ಮಜ್ಜಿಗೇರಿ ಕ್ರಾಸ್ ಬಳಿ ಅಪಘಾತದಲ್ಲಿ ಗಾಯಗೊಂಡಿದ್ದ ಜೇನುಮುರಿಯ ಬೈಕ್ ಸವಾರ ಸಾವು..!

ಮುಂಡಗೋಡ ತಾಲೂಕಿನ ಬಾಚಣಕಿ ಡ್ಯಾಂ ಬಳಿಯ ಮಜ್ಜಿಗೇರಿ ಕ್ರಾಸ್ ಹತ್ತಿರ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಬೈಕ್ ಸವಾರ ಮೃತಪಟ್ಟಿದ್ದಾನೆ. ಹುಬ್ಬಳ್ಳಿಯ ಕಿಮ್ಸ್ ನಲ್ಲಿ ಇಂದು ಬೆಳಿಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ ಅಂತಾ ತಿಳಿದು ಬಂದಿದೆ.

ಕಾರು ಹಾಗೂ ಬೈಕ್ ನಡುವೆ ಮುಖಾ ಮುಕಿ ಡಿಕ್ಕಿಯಾದ ಪರಿಣಾಮ, ಜೇನಮುರಿ ಗ್ರಾಮದ ಬಸವರಾಜ್ ಯಲ್ಲಪ್ಪ ಶ್ಯಾಡಂಬಿ(36) ಎಂಬುವವ ಗಂಭೀರ ಗಾಯಗೊಂಡಿದ್ದ. ಗಾಯಾಳುವನ್ನು 108 ಅಂಬ್ಯಲೆನ್ಸ್ ಮೂಲಕ ಮುಂಡಗೋಡ ತಾಲೂಕಾಸ್ಪತ್ರೆಗೆ ರವಾನಿಸಲಾಗಿತ್ತು. ಪ್ರಥಮ ಚಿಕಿತ್ಸೆ ನಂತರ ಹೆಚ್ಚಿನ ಚಿಕಿತ್ಸೆಗಾಗಿ, ಹುಬ್ಬಳ್ಳಿಯ ಕಿಮ್ಸ್ ಗೆ ರವಾನಿಸಲಾಗಿತ್ತು.

ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

error: Content is protected !!