ಉತ್ತರ ಕನ್ನಡ ಜಿಲ್ಲೆಗೆ ರಾತ್ರೋ ರಾತ್ರಿ ಎಂಟ್ರಿ ಕೊಟ್ರಾ ಪ್ರಧಾನಿ ಮೋದಿ..?


ಕುಮಟಾ: ಅಲ್ಲಿ ಎಲ್ಲಿ ನೋಡಿದರಲ್ಲಿ ಕೇಕೆ, ಚಪ್ಪಾಳೆ, ಜಯಘೋಷಗಳು..! ಮೋದಿ, ಮೋದಿ, ಮೋದಿ ಅನ್ನೋ ಅಭಿಮಾನದ ಹರ್ಷೋದ್ಘಾರ. ಅಭಿಮಾನಿಗಳತ್ತ ಕೈ ಬೀಸುತ್ತಿದ್ದ ಪ್ರಧಾನಿ ನರೇಂದ್ರ ಮೋದಿಯವರಿಗೆ ಜಯಘೋಷಗಳ ಹೂಮಳೆ. ಇದು ಕಂಡು ಬಂದಿದ್ದು ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ..

ಅಂದಹಾಗೆ, ಉತ್ತರ ಕನ್ನಡ ಜಿಲ್ಲೆಗೆ ಪ್ರಧಾನಿ ನರೇಂದ್ರ ಮೋದಿ ರಾತ್ರೊ ರಾತ್ರಿ ಎಂಟ್ರಿ ಕೊಟ್ಟಿದ್ದಾರೆ. ಸಾವಿರಾರು ಅಭಿಮಾನಿಗಳ ಮನಗೆದ್ದಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಸಾರ್ವಜನಿಕ ಗಣಪತಿಯ ವಿಸರ್ಜನಾ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದಾರೆ‌ ಪ್ರಧಾನಿ ಮೋದಿ..!

ಅಷ್ಟಕ್ಕೂ ಇವ್ರು ಅಸಲೀ ಮೋದಿ ಅಂತಾ ಅನಕೊಂಡ್ರಾ..? ಖಂಡಿತ ಅಲ್ಲ. ಥೇಟು ಪ್ರಧಾನಿ ನರೇಂದ್ರ ಮೋದಿಯವರನ್ನೇ ಹೋಲುವ ವ್ಯಕ್ತಿ ಇವ್ರು‌. ಅಂದಹಾಗೆ, ಇವ್ರ ಹೆಸ್ರು ಸದಾನಂದ್ ನಾಯಕ್, ಮೂಲತಃ ಉಡುಪಿ ಜಿಲ್ಲೆಯವರು. ಥೇಟು ನರೇಂದ್ರ ಮೋದಯವರಂತೆ ಕಾಣುವ ಈ ಸದಾನಂದ ನಾಯಕರು ಕೈ ಬೀಸುತ್ತಿದ್ದಂತೆ ಜನಸ್ತೋಮ ನಿಬ್ಬೆರಗಾಗಿತ್ತು. ಮೋದಿಯವರೇ ಎದುರಿಗೆ ನಿಂತ ಭಾಸವಾಗಿತ್ತು. ಹೀಗಾಗಿ, ಈ ವಿಡಿಯೊ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ.