ತುಮಕೂರು: ಗುಬ್ಬಿ ತಾಲೂಕು ಸಿ.ಎಸ್.ಪುರ ಠಾಣೆಯಲ್ಲಿ ಇಂದ ಸಾರ್ವಜನಿಕರೇ ದಂಗಾಗುವಂತಹ ಘಟನೆ ನಡೆದಿದೆ‌‌. ಎಸಿಬಿ ದಾಳಿಯಿಂದ ತಪ್ಪಿಸಿಕೊಂಡು ಪಿಎಸ್ ಐ ಓಡಿ ಹೋಗಿದ್ದಾನೆ. ಹೀಗಾಗಿ, ಹಾಗೆ ತಪ್ಪಿಸಿಕೊಂಡು ಓಡಿ ಹೋಗುತ್ತಿದ್ದ ಪಿಎಸ್ ಐ ರನ್ನು ಹಿಡಿಯಲು ಸಾರ್ವಜನಿಕರೇ ಬೆನ್ನತ್ತಿದ್ದಾರೆ. ಹಾಗೇ ಎಸಿಬಿಯಿಂದ ತಪ್ಪಿಸಿಕೊಂಡು ಓಡಿಹೋದ ಪಿಎಸ್ ಐ ಹೆಸರು, ಸೋಮಶೇಖರ್..

ಇವತ್ತು ನಡೆದಿದ್ದಿಷ್ಟು..!
ಅಂದಹಾಗೆ, ಇವತ್ತು ಲಂಚಬಾಕತನದ ವಿರುದ್ಧ ಪಿಎಸ್ ಐ ಹಾಗೂ ಮುಖ್ಯಪೇದೆಯ ವಿರುದ್ಧ ಎಸಿಬಿಗೆ ದೂರು ಬಂದ ಹಿನ್ನೆಲೆ, ಎಸಿಬಿ ಅಧಿಕಾರಿಗಳು, ಮಧ್ಯಾಹ್ನ 1 ಗಂಟೆ ಸಮಯದಲ್ಲಿ ಪೊಲೀಸ್ ಠಾಣೆ ಮೇಲೆ ದಾಳಿ ಮಾಡಿದ್ದರು. ಸಿ.ಎಸ್.ಪುರ ಪಿಎಸ್ಐ ಮತ್ತು ಮುಖ್ಯ ಪೇದೆಯನ್ನು ಎಸಿಬಿ ಬಲೆಗೆ ಕೆಡವಿದ್ದರು. ಬರೋಬ್ಬರಿ 16 ಸಾವಿರ ಲಂಚ ಪಡೆಯುವ ವೇಳೆ ರೆಡ್ ಹ್ಯಾಂಡ್ ಆಗಿಯೇ ಬಲೆಗೆ ಬಿದ್ದಾಗಿತ್ತು.

ಹೀಗಾಗಿ, ಎಸಿಬಿ ಅಧಿಕಾರಿಗಳು ಲಂಚಬಾಕ ಆರೋಪಿ ಪಿಎಸ್ ಐ ಸೋಮಶೇಖರ್ ನ್ನು, ವಶಕ್ಕೆ ಪಡೆದಿದ್ದರು. ಇನ್ನೇನು ವಿಚಾತಣೆ ಮುಗಿಸಿ ಜಸ್ಟ್ ಊಟ ಮಾಡೋಣ ಅಂತಾ ಎಸಿಬಿ ಅಧಿಕಾರಿಗಳು ಊಟಕ್ಕೆ ಕುಳಿತಿದ್ರು. ಇದೇ ಸಮಯಕ್ಕಾಗಿ ಕಾದು ಕುಳಿತಿದ್ದ ಪಿಎಸ್ಐ, ಪೊಲೀಸ್ ಠಾಣೆಯಿಂದ ಬೈಕ್ ನಲ್ಲಿ ಪರಾರಿಯಾಗಿದ್ದಾನೆ. ಜೊತೆಗೆ ಮೊಬೈಲ್ ಪೋನ್ ತೆಗೆದುಕೊಂಡು ಹೋಗಿದ್ದಾನೆ‌. ಹೀಗಾಗಿ ಪಿಎಸ್ ಐ ಓಡಿ ಹೋಗುತ್ತಿದ್ದ ವೇಳೆ ಎಸಿಬಿ ಅಧಿಕಾರಿಗಳೂ ಆತನನ್ನ ಬೆನ್ನತ್ತಿದ್ದಾರೆ. ಇದನ್ನ ನೋಡಿದ ಸಾರ್ವಜನಿಕರೂ ಕೂಡ ಪಿಎಸ್ ಐ ಹಿಂದೆ ಹಿಡಿಯಲು ಓಡಿದ್ದಾರೆ.

ಘಟನೆ ಹಿನ್ನೆಲೆ ಏನು..?
ಕೌಟುಂಬಿಕ ಕಲಹದ ವಿಚಾರವಾಗಿ ತುಮಕೂರು ಜಿಲ್ಲೆಯ ಸಿ.ಎಸ್ ಪುರ ಠಾಣೆಯಲ್ಲಿ ಚಂದ್ರಣ್ಣ ಎಂಬುವರ ವಿರುದ್ಧ
ಕಳೆದ ತಿಂಗಳು 22ರಂದು ದೂರು ದಾಖಲಾಗಿತ್ತು. ಹೀಗಾಗಿ, ಸಿ.ಎಸ್.ಪುರ ಪೊಲೀಸರು ಚಂದ್ರಣ್ಣನ ಕಾರು ವಶಪಡಿಸಿಕೊಂಡಿದ್ದರು.ಈ ಕಾರಣಕ್ಕಾಗಿ,ಕೋರ್ಟ್ ನಲ್ಲಿ ಜಾಮೀನು ಪಡೆದು ಚಂದ್ರಣ್ಣ ತನ್ನ ಕಾರು ಬಿಡಿಸಿಕೊಳ್ಳಲು ಬಂದಿದ್ದ. ಈ ವೇಳೆ ಕಾರು ಬಿಡಲು ಪಿಎಸ್ಐ ಹಾಗೂ ಮುಖ್ಯ ಪೇದೆ ನಯಾಜ್ ಅಹಮದ್ 28 ಸಾವಿರ ರೂ. ಹಣಕ್ಕೆ ಡಿಮ್ಯಾಂಡ್ ಇಟ್ಟಿದ್ದರು.

ಅಲ್ಲದೇ ಮುಂಗಡವಾಗಿ 12 ಸಾವಿರ ರೂ. ಲಂಚವನ್ನು ಮೊದಲೇ ಪಡೆದಿದ್ದ ಪಿಎಸ್ಐ. ಉಳಿದ 16 ಸಾವಿರ ಹಣ ಇಂದು ಪಡೆಯುವ ವೇಳೆ ಎಸಿಬಿ ಖೆಡ್ಡಾಕ್ಕೆ ಬಿದ್ದಿದ್ದ.

ಪಿಎಸ್ಐ ಲಂಚ ಬೇಡಿಕೆ ಬಗ್ಗೆ ಎಸಿಬಿಗೆ ದೂರು ನೀಡಿದ್ದ ಚಂದ್ರಣ್ಣ.‌ ಎಸಿಬಿ ಇನ್ಸೆಪೆಕ್ಟರ್ ವಿಜಯಲಕ್ಷ್ಮೀ ನೇತೃತ್ವದಲ್ಲಿ ನಡೆದ ರೇಡ್ ನಲ್ಲಿ ಈ ಅಚ್ಚರಿಯ ಘಟನೆ ನಡೆದಿದೆ.

**********************”****************

ಜಾಹೀರಾತುಗಳು

error: Content is protected !!