ಮುಂಡಗೋಡ: ತಾಲೂಕಿನ ನಂದಿಕಟ್ಟಾ ಗ್ರಾಮದಲ್ಲೊಂದು ಹೃದಯ ವಿದ್ರಾವಕ ಘಟನೆ ನಡೆದಿದೆ. ಎರಡು ವರ್ಷದ ಕಂದಮ್ಮ ನೀರಿನ ಟ್ಯಾಂಕ್ ನಲ್ಲಿ ಬಿದ್ದು ಸಾವನ್ನಪ್ಪಿದೆ. ನಂದಿಕಟ್ಟಾ ಗ್ರಾಮದ ಶಾಂತಾರಾಮ ಕಮ್ಮಾರ ಅವರ ಎರಡು ವರ್ಷದ ಗಂಡು ಮಗು ದುರಂತಕ್ಕೀಡಾಗಿದೆ.

ಘಟನೆ ಹೇಗಾಯ್ತು..?
ಇಂದು ದೀಪಾವಳಿ ಅಮವಾಸ್ಯೆ ನಿಮಿತ್ತ ಶಾಂತಾರಾಮ ಕಮ್ಮಾರ್ ತನ್ನ ಮುದ್ದು ಕಂದನಿಗೆ ತಿಂಡಿ, ತಿನಿಸು ಕೊಡಿಸಲು ಕಿರಾಣಿ ಅಂಗಡಿಗಳಿಗೆ ಅಲೆದಾಡಿದ್ದಾರೆ. ಬೆಳಗ್ಗಿನಿಂದಲೂ ಮಗ ಅದೇನು ಕೇಳ್ತಾನೋ ಅದನ್ನೇಲ್ಲ ತಿನಿಸುಗಳನ್ನು ಕೊಡಿಸಿ ಖುಶಿ ಪಟ್ಟಿದ್ದಾರೆ‌‌. ಸಂಜೆ ಅಮವಾಸ್ಯೆಯ ಪೂಜೆಯನ್ನೂ ಮುಗಿಸಿದ್ದಾರೆ. ಆದ್ರೆ, ಸಂಜೆ 6 ಗಂಟೆಯಷ್ಟೊತ್ತಿಗೆ ಮಗ ಮತ್ತೇನೋ ತಿನಿಸು ಕೇಳಿದ್ದಾನೆ. ಹೀಗಾಗಿ, ಮಗುವಿಗೆ ತಿನಿಸು ತರಲು, ಮಗುವನ್ನು ಮನೆಯಲ್ಲೇ ಬಿಟ್ಟು ಅಂಗಡಿಗೆ ತೆರಳಿದ್ದಾರೆ ಶಾಂತಾರಾಮ್ ಕಮ್ಮಾರ್.

ವಾಪಸ್ ಬಂದಾಗ..!
ಹಾಗೆ, ಅಂಗಡಿಗೆ ಹೋಗಿ ತಿನಿಸು ತಂದು ಇನ್ನೇನು ಮಗುವಿಗೆ ಕೊಡಬೇಕು ಅಂತಾ ಹಂಬಲಿಸಿ ಬಂದಿದ್ದ ತಂದೆ ಮಗುವನ್ನು ಹುಡುಕಾಡಿದ್ದಾರೆ. ಆದ್ರೆ, ಮಗು ಎಲ್ಲೂ ಕಂಡೇ ಇಲ್ಲ‌. ಹೀಗಾಗಿ, ಇಲ್ಲೊ ಎಲ್ಲೋ ಆಟ ಆಡ್ತಿರಬಹುದು ಅಂತಾ ಮತ್ತೆ ಹುಡುಕಿದ್ದಾರೆ. ಹಿತ್ತಲಿನಲ್ಲಿನ ಹಳೆಯ ನೀರಿನ ಟ್ಯಾಂಕ್ ಬಳಿ ಬಂದು ನೋಡಿದ್ದಾರೆ. ಅಷ್ಟೊತ್ತಿಗಾಗಲೇ ನೀರಲ್ಲಿ ಬಿದ್ದು ಒದ್ದಾಡುತ್ತಿದ್ದ ಕಂದಮ್ಮನನ್ನು ಕಂಡು ಚೀರಾಡಿದ್ದಾರೆ.

ತಕ್ಷಣವೇ ಮಗುವನ್ನು ಮೇಲಕ್ಕೆತ್ತಿ, ಆಸ್ಪತ್ರೆಗೆ ಸಾಗಿಸಿದ್ದಾರೆ. ಹುಬ್ಬಳ್ಳಿಯ ಕಿಮ್ಸ್ ಗೆ ತೆರಳುವ ಮಾರ್ಗ ಮದ್ಯೆಯೇ ಕಂದಮ್ಮ ಉಸಿರು ನಿಲ್ಲಿಸಿದೆ. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ದೀಪಾವಳಿಯ ಸಂದರ್ಭದಲ್ಲಿ ನಡೆದಿರೋ ಈ ದುರಂತಕ್ಕೆ ಇಡೀ ಗ್ರಾಮವೇ ಕಣ್ಣೀರು ಹಾಕಿದೆ‌. ಇನ್ನು ಮಗುವನ್ನು ಕಳೆದುಕೊಂಡ ಪೋಷಕರ ಆಕ್ರಂಧನ ಮುಗಿಲು ಮುಟ್ಟಿದೆ‌.

**************************************

ಜಾಹೀರಾತುಗಳು

 

error: Content is protected !!