ಕರ್ನಾಟಕದಲ್ಲಿ “ಹಿಂದಿ ದಿವಸ್” ಆಚರಣೆ ಬೇಡವೇ ಬೇಡ, ಸರ್ಕಾರಕ್ಕೆ ಮುಂಡಗೋಡ ರಾಯಣ್ಣ ಬಳಗದಿಂದ ಹಕ್ಕೊತ್ತಾಯ..!

ಮುಂಡಗೋಡ: ಪಟ್ಟಣದಲ್ಲಿ ಇಂದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದಿಂದ ಹಿಂದಿ ದಿವಸ್ ಆಚರಣೆಗೆ ವಿರೋಧಿಸಿ ಮನವಿ ಅರ್ಪಿಸಲಾಯಿತು. ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಅರ್ಪಿಸಿರೋ ಅಭಿಮಾನಿ ಬಳಗ ಹಿಂದಿ ದಿವಸ್ ಆಚರಣೆ ಬೇಡ ಅಂತಾ ಆಗ್ರಹಿಸಿದ್ದಾರೆ.

ಕನ್ನಡ ಒಕ್ಕೂಟ ವ್ಯವಸ್ಥೆ ಮಾರಕವಾಗಿರುವ ಭಾರತದ ಐಕ್ಯತೆಯನ್ನು ಒಡೆಯುತ್ತಿರುವ ಹಿಂದಿ ದಿವಸ ಆಚರಣೆಯನ್ನು ಸ್ಥಗಿತಗೊಳಿಸಬೇಕು, ಒಕ್ಕೂಟ ಭಾರತ ಸಂವಿಧಾನದಲ್ಲಿ 22 ಭಾಷೆಗಳಿಗೂ ಸರಿ ಸಮಾನತೆಯಿದೆ. ಹೀಗಾಗಿ, ಹಿಂದಿ ಭಾಷೆಗೆ ಅಷ್ಟೆ ಪ್ರಾಮುಖ್ಯತೆ ಕೊಡುವುದು ಸರಿಯಲ್ಲ. ನಮ್ಮ ಕನ್ನಡಿಗರ ತೆರಿಗೆ ದುಡ್ಡಿನಲ್ಲಿ ಹಿಂದಿ ದಿವಸ್ ಆಚರಣೆ ಮಾಡುವುದನ್ನು ಕನ್ನಡಿಗರು ಸಹಿಸುವುದಿಲ್ಲ ಹೀಗಾಗಿ, ಹಿಂದಿ ದಿವಸ್ ಆಚರಣೆ ಬೇಡವೇ ಬೇಡ ಅಂತಾ ಹಕ್ಕೊತ್ತಾಯ ಮಾಡಿದ್ದಾರೆ.

ಈ ವೇಳೆ ಬಳಗದ ಪ್ರಮುಖರಾದ
ಅಯ್ಯಪ್ಪ ಭಜಂತ್ರಿ, ಮಂಜುನಾಥ್ ಕುರುಬರ, ಕೃಷ್ಣ ಕುಂದರಗಿ, ಮೈಲಾರಿ ಕುರುಬರ,ಬಸವರಾಜ್ ಬೋವಿ, ಮಂಜುನಾಥ್ ಕೋಣನಕೇರಿ, ಗಣಪತಿ ಗುಡ್ಡಿಕೇರಿ, ಶಿವು ಲಮಾಣಿ, ಕೈಲಾಶ್ ಗಜಕೋಶ, ಬಸವರಾಜ್ ಮೂಲಿಮನಿ,
ಶೆಟ್ಟಪ್ಪ ಬೋವಿ, ಗಣಪತಿ ಬಾಳಂಬೀಡ, ಮಾಂತೇಶ್ ವಾಲ್ಮೀಕಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

error: Content is protected !!