ಮುಂಡಗೋಡ: ಪಟ್ಟಣದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ 72 ನೇ ಜನ್ಮ ದಿನಾಚರಣೆಯ ಸಂಭ್ರಮ ಜೋರಾಗಿತ್ತು. ಇಲ್ಲಿನ ಹಡಪದ ಅಪ್ಪಣ್ಣ ಸಮಾಜದಿಂದ ವಿಶೇಷವಾಗಿ ಮೋದಿಯವರ ಜನ್ಮ ದಿನಾಚರಣೆ ಹಮ್ಮಿಕೊಳ್ಳಲಾಗಿತ್ತು. ಪಟ್ಟಣದ ಜ್ಞಾನಪ್ರಜ್ಞಾ ಅಂಧಮಕ್ಕಳ ವಿಶೇಷ ವಸತಿ ಶಾಲೆಯಲ್ಲಿ ಅಂಧ ಮಕ್ಕಳಿಗೆ ಕ್ಷೌರ ಸೇವೆ ಸಲ್ಲಿಸಲಾಯಿತು. ಹಡಪದ ಅಪ್ಪಣ್ಣ ಸಮಾಜದ ರಾಜ್ಯಾಧ್ಯಕ್ಷ ಸಿದ್ದಪ್ಪ ಹಡಪದ ನೇತೃತ್ವದಲ್ಲಿ ಸುಮಾರು 35 ಅಂಧ ಮಕ್ಕಳಿಗೆ ಉಚಿತವಾಗಿ ಕ್ಷೌರ ಮಾಡಲಾಯಿತು. ಕದಂಬ ಹೇರ್ ಡ್ರೆಸಸ್ ನ ಕ್ಷೌರಿಕ ಬಾಂಧವರು ಅಂಧ ಮಕ್ಕಳಿಗೆ ಬೆಳಿಗಿನಿಂದಲೇ ಕ್ಷೌರ ಮಾಡಿದ್ರು. ನಂತರ ಎಲ್ಲ ಮಕ್ಕಳಿಗೂ ಸ್ನಾನ ಮಾಡಿಸಲಾಯಿತು. ಹತ್ತಾರು ಹಡಪದ ಅಪ್ಪಣ್ಣ ಸಮಾಜದ ಯುವಕರು ಈ ಸೇವೆಯಲ್ಲಿ ಭಾಗಿಯಾಗಿದ್ರು. ಪ್ರಧಾನಿ ನರೇಂದ್ರ ಮೋದಿಯವರು ದೇಶವನ್ನು ಇಡೀ ವಿಶ್ವದ ಬೂಪಟದಲ್ಲಿ ಬೆಳಗುವಂತೆ ಮಾಡಿದ್ದಾರೆ. ಹೀಗಾಗಿ, ಮೋದಿಯವರ ಜನ್ಮ ದಿನ ನಮಗೇಲ್ಲ ಹಬ್ಬದ ಸಂಭ್ರಮವಾಗಿದೆ ಅಂತಾ ಹಡಪದ ಅಪ್ಪಣ್ಣ ಸಮಾಜದ ಮುಖಂಡ ಮಹೇಶ್ ಹಡಪದ ಖುಶಿ ಹಂಚಿಕೊಂಡರು. ಈ ವೇಳೆ ಹಡಪದ ಅಪ್ಪಣ್ಣ ಸಮಾಜದ ಚಂದ್ರು,...
Top Stories
ಮಹಾರಾಷ್ಟ್ರದಿಂದ ಕಬ್ಬು ಕಟಾವಿಗೆ ಬಂದಿದ್ದ ಅಪ್ರಾಪ್ತೆಯನ್ನ ಆ ಹುಡುಗ ಅತ್ಯಾಚಾರ ಮಾಡಿದ್ನಾ..? ಹಾಗಿದ್ರೆ ಕೇಸ್ ಏನಾಯ್ತು..?
ಟ್ಯಾಕ್ಸ್ ವಸೂಲಿಯಲ್ಲಿ ಮುಂಡಗೋಡ ತಾಲೂಕು ರಾಜ್ಯಕ್ಕೇ ಪ್ರಥಮ..! ತಾಪಂ ಗ್ರಾಪಂ ಅಧಿಕಾರಿ, ಸಿಬ್ಬಂದಿಗಳ ಸಾಧನೆ..!!
ಮುಂಡಗೋಡ ಬೆಂಡಿಗೇರಿ ಪೆಟ್ರೊಲ್ ಬಂಕ್ ಹತ್ತಿರ ಬೈಕ್ ಅಪಘಾತ, ವೃದ್ದನ ಕಾಲು ಕಟ್..!
ಮಳಗಿ-ಬನವಾಸಿ ರಸ್ತೆಯಲ್ಲಿ ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ, ಓರ್ವ ಸ್ಥಳದಲ್ಲೇ ಓರ್ವ ಸಾವು, ಮತ್ತೋರ್ವ ಗಂಭೀರ..!
NMD ಕಿಡ್ನ್ಯಾಪ್ ಕೇಸ್, ಮತ್ತೆ ಐವರು ಆರೋಪಿಗಳು ಅಂದರ್, ಪೊಲೀಸರು ಆರೋಪಿಗಳಮದ್ಯೆ ಭಾರೀ ಕಾಳಗ..! ಗುಂಡೇಟು..!
NMD ಜಮೀರ್ ಬಾಯ್ ಸೇಫ್..! ಗದಗ ರಿಂಗ್ ರೋಡಲ್ಲಿ ಬಿಟ್ಟು ಹೋದ ಕಿಡ್ನ್ಯಾಪರ್ಸ್..! ಐವರು ಆರೋಪಿಗಳ ಹೆಡೆಮುರಿ ಕಟ್ಟಿದ್ರಾ ಮುಂಡಗೋಡ ಪೊಲೀಸ್ರು..?
ಮುಂಡಗೋಡಿನ NMD ಗ್ರೂಪ್ ಮಾಲೀಕನ ಮೇಲೆ ದುಷ್ಕರ್ಮಿಗಳ ಅಟ್ಯಾಕ್
ಟಿಬೇಟಿಯನ್ ಕಾಲೋನಿ ಬಳಿ ಬೈಕ್ ಗಳ ನಡುವೆ ಡಿಕ್ಕಿ, ಓರ್ವ ಸವಾರ ಸ್ಥಳದಲ್ಲೇ ಸಾವು, ಮತ್ತೋರ್ವ ಗಂಭೀರ..!
ಮುಂಡಗೋಡಿನ ಮುಲ್ಲಾ ಓಣಿಯ ಬಾವಿಯಲ್ಲಿ ವ್ಯಕ್ತಿಯ ಶವ ಪತ್ತೆ..! ಆತ್ಮಹತ್ಯೆನಾ..?
ಮುಂಡಗೋಡಿನ ಅಂಗನವಾಡಿಯಲ್ಲಿ ಹಾವು ಕಚ್ಚಿದ್ದ ಬಾಲಕಿ ಕಿಮ್ಸ್ ನಲ್ಲಿ ಸಾವು..!
ಮುಂಡಗೋಡಿನಲ್ಲಿ ಅಂಗನವಾಡಿಗೆ ಹೋಗಿದ್ದ ಪುಟ್ಟ ಬಾಲಕಿಗೆ ಕಚ್ಚಿದ ಹಾವು..!
ಹಳೇ ದ್ವೇಷದ ಹಿನ್ನಲೆ ಇಬ್ಬರಿಗೆ ಚಾಕು ಇರಿತ
ಇಂದೂರು ಸೊಸೈಟಿ ಚುನಾವಣೆ: ಭರ್ಜರಿ ಗೆಲುವು ಸಾಧಿಸಿದ ಕಾಂಗ್ರೆಸ್ ಬೆಂಬಲಿತರು..! ರೈತ ಒಕ್ಕೂಟಕ್ಕೆ ಮೂರು ಸ್ಥಾನಗಳು ಮಾತ್ರ..!
ಇಂದೂರು ಸೊಸೈಟಿ ಚುನಾವಣೆ ಅಚ್ಚರಿ ಫಲಿತಾಂಶ: ಮಾಜಿ ಜಿಪಂ ಸದಸ್ಯ ರವಿಗೌಡ ಪಾಟೀಲ್ ಸೋಲು..!
ಚವಡಳ್ಳಿ ಸೊಸೈಟಿ ಚುನಾವಣೆ: 11 ರಲ್ಲಿ ಕಾಂಗ್ರೆಸ್ ಬೆಂಬಲಿತರದ್ದೇ ಭರ್ಜರಿ ಗೆಲುವು..! ಬಿಜೆಪಿಗೆ ದಕ್ಕಿದ್ದು ಒಂದೇ ಒಂದು ಸ್ಥಾನ..!
ಮುಂಡಗೋಡ LSMP ಸೊಸೈಟಿ ಚುನಾವಣೆಯಲ್ಲಿ ಕಾಂಗ್ರೆಸ್ ಮೇಲುಗೈ, 12 ರ ಪೈಕಿ 9 ರಲ್ಲಿ ಕೈ ಬೆಂಬಲಿತರ ಗೆಲುವು..!
ಹುಬ್ಬಳ್ಳಿ ಸಿಲಿಂಡರ್ ಬ್ಲಾಸ್ಟ್: ಮತ್ತೋರ್ವ ಅಯ್ಯಪ್ಪ ಮಾಲಾಧಾರಿ ಸಾವು, ಸಾವಿನ ಸಂಖ್ಯೆ ಮೂರಕ್ಕೆ ಏರಿಕೆ..!
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ವಿಧಿವಶ ಹಿನ್ನೆಲೆ, ಶುಕ್ರವಾರ ಸರ್ಕಾರಿ ರಜೆ ಘೋಷಣೆ..! ಶಾಲಾ ಕಾಲೇಜುಗಳಿಗೆ ರಜೆ..!
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ವಿಧಿವಶ..! ನಾಳೆಯ ಬೆಳಗಾವಿ ಕೈ ಕಾರ್ಯಕ್ರಮ ರದ್ದು..!
ಅತ್ತಿವೇರಿಯ ವ್ಯಕ್ತಿ ಲಕ್ಣ್ಮೇಶ್ವರದಲ್ಲಿ ನೇಣು ಬಿಗಿದು ಆತ್ಮಹತ್ಯೆ..!
ಮುಂಡಗೋಡ: ತಾಲೂಕಿನ ಅತ್ತಿವೇರಿಯ ವ್ಯಕ್ತಿಯೊಬ್ಬ ಗದಗ ಜಿಲ್ಲೆ ಲಕ್ಷ್ಮೇಶ್ವರದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರೋ ಶಂಕೆ ವ್ಯಕ್ತವಾಗಿದೆ. ಅತ್ತಿವೇರಿ ಗ್ರಾಮದ ನಬೀಸಾಬ್ ಮತ್ತಿಗಟ್ಟಿ(32) ಎಂಬುವ ವ್ಯಕ್ತಿಯೇ ಆತ್ಮಹತ್ಯೆ ಮಾಡಿಕೊಂಡವನಾಗಿದ್ದಾನೆ. ತನ್ನ ಪತ್ನಿಯ ತವರು ಮನೆಯಲ್ಲೇ ವಾಸವಾಗಿದ್ದ ನಬೀಸಾಬ್ ಹೀಗೆ ದಿಢಿರನೇ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವೇನು ಅನ್ನೋ ಮಾಹಿತಿ ಲಭ್ಯವಾಗಿಲ್ಲ. ಸದ್ಯ ಲಕ್ಷ್ಮೇಶ್ವರ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಮುಂಡಗೋಡಿನಲ್ಲಿ ಮಾನಸಿಕ ಅಸ್ವಸ್ಥೆಯ ಮೇಲೆ ಅಮಾನುಷ ಹಲ್ಲೆ, ರಸ್ತೆಯಲ್ಲೇ ಚಪ್ಪಲಿಯಿಂದ ಹೊಡೆದ “ಲೇಡಿ” ಯಾರು..?
ಮುಂಡಗೋಡ ಪಟ್ಟಣದಲ್ಲಿ ಅಮಾನವೀಯ ಘಟನೆಯೊಂದು ನಡೆದಿದೆ. ಮಾನಸಿಕ ಅಸ್ವಸ್ಥಳೊಬ್ಬಳನ್ನು ಮಹಿಳೆಯೋರ್ವಳು ಮನಬಂದಂತೆ ಥಳಿಸಿದ್ದಾಳೆ. ಮನಸೋ ಇಚ್ಚೆ ಚಪ್ಪಲಿಯಿಂದ ನಡುರಸ್ತೆಯಲ್ಲೇ ಥಳಿಸಿರೋದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಅಸ್ವಸ್ಥೆಯ ನರಳಾಟ..! ನಿಜ ಅಂದ್ರೆ, ಇದು ನಡೆದದ್ದು ಮುಂಡಗೋಡ ಪಟ್ಟಣದ ಪಟ್ಟಣ ಪಂಚಾಯತಿ ಎದುರಗಡೆ. ಮಾನಸಿಕ ಅಸ್ವಸ್ಥೆಯನ್ನು ಅಟ್ಟಾಡಿಸಿ ಹೊಡೆದಿರೋ ಮಹಿಳೆ ಥೇಟು ರೌಡಿಯಂತೆ ನಡೆದುಕೊಂಡಿದ್ದಾಳೆ. ರಸ್ತೆಯಲ್ಲಿ ಹೊಡೆತ ತಾಳಲಾರದೇ ಮಾನಸಿಕ ಅಸ್ವಸ್ಥೆ ಚೀರಾಟ ಮಾಡುತ್ತಿದ್ದರೂ ಕರುಣೆ ಬಾರದೇ ಆ ಮಹಿಳೆ ಚಪ್ಪಲಿಯಿಂದ ಥಳಿಸಿದ್ದಾಳೆ. ಇನ್ನು ಘಟನೆ ಕಂಡ ದಾರಿಹೋಕನೊಬ್ಬ ಬಿಡಿಸಲು ಹೋದರೆ ಆತನಿಗೂ ಆ ಮಹಿಳೆ ಚಪ್ಪಲಿಯಿಂದ ಹಲ್ಲೆ ಮಾಡಿದ್ದಾಳೆ. ನಿಂತು ನೋಡಿದ ಜನ..! ದುರಂತ, ಅಂದ್ರೆ ಹೀಗೆ ಮಾನಸಿಕ ಅಸ್ವಸ್ಥೆಯ ಮೇಲೆ ಮನಬಂದಂತೆ ಅಟ್ಟಾಡಿಸಿ ಹೊಡೆಯುತ್ತಿದ್ದರೂ ಸಾರ್ವಜನಿಕರು ಮಾತ್ರ ಸಿನಿಮಾ ನೋಡುವಂತೆ ನೋಡಿದ್ದಾರೆ. ಬಿಟ್ಟರೆ ರಕ್ಷಿಸುವ ಗೋಜಿಗೆ ಹೋಗಿಲ್ಲ. ಹೀಗಾಗಿ, ಆ ಮಾನಸಿಕ ಅಸ್ವಸ್ಥೆಯ ತಪ್ಪು ಅದೇನೇ ಇದ್ದರೂ ಹೀಗೇಲ್ಲ ಸಾರ್ವಜನಿಕ ಸ್ಥಳದಲ್ಲೇ ಅಮಾನುಷವಾಗಿ ಹಲ್ಲೆಮಾಡಿರೋದು ಎಷ್ಟು ಸರಿ..? ಈ ಪ್ರಶ್ನೆ...
ಕೊಪ್ಪದ “ಉತ್ತಮ ಶಿಕ್ಷಕಿ” ಗೆ ಹಳೆಯ ವಿದ್ಯಾರ್ಥಿಗಳು ಹಾಗೂ SDMC ಸದಸ್ಯರಿಂದ ಗೌರವ ಸನ್ಮಾನ..!
ಮುಂಡಗೋಡ: ತಾಲೂಕಿನ ಕೊಪ್ಪ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿ ಗೀತಾ ಪಟಗಾರ ಅವರಿಗೆ ಶಿರಸಿ ಶೈಕ್ಷಣಿಕ ಜಿಲ್ಲಾ ಉತ್ತಮ ಶಿಕ್ಷಕಿ ಪ್ರಶಸ್ತಿ ಲಭಿಸಿದೆ. ಹೀಗಾಗಿ, ಇಂದು ಕೊಪ್ಪದ ಹಳೆಯ ವಿದ್ಯಾರ್ಥಿಗಳಿಂದ ಹಾಗೂ SDMC ಸದಸ್ಯರುಗಳಿಂದ ಗೌರವ ಸನ್ಮಾನ ಮಾಡಲಾಯಿತು. ಅಂದಹಾಗೆ, 26 ವರ್ಷಗಳಿಂದ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು, ಕೆಂದಲಗೇರಿ ಶಾಲೆಯಲ್ಲಿ 9 ವರ್ಷ ಹಾಗೂ ಕೊಪ್ಪ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಳೆದ 17 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಶಿರಸಿ ಶೈಕ್ಷಣಿಕ ಜಿಲ್ಲೆ ಉತ್ತಮ ಶಿಕ್ಷಕಿ ಪ್ರಶಸ್ತಿ ಗೀತಾ ಪಟಗಾರ ಅವರಿಗೆ ಲಭಿಸಿರುವುದರಿಂದ ಹಳೆಯ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ. ಹೀಗಾಗಿ, ಗೀತಾ ಪಟಗಾರ ಅವರ ಸೇವೆಯಲ್ಲಿ ಕಲಿತ ಶಾಲೆಯ ಹಳೆಯ ವಿದ್ಯಾರ್ಥಿಗಳಿಂದ ಹಾಗೂ ಶಾಲೆಯ SDMC ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಮತ್ತು ಸದಸ್ಯರು ಹಾಗೂ ಶಾಲಾ ಶಿಕ್ಷಕರಿಂದ ಶಾಲು ಹೊದಿಸಿ ಸನ್ಮಾನಿಸಲಾಗಿದೆ. ಹಾಗೂ ಶಾಲಾ ಮಕ್ಕಳಿಗೆ ಸಿಹಿ ಹಂಚಿ ಹರ್ಷ ವ್ಯಕ್ತಪಡಿಸಿದ್ದಾರೆ....
ಕರ್ನಾಟಕದಲ್ಲಿ “ಹಿಂದಿ ದಿವಸ್” ಆಚರಣೆ ಬೇಡವೇ ಬೇಡ, ಸರ್ಕಾರಕ್ಕೆ ಮುಂಡಗೋಡ ರಾಯಣ್ಣ ಬಳಗದಿಂದ ಹಕ್ಕೊತ್ತಾಯ..!
ಮುಂಡಗೋಡ: ಪಟ್ಟಣದಲ್ಲಿ ಇಂದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದಿಂದ ಹಿಂದಿ ದಿವಸ್ ಆಚರಣೆಗೆ ವಿರೋಧಿಸಿ ಮನವಿ ಅರ್ಪಿಸಲಾಯಿತು. ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಅರ್ಪಿಸಿರೋ ಅಭಿಮಾನಿ ಬಳಗ ಹಿಂದಿ ದಿವಸ್ ಆಚರಣೆ ಬೇಡ ಅಂತಾ ಆಗ್ರಹಿಸಿದ್ದಾರೆ. ಕನ್ನಡ ಒಕ್ಕೂಟ ವ್ಯವಸ್ಥೆ ಮಾರಕವಾಗಿರುವ ಭಾರತದ ಐಕ್ಯತೆಯನ್ನು ಒಡೆಯುತ್ತಿರುವ ಹಿಂದಿ ದಿವಸ ಆಚರಣೆಯನ್ನು ಸ್ಥಗಿತಗೊಳಿಸಬೇಕು, ಒಕ್ಕೂಟ ಭಾರತ ಸಂವಿಧಾನದಲ್ಲಿ 22 ಭಾಷೆಗಳಿಗೂ ಸರಿ ಸಮಾನತೆಯಿದೆ. ಹೀಗಾಗಿ, ಹಿಂದಿ ಭಾಷೆಗೆ ಅಷ್ಟೆ ಪ್ರಾಮುಖ್ಯತೆ ಕೊಡುವುದು ಸರಿಯಲ್ಲ. ನಮ್ಮ ಕನ್ನಡಿಗರ ತೆರಿಗೆ ದುಡ್ಡಿನಲ್ಲಿ ಹಿಂದಿ ದಿವಸ್ ಆಚರಣೆ ಮಾಡುವುದನ್ನು ಕನ್ನಡಿಗರು ಸಹಿಸುವುದಿಲ್ಲ ಹೀಗಾಗಿ, ಹಿಂದಿ ದಿವಸ್ ಆಚರಣೆ ಬೇಡವೇ ಬೇಡ ಅಂತಾ ಹಕ್ಕೊತ್ತಾಯ ಮಾಡಿದ್ದಾರೆ. ಈ ವೇಳೆ ಬಳಗದ ಪ್ರಮುಖರಾದ ಅಯ್ಯಪ್ಪ ಭಜಂತ್ರಿ, ಮಂಜುನಾಥ್ ಕುರುಬರ, ಕೃಷ್ಣ ಕುಂದರಗಿ, ಮೈಲಾರಿ ಕುರುಬರ,ಬಸವರಾಜ್ ಬೋವಿ, ಮಂಜುನಾಥ್ ಕೋಣನಕೇರಿ, ಗಣಪತಿ ಗುಡ್ಡಿಕೇರಿ, ಶಿವು ಲಮಾಣಿ, ಕೈಲಾಶ್ ಗಜಕೋಶ, ಬಸವರಾಜ್ ಮೂಲಿಮನಿ, ಶೆಟ್ಟಪ್ಪ ಬೋವಿ, ಗಣಪತಿ ಬಾಳಂಬೀಡ, ಮಾಂತೇಶ್ ವಾಲ್ಮೀಕಿ...
ಹುಬ್ಬಳ್ಳಿಯ ವರೂರು ಬಳಿ ಭೀಕರ ಕಾರು ಅಪಘಾತ ಮೂವರು ಸಾವು, ಓರ್ವ ಗಂಭೀರ..!
ಹುಬ್ಬಳ್ಳಿ: ವರೂರು ಬಳಿ ಭೀಕರ ರಸ್ತೆ ಅಪಘಾತವಾಗಿದೆ. ರಸ್ತೆ ವಿಭಜಕಕ್ಕೆ ಕಾರು ಡಿಕ್ಕಿಯಾಗಿ ಮೂವರು ಸಾವನ್ನಪ್ಪಿದ್ದಾರೆ. ಹುಬ್ಬಳ್ಳಿ ತಾಲೂಕಿನ ವರೂರು ಗ್ರಾಮದ ಗಣೇಶ ಹೋಟೆಲ್ ಬಳಿ ಘಟನೆ ನಡೆದಿದೆ. ವೇಗವಾಗಿ ಬರುತ್ತಿದ್ದ ಕಾರು, ಚಾಲಕನ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಕಾರು ಪಲ್ಟಿಯಾದ ಪರಿಣಾಮ ಚಾಲಕ, ಮಹಿಳೆ ಸೇರಿ ಮೂವರು ಸಾವನ್ನಪ್ಪಿದ್ದಾರೆ. ದಾವಣಗೆರೆ ಮೂಲದ ಚಾಲಕ ಶಾರೂಖ್ (27), ಸೊಹೇಲ್ (26), ಚಿಕ್ಕಮಗಳೂರು ಜಿಲ್ಲೆ ಆಲದೂರಿನ ಎಚ್.ಕೆ. ಸುಶೀಲಾ (35) ಮೃತಪಟ್ಟವರು. ಘಟನೆಯಲ್ಲಿ ಮತ್ತೋರ್ವನಿಗೆ ಗಂಭೀರ ಗಾಯಾಗಿದೆ. ಅವಲಕ್ಕಿ ವ್ಯಾಪಾರ ಮಾಡಿಕೊಂಡಿದ್ದ ಇವರು ದಾವಣಗೆರೆಯಿಂದ ರಾತ್ರಿ ಹುಬ್ಬಳ್ಳಿ ಕಡೆಗೆ ಬರುತ್ತಿದ್ದಾಗ ಘಟನೆ ನಡೆದಿದೆ. ಅಪಘಾತದ ರಭಸಕ್ಕೆ ಕಾರು ನುಜ್ಜುಗುಜ್ಜಾಗಿದ್ದು ಕಾರಿನಲ್ಲಿದ್ದ ಸೊಹೇಲ್ ಸ್ಥಳದಲ್ಲೆ ಮೃತಪಟ್ಟರೆ, ಗಂಭೀರ ಗಾಯಗೊಂಡಿದ್ದ ಚಾಲಕ ಮತ್ತು ಮಹಿಳೆ ಕಿಮ್ಸ್ ಗೆ ದಾಖಿಲಿಸಿದ ಸ್ವಲ್ಪ ಸಮಯದಲ್ಲೇ ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಹುಬ್ಬಳ್ಳಿ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಮುಂಡಗೋಡ-ಯಲ್ಲಾಪುರ ರಸ್ತೆಯಲ್ಲಿ ಕ್ರೂಸರ್ ವಾಹನ ಪಲ್ಟಿ, ಜಾನಪದ ಕಲಾವಿದರಿಗೆ ಗಾಯ..!
ಮುಂಡಗೋಡ ಯಲ್ಲಾಪುರ ಗಡಿಭಾಗದ ಹುಣಶೆಟ್ಟಿಕೊಪ್ಪದ ಸಮೀಪ ಚಾಲಕನ ನಿಯಂತ್ರಣ ತಪ್ಪಿ ಕ್ರೂಸರ್ ವಾಹನ ಪಲ್ಟಿಯಾಗಿದೆ. ಪರಿಣಾಮ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯವಾಗಿದೆ. ಇನ್ನು, ಯಲ್ಲಾಪುರ ಕಡೆಯಿಂದ ಮುಂಡಗೋಡ ಕಡೆಗೆ ಬರುತಿದ್ದ ಕ್ರೂಸರ್ ವಾಹನ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಚಿಗಳ್ಳಿಯಲ್ಲಿ ನಡೆಯುತ್ತಿರೋ ಕಾರ್ಯಕ್ರಮಕ್ಕೆ ಯಲ್ಲಾಪುರದಿಂದ ಜಾನಪದ ಕಲಾವಿದರನ್ನು ಕರೆತರುತ್ತಿದ್ದ ವಾಹನ ಅಪಘಾತಕ್ಕೆ ಈಡಾಗಿದೆ. 7-8 ಜನ ಜಾನಪದ ಕಲಾವಿದರು ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ಗಾಯಾಳುಗಳನ್ನು ಹುಣಶೆಟ್ಟಿಕೊಪ್ಪದ ಆಸ್ಪತ್ರೆಗೆ ಕರೆದೋಯ್ಯಲಾಗಿದೆ. ರಸ್ತೆ ಮೇಲೆ ಅಡ್ಡಲಾಗಿ ಬಿದ್ದಿದ್ದ ಕ್ರೂಸರ್ ಅನ್ನು ಅಲ್ಲಿನ ಸ್ಥಳೀಯರ ಸಹಾಯದಿಂದ ರಸ್ತೆಯಿಂದ ತೆರವುಗೊಳಿಸಲಾಗಿದೆ.
ಪಾಳಾ ಕಲಕೊಪ್ಪದಲ್ಲಿ ನಾಯಿ ದಾಳಿಗೆ ಬಲಿಯಾಗುತ್ತಿದ್ದ ಜಿಂಕೆ ರಕ್ಷಣೆ, ಮಾನವೀಯತೆ ತೋರಿದ ಗ್ರಾಮಸ್ಥರು..!
ಮುಂಡಗೋಡ: ತಾಲೂಕಿನ ಪಾಳಾ ಗ್ರಾಮದ ಕಲಕೊಪ್ಪದ ಪೆಟ್ರೋಲ್ ಬಂಕ್ ಸಮೀಪ ನಾಯಿಗಳ ದಾಳಿಯಿಂದ ಜಿಂಕೆಯನ್ನ ರಕ್ಷಣೆ ಮಾಡಲಾಗಿದೆ. ಈ ಮೂಲಕ ಗ್ರಾಮಸ್ಥರು ಮಾನವೀಯತೆ ತೋರಿದ್ದಾರೆ. ಕಾಡಿನಿಂದ ಆಹಾರ ಅರಸಿ ನಾಡಿಗೆ ಬಂದಿದ್ದ ಜಿಂಕೆಯನ್ನು, ಗ್ರಾಮದ ನಾಯಿಗಳು ಅಟ್ಟಿಸಿಕೊಂಡು ಹೋಗುತಿದ್ದವು, ಅದನ್ನು ಕಂಡ ಗ್ರಾಮಸ್ಥರು ನಾಯಿಗಳಿಂದ ಜಿಂಕೆಯನ್ನು ಬಚಾವ್ ಮಾಡಿದ್ದಾರೆ. ನಂತರ ಅರಣ್ಯ ರಕ್ಷಕ ನಾರಾಯಣ ಒಣಿಕೇರಿ, ಯಲ್ಲಪ್ಪ ಬಳ್ಳಾರಿ ಹಾಗೂ ಸಿಬ್ಬಂದಿಗಳು ಮತ್ತು ಗ್ರಾಮದ ಕುಮಾರ್, ಜಗದೀಶ್, ಅಶೋಕ್ ಮುಂತಾದವರು ಸೇರಿ ಜಿಂಕೆಯನ್ನು ರಕ್ಷಿಸಿ ನಾಯಿಗಳ ದಾಳಿಯಿಂದ ಗಾಯಗೊಂಡ ಜಿಂಕೆಗೆ ಸೂಕ್ತ ಚಿಕಿತ್ಸೆ ನೀಡಿ ಕಾಡಿಗೆ ಬಿಟ್ಟು ಬಂದಿದ್ದಾರೆ.
ಉತ್ತರ ಕನ್ನಡ ಜಿಲ್ಲೆಗೆ ರಾತ್ರೋ ರಾತ್ರಿ ಎಂಟ್ರಿ ಕೊಟ್ರಾ ಪ್ರಧಾನಿ ಮೋದಿ..?
ಕುಮಟಾ: ಅಲ್ಲಿ ಎಲ್ಲಿ ನೋಡಿದರಲ್ಲಿ ಕೇಕೆ, ಚಪ್ಪಾಳೆ, ಜಯಘೋಷಗಳು..! ಮೋದಿ, ಮೋದಿ, ಮೋದಿ ಅನ್ನೋ ಅಭಿಮಾನದ ಹರ್ಷೋದ್ಘಾರ. ಅಭಿಮಾನಿಗಳತ್ತ ಕೈ ಬೀಸುತ್ತಿದ್ದ ಪ್ರಧಾನಿ ನರೇಂದ್ರ ಮೋದಿಯವರಿಗೆ ಜಯಘೋಷಗಳ ಹೂಮಳೆ. ಇದು ಕಂಡು ಬಂದಿದ್ದು ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ.. ಅಂದಹಾಗೆ, ಉತ್ತರ ಕನ್ನಡ ಜಿಲ್ಲೆಗೆ ಪ್ರಧಾನಿ ನರೇಂದ್ರ ಮೋದಿ ರಾತ್ರೊ ರಾತ್ರಿ ಎಂಟ್ರಿ ಕೊಟ್ಟಿದ್ದಾರೆ. ಸಾವಿರಾರು ಅಭಿಮಾನಿಗಳ ಮನಗೆದ್ದಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಸಾರ್ವಜನಿಕ ಗಣಪತಿಯ ವಿಸರ್ಜನಾ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದಾರೆ ಪ್ರಧಾನಿ ಮೋದಿ..! ಅಷ್ಟಕ್ಕೂ ಇವ್ರು ಅಸಲೀ ಮೋದಿ ಅಂತಾ ಅನಕೊಂಡ್ರಾ..? ಖಂಡಿತ ಅಲ್ಲ. ಥೇಟು ಪ್ರಧಾನಿ ನರೇಂದ್ರ ಮೋದಿಯವರನ್ನೇ ಹೋಲುವ ವ್ಯಕ್ತಿ ಇವ್ರು. ಅಂದಹಾಗೆ, ಇವ್ರ ಹೆಸ್ರು ಸದಾನಂದ್ ನಾಯಕ್, ಮೂಲತಃ ಉಡುಪಿ ಜಿಲ್ಲೆಯವರು. ಥೇಟು ನರೇಂದ್ರ ಮೋದಯವರಂತೆ ಕಾಣುವ ಈ ಸದಾನಂದ ನಾಯಕರು ಕೈ ಬೀಸುತ್ತಿದ್ದಂತೆ ಜನಸ್ತೋಮ ನಿಬ್ಬೆರಗಾಗಿತ್ತು. ಮೋದಿಯವರೇ ಎದುರಿಗೆ ನಿಂತ ಭಾಸವಾಗಿತ್ತು. ಹೀಗಾಗಿ, ಈ ವಿಡಿಯೊ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು...
ಮಜ್ಜಿಗೇರಿ ಕ್ರಾಸ್ ಬಳಿ ಅಪಘಾತದಲ್ಲಿ ಗಾಯಗೊಂಡಿದ್ದ ಜೇನುಮುರಿಯ ಬೈಕ್ ಸವಾರ ಸಾವು..!
ಮುಂಡಗೋಡ ತಾಲೂಕಿನ ಬಾಚಣಕಿ ಡ್ಯಾಂ ಬಳಿಯ ಮಜ್ಜಿಗೇರಿ ಕ್ರಾಸ್ ಹತ್ತಿರ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಬೈಕ್ ಸವಾರ ಮೃತಪಟ್ಟಿದ್ದಾನೆ. ಹುಬ್ಬಳ್ಳಿಯ ಕಿಮ್ಸ್ ನಲ್ಲಿ ಇಂದು ಬೆಳಿಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ ಅಂತಾ ತಿಳಿದು ಬಂದಿದೆ. ಕಾರು ಹಾಗೂ ಬೈಕ್ ನಡುವೆ ಮುಖಾ ಮುಕಿ ಡಿಕ್ಕಿಯಾದ ಪರಿಣಾಮ, ಜೇನಮುರಿ ಗ್ರಾಮದ ಬಸವರಾಜ್ ಯಲ್ಲಪ್ಪ ಶ್ಯಾಡಂಬಿ(36) ಎಂಬುವವ ಗಂಭೀರ ಗಾಯಗೊಂಡಿದ್ದ. ಗಾಯಾಳುವನ್ನು 108 ಅಂಬ್ಯಲೆನ್ಸ್ ಮೂಲಕ ಮುಂಡಗೋಡ ತಾಲೂಕಾಸ್ಪತ್ರೆಗೆ ರವಾನಿಸಲಾಗಿತ್ತು. ಪ್ರಥಮ ಚಿಕಿತ್ಸೆ ನಂತರ ಹೆಚ್ಚಿನ ಚಿಕಿತ್ಸೆಗಾಗಿ, ಹುಬ್ಬಳ್ಳಿಯ ಕಿಮ್ಸ್ ಗೆ ರವಾನಿಸಲಾಗಿತ್ತು. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.