ನಟ, ಪವರ್ ಸ್ಟಾರ್ ಪುನೀತ್ ರಾಜಕುಮಾರ್ ವಿಧಿವಶರಾದ ಹಿನ್ನೆಲೆಯಲ್ಲಿ ಮತ್ತೊಬ್ಬ ಅಭಿಮಾನಿ ಸಾವು ಕಂಡಿದ್ದಾನೆ. ಚಾಮರಾಜನಗರದಲ್ಲಿ ಮತ್ತೊಬ್ಬ ಪುನೀತ್ ಅಭಿಮಾನಿ ಸಾವು ಕಂಡಿದ್ದು, ಶಿವಮೂರ್ತಿ(31) ಮೃತ ಅಭಿಮಾನಿಯಾಗಿದ್ದಾನೆ.

ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಪಟ್ಟಣದ ಭೀಮನಗರ ನಿವಾಸಿಯಾಗಿದ್ದ ಈತ, ಪುನೀತ್ ರಾಜ್ ಕುಮಾರ್ ಹಠಾತ್ ನಿಧನದಿಂದ ಆಘಾತಕ್ಕೆ ಒಳಗಾಗಿದ್ದ, ಅಲ್ಲದೇ ನೆಚ್ಚಿನ‌ ನಟನ ಸಾವಿನಿಂದ ಊಟ ತ್ಯಜಿಸಿದ್ದ

ಹೀಗಾಗಿ, ಕಳೆದ ಒಂದು ವಾರದಿಂದ ಊಟವಿಲ್ಲದೆ ಕ್ಷೀಣಗೊಂಡಿದ್ದ ಶಿವಮೂರ್ತಿಯ ಆರೋಗ್ಯ ಸಂಪೂರ್ಣ ಹದಗೆಟ್ಟಿತ್ತು. ಈ ಕಾರಣಕ್ಕಾಗಿ ನೆನ್ನೆ ರಾತ್ರಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

ಆದ್ರೆ, ಚಿಕಿತ್ಸೆ ಫಲಕಾರಿಯಾಗದೇ ಇಂದು ಬೆಳಿಗ್ಗೆ ಮೃತಪಟ್ಟಿದ್ದಾನೆ. ಶಿವಮೂರ್ತಿ ಹಲವು ಬಾರಿ ಪುನೀತ್ ರನ್ನ ಭೇಟಿಯಾಗುತ್ತಿದ್ದ, ಅಪ್ಪು ಕಂಡರೆ ಶಿವಮೂರ್ತಿಗೆ ಪಂಚಪ್ರಾಣವಾಗಿತ್ತು. ಅಪ್ಪು ನಿಧನದ ಬಳಿಕ ಪುನೀತ್ ಜೊತೆ ತೆಗೆಸಿಕೊಂಡಿದ್ದ ಪೋಟೋ ನೋಡಿ ಕಣ್ಣೀರು ಹಾಕುತ್ತಿದ್ದ ಅಭಿಮಾನಿ.

***************************************

ಜಾಹೀರಾತುಗಳು

error: Content is protected !!