ಮುಂಡಗೋಡ: ಪಟ್ಟಣದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ 72 ನೇ ಜನ್ಮ ದಿನಾಚರಣೆಯ ಸಂಭ್ರಮ ಜೋರಾಗಿತ್ತು. ಇಲ್ಲಿನ ಹಡಪದ ಅಪ್ಪಣ್ಣ ಸಮಾಜದಿಂದ ವಿಶೇಷವಾಗಿ ಮೋದಿಯವರ ಜನ್ಮ ದಿನಾಚರಣೆ ಹಮ್ಮಿಕೊಳ್ಳಲಾಗಿತ್ತು. ಪಟ್ಟಣದ ಜ್ಞಾನಪ್ರಜ್ಞಾ ಅಂಧಮಕ್ಕಳ ವಿಶೇಷ ವಸತಿ ಶಾಲೆಯಲ್ಲಿ ಅಂಧ ಮಕ್ಕಳಿಗೆ ಕ್ಷೌರ ಸೇವೆ ಸಲ್ಲಿಸಲಾಯಿತು.
ಹಡಪದ ಅಪ್ಪಣ್ಣ ಸಮಾಜದ ರಾಜ್ಯಾಧ್ಯಕ್ಷ ಸಿದ್ದಪ್ಪ ಹಡಪದ ನೇತೃತ್ವದಲ್ಲಿ ಸುಮಾರು 35 ಅಂಧ ಮಕ್ಕಳಿಗೆ ಉಚಿತವಾಗಿ ಕ್ಷೌರ ಮಾಡಲಾಯಿತು. ಕದಂಬ ಹೇರ್ ಡ್ರೆಸಸ್ ನ ಕ್ಷೌರಿಕ ಬಾಂಧವರು ಅಂಧ ಮಕ್ಕಳಿಗೆ ಬೆಳಿಗಿನಿಂದಲೇ ಕ್ಷೌರ ಮಾಡಿದ್ರು. ನಂತರ ಎಲ್ಲ ಮಕ್ಕಳಿಗೂ ಸ್ನಾನ ಮಾಡಿಸಲಾಯಿತು. ಹತ್ತಾರು ಹಡಪದ ಅಪ್ಪಣ್ಣ ಸಮಾಜದ ಯುವಕರು ಈ ಸೇವೆಯಲ್ಲಿ ಭಾಗಿಯಾಗಿದ್ರು.
ಪ್ರಧಾನಿ ನರೇಂದ್ರ ಮೋದಿಯವರು ದೇಶವನ್ನು ಇಡೀ ವಿಶ್ವದ ಬೂಪಟದಲ್ಲಿ ಬೆಳಗುವಂತೆ ಮಾಡಿದ್ದಾರೆ. ಹೀಗಾಗಿ, ಮೋದಿಯವರ ಜನ್ಮ ದಿನ ನಮಗೇಲ್ಲ ಹಬ್ಬದ ಸಂಭ್ರಮವಾಗಿದೆ ಅಂತಾ ಹಡಪದ ಅಪ್ಪಣ್ಣ ಸಮಾಜದ ಮುಖಂಡ ಮಹೇಶ್ ಹಡಪದ ಖುಶಿ ಹಂಚಿಕೊಂಡರು.
ಈ ವೇಳೆ ಹಡಪದ ಅಪ್ಪಣ್ಣ ಸಮಾಜದ ಚಂದ್ರು, ವಿನಾಯಕ, ಪ್ರವೀಣ್, ನಿತಿಶ್, ಜಯವೀರ್, ಬಸವರಾಜ್, ಅಭಿಷೇಕ್, ಅಶೋಕ, ಲೋಹಿತ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.