ಇಂದೂರು ಕೊಪ್ಪದ ವ್ಯಕ್ತಿಯ ಶವ ಅಮರಗೋಳದಲ್ಲಿ ಪತ್ತೆ..! ರೈಲ್ವೆ ಹಳಿಯ ಪಕ್ಕದಲ್ಲೇ ಸತ್ತುಬಿದ್ದವನ ಸುತ್ತ ಅನುಮಾನದ ಹುತ್ತ..!

ಮುಂಡಗೋಡ: ತಾಲೂಕಿನ ಕೊಪ್ಪ (ಇಂದೂರು) ಗ್ರಾಮದ ವ್ಯಕ್ತಿಯೋರ್ವನ ಶವ ಹುಬ್ಬಳ್ಳಿ ಸಮೀಪದ ಅಮರಗೋಳ ಬಳಿ ರೈಲ್ವೆ ಹಳಿಯ ಪಕ್ಕದಲ್ಲಿ ದೊರೆತಿದೆ‌.

ಮಂಜುನಾಥ್ ಬಸಪ್ಪ ಬೆಲವಂತರ(35) ಎಂಬುವವನ ಶವ ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾಗಿದೆ. ಅಮರಗೋಳ ಈತನ ಪತ್ನಿಯ ತವರೂರು, ಪತ್ನಿ ತವರು ಮನೆಯಲ್ಲೇ ಇದ್ದ ಕಾರಣಕ್ಕೆ,, ಕಳೆದ ಹತ್ತು ದಿನಗಳ ಹಿಂದೆ ಅಮರಗೋಳಕ್ಕೆ ಹೋಗಿದ್ದ ಮಂಜುನಾಥ್, ನಿನ್ನೆ ರಾತ್ರಿಯೇ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾನೆ ಅಂತಾ ಮಾಹಿತಿ ಲಭ್ಯವಾಗಿದೆ.

ಸಧ್ಯ ಸ್ಥಳಕ್ಕೆ ಭೇಟಿ ನೀಡಿರೋ ಪೊಲೀಸರು ತನಿಖೆ ಕೈಗೊಂಡಿದ್ದಾರೆ‌.

error: Content is protected !!