ಕಾರವಾರ: ಉತ್ತರ ಕನ್ನಡ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ರಾಷ್ಟ್ರೀಯ ಮಾನವ ಹಕ್ಕು ಆಯೋಗ ದಿಂದ ಸಮನ್ಸ್ ಜಾರಿಯಾಗಿದೆ. ಹೊನ್ನಾವರದ ಕಾಸರಕೋಡು ಮೀನುಗಾರರು ಹಾಗೂ ಮೀನುಗಾರಿಕಾ ಮಹಿಳೆಯರ ಮೇಲೆ ದೌರ್ಜನ್ಯದ ಕುರಿತು ದಾಖಲಾದ ದೂರಿನನ್ವಯ ಸಮನ್ಸ್ ಜಾರಿಯಾಗಿದೆ. ಕಾಸರಕೋಡ ಖಾಸಗಿ ಬಂದರು ಕಾಮಗಾರಿ ಸ್ಥಗಿತ ಗೊಳಿಸುವಂತೆ ಆಗ್ರಹಿಸಿ ದಿನಾಂಕ 24/1/22 ರಂದು ಮೀನುಗಾರರು ಪ್ರತಿಭಟನೆ ನಡೆಸಿದ್ದರು. ಪ್ರತಿಭಟನೆ ವೇಳೆ ಪ್ರತಿಭಟನಾ ನಿರತ ಮೀನುಗಾರರು ಹಾಗೂ ಮೀನುಗಾರಿಕಾ ಮಹಿಳೆಯರ ಮೇಲೆ ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದರು. ಹೀಗಾಗಿ, 6/05/22 ರಂದು ರಾಷ್ಟ್ರೀಯ ಮಾನವಹಕ್ಕು ಆಯೋಗದಲ್ಲಿ ಮೀನುಗಾರರು ದೂರು ದಾಖಲಿಸಿದ್ದರು. ಈ ಕಾರಣಕ್ಕಾಗಿ ಎಸ್ಪಿ ಹಾಗೂ ಡೀಸಿಯವರಿಗೆ ಸಮನ್ಸ್ ಜಾರಿಮಾಡಲಾಗಿದೆ
Top Stories
ಮಹಾರಾಷ್ಟ್ರದಿಂದ ಕಬ್ಬು ಕಟಾವಿಗೆ ಬಂದಿದ್ದ ಅಪ್ರಾಪ್ತೆಯನ್ನ ಆ ಹುಡುಗ ಅತ್ಯಾಚಾರ ಮಾಡಿದ್ನಾ..? ಹಾಗಿದ್ರೆ ಕೇಸ್ ಏನಾಯ್ತು..?
ಟ್ಯಾಕ್ಸ್ ವಸೂಲಿಯಲ್ಲಿ ಮುಂಡಗೋಡ ತಾಲೂಕು ರಾಜ್ಯಕ್ಕೇ ಪ್ರಥಮ..! ತಾಪಂ ಗ್ರಾಪಂ ಅಧಿಕಾರಿ, ಸಿಬ್ಬಂದಿಗಳ ಸಾಧನೆ..!!
ಮುಂಡಗೋಡ ಬೆಂಡಿಗೇರಿ ಪೆಟ್ರೊಲ್ ಬಂಕ್ ಹತ್ತಿರ ಬೈಕ್ ಅಪಘಾತ, ವೃದ್ದನ ಕಾಲು ಕಟ್..!
ಮಳಗಿ-ಬನವಾಸಿ ರಸ್ತೆಯಲ್ಲಿ ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ, ಓರ್ವ ಸ್ಥಳದಲ್ಲೇ ಓರ್ವ ಸಾವು, ಮತ್ತೋರ್ವ ಗಂಭೀರ..!
NMD ಕಿಡ್ನ್ಯಾಪ್ ಕೇಸ್, ಮತ್ತೆ ಐವರು ಆರೋಪಿಗಳು ಅಂದರ್, ಪೊಲೀಸರು ಆರೋಪಿಗಳಮದ್ಯೆ ಭಾರೀ ಕಾಳಗ..! ಗುಂಡೇಟು..!
NMD ಜಮೀರ್ ಬಾಯ್ ಸೇಫ್..! ಗದಗ ರಿಂಗ್ ರೋಡಲ್ಲಿ ಬಿಟ್ಟು ಹೋದ ಕಿಡ್ನ್ಯಾಪರ್ಸ್..! ಐವರು ಆರೋಪಿಗಳ ಹೆಡೆಮುರಿ ಕಟ್ಟಿದ್ರಾ ಮುಂಡಗೋಡ ಪೊಲೀಸ್ರು..?
ಮುಂಡಗೋಡಿನ NMD ಗ್ರೂಪ್ ಮಾಲೀಕನ ಮೇಲೆ ದುಷ್ಕರ್ಮಿಗಳ ಅಟ್ಯಾಕ್
ಟಿಬೇಟಿಯನ್ ಕಾಲೋನಿ ಬಳಿ ಬೈಕ್ ಗಳ ನಡುವೆ ಡಿಕ್ಕಿ, ಓರ್ವ ಸವಾರ ಸ್ಥಳದಲ್ಲೇ ಸಾವು, ಮತ್ತೋರ್ವ ಗಂಭೀರ..!
ಮುಂಡಗೋಡಿನ ಮುಲ್ಲಾ ಓಣಿಯ ಬಾವಿಯಲ್ಲಿ ವ್ಯಕ್ತಿಯ ಶವ ಪತ್ತೆ..! ಆತ್ಮಹತ್ಯೆನಾ..?
ಮುಂಡಗೋಡಿನ ಅಂಗನವಾಡಿಯಲ್ಲಿ ಹಾವು ಕಚ್ಚಿದ್ದ ಬಾಲಕಿ ಕಿಮ್ಸ್ ನಲ್ಲಿ ಸಾವು..!
ಮುಂಡಗೋಡಿನಲ್ಲಿ ಅಂಗನವಾಡಿಗೆ ಹೋಗಿದ್ದ ಪುಟ್ಟ ಬಾಲಕಿಗೆ ಕಚ್ಚಿದ ಹಾವು..!
ಹಳೇ ದ್ವೇಷದ ಹಿನ್ನಲೆ ಇಬ್ಬರಿಗೆ ಚಾಕು ಇರಿತ
ಇಂದೂರು ಸೊಸೈಟಿ ಚುನಾವಣೆ: ಭರ್ಜರಿ ಗೆಲುವು ಸಾಧಿಸಿದ ಕಾಂಗ್ರೆಸ್ ಬೆಂಬಲಿತರು..! ರೈತ ಒಕ್ಕೂಟಕ್ಕೆ ಮೂರು ಸ್ಥಾನಗಳು ಮಾತ್ರ..!
ಇಂದೂರು ಸೊಸೈಟಿ ಚುನಾವಣೆ ಅಚ್ಚರಿ ಫಲಿತಾಂಶ: ಮಾಜಿ ಜಿಪಂ ಸದಸ್ಯ ರವಿಗೌಡ ಪಾಟೀಲ್ ಸೋಲು..!
ಚವಡಳ್ಳಿ ಸೊಸೈಟಿ ಚುನಾವಣೆ: 11 ರಲ್ಲಿ ಕಾಂಗ್ರೆಸ್ ಬೆಂಬಲಿತರದ್ದೇ ಭರ್ಜರಿ ಗೆಲುವು..! ಬಿಜೆಪಿಗೆ ದಕ್ಕಿದ್ದು ಒಂದೇ ಒಂದು ಸ್ಥಾನ..!
ಮುಂಡಗೋಡ LSMP ಸೊಸೈಟಿ ಚುನಾವಣೆಯಲ್ಲಿ ಕಾಂಗ್ರೆಸ್ ಮೇಲುಗೈ, 12 ರ ಪೈಕಿ 9 ರಲ್ಲಿ ಕೈ ಬೆಂಬಲಿತರ ಗೆಲುವು..!
ಹುಬ್ಬಳ್ಳಿ ಸಿಲಿಂಡರ್ ಬ್ಲಾಸ್ಟ್: ಮತ್ತೋರ್ವ ಅಯ್ಯಪ್ಪ ಮಾಲಾಧಾರಿ ಸಾವು, ಸಾವಿನ ಸಂಖ್ಯೆ ಮೂರಕ್ಕೆ ಏರಿಕೆ..!
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ವಿಧಿವಶ ಹಿನ್ನೆಲೆ, ಶುಕ್ರವಾರ ಸರ್ಕಾರಿ ರಜೆ ಘೋಷಣೆ..! ಶಾಲಾ ಕಾಲೇಜುಗಳಿಗೆ ರಜೆ..!
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ವಿಧಿವಶ..! ನಾಳೆಯ ಬೆಳಗಾವಿ ಕೈ ಕಾರ್ಯಕ್ರಮ ರದ್ದು..!
ಉತ್ತರ ಕನ್ನಡ ಡಿಸಿ ಹಾಗೂ ಎಸ್ಪಿಯವರಿಗೆ ಮಾನವ ಹಕ್ಕುಗಳ ಆಯೋಗದಿಂದ ಸಮನ್ಸ್ ಜಾರಿ..!
ಬಾಚಣಕಿಯ ಮಜ್ಜಿಗೇರಿ ಕ್ರಾಸ್ ಬಳಿ ಕಾರು ಬೈಕ್ ನಡುವೆ ಅಪಘಾತ, ಬೈಕ್ ಸವಾರ ಗಂಭೀರ..!
ಮುಂಡಗೋಡ ತಾಲೂಕಿನ ಬಾಚಣಕಿ ಡ್ಯಾಂ ಬಳಿಯ ಮಜ್ಜಿಗೇರಿ ಕ್ರಾಸ್ ಹತ್ತಿರ ಅಪಘಾತವಾಗಿದೆ. ಕಾರು ಹಾಗೂ ಬೈಕ್ ನಡುವೆ ಮುಖಾ ಮುಕಿ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಗಂಭೀರ ಗಾಯಗೊಂಡಿದ್ದಾನೆ. ಜೇನಮುರಿ ಗ್ರಾಮದ ಬಸವರಾಜ್ ಯಲ್ಲಪ್ಪ ಶ್ಯಾಡಂಬಿ(36) ಎಂಬುವವನಿಗೆ ಗಂಭೀರ ಗಾಯವಾಗಿದೆ. ಸದ್ಯ ಗಾಯಾಳುವನ್ನು 108 ಅಂಬ್ಯುಲೆನ್ಸ್ ಮೂಲಕ ಮುಂಡಗೋಡ ತಾಲೂಕಾಸ್ಪತ್ರೆಗೆ ರವಾನಿಸಲಾಗಿತ್ತು. ಪ್ರಥಮ ಚಿಕಿತ್ಸೆ ನಂತರ ಹುಬ್ಬಳ್ಳಿಯ ಕಿಮ್ಸ್ ಗೆ ರವಾನಿಸಲಾಗಿದೆ. ಇನ್ನು ಗಾಯಾಳುವಿನ ಬಳಿಯಿದ್ದ 1450 ರೂ. ಹಾಗೂ ಮೊಬೈಲ್ ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ. 108 ಅಂಬ್ಯಲೆನ್ಸ್ ಸಿಬ್ಬಂದಿಗಳಾದ ಧನರಾಜ್ ಹಾಗೂ ಚಾಲಕರು ಸಮಯಪ್ರಜ್ಞೆ ತೋರಿದ್ದಾರೆ. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಹುಲಿಹೊಂಡ ಬಳಿ ಅಪರಿಚಿತ ವ್ಯಕ್ತಿಯ ಶವ ಪತ್ತೆ, ಕೊಲೆ ಮಾಡಿ ಬೀಸಾಕಿದ್ರಾ ದುರುಳರು..?
ಮುಂಡಗೋಡ ತಾಲೂಕಿನ ಹುಲಿಹೊಂಡದ ಬಳಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದೆ. ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿರೋ ಶವ ಹಲವು ಅನುಮಾನ ಮೂಡಿಸಿದೆ. ಇಂದು ಬೆಳಿಗ್ಗೆ ಪತ್ತೆಯಾಗಿರೋ ಶವ ಆತಂಕಕ್ಕೆ ಕಾರಣವಾಗಿದೆ. ಕೊಂದು ಬೀಸಾಕಿದ್ರಾ..? ಅಸಲು, ಮೇಲ್ನೋಟಕ್ಕೆ ಇದು ಕೊಲೆಯೊ ಅಥವಾ ಬೇರಿನ್ನೇನೋ ಕಾರಣಕ್ಕೆ ನಡೆದಿರೋ ಘಟನೆಯೋ ತನಿಖೆಯ ನಂತರವಷ್ಟೇ ತಿಳಿದು ಬರಬೇಕಿದೆ. ಸಂಪೂರ್ಣ ಕೊಳೆತ ಸ್ಥಿತಿಯಲ್ಲಿರೋ ಶವದ ಮುಖ ವಿರೂಪಗೊಂಡಿದೆ. ಸದ್ಯ ಮುಂಡಗೋಡ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಕಾತೂರು ಪ್ರೌಢಶಾಲಾ ಕ್ರೀಡಾಕೂಟದಲ್ಲಿ ವಿದ್ಯಾರ್ಥಿಗಳ ಮಾರಾಮಾರಿ, ಓರ್ವ ವಿದ್ಯಾರ್ಥಿಗೆ ಗಾಯ, ಲಘು ಲಾಠಿ ಚಾರ್ಜ್..!
ಮುಂಡಗೋಡ; ತಾಲೂಕಿನ ಕಾತೂರಿನ ಪ್ರೌಢಶಾಲಾ ಕ್ರೀಡಾಕೂಟದಲ್ಲಿ ಮಾರಾಮಾರಿಯಾಗಿದೆ. ಪರಿಣಾಮ ಓರ್ವ ವಿದ್ಯಾರ್ಥಿಯ ತಲೆಗೆ ಗಾಯವಾಗಿದೆ. ಹೀಗಾಗಿ, ಗಲಾಟೆ ನಿಯಂತ್ರಿಸಲು ಪೊಲೀಸರು ಲಘು ಲಾಠಿ ಚಾರ್ಜ್ ನಡೆಸಿದ್ದಾರೆ. ಘಟನೆ ಏನು..? ಇಂದು ಕಾತೂರು ಹೈಸ್ಕೂಲು ಮೈದಾನದಲ್ಲಿ ಪ್ರೌಢಶಾಲೆಗಳ ಕ್ರೀಡಾಕೂಟ ನಡೆದಿತ್ತು. ಈ ಕ್ರೀಡಾಕೂಟದಲ್ಲಿ ಮಳಗಿ ಪ್ರೌಢಶಾಲೆ ಹಾಗೂ ಕಾತೂರು ಪ್ರೌಡಶಾಲೆಯ ವಿದ್ಯಾರ್ಥಿಗಳ ಮದ್ಯೆ ಖೋಖೋ ಪಂದ್ಯ ಶುರುವಾಗಿತ್ತು. ಈ ವೇಳೆ ಅದ್ಯಾವನೋ ನಿರ್ಣಾಯಕ ಮಾಡಿದ ಯಡವಟ್ಟಿನಿಂದ, ಹುದ್ದರಿ ನಷ್ಟದ ತೀರ್ಪಿನಿಂದ ಒಂದು ಅಂಕ ಮಿಸ್ ಆಗಿದೆ ಅನ್ನೋ ಕಾರಣ ಇಟ್ಕೊಂಡು ಸಣ್ಣಗೆ ತಗಾದೆ ತೆಗೆದಿದ್ದಾರೆ ವಿದ್ಯಾರ್ಥಿಗಳು. ಹೀಗೆ ಶುರುವಾದ ಗಲಾಟೆ ವಿದ್ಯಾರ್ಥಿಗಳು ಹಾಗೂ ಅಲ್ಲಿ ನೆರೆದಿದ್ದ ಯುವಕರ ಮದ್ಯೆ ಭಾರೀ ಮಾರಾಮಾರಿಗೆ ಕಾರಣವಾಗಿದೆ. ಈ ಗಲಾಟೆಯಲ್ಲೇ ಓರ್ವ ವಿದ್ಯಾರ್ಥಿಗೆ ತಲೆಗೆ ಪೆಟ್ಟಾಗಿದೆ. ಲಘು ಲಾಠಿ ಪ್ರಹಾರ..! ಇನ್ನು ಎರಡು ವಿದ್ಯಾರ್ಥಿ ಗುಂಪುಗಳ ನಡುವೆ ನಡೆದ ಮಾರಾಮಾರಿ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಮುಂಡಗೋಡ ಪೊಲೀಸರು ಗಲಾಟೆ ನಿಯಂತ್ರಿಸಲು ಹರಸಾಹಸ ಪಟ್ಟಿದ್ದಾರೆ. ಅನಿವಾರ್ಯವಾಗಿ...
ನೇಗಿನಹಾಳ ಮಡಿವಾಳೇಶ್ವರ ಮಠದ ಸ್ವಾಮೀಜಿ ನೇಣಿಗೆ ಶರಣು..!
ಬೈಲಹೊಂಗಲ: ಇದು ನಿಜಕ್ಕೂ ದುರಂತದ ಸಂಗತಿ. ಬಸವ ತತ್ವ ಪ್ರತಿಪಾದಕ, ಅನುಯಾಯಿ ನೇಗಿನಹಾಳ ಶ್ರೀ ಗುರು ಮಡಿವಾಳೇಶ್ವರ ಮಠದ ಬಸವ ಸಿದ್ದಲಿಂಗ ಸ್ವಾಮೀಜಿ ನೇಣಿಗೆ ಕೊರಳೊಡ್ಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಿನ್ನೆ ರಾತ್ರಿ ಮಠದ ತಮ್ಮ ಕೊಠಡಿಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವ ಮಾಹಿತಿ ತಿಳಿದು ಬಂದಿದೆ. ಮುರುಘಾ ಶ್ರೀಗಳ ಕೇಸ್ ಹಿನ್ನಲೆಯಲ್ಲಿ ಇಬ್ಬರು ಮಹಿಳೆಯರು ಮಾತನಾಡಿದ ಅಡಿಯೋದಲ್ಲಿ ಇವರ ಹೆಸರನ್ನು ಬಳಸಿಕೊಂಡು ಹೆಣ್ಣು ಮಕ್ಕಳೊಂದಿಗೆ ಅನೈತಿಕ ಸಂಪರ್ಕ ಹೊಂದಿದ್ದಾರೆಂದು ಮಾತನಾಡಿದ್ದು ವೈರಲ್ ಅಗಿದ್ದರಿಂದ ಮನ ನೊಂದು ನೇಣಿಗೆ ಶರಣಾಗಿದ್ದಾರೆ ಎಂದು ಶಂಕಿಸಲಾಗಿದೆ. ನಿನ್ನೆ ತಡರಾತ್ರಿವರೆಗೆ ಭಕ್ತರೊಂದಿಗೆ ಸಮಾಲೋಚನೆ ನಡೆಸಿ, ನೀವೆಲ್ಲರೂ ನಮ್ಮನ್ನು ಸಂಶಯದಿಂದ ನೋಡುವಂತಾಗಿದೆ. ಈ ಘಟನೆಯಿಂದ ಜೀವಂತ ಇರಬಾರದು ಎಂದೆನಿಸಿದೆ ಎಂದು ಹೇಳಿದ್ದರಂತೆ. ಆತ್ಮಹತ್ಯೆಯ ವಿಷಯ ತಿಳಿಯುತ್ತಿದ್ದಂತೆ ಮಠದ ಆವರಣದಲ್ಲಿ ಭಕ್ತರು ಜಮಾವಣೆಗೊಂಡಿದ್ದಾರೆ. ಪಿಐ ಉಳವಪ್ಪ ಸಾತೆನಹಳ್ಳಿ, ಡಿಎಸ್ಪಿ ಕಟಗಿ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ.
ಚಿತ್ರದುರ್ಗ ಮುರುಘಾ ಶರಣರು ಕೊನೆಗೂ ಆರೆಸ್ಟ್, ನಗರದಾಧ್ಯಂತ ಬಿಗಿ ಬಂದೋಬಸ್ತ್..!
ಚಿತ್ರದುರ್ಗ: ಪೋಕ್ಸೋ ಕೇಸಿನಲ್ಲಿ ಎ-1 ಆರೋಪಿಯಾಗಿರೋ ಮುರುಘಾ ಮಠದ ಶ್ರೀಗಳು ಅರೆಸ್ಟ್ ಆಗಿದ್ದಾರೆ. ಮುರುಘಾ ಶರಣರ ಬಂಧನದ ಬಗ್ಗೆ ಚಿತ್ರದುರ್ಗ ಎಸ್ಪಿ ಪರಶುರಾಮ್ ಖಚಿತಗೊಳಿಸಿದ್ದಾರೆ. ಖುದ್ದಾಗಿ ಮುರುಘಾ ಶ್ರೀಗಳೇ ಪೊಲೀಸರಿಗೆ ಶರಣಾಗಿದ್ದಾರೆ. ಈ ವೇಳೆ ಶರಣರನ್ನು ಪೊಲೀಸರು ಬಂಧಿಸಿದ್ದಾರೆ. ಹೀಗಾಗಿ, ಕಳೆದ ಆರು ದಿನಗಳಿಂದ ಗುದುಮುರುಗಿ ಹಚ್ಚಿದ್ದ ಪ್ರಕರಣವೀಗ ಮತ್ತೊಂದು ತಿರುವು ಪಡೆದುಕೊಂಡಿದೆ. ಮುರುಘಾ ಶರಣರ ಬಂಧನ ಹಿನ್ನೆಲೆಯಲ್ಲಿ ಚಿತ್ರದುರ್ಗದಾದ್ಯಂತ ಭಾರೀ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಎಲ್ಲೆಡೆ ಬ್ಯಾರಿಕೇಡ್ ಹಾಕಿ ನಾಕಾಬಂದಿ ಹಾಕಲಾಗಿದೆ.
ಮಳಗಿ ಸಹಕಾರಿ ಬ್ಯಾಂಕಿನಲ್ಲಿ ಥೇಟು ಸಿನಿಮಾ ಸ್ಟೈಲಿನಲ್ಲೇ ದರೋಡೆ, ಸೆಕ್ಯುರಿಟಿ ಗಾರ್ಡ್ ಕಟ್ಟಿ ಹಾಕಿದ್ರು ಖದೀಮರು.!
ಮುಂಡಗೋಡ ತಾಲೂಕಿನ ಮಳಗಿಯಲ್ಲಿ ಥೇಟು ಸಿನಿಮಾ ಸ್ಟೈಲಿನಲ್ಲೇ ದರೋಡೆಯಾಗಿದೆ. ನಿನ್ನೆ ರಾತ್ರಿ 9.30 ರ ಸಮಯದಲ್ಲೇ ಬಂದು, ಸೆಕ್ಯುರಿಟಿ ಗಾರ್ಡ್ ನನ್ನು ಕಟ್ಟಿಹಾಕಿ, ರಾತ್ರಿಯಿಡೀ ಅಲ್ಲೇ ಬೀಡು ಬಿಟ್ಟು, ಯಾರದ್ದೂ ಭಯವಿಲ್ಲದೇ ದರೋಡೆಕೋರರ ಗ್ಯಾಂಗ್ ಸಹಕಾರಿ ಸಂಘದಲ್ಲಿ ದರೋಡೆ ಮಾಡಿಕೊಂಡು ಹೋಗಿದೆ. ಗಾರ್ಡಿಗೆ ಕಟ್ಟಿ ಹಾಕಿ..! ಅಂದಹಾಗೆ, ನಿನ್ನೆ ರಾತ್ರಿ ಎಲ್ಲರೂ ಗಣೇಶ ಚತುರ್ಥಿಯ ಸಂಭ್ರಮದಲ್ಲಿದ್ದರೆ, ದರೋಡೆಕೋರ ಗ್ಯಾಂಗ್ ಮಾತ್ರ ಕಳ್ಳತನದ ಪ್ಲ್ಯಾನ್ ಹಾಕಿದೆ. ಹೀಗಾಗಿ, ಇನ್ನೂ ಯಾರೂ ಮಲಗದ ವೇಳೆಯೇ ಮಳಗಿ ಸೇವಾ ಸಹಕಾರಿ ಸಂಘದ ಅಂಗಳಕ್ಕೆ ಬಂದಿದೆ. ಸಂಘದಲ್ಲಿ ರಾತ್ರಿ ಕಾಯಲು ಇದ್ದ ಸೆಕ್ಯುರಿಟಿ ಗಾರ್ಡ್ ಮಹದೇವಪ್ಪನ ಬಾಯಿಗೆ ಬಟ್ಟೆ ತುರುಕಿ ಕಟ್ಟಿ ಹಾಕಿದ್ದಾರೆ ದರೋಡೆಕೋರರು. ನಿನ್ನ ತಲೆದಿಂಬಿನ ಹತ್ತಿರವೇ ಬಾಂಬ್ ಇಟ್ಟಿದ್ದೇವೆ ನೀನೇನಾದ್ರೂ ಬಾಲ ಬಿಚ್ಚಿದ್ರೆ ರಿಮೋಟ್ ಮೂಲಕ ಉಡಾಯಿಸಿ ಬಿಡ್ತಿವಿ ಅಂತಾ ಭಯಗೊಳಿಸಿ ಒಳನುಗ್ಗಿದ್ದಾರಂತೆ. ಹೀಗಾಗಿ, ಏನೂ ಮಾಡಲಾಗದ ಸ್ಥಿತಿಯಲ್ಲಿ ಪರದಾಡಿದ್ದಾನೆ ಸೆಕ್ಯುರಿಟಿ ಗಾರ್ಡ್ ಮಹದೇವಪ್ಪ. ಕಟ್ಟರ್ ಮಶಿನ್ ತಂದ್ರು..! ಹೀಗೆ, ಸೆಕ್ಯುರಿಟಿ ಗಾರ್ಡ್ ಮಹದೇವಪ್ಪನನ್ನು...
ಬಾಚಣಕಿ ಶಾಲೆಯಲ್ಲಿ ವಿದ್ಯುತ್ ಆಘಾತ, ಅದೃಷ್ಟವಶಾತ್ ಆರು ವಿದ್ಯಾರ್ಥಿಗಳು ಬಚಾವ್..!
ಮುಂಡಗೋಡ ತಾಲೂಕಿನ ಬಾಚಣಕಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾರಿ ಅನಾಹುತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ. ಇಲ್ಲಿನ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರ ಬೇಜವಾಬ್ದಾರಿಯಿಂದ ಆರು ವಿದ್ಯಾರ್ಥಿಗಳು ಅಧೃಷ್ಟವಶಾತ್ ಬಚಾವ್ ಆಗಿದ್ದಾರೆ. ವಿದ್ಯುತ್ ಪ್ರವಹಿಸಿ ಆರು ಮಕ್ಕಳಿಗೆ ಆಘಾತವಾಗಿದೆ. ಗ್ರಾಮಸ್ಥರು ಪೋಷಕರ ಸಮಯಪ್ರಜ್ಞೆಯಿಂದ ಆರು ಮಕ್ಕಳು ಬಚಾವ್ ಆಗಿದ್ದಾರೆ. ಏನಿದು ಘಟನೆ..? ಅಂದಹಾಗೆ, ಬಾಚಣಕಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ, ವಿದ್ಯುತ್ ಮೀಟರ್ ಪಕ್ಕದಿಂದ ಡೈರೆಕ್ಟ್ ಆಗಿ ವಿದ್ಯುತ್ ಸಂಪರ್ಕ ಪಡೆಯಲಾಗಿದೆ. ಅಂದ್ರೆ ಅಲ್ಲಿ ಯಾವುದೇ ರಕ್ಷಣಾತ್ಮಕ ಪರಿಕರಗಳನ್ನು ಬಳಸದೇ ಸ್ವಿಚ್ ಬೋರ್ಡ್ ಹಾಕಲಾಗಿದೆ. ಎಲ್ಲೆಂದರಲ್ಲಿ ಹರಿದ ವಿದ್ಯುತ್ ವೈಯರ್ ಗಳನ್ನು ನೇತಾಡುವಂತೆ ಮಾಡಲಾಗಿದೆ. ಹೀಗಾಗಿ, ಇಂದು ಬೆಳಿಗ್ಗೆ ಶಾಲೆಗೆ ಆಗಮಿಸಿದ್ದ ವಿದ್ಯಾರ್ಥಿಗಳು ಬಾಗಿಲು ತೆರೆಯಲು ಹೋದಾಗ ವಿದ್ಯುತ್ ಪ್ರವಹಿಸಿದೆ. ತಕ್ಷಣವೇ ಭಯದಿಂದ ನಡುಗಿ ಹೋದ ವಿದ್ಯಾರ್ಥಿಗಳು ಶಿಕ್ಷಕರ ಗಮನಕ್ಕೆ ತಂದಿದ್ದಾರೆ. ಗ್ರಾಮಸ್ಥರು ಪೋಷಕರು ಸೇರಿ ತಕ್ಷಣವೇ ಮೇನ್ ಲೈನ್ ಸಂಪರ್ಕ ಕಡಿತಗೊಳಿಸಿದ್ದಾರೆ. ಈ ಕಾರಣಕ್ಕೆ ವಿದ್ಯಾರ್ಥಿಗಳು ಬಚಾವ್ ಆಗಿದ್ದಾರೆ. ಕಾಮೆನ್ ಸೆನ್ಸ್...
ಸಂತ ಸೇವಾಲಾಲರ ಜನ್ಮಸ್ಥಳದಲ್ಲಿ RSS ಶಿಬಿರಕ್ಕೆ ವಿರೋಧ ಸರಿಯಲ್ಲ, ಬಂಜಾರಾ ಸಮುದಾಯಕ್ಕೆ ಮುಖಂಡ ಶೇಖರ್ ಲಮಾಣಿ ಮನವಿ..!
ಮುಂಡಗೋಡ: ಬಂಜಾರಾ ಸಮುದಾಯದ ಪವಿತ್ರ ಕ್ಷೇತ್ರ ಸಂತ ಶ್ರೀ ಸೇವಾಲಾಲರ ಜನ್ಮಸ್ಥಳ ಸೂರಗೊಂಡನಕೊಪ್ಪದ ಬಾಯಾಗಢನಲ್ಲಿ RSS ನವರು ನಡೆಸುತ್ತಿರೋ ಶಿಬಿರಕ್ಕೆ ಬಂಜಾರಾ ಸಮುದಾಯದ ಕೆಲವು ಮುಖಂಡರು ವಿರೋಧ ವ್ಯಕ್ತ ಪಡಿಸಿದ್ದಾರೆ. ಹೀಗಾಗಿ, ಹೀಗೆ RSS ನ ಶಿಬಿರವನ್ನು ವಿರೋಧಿಸುವುದು ಸರಿಯಲ್ಲ, ಶಿಬಿರ ನಡೆಯುವಂತಾಗಲಿ ಅಂತಾ ಮುಂಡಗೋಡಿನ ಬಂಜಾರಾ ಮುಖಂಡ, ಪಟ್ಟಣ ಪಂಚಾಯತಿ ಸದಸ್ಯ ಶೇಖರ್ ಲಮಾಣಿ ಆಗ್ರಹಿಸಿದ್ದಾರೆ. RSS ಬಗ್ಗೆ ಅರಿವಿದೆ..! ನಮಗೆ RSS ಬಗ್ಗೆ ಅರಿವಿದೆ. ದೇಶಭಕ್ತಿಯನ್ನು ಜಾಗ್ರತಗೊಳಿಸಿ, ಯುವಕರನ್ನು ದೇಶಭಕ್ತಿಯೆಡೆಗೆ ಸಂಘಟಿಸುವುದೇ RSS ಆಗಿದೆ. ನಾನೂ ಕೂಡ RSS ನ ಸಂಪೂರ್ಣ ಸಿದ್ದಾಂತಗಳನ್ನು ತಿಳಿದುಕೊಂಡಿದ್ದೇನೆ. ಹೀಗಾಗಿ, ನಮ್ಮ ಬಂಜಾರಾ ಸಮುದಾಯದವರು ಹೀಗೆ RSS ಬಗ್ಗೆ ಇಲ್ಲಸಲ್ಲದ ಪೂರ್ವಾಗ್ರಹ ಪೀಡಿತ ಮನಸ್ಥಿತಿಯಿಂದ ಹೊರ ಬರಬೇಕು. ಸೂರಗೊಂಡನಕೊಪ್ಪದ ಬಾಯಗಡನಲ್ಲಿ ಶಿಬಿರ ನಡೆಯುವಂತಾಗಬೇಕು, ಆ ಶಿಬಿರಕ್ಕೆ ಯಾರೂ ವಿರೋಧ ವ್ಯಕ್ತ ಪಡಿಸಬೇಡಿ ಅಂತಾ ಬಂಜಾರಾ ಸಮುದಾಯಕ್ಕೆ ಶೇಖರ್ ಲಮಾಣಿ ಮನವಿ ಮಾಡಿದ್ದಾರೆ. ಮತಾಂತರ ತಡೆದದ್ದೇ RSS..! ಇನ್ನು ಬಂಜಾರಾ ಸಮುದಾಯದ ಬಡವರನ್ನೇ ಟಾರ್ಗೆಟ್...
ಮುಂಡಗೋಡಿನಲ್ಲಿ ಮತ್ತೇ ಭಾರೀ ಮಳೆ, ಬಂಕಾಪುರ ರಸ್ತೆ ನಿವಾಸಿಗಳಿಗೆ ಮತ್ತದೇ ಗೋಳು, ಇನ್ನಾದ್ರೂ ಎಚ್ಚೆತ್ತುಕೊಳ್ಳಿ ಮಿಸ್ಟರ್ ಚೀಫ್ ಆಫೀಸರ್ರೇ.!
ಮುಂಡಗೋಡಿನಲ್ಲಿ ಮತ್ತೆ ಭಾರೀ ಮಳೆಯಾಗಿದೆ. ಬಂಕಾಪುರ ರಸ್ತೆಯಲ್ಲಿ ಮತ್ತದೇ ಗೋಳು ಎದುರಾಗಿದೆ. ಶನಿವಾರದಂತೆ ಇವತ್ತೂ ಕೂಡ ಇಲ್ಲಿನ ನಿವಾಸಿಗಳು “ಶಿವ”ರಾತ್ರಿ ಜಾಗರಣೆ ಮಾಡುವಂತಾಗಿದೆ. ಹೀಗೆ ಭಜನೆ ಮಾಡಿದ ಮೇಲಾದ್ರೂ “ಜನಪ್ರತಿನಿಧಿ” ಸಾಹೇಬ್ರುಗಳು ಈ ನಿವಾಸಿಗಳ ಗೋಳು ಕೇಳ್ತಾರಾ ಅನ್ನೋದೊಂದೇ ಸದ್ಯದ ಪ್ರಶ್ನೆಯಾಗಿದೆ. ಶನಿವಾರದಂತೆ..! ಅಸಲು, ಶನಿವಾರ ಇಂತದ್ದೇ ಮಳೆ ಧುತ್ತನೇ ಸುರಿದು ಹೋದಾಗ, ಪಾಪ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ರಾತ್ರೋ ರಾತ್ರಿ ಎದ್ನೊ ಬಿದ್ನೊ ಅಂತಾ ಬಂದಿದ್ರಂತೆ. ಪಾಪ ಅದೇಲ್ಲಿ ಬೆಚ್ಚಗೆ ಮಲಗಿದ್ರೋ ಏನೋ ಮಾದ್ಯಮಗಳು ಪರಿಸ್ಥಿತಿಯ ಬಗ್ಗೆ ಎಚ್ಚರಿಸಿದ್ದವು. ಅಲ್ಲದೇ ಇಲ್ಲಿನ ಬಡ ನಿವಾಸಿಗಳು ಉಗಿದು ಉಪ್ಪಿನಕಾಯಿ ಹಾಕಿದ್ರು. ಆ ಕಾರಣಕ್ಕಾಗಿ ಪಾಪ ದಡಬಡನೇ ಬಂದಿದ್ದ “ಸ್ವಾಮಿಗಳು” ಕತ್ತಲಲ್ಲೇ ಬಂದು ಅದೇನೋ ಮುಂದಿನ “ಕಠಿಣ” ವ್ಯವಸ್ಥೆಯ ಕ್ರಮಕ್ಕೆ ಮುಂದಾಗಿದ್ದಾರಂತೆ. ಪಾಪ, ಈ ಯಪ್ಪನಿಗೆ ಶನಿವಾರ ರಾತ್ರಿಯೇ ಜ್ಞಾನೋದಯವಾಗಿದ್ದು ಸಮಸ್ಯೆಯ ಪರಿಹಾರಕ್ಕಾಗಿ ರೆಡಿಯಾಗಿದ್ರಂತೆ. ಆದ್ರೆ, ಮುಹೂರ್ತಕ್ಕಾಗಿ ಜ್ಯೋತಿಷ್ಯರ ಹುಡುಕಾಟದಲ್ಲಿದ್ದಾರಂತೆ. ಇದೇಲ್ಲ ನಂಬೋದಾ..? ಅಸಲು, ಇದೇಲ್ಲ ಬರೀ ಕಣ್ಣೊರೆಸುವ ತಂತ್ರ ಅಂತಿದ್ದಾರೆ...