ಕಾತೂರು ಪ್ರೌಢಶಾಲಾ ಕ್ರೀಡಾಕೂಟದಲ್ಲಿ ವಿದ್ಯಾರ್ಥಿಗಳ ಮಾರಾಮಾರಿ, ಓರ್ವ ವಿದ್ಯಾರ್ಥಿಗೆ ಗಾಯ, ಲಘು ಲಾಠಿ ಚಾರ್ಜ್..!


ಮುಂಡಗೋಡ; ತಾಲೂಕಿನ ಕಾತೂರಿನ ಪ್ರೌಢಶಾಲಾ ಕ್ರೀಡಾಕೂಟದಲ್ಲಿ ಮಾರಾಮಾರಿಯಾಗಿದೆ. ಪರಿಣಾಮ ಓರ್ವ ವಿದ್ಯಾರ್ಥಿಯ ತಲೆಗೆ ಗಾಯವಾಗಿದೆ. ಹೀಗಾಗಿ, ಗಲಾಟೆ ನಿಯಂತ್ರಿಸಲು ಪೊಲೀಸರು ಲಘು ಲಾಠಿ ಚಾರ್ಜ್ ನಡೆಸಿದ್ದಾರೆ.

ಘಟನೆ ಏನು..?
ಇಂದು ಕಾತೂರು ಹೈಸ್ಕೂಲು ಮೈದಾನದಲ್ಲಿ ಪ್ರೌಢಶಾಲೆಗಳ ಕ್ರೀಡಾಕೂಟ ನಡೆದಿತ್ತು. ಈ ಕ್ರೀಡಾಕೂಟದಲ್ಲಿ ಮಳಗಿ ಪ್ರೌಢಶಾಲೆ ಹಾಗೂ ಕಾತೂರು ಪ್ರೌಡಶಾಲೆಯ ವಿದ್ಯಾರ್ಥಿಗಳ ಮದ್ಯೆ ಖೋಖೋ ಪಂದ್ಯ ಶುರುವಾಗಿತ್ತು. ಈ ವೇಳೆ ಅದ್ಯಾವನೋ ನಿರ್ಣಾಯಕ‌ ಮಾಡಿದ ಯಡವಟ್ಟಿನಿಂದ, ಹುದ್ದರಿ ನಷ್ಟದ ತೀರ್ಪಿನಿಂದ ಒಂದು ಅಂಕ ಮಿಸ್ ಆಗಿದೆ ಅನ್ನೋ ಕಾರಣ ಇಟ್ಕೊಂಡು ಸಣ್ಣಗೆ ತಗಾದೆ ತೆಗೆದಿದ್ದಾರೆ ವಿದ್ಯಾರ್ಥಿಗಳು. ಹೀಗೆ ಶುರುವಾದ ಗಲಾಟೆ ವಿದ್ಯಾರ್ಥಿಗಳು ಹಾಗೂ ಅಲ್ಲಿ ನೆರೆದಿದ್ದ ಯುವಕರ ಮದ್ಯೆ ಭಾರೀ ಮಾರಾಮಾರಿಗೆ ಕಾರಣವಾಗಿದೆ. ಈ ಗಲಾಟೆಯಲ್ಲೇ ಓರ್ವ ವಿದ್ಯಾರ್ಥಿಗೆ ತಲೆಗೆ ಪೆಟ್ಟಾಗಿದೆ.

ಲಘು ಲಾಠಿ ಪ್ರಹಾರ..!
ಇನ್ನು ಎರಡು ವಿದ್ಯಾರ್ಥಿ ಗುಂಪುಗಳ ನಡುವೆ ನಡೆದ ಮಾರಾಮಾರಿ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಮುಂಡಗೋಡ ಪೊಲೀಸರು ಗಲಾಟೆ ನಿಯಂತ್ರಿಸಲು ಹರಸಾಹಸ ಪಟ್ಟಿದ್ದಾರೆ. ಅನಿವಾರ್ಯವಾಗಿ ಗಲಾಟೆ ನಿಯಂತ್ರಿಸಲು ಲಘು ಲಾಠಿ ಪ್ರಹಾರ ನಡೆಸಿದ್ದಾರೆ‌. ಹೀಗಾಗಿ, ಸದ್ಯ ಸ್ಥಳದಲ್ಲಿ ಗಲಾಟೆ ಹತೋಟಿಗೆ ಬಂದಿದೆ.

ನಿರ್ಣಾಯಕರ ಯಡವಟ್ಟಾ..?
ಅಸಲು, ಇಂತದ್ದೇ ಒಂದು ಗಲಾಟೆ ಇತ್ತಿಚೆಗಷ್ಟೇ ಇಂದೂರಿನ ಕ್ರೀಡಾಕೂಟದಲ್ಲೂ ನಡೆದಿತ್ತು. ಅಲ್ಲೂ ಕೂಡ ಇಂತದ್ದೇ ಅನುಮಾನಾಸ್ಪದ ನಿರ್ಣಯ ನೀಡಿದ್ದಕ್ಕೆ ಗಲಾಟೆಯಾಗಿತ್ತು. ಹೀಗಾಗಿ, ತಾಲೂಕಿನಲ್ಲಿ ನಡೆಯುತ್ತಿರೋ ಕ್ರೀಡಾಕೂಟಗಳಿಗೆ ಪೊಲೀಸರನ್ನೂ ನಿಯೋಜನೆ ಗೊಳಿಸಲಾಗಿತ್ತು.

ಸದ್ಯ ಕಾತೂರಿನಲ್ಲಿನ ಗಲಾಟೆ ಸಂಬಂಧ ಪೊಲೀಸರು ಸ್ಥಳದಲ್ಲಿ ಬೀಡು ಬಿಟ್ಟು ನಿಯಂತ್ರಿಸಿದ್ದಾರೆ. ಅಲ್ದೇ ಶಾಂತಿ ಕಾಪಾಡಲು ಕಾತೂರು ಗ್ರಾಮದಲ್ಲಿ ರೂಟ್ ಮಾರ್ಚ ಕೂಡ ಮಾಡಿದ್ದಾರೆ.

error: Content is protected !!