೋಮಶೇಖರ್.. ಇವತ್ತು ನಡೆದಿದ್ದಿಷ್ಟು..! ಅಂದಹಾಗೆ, ಇವತ್ತು ಲಂಚಬಾಕತನದ ವಿರುದ್ಧ ಪಿಎಸ್ ಐ ಹಾಗೂ ಮುಖ್ಯಪೇದೆಯ ವಿರುದ್ಧ ಎಸಿಬಿಗೆ ದೂರು ಬಂದ ಹಿನ್ನೆಲೆ, ಎಸಿಬಿ ಅಧಿಕಾರಿಗಳು, ಮಧ್ಯಾಹ್ನ 1 ಗಂಟೆ ಸಮಯದಲ್ಲಿ ಪೊಲೀಸ್ ಠಾಣೆ ಮೇಲೆ ದಾಳಿ ಮಾಡಿದ್ದರು. ಸಿ.ಎಸ್.ಪುರ ಪಿಎಸ್ಐ ಮತ್ತು ಮುಖ್ಯ ಪೇದೆಯನ್ನು ಎಸಿಬಿ ಬಲೆಗೆ ಕೆಡವಿದ್ದರು. ಬರೋಬ್ಬರಿ 16 ಸಾವಿರ ಲಂಚ ಪಡೆಯುವ ವೇಳೆ ರೆಡ್ ಹ್ಯಾಂಡ್ ಆಗಿಯೇ ಬಲೆಗೆ ಬಿದ್ದಾಗಿತ್ತು. ಹೀಗಾಗಿ, ಎಸಿಬಿ ಅಧಿಕಾರಿಗಳು ಲಂಚಬಾಕ ಆರೋಪಿ ಪಿಎಸ್ ಐ ಸೋಮಶೇಖರ್ ನ್ನು, ವಶಕ್ಕೆ ಪಡೆದಿದ್ದರು. ಇನ್ನೇನು ವಿಚಾತಣೆ ಮುಗಿಸಿ ಜಸ್ಟ್ ಊಟ ಮಾಡೋಣ ಅಂತಾ ಎಸಿಬಿ...

ಕಾರವಾರದಲ್ಲಿ ಸಂಭ್ರಮದ ರಾಜ್ಯೋತ್ಸವ, ಧ್ವಜಾರೋಹಣ ನೆರವೇರಿಸಿದ ಉಸ್ತುವಾರಿ ಸಚಿವ ಹೆಬ್ಬಾರ್..!

ಕಾರವಾರದಲ್ಲಿ ಸಂಭ್ರಮದ ರಾಜ್ಯೋತ್ಸವ, ಧ್ವಜಾರೋಹಣ ನೆರವೇರಿಸಿದ ಉಸ್ತುವಾರಿ ಸಚಿವ ಹೆಬ್ಬಾರ್..!

ಕಾರವಾರ: 66 ನೇ ಕನ್ನಡ ರಾಜ್ಯೋತ್ಸವ ಹಿನ್ನಲೆಯಲ್ಲಿ ಕಾರವಾರದ ಪೊಲೀಸ್ ಪರೇಡ್ ಮೈದಾನದಲ್ಲಿ ಉಸ್ತುವಾರಿ ಸಚಿವ ಶಿವರಾಮ್ ಹೆಬ್ಬಾರ್ ಧ್ವಜಾರೋಹಣ ನೆರವೇರಿಸಿದ್ರು‌. ತೆರೆದ ವಾಹನದಲ್ಲಿ ವಿವಿಧ ಪಡೆಗಳಿಂದ ಗೌರವ ವಂದನೆ ಸ್ವೀಕರಿಸಿದ ಸಚಿವ ಹೆಬ್ಬಾರ್, ಸಮಾರಂಭದಲ್ಲಿ ಭಾಷಣ ಮಾಡಿದ್ರು. ಈ ವೇಳೆ ಶಾಸಕಿ ರೂಪಾಲಿ ನಾಯ್ಕ್ , ಜಿಲ್ಲಾಧಿಕಾರಿ ಮುಲೈ ಮುಹಿಲಿನ್, ನೂತನ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಡಿ.ಪನ್ನೇಕರ್ ಸೇರಿ ಹಲವರು ಉಪಸ್ಥಿತರಿದ್ದರು‌. ಇನ್ನು, ಇಂದಿನ 66 ನೇ ರಾಜ್ಯೋತ್ಸವದ ಸಂಭ್ರಮ ಉತ್ತರ ಕನ್ನಡ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲೂ ಸಂಭ್ರಮಿಸಿದೆ‌. *************************************** ಜಾಹೀರಾತುಗಳು

ಇಂದೂರು ಕೊಪ್ಪದ ವ್ಯಕ್ತಿಯ ಶವ ಅಮರಗೋಳದಲ್ಲಿ ಪತ್ತೆ..! ರೈಲ್ವೆ ಹಳಿಯ ಪಕ್ಕದಲ್ಲೇ ಸತ್ತುಬಿದ್ದವನ ಸುತ್ತ ಅನುಮಾನದ ಹುತ್ತ..!

ಇಂದೂರು ಕೊಪ್ಪದ ವ್ಯಕ್ತಿಯ ಶವ ಅಮರಗೋಳದಲ್ಲಿ ಪತ್ತೆ..! ರೈಲ್ವೆ ಹಳಿಯ ಪಕ್ಕದಲ್ಲೇ ಸತ್ತುಬಿದ್ದವನ ಸುತ್ತ ಅನುಮಾನದ ಹುತ್ತ..!

ಮುಂಡಗೋಡ: ತಾಲೂಕಿನ ಕೊಪ್ಪ (ಇಂದೂರು) ಗ್ರಾಮದ ವ್ಯಕ್ತಿಯೋರ್ವನ ಶವ ಹುಬ್ಬಳ್ಳಿ ಸಮೀಪದ ಅಮರಗೋಳ ಬಳಿ ರೈಲ್ವೆ ಹಳಿಯ ಪಕ್ಕದಲ್ಲಿ ದೊರೆತಿದೆ‌. ಮಂಜುನಾಥ್ ಬಸಪ್ಪ ಬೆಲವಂತರ(35) ಎಂಬುವವನ ಶವ ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾಗಿದೆ. ಅಮರಗೋಳ ಈತನ ಪತ್ನಿಯ ತವರೂರು, ಪತ್ನಿ ತವರು ಮನೆಯಲ್ಲೇ ಇದ್ದ ಕಾರಣಕ್ಕೆ,, ಕಳೆದ ಹತ್ತು ದಿನಗಳ ಹಿಂದೆ ಅಮರಗೋಳಕ್ಕೆ ಹೋಗಿದ್ದ ಮಂಜುನಾಥ್, ನಿನ್ನೆ ರಾತ್ರಿಯೇ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾನೆ ಅಂತಾ ಮಾಹಿತಿ ಲಭ್ಯವಾಗಿದೆ. ಸಧ್ಯ ಸ್ಥಳಕ್ಕೆ ಭೇಟಿ ನೀಡಿರೋ ಪೊಲೀಸರು ತನಿಖೆ ಕೈಗೊಂಡಿದ್ದಾರೆ‌.

error: Content is protected !!