ಮುಂಡಗೋಡ ತಾಲೂಕಿನ ಬಾಚಣಕಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾರಿ ಅನಾಹುತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ. ಇಲ್ಲಿನ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರ ಬೇಜವಾಬ್ದಾರಿಯಿಂದ ಆರು ವಿದ್ಯಾರ್ಥಿಗಳು ಅಧೃಷ್ಟವಶಾತ್ ಬಚಾವ್ ಆಗಿದ್ದಾರೆ. ವಿದ್ಯುತ್ ಪ್ರವಹಿಸಿ ಆರು ಮಕ್ಕಳಿಗೆ ಆಘಾತವಾಗಿದೆ. ಗ್ರಾಮಸ್ಥರು ಪೋಷಕರ ಸಮಯಪ್ರಜ್ಞೆಯಿಂದ ಆರು ಮಕ್ಕಳು ಬಚಾವ್ ಆಗಿದ್ದಾರೆ.
ಏನಿದು ಘಟನೆ..?
ಅಂದಹಾಗೆ, ಬಾಚಣಕಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ, ವಿದ್ಯುತ್ ಮೀಟರ್ ಪಕ್ಕದಿಂದ ಡೈರೆಕ್ಟ್ ಆಗಿ ವಿದ್ಯುತ್ ಸಂಪರ್ಕ ಪಡೆಯಲಾಗಿದೆ. ಅಂದ್ರೆ ಅಲ್ಲಿ ಯಾವುದೇ ರಕ್ಷಣಾತ್ಮಕ ಪರಿಕರಗಳನ್ನು ಬಳಸದೇ ಸ್ವಿಚ್ ಬೋರ್ಡ್ ಹಾಕಲಾಗಿದೆ. ಎಲ್ಲೆಂದರಲ್ಲಿ ಹರಿದ ವಿದ್ಯುತ್ ವೈಯರ್ ಗಳನ್ನು ನೇತಾಡುವಂತೆ ಮಾಡಲಾಗಿದೆ. ಹೀಗಾಗಿ, ಇಂದು ಬೆಳಿಗ್ಗೆ ಶಾಲೆಗೆ ಆಗಮಿಸಿದ್ದ ವಿದ್ಯಾರ್ಥಿಗಳು ಬಾಗಿಲು ತೆರೆಯಲು ಹೋದಾಗ ವಿದ್ಯುತ್ ಪ್ರವಹಿಸಿದೆ. ತಕ್ಷಣವೇ ಭಯದಿಂದ ನಡುಗಿ ಹೋದ ವಿದ್ಯಾರ್ಥಿಗಳು ಶಿಕ್ಷಕರ ಗಮನಕ್ಕೆ ತಂದಿದ್ದಾರೆ. ಗ್ರಾಮಸ್ಥರು ಪೋಷಕರು ಸೇರಿ ತಕ್ಷಣವೇ ಮೇನ್ ಲೈನ್ ಸಂಪರ್ಕ ಕಡಿತಗೊಳಿಸಿದ್ದಾರೆ. ಈ ಕಾರಣಕ್ಕೆ ವಿದ್ಯಾರ್ಥಿಗಳು ಬಚಾವ್ ಆಗಿದ್ದಾರೆ.
ಕಾಮೆನ್ ಸೆನ್ಸ್ ಇಲ್ವಾ..?
ಅಷ್ಟಕ್ಕೂ, ಗ್ರಾಮಸ್ಥರೇಲ್ಲ ಶಿಕ್ಷಕರ ಬೇಜವಾಬ್ದಾರಿಗೆ ತರಾಟೆಗೆ ತೆಗೆದುಕೊಂಡಿದ್ದಾರಂತೆ. ಇಂತಹ ಅಪಾಯಕಾರಿ ವಿದ್ಯುತ್ ಸಂಪರ್ಕ ಯಾಕೆ ಬೇಕು ಅಂತಾ ನಿಮಗೆ ಕಾಮೆನ್ ಸೆನ್ಸ್ ಇಲ್ವಾ ಅಂತಾ ಶಿಕ್ಷಕರಿಗೆ ಹಿಗ್ಗಾ ಮುಗ್ಗಾ ಜಾಡಿಸಿದ್ದಾರಂತೆ. ಹೀಗಾಗಿ, ಇನ್ಮೇಲೆ ಹೀಗೇಲ್ಲ ಆಗಲ್ಲ ಅಂತಾ ಶಿಕ್ಷಕರು ಅಲವತ್ತು ಕೊಂಡಿದ್ದಾರಂತೆ. ಆದ್ರೆ, ಮಕ್ಕಳಿಗೆ ಏನಾದ್ರೂ ಹೆಚ್ಚು ಕಡಿಮೆ ಆಗಿದ್ದಿದ್ರೆ ಯಾರು ಹೊಣೆ ಅನ್ನೋ ಪ್ರಶ್ನೆ ಎದುರಾಗಿದೆ.