ಮುಂಡಗೋಡ-ಯಲ್ಲಾಪುರ ರಸ್ತೆಯಲ್ಲಿ ಕ್ರೂಸರ್ ವಾಹನ ಪಲ್ಟಿ, ಜಾನಪದ ಕಲಾವಿದರಿಗೆ ಗಾಯ..!


ಮುಂಡಗೋಡ ಯಲ್ಲಾಪುರ ಗಡಿಭಾಗದ
ಹುಣಶೆಟ್ಟಿಕೊಪ್ಪದ ಸಮೀಪ ಚಾಲಕನ ನಿಯಂತ್ರಣ ತಪ್ಪಿ ಕ್ರೂಸರ್ ವಾಹನ ಪಲ್ಟಿಯಾಗಿದೆ‌. ಪರಿಣಾಮ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯವಾಗಿದೆ.

ಇನ್ನು, ಯಲ್ಲಾಪುರ ಕಡೆಯಿಂದ ಮುಂಡಗೋಡ ಕಡೆಗೆ ಬರುತಿದ್ದ ಕ್ರೂಸರ್ ವಾಹನ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ ಎನ್ನಲಾಗಿದೆ‌‌. ಚಿಗಳ್ಳಿಯಲ್ಲಿ ನಡೆಯುತ್ತಿರೋ ಕಾರ್ಯಕ್ರಮಕ್ಕೆ ಯಲ್ಲಾಪುರದಿಂದ ಜಾನಪದ ಕಲಾವಿದರನ್ನು ಕರೆತರುತ್ತಿದ್ದ ವಾಹನ ಅಪಘಾತಕ್ಕೆ ಈಡಾಗಿದೆ. 7-8 ಜನ ಜಾನಪದ ಕಲಾವಿದರು ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ.

ಗಾಯಾಳುಗಳನ್ನು ಹುಣಶೆಟ್ಟಿಕೊಪ್ಪದ ಆಸ್ಪತ್ರೆಗೆ ಕರೆದೋಯ್ಯಲಾಗಿದೆ. ರಸ್ತೆ ಮೇಲೆ ಅಡ್ಡಲಾಗಿ ಬಿದ್ದಿದ್ದ ಕ್ರೂಸರ್ ಅನ್ನು ಅಲ್ಲಿನ ಸ್ಥಳೀಯರ ಸಹಾಯದಿಂದ ರಸ್ತೆಯಿಂದ ತೆರವುಗೊಳಿಸಲಾಗಿದೆ‌.

error: Content is protected !!