ಹಾವೇರಿ: ಸಿಎಂ ಬಸವರಾಜ್ ಬೊಮ್ಮಾಯಿ ತವರು ಕ್ಷೇತ್ರ ಶಿಗ್ಗಾವಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಈಗಿಂದಲೇ ರಣಕಹಳೆ ಮೊಳಗಿಸಿದ್ದಾರೆ. ಹಾನಗಲ್ ಉಪಚುನಾವಣೆಯಲ್ಲಿ ಪ್ರಚಂಡ ಜಯ ಸಾಧಿಸಿ, ಸಿಎಂಗೆ ಠಕ್ಕರ್ ಕೊಟ್ಟಿರೋ ಕೈ ಪಡೆ ಈಗ ಶಿಗ್ಗಾವಿಯಲ್ಲೂ ಅದೇ ಮಾದರಿಯ ಗೆಲುವಿಗೆ ಈಗಿಂದಲೇ ತಯಾರಿ ಶುರುವಿಟ್ಟಿದೆಯಾ ಅನ್ನೊ ಪ್ರಶ್ನೆ ಏಳುವಂತೆ ಮಾಡಿದೆ.

ಹೀಗಾಗಿ, ಇಂದು ಹಾವೇರಿ ಜಿಲ್ಲೆಗೆ ಭೇಟಿ ನೀಡಿರೋ ಡಿಕಶಿಗೆ ಶಿಗ್ಗಾವಿಯಲ್ಲಿ ಅದ್ದೂರಿ ಸ್ವಾಗತ ನೀಡಲಾಯಿತು. ಡಿಕೆಶಿ ಶಿಗ್ಗಾವಿ ಪಟ್ಟಣಕ್ಕೆ ಎಂಟ್ರಿ ನೀಡುತ್ತಲೇ ಜೆಸಿಬಿಗಳಲ್ಲಿ ನಿಂತು ಹೂ ಮಳೆಗರೆದು ಸ್ವಾಗತ ಕೋರಿದ
ಕಾಂಗ್ರೆಸ್ ಕಾರ್ಯಕರ್ತರು, ಕಾಂಗ್ರೆಸ್ ಪರ ಘೋಷಣೆಗಳ ಸುರಿಮಳೆಗೈದರು.

ಇನ್ನು, ಹಾನಗಲ್ ಗೆ ತೆರಳೋ ಮುನ್ನ ಶಿಗ್ಗಾವಿಗೆ ಆಗಮಿಸಿದ ಡಿಕೆ ಶಿವಕುಮಾರ್ ಗೆ ಅದ್ದೂರಿ ಸ್ವಾಗತ ನೀಡಲಾಯಿತು. ಅಂದಹಾಗೆ, ಹಾನಗಲ್ ನೂತನ ಶಾಸಕ ಶ್ರೀನಿವಾಸ್ ಮಾನೆಗೆ ಶಿಗ್ಗಾವುಯಲ್ಲಿ ಸನ್ಮಾನ ಸಮಾರಂಭ ಏರ್ಪಡಿಸಲಾಗಿತ್ತು. ಹೀಗಾಗಿ, ಶಿಗ್ಗಾವಿಯ ಚೆನ್ನಮ್ಮ ಸರ್ಕಲ್ ನಲ್ಲಿ ನಡೆಯುತ್ತಿರೋ ಸನ್ಮಾನ ಸಮಾರಂಭದಲ್ಲಿ ಡಿ.ಕೆ.ಶಿವಕುಮಾರ್ ಭಾಗವಹಿಸಿ ಮಾತನಾಡಿದ್ರು.

ಈ ವೇಳೆ ಕೆಪಿಸಿಸಿ ಕಾರ್ಯಾದ್ಯಕ್ಷ ಸಲೀಂ ಅಹ್ಮದ್, ನೂತನ ಶಾಸಕ ಶ್ರೀನಿವಾಸ್ ಮಾನೆ, ಮಾಜಿ ಶಾಸಕ ಬಸವರಾಜ ಶಿವಣ್ಣನವರ, ಸೋಮಣ್ಣ ಬೇವಿನಮರದ, ಶ್ರೀಕಾಂತಣ್ಣ ದುಂಡಿಗೌಡ್ರು ಸೇರಿದಂತೆ ಹಲವು ಸ್ಥಳೀಯ ಮುಖಂಡರು ಭಾಗಿಯಾಗಿದ್ರು.

***************************************

ಜಾಹೀರಾತುಗಳು

error: Content is protected !!