ಶಿರಸಿ: ನಗರದ ಭತ್ತದ‌ ಓಣಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಒಂಟಿ ಮಹಿಳೆಯ ಚಿನ್ನ ದೋಚಿಕೊಂಡು ಕಳ್ಳರು ಪರಾರಿಯಾಗಿದ್ದಾರೆ.

ಉಷಾ ದಾಮೋದರ ಪೈ ಎಂಬುವ ಮಹಿಳೆಯೇ ಚಿನ್ನ ಕಳೆದುಕೊಂಡವರು. ಬಿಳಿ ಕಾರಿನಲ್ಲಿ ಬಂದ ದರೋಡೆಕೋರರು, ಕುಮಟಾಕ್ಕೆ ಹೋಗುವ ಮಾರ್ಗ ಕೇಳಿ ಮಹಿಳೆಯ ಕುತ್ತಿಗೆಯಲ್ಲಿನ ಸರ ಹರಿದು ಪರಾರಿಯಾಗಿದ್ದಾರೆ. ಸುಮಾರು 1,10,000 ರೂಪಾಯಿ ಮೌಲ್ಯದ ಚಿನ್ನದ ಸರ ದೋಚಿದ್ದಾರೆ.

ಶಿರಸಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

***************************************

error: Content is protected !!