ದಾವಣಗೇರೆಯಲ್ಲಿ ಕೊಲೆ‌ಮಾಡಿ ಶಿಗ್ಗಾವಿಯಲ್ಲಿ ಸರೆಂಡರ್ ಆದ ಶಿವಮೊಗ್ಗದ ಆರೋಪಿಗಳು..!

ದಾವಣಗೇರೆಯಲ್ಲಿ ಕೊಲೆ‌ಮಾಡಿ ಶಿಗ್ಗಾವಿಯಲ್ಲಿ ಸರೆಂಡರ್ ಆದ ಶಿವಮೊಗ್ಗದ ಆರೋಪಿಗಳು..!

ಶಿಗ್ಗಾವಿ: ದಾವಣಗೇರೆ ಜಿಲ್ಲೆಯಲ್ಲಿ ಮರ್ಡರ್ ಮಾಡಿ ತಲೆಮರೆಸಿಕೊಂಡಿದ್ದ ನಾಲ್ವರು ಆರೋಪಿಗಳು ಶಿಗ್ಗಾವಿ ಪೊಲೀಸರಿಗೆ ಶರಣಾಗಿದ್ದಾರೆ. ದಾವಣಗೆರೆ ಜಿಲ್ಲೆ ಚೀಲೂರು ಸಮೀಪದ ಗೋವಿನ ಕೋವಿ ಬಳಿ ನಿ‌ನ್ನೆ ಸಂಜೆ ಆಂಜನೇಯ ಎಂಬಾತನ ಹತ್ಯೆಯಾಗಿತ್ತು. ಅಂದಹಾಗೆ, ಹಂದಿ ಅಣ್ಣಿ ಕೊಲೆ ಆರೋಪಿಗಳಾದ ಆಂಜನೇಯ ಹಾಗೂ ಮಧು ಎಂಬುವರ ಮೇಲೆ ನಿನ್ನೆ ಸಂಜೆ ಹಲ್ಲೆ ನಡೆದಿತ್ತು. ಈ ವೇಳೆ ಆಂಜನೇಯ ಎಂಬುವವರ ಸ್ಥಳದಲ್ಲೇ ಮೃತಪಟ್ಟಿದ್ದರೆ, ಮಧು ಎಂಬುವವ ಗಂಭೀರವಾಗಿ ಗಾಯಗೊಂಡು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಆಂಜನೇಯನನ್ನು ಕೊಲೆ ಮಾಡಿದ ಆರೋಪಿಗಳು ನಿನ್ನೆ ರಾತ್ರಿಯೇ ಶಿಗ್ಗಾವಿಗೆ ತೆರಳಿ ಪೊಲೀಸರ ಎದುರು ಶರಣಾಗಿದ್ದಾರೆ ಎನ್ನಲಾಗಿದೆ. ಸುನೀಲ್ ಅಲಿಯಾಸ್ ತಮಿಳ್ ಸುನೀಲ್, ಅಭಿಲಾಷ್, ವೆಂಕಟೇಶ್ ಮತ್ತು ಪವನ್ ಎಂಬವರು ಸರೆಂಡರ್ ಆದವರು. ಈ ನಾಲ್ವರು ಶಿವಮೊಗ್ಗ ಮೂಲದವರಾಗಿದ್ದು, ಹಂದಿ ಅಣ್ಣ ಸಹಚರರು ಎನ್ನಲಾಗುತ್ತಿದೆ.

ಮುಂಡಗೋಡ ಅರಣ್ಯದಲ್ಲಿ ಗಾಯಗೊಂಡಿದ್ದ ಆನೆ ಕಲಘಟಗಿ ಕಾಡಲ್ಲಿ ಸಾವು..!

ಮುಂಡಗೋಡ ಅರಣ್ಯದಲ್ಲಿ ಗಾಯಗೊಂಡಿದ್ದ ಆನೆ ಕಲಘಟಗಿ ಕಾಡಲ್ಲಿ ಸಾವು..!

ಮುಂಡಗೋಡ: ಕಳೆದ ಹಲವು ದಿನಗಳಿಂದ ಮುಂಡಗೋಡ ತಾಲೂಕಿನ ಅರಣ್ಯ ಪ್ರದೇಶದಲ್ಲಿ ಗಾಯದಿಂದ ಬಳಲುತ್ತಿದ್ದ 4 ವರ್ಷದ ಗಂಡು ಆನೆ ಮೃತಪಟ್ಟಿದೆ. ಕಲಘಟಗಿ ತಾಲೂಕಿನ ಸೂಳಿಕಟ್ಟಿ ಗ್ರಾಪಂ ವ್ಯಾಪ್ತಿಯ ಮಸಳಿಕಟ್ಟಿ ಅರಣ್ಯ ಪ್ರದೇಶದಲ್ಲಿ ಗಂಡು ಆನೆ ಸಾವನ್ನಪ್ಪಿದೆ. ಮುಂಡಗೋಡ ತಾಲೂಕಿನ ಅರಣ್ಯ ಪ್ರದೇಶದಲ್ಲಿ ಗಾಯಗೊಂಡಿದ್ದ ಆನೆಗೆ ಚಿಕಿತ್ಸೆ ನೀಡಲು ಪ್ರಯತ್ನಿಸಲಾಗಿತ್ತು. ಆದರೆ ಅಲ್ಲಿಂದ ತಪ್ಪಿಸಿಕೊಂಡು ಕಲಘಟಗಿ ತಾಲೂಕಿನ ಅರಣ್ಯಕ್ಕೆ ಬಂದಿತ್ತು. ಸೊಂಡಿಲು ಬಳಿ ಗಾಯಗೊಂಡಿದ್ದ ಆನೆಗೆ ಆಹಾರ ಸೇವಿಸಲು ಕಷ್ಟಪಡುತ್ತಿತ್ತು. ಇದನ್ನು ಗಮನಿಸಿದ‌ ಅರಣ್ಯ ಸಿಬ್ಬಂದಿ ಕಳೆದ ಮೂರು ದಿನಗಳಿಂದ ಚಿಕಿತ್ಸೆ ನೀಡಿ ಆರೈಕೆ ಮಾಡಿದ್ದರು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಆನೆ ಮೃತಪಟ್ಟಿದೆ. ಅಂದಹಾಗೆ, ಮೂರು ತಿಂಗಳ ಹಿಂದೆ ಕಲಘಟಗಿ ಅರಣ್ಯ ಪ್ರದೇಶದಲ್ಲಿ ಇಂತದ್ದೇ ಆನೆಮರಿಯೊಂದು ಮೃತಪಟ್ಟಿತ್ತು. ಹೀಗಾಗಿ ಇದು ಎರಡನೇ ಘಟನೆ ಆಗಿದೆ. ಮೃತ ಆನೆ 4 ವರ್ಷದ ಗಂಡು ಸಲಗ ಅರಣ್ಯದಲ್ಲಿ ಆಹಾರ ಸೇವನೆ ವೇಳೆ ಸೊಂಡಿಲು ಗಾಯ ಮಾಡಿಕೊಂಡಿತ್ತು. ಅರಣ್ಯ ಸಿಬ್ಬಂದಿ ಚಿಕಿತ್ಸೆ-ಆರೈಕೆ ನೀಡಿದ್ದರು. ಇನ್ನೂ ಹೆಚ್ಚಿನ ಚಿಕಿತ್ಸೆಗೆ...

ಮುಂಡಗೋಡ ಪೊಲೀಸರ ಕಾರ್ಯಾಚರಣೆ, ಮಳಗಿಯಲ್ಲಿ ಗಾಂಜಾ ಸಾಗಿಸುತ್ತಿದ್ದವ ಅಂದರ್..!

ಮುಂಡಗೋಡ ಪೊಲೀಸರ ಕಾರ್ಯಾಚರಣೆ, ಮಳಗಿಯಲ್ಲಿ ಗಾಂಜಾ ಸಾಗಿಸುತ್ತಿದ್ದವ ಅಂದರ್..!

ಮುಂಡಗೋಡ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದ ಆರೋಪಿಯನ್ನು ಎಳೆದು ತಂದಿದ್ದಾರೆ. ಮಳಗಿ ಸಮೀಪದ ದಾಸನಕೊಪ್ಪ ರಸ್ತೆಯಲ್ಲಿ ಗಾಂಜಾ ಸಾಗಾಟ ‌ಮಾಡುತ್ತಿದ್ದ ಓರ್ವ ಆರೋಪಿ ಸೇರಿದಂತೆ ಅರ್ಧ ಕೇಜಿಯಷ್ಟು ಗಾಂಜಾ ವಶ ಪಡಿಸಿಕೊಳ್ಳಲಾಗಿದೆ. ಖಚಿತ ಮಾಹಿತಿ ಆಧಾರದಲ್ಲಿ ದಾಳಿ‌ ಮಾಡಿರೋ ಮುಂಡಗೋಡ ಪೊಲೀಸರು, ಶಿವಮೊಗ್ಗ ಜಿಲ್ಲೆ ಸಾಗರದ ಮಹಮದ್ ಫಾರುಕ್ ತಂದೆ ನಜೀರ್ ಅಹಮ್ಮದ್ ಅರಮನಿಕೆರಿ ಎಂಬಾತನನ್ನು ಬಂಧಿಸಿದ್ದಾರೆ. ಈತನಿಂದ ಅರ್ದ ಕೇಜಿ ಗಾಂಜಾ ವಶಕ್ಕೆ ಪಡೆಯಲಾಗಿದೆ. ಪಿಐ ಸಿದ್ದಪ್ಪ ಸಿಮಾನಿ ನೇತೃತ್ವದಲ್ಲಿ ಪಿಎಸ್ಐ ಯಲ್ಲಾಲಿಂಗ ಕುನ್ನೂರು, ಕ್ರೈಂ ಪಿಎಸ್ ಐ ಎನ್.ಡಿ.ಜಕ್ಕಣ್ಣವರ್, ಸಿಬ್ಬಂದಿಗಳಾದ ರಾಜೇಶ್ ನಾಯಕ್, ಕೊಟೇಶ್ ನಾಗರಳ್ಳಿ, ಅಣ್ಣಪ್ಪ ಬುಡಗೇರ, ತಿರುಪತಿ ಚೌಡಣ್ಣವರ್, ಮಹಾಂತೇಶ್ ಮುದೋಳ್, ಸಂಜು ರಾಠೋಡ್ ದಾಳಿಯಲ್ಲಿ ಭಾಗಿಯಾಗಿದ್ರು.

ಮಾ.13 ರಂದು ನಡೆಯಬೇಕಿದ್ದ 5 ಮತ್ತು 8ನೇ ತರಗತಿಯ ಪಬ್ಲಿಕ್ ಪರೀಕ್ಷೆ ಮುಂದೂಡಿಕೆ..!

ಮಾ.13 ರಂದು ನಡೆಯಬೇಕಿದ್ದ 5 ಮತ್ತು 8ನೇ ತರಗತಿಯ ಪಬ್ಲಿಕ್ ಪರೀಕ್ಷೆ ಮುಂದೂಡಿಕೆ..!

ಬೆಂಗಳೂರು : 5 ಮತ್ತು 8 ನೇ ತರಗತಿಯ ಪಬ್ಲಿಕ್ ಪರೀಕ್ಷೆ ರದ್ದುಗೊಳಿಸಿ ಹೈಕೋರ್ಟ್ ಏಕಸದಸ್ಯ ಪೀಠ ಶುಕ್ರವಾರ ಆದೇಶ ಹೊರಡಿಸಿತ್ತು. ಹೈಕೋರ್ಟ್ ಆದೇಶ ಪ್ರಶ್ನಿಸಿ ಸರ್ಕಾರ ಮೇಲ್ಮನವಿ ಸಲ್ಲಿಸಿದ್ದು, ಈ ಬಗ್ಗೆ ಹೈಕೋರ್ಟ್ ಇಂದು ತುರ್ತು ವಿಚಾರಣೆ ನಡೆಸಿತು. ಏಕಸದಸ್ಯ ಪೀಠದ ಆದೇಶಕ್ಕೆ ತಡೆ ನೀಡಲು ಹೈಕೋರ್ಟ್‌ ನಿರಾಕರಿಸಿದೆ. ಈ ವಿಚಾರಣೆಯನ್ನು ಮಾ.14 ಕ್ಕೆ ಮುಂದೂಡಿ ಆದೇಶಿಸಿದೆ. ಈ ನಡುವೆ ಮಾ.13 ರಂದು ನಡೆಯಬೇಕಿದ್ದ 5 ಮತ್ತು 8ನೇ ತರಗತಿಯ ಪಬ್ಲಿಕ್ ಪರೀಕ್ಷೆ ಮುಂದೂಡಲಾಗುವುದು ಎಂದು ರಾಜ್ಯ ರಾಜ್ಯ ಸರ್ಕಾರ ಹೇಳಿದೆ. ಈ ಬಾರಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ರಾಜ್ಯದ 5ನೇ ತರಗತಿ ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ವಾರ್ಷಿಕ ಪರೀಕ್ಷೆಯನ್ನು ನಡೆಸಲು ನಿರ್ಧರಿಸಿತ್ತು, ಆದರೆ ನಿನ್ನೆ ಹೈಕೋರ್ಟ್ ಏಕಸದಸ್ಯ ಪೀಠ ಬೋರ್ಡ್ ಪರೀಕ್ಷೆ ರದ್ದುಗೊಳಿಸಿ ಆದೇಶ ಹೊರಡಿಸಿದೆ. ಮುಂದಿನ ವರ್ಷದಿಂದ ಪರೀಕ್ಷೆ ನಡೆಸಬಹುದು. ಮುಂದಿನ ವರ್ಷದಿಂದ ಆಯಾ ನಿಯಮಗಳಿಗನುಸಾರವಾಗಿ ಪರೀಕ್ಷೆ ನಡೆಸಬಹುದು ಎಂದು ಹೈಕೋರ್ಟ್‌ ಹೇಳಿದೆ....

ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ದೃವನಾರಾಯಣ್ ವಿಧಿವಶ..!

ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ದೃವನಾರಾಯಣ್ ವಿಧಿವಶ..!

ಮೈಸೂರು: ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಣ್ ಹೃದಯಾಘಾತದಿಂದ ನಿಧನರಾಗಿದ್ದಾರೆ. ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆ ಉಸಿರುವೆಳೆದಿರೋ ಆರ್. ದ್ರುವನಾರಾಯಣ್ ಕಾಂಗ್ರೆಸ್ ಶಾಸಕರಾಗಿ ಸಂತೇಮರಳ್ಳಿ ಕ್ಷೇತ್ರದಿಂದ ಒಂದೇ ಒಂದು ಮತದಿಂದ ಗೆಲುವು ಸಾಧಿಸಿದ್ದರು. ಚಾಮರಾಜನಗರ ಮಾಜಿ ಸಂಸದರಾಗಿದ್ದ ಆರ್.ಧ್ರುವನಾರಾಯಣ್, ಚಾಮರಾಜನಗರ ಜಿಲ್ಲೆ, ಹೆಗ್ಗವಾಡಿಯಲ್ಲಿ 31 ಜುಲೈ 1961ರಲ್ಲಿ ಜನಿಸಿದ್ದರು. ಅವ್ರುಗೆ 61 ವರ್ಷ ವಯಸ್ಸಾಗಿತ್ತು. ಬೆಂಗಳೂರು ಕೃಷಿ ವಿಜ್ಞಾ‌ನ ವಿಶ್ವವಿದ್ಯಾಲಯದಲ್ಲಿ ಬಿ.ಎಸ್ಸಿ. (ಕೃಷಿ), ಎಂ.ಎಸ್ಸಿ. (ಕೃಷಿ) ಪದವಿ ಪಡೆದಿದ್ದರು. ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ದ್ರುವನಾರಾಯಣ ನಿಧನಕ್ಕೆ ರಾಜ್ಯ ಹಾಗೂ ರಾಷ್ಟ್ರದ ಹಲವು ಮುಖಂಡರು ಕಂಬನಿ ಮಿಡಿದಿದ್ದಾರೆ.

ಮುಂಡಗೋಡಿಗೆ ಕರಾಳ ದಿನವಾಯ್ತು ಗುರುವಾರ, ಮಡಿದ ಮೂವರೂ ಯುವಕರಿಗೆ ಸ್ನೇಹಿತರ ಅಶ್ರುತರ್ಪಣ..!

ಮುಂಡಗೋಡಿಗೆ ಕರಾಳ ದಿನವಾಯ್ತು ಗುರುವಾರ, ಮಡಿದ ಮೂವರೂ ಯುವಕರಿಗೆ ಸ್ನೇಹಿತರ ಅಶ್ರುತರ್ಪಣ..!

 ನಿಜಕ್ಕೂ ಮುಂಡಗೋಡಿಗರ ಪಾಲಿಗೆ ಇವತ್ತು ಕರಾಳ ದಿನ. ಆಡಾಡುತ್ತಲೇ ಮನೆ ಮಕ್ಕಳನ್ನು ಕಳೆದುಕೊಂಡ ಕೆಟ್ಟ ದಿನ. ಬಹುಶಃ ಇವತ್ತು ಮುಂಡಗೋಡಿನಲ್ಲಿ ಯಾರೊಬ್ಬರ ಮುಖದಲ್ಲಿ ನಗು ಅಪರೂಪವಾಗಿತ್ತು. ಬರೀ ಆತಂಕ, ನಮ್ಮವರನ್ನು ಕಳೆದುಕೊಂಡ ನೋವಿನ ಛಾಯೆ ತುಂಬಿತ್ತು. ಆ ನೋವಿನಲ್ಲೇ ಇಲ್ಲಿನ ಶಿವಾಜಿ ಸರ್ಕಲ್ ನಲ್ಲಿ ಹಿಂದು ಜಾಗರಣ ವೇದಿಕೆ ನೇತೃತ್ವದಲ್ಲಿ, ಮೂವರೂ ಯುವಕರಿಗೆ ಶೃದ್ಧಾಂಜಲಿ ಅರ್ಪಿಸಲಾಯಿತು. ಜಾತ್ರೆಗೆ ಹೋಗಿದ್ದವರು‌‌..! ಜಾತ್ರೆಗೆ ಹೋಗಿದ್ದ ಆ ಐದು ಸ್ನೇಹಿತರು ಅದ್ಯಾವ ಗಳಿಗೆಯಲ್ಲಿ ಮನೆಯಿಂದ ಹೊರಗೆ ಹೆಜ್ಜೆ ಹಾಕಿದ್ದರೋ ಗೊತ್ತಿಲ್ಲ. ಜಾತ್ರೆಯ ಸಂಭ್ರಮಕ್ಕೆಂದು ಹೋಗಿದ್ದವರು ಇಡೀ‌ ಮುಂಡಗೋಡನ್ನೇ ನೋವಿನ ಕಡಲಲ್ಲಿ ತೇಲಿಸಿ ಹೋಗಿದ್ದಾರೆ. ಪಾಳಾ ಸಮೀಪ ಐವರು ಯುವಕರು ಪ್ರಯಾಣಿಸುತ್ತಿದ್ದ ಕಾರು ಅಪಘಾತವಾಗಿದೆ‌. ಐವರಲ್ಲಿ ಮೂವರು ದಾರುಣ ಸಾವು ಕಂಡಿದ್ದಾರೆ. ಅದ್ಯಾರ ಪುಣ್ಯವೋ ಗೊತ್ತಿಲ್ಲ, ಇನ್ನುಳಿದ ಇಬ್ಬರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆ ಮೂವರೂ..! ನಿನ್ನೆ ಬುಧವಾರ ನಡೆದ ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ ಇಬ್ಬರು ಸಹೋದರರು ಸ್ಥಳದಲ್ಲೇ ಸಾವು ಕಂಡಿದ್ದರು. ಮಹೇಶ್ ಗಾಣಿಗೇರ್,...

ಪಾಳಾ ಸಮೀಪ ಕಾರು ದುರಂತ ಕೇಸ್: ಕೊನೆಗೂ ಫಲಿಸಲಿಲ್ಲ ಚಿಕಿತ್ಸೆ.. ಗಾಯಗೊಂಡಿದ್ದ ಶಂಕರಯ್ಯಾ ಸಾವು, ಸಾವಿನ ಸಂಖ್ಯೆ ಮೂರಕ್ಕೆ ಏರಿಕೆ..!

ಪಾಳಾ ಸಮೀಪ ಕಾರು ದುರಂತ ಕೇಸ್: ಕೊನೆಗೂ ಫಲಿಸಲಿಲ್ಲ ಚಿಕಿತ್ಸೆ.. ಗಾಯಗೊಂಡಿದ್ದ ಶಂಕರಯ್ಯಾ ಸಾವು, ಸಾವಿನ ಸಂಖ್ಯೆ ಮೂರಕ್ಕೆ ಏರಿಕೆ..!

ಮುಂಡಗೋಡ ತಾಲೂಕಿನ ಪಾಳಾ ಸಮೀಪ ಬುಧವಾರ ರಾತ್ರಿ ನಡೆದಿದ್ದ ಭೀಕರ ಅಪಘಾತದಲ್ಲಿ ಗಾಯಗೊಂಡಿದ್ದ ಮತ್ತೋರ್ವ ಯುವಕ ಈಗಷ್ಟೇ ಮೃತಪಟ್ಟಿದ್ದಾನೆ. ಈ ಮೂಲಕ ಅಪಘಾತದಲ್ಲಿ ಸಾವಿನ ಸಂಖ್ಯೆ ಮೂರಕ್ಕೆ ಏರಿದಂತಾಗಿದೆ. ಮತ್ತಿಬ್ಬರಿಗೆ ಸಣ್ಣಪುಟ್ಟ ಗಾಯವಾಗಿದೆ. ಶಂಕರಯ್ಯ ಮಲ್ಲಯ್ಯ ಹಿರೇಮಠ್, ಮೃತಪಟ್ಟ ಮತ್ತೋರ್ವ ಯುವಕನಾಗಿದ್ದು, ನಿನ್ನೆ ರಾತ್ರಿ ಪಾಳಾ ಜಾತ್ರೆ ಮುಗಿಸಿ ಮುಂಡಗೋಡಿಗೆ ವಾಪಸ್ ಬರುತ್ತಿದ್ದಾಗ ಅಪಘಾತ ಸಂಭವಿಸಿತ್ತು. ಐ20 ಕಾರು ಅಪಘಾತಕ್ಕೀಡಾಗಿ ಸ್ಥಳದಲ್ಲೇ ಮುಂಡಗೋಡಿನ ಇಬ್ಬರು ಸಹೋದರರು ಮೃತಪಟ್ಟಿದ್ದರು. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಶಂಕರ್ ಹಿರೇಮಠನನ್ನು ಹುಬ್ಬಳ್ಳಿಯ ಕಿಮ್ಸ್ ಗೆ ದಾಖಲಿಸಲಾಗಿತ್ತು. ಆದ್ರೆ, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ ಅಂತಾ ಮಾಹಿತಿ ಲಭ್ಯವಾಗಿದೆ. ಅಪಘಾತದ ಭೀಕರತೆ..! ಇನ್ನು ಪಾಳಾ ಸಮೀಪದ ಕಾರು ಅಪಘಾತ ನಿಜಕ್ಕೂ ಭೀಕರವಾಗಿದೆ. ಡಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣ ನುಜ್ಜು ಗುಜ್ಜಾಗಿದೆ. ಜಾತ್ರೆಯ ಸಡಗರಕ್ಕೆ ತೆರಳಿದ್ದ ಅವಳೀ ಸಹೋದರರಾದ ಗಣೇಶ್ ಗಾಣಿಗೇರ್ ಹಾಗೂ ಮಹೇಶ್ ಗಾಣಿಗೇರ್ ಎಂಬುವ ಇಬ್ಬರನ್ನು ಈ ಅಪಘಾತ ಬಲಿ ಪಡೆಯುವುದಲ್ಲದೇ, ಶಂಕರಯ್ಯ ಅನ್ನೋ ಮತ್ತೋರ್ವ ಯುವಕನ ಪ್ರಾಣವನ್ನೂ...

ಶಂಕ್ರಯ್ಯ ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾನೆ, ದಯವಿಟ್ಟು ತಪ್ಪು ಮಾಹಿತಿಯ ಸ್ಟೇಟಸ್ ಬೇಡ ಗೆಳೆಯರೆ, ಎಲ್ಲರೂ ಆತನಿಗಾಗಿ ಪ್ರಾರ್ಥಿಸೋಣ..!

ಶಂಕ್ರಯ್ಯ ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾನೆ, ದಯವಿಟ್ಟು ತಪ್ಪು ಮಾಹಿತಿಯ ಸ್ಟೇಟಸ್ ಬೇಡ ಗೆಳೆಯರೆ, ಎಲ್ಲರೂ ಆತನಿಗಾಗಿ ಪ್ರಾರ್ಥಿಸೋಣ..!

ಮುಂಡಗೋಡಿನ ಪಾಳಾ ಸಮೀಪ ನಡೆದ ಕಾರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿರೋ ಯುವಕ ಶಂಕರಯ್ಯನ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ. ಆದ್ರೆ, ಇನ್ನೇನೂ ಬೇರೆಯ ರೀತಿಯ ಅನಾಹುತ ಸಂಭವಿಸಿಲ್ಲ. ತಜ್ಞ ವೈದ್ಯರು ನಿರಂತರವಾಗಿ ಶಂಕರಯ್ಯನಿಗೆ ಚಿಕಿತ್ಸೆ ನೀಡುತ್ತಿದ್ದಾರೆ ಅಂತಾ ಕಿಮ್ಸ್ ನ ವೈದ್ಯರಿಂದ ಮಾಹಿತಿ ಲಭ್ಯವಾಗಿದೆ. ಆತ ಬದುಕಿದ್ದಾನೆ. ಹೀಗಾಗಿ, ತಪ್ಪು ಮಾಹಿತಿ ಹರಡಬೇಡಿ ಅಂತಾ ಕುಟುಂಬಸ್ಥರು ಮನವಿ ಮಾಡಿದ್ದಾರೆ..     ಬದುಕಿ ಬಾ ತಮ್ಮಾ..! ಅಷ್ಟಕ್ಕೂ, ನಿನ್ನೆ ನಡೆದ ಭೀಕರ ದುರಂತದಲ್ಲಿ ಗಂಭೀರವಾಗಿ ಗಾಯಗೊಂಡಿರೋ ಶಂಕ್ರಯ್ಯ ಮಲ್ಲಯ್ಯ ಹಿರೇಮಠ ಕಿಮ್ಸ್ ನಲ್ಲಿ ಚಿಕಿತ್ಸೆ ಪಡೆತುತ್ತಿದ್ದಾನೆ. ಈ ಹೊತ್ತಲ್ಲಿ, ಮುಂಡಗೋಡಿಗರು ಆತ ಬದುಕಿ ಬರಲಿ ಅಂತಾ ದೇವರಲ್ಲಿ ಪ್ರಾರ್ಥಿಸೋಣ. ಅದನ್ನು ಬಿಟ್ಟು, ಖಚಿತ ಮಾಹಿತಿ ಪಡೆಯದೇ ದಯವಿಟ್ಟು ವಾಟ್ಸಾಪ್ ಸ್ಟೇಟಸ್ ಗಳಲ್ಲಿ ತಪ್ಪು ತಪ್ಪಾದ ಸಂದೇಶ ರವಾನಿಸಬೇಡಿ ಗೆಳೆಯರೆ, ಯಾಕಂದ್ರೆ ಆ ನೋವನ್ನು ಸಹಿಸಿಕೊಳ್ಳಲು ಆತನ ಹಡೆದವ್ವಗೆ ಖಂಡಿತ ಸಾಧ್ಯವಿಲ್ಲ. ಆ ಹಡೆದ ಕರುಳು ಮಗನಿಗಾಗಿ, ಮಗನ ಬದುಕಿಗಾಗಿ ಹಂಬಲಿಸಿರತ್ತೆ, ವೈದ್ಯರೂ ಕೂಡ...

ಪಾಳಾ ಬಳಿ ಭೀಕರ ಅಪಘಾತ, ಮುಂಡಗೋಡಿನ ಇಬ್ಬರು ಸ್ಥಳದಲ್ಲೇ ಸಾವು..! ಮತ್ತಿಬ್ಬರಿಗೆ ಗಾಯ

ಪಾಳಾ ಬಳಿ ಭೀಕರ ಅಪಘಾತ, ಮುಂಡಗೋಡಿನ ಇಬ್ಬರು ಸ್ಥಳದಲ್ಲೇ ಸಾವು..! ಮತ್ತಿಬ್ಬರಿಗೆ ಗಾಯ

ಮುಂಡಗೋಡ ತಾಲೂಕಿನ ಪಾಳಾ ಸಮೀಪ ಭೀಕರ ಅಪಘಾತವಾಗಿದೆ‌. ಐ20 ಕಾರ್ ಪಲ್ಟಿಯಾದ ಪರಿಣಾಮ ಇಬ್ಬರು ಮುಂಡಗೋಡಿನ ಯುವಕರು ಸ್ಥಳದಲ್ಲೇ ದಾರುಣ ಸಾವು ಕಂಡಿದ್ದಾರೆ. ಮತ್ತಿಬ್ಬರಿಗೆ ಗಾಯವಾಗಿದೆ. ಮುಂಡಗೋಡಿನ ಗಣೇಶ್ ಗಾಣಿಗೇರ್, ಮಹೇಶ ಗಾಣಿಗೇರ ಮೃತ ದುರ್ದೈವಿಗಳು. ಪಾಳಾದಿಂದ ಮುಂಡಗೋಡಿಗೆ ಬರುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ಕಾರ್ ಪಲ್ಟಿಯಾಗಿದೆ ಅನ್ನೋ ಮಾಹಿತಿ ಲಭ್ಯವಾಗಿದೆ. ಸದ್ಯ ಮುಂಡಗೋಡ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.  

ಶಿಗ್ಗಾವಿ ವಾರ್ಡ್ ನಂ.21 ರ ಜಯನಗರದಲ್ಲಿ ಸಮಸ್ಯೆಗಳದ್ದೇ ಕಾರುಬಾರು, ಅಧ್ಯಕ್ಷೆ ಮೇಡಮ್ಮು ಕೊಂಚ ಕಣ್ಣೆತ್ತಿ ನೋಡಿ ತಾಯಿ..!

ಶಿಗ್ಗಾವಿ ವಾರ್ಡ್ ನಂ.21 ರ ಜಯನಗರದಲ್ಲಿ ಸಮಸ್ಯೆಗಳದ್ದೇ ಕಾರುಬಾರು, ಅಧ್ಯಕ್ಷೆ ಮೇಡಮ್ಮು ಕೊಂಚ ಕಣ್ಣೆತ್ತಿ ನೋಡಿ ತಾಯಿ..!

ಶಿಗ್ಗಾವಿ: ಪುರಸಭೆ, ವಾರ್ಡ್‌ ನಂ.21 ರ ಜನ ರೋಸಿ ಹೋಗಿದ್ದಾರೆ. ಇಲ್ಲಿ ಆಡಳಿತ ವ್ಯವಸ್ಥೆ ಅನ್ನೋದು ಇದೆಯೊ ಇಲ್ಲವೋ ಅಂತಾ ನಿತ್ಯವೂ ಹಿಡಿಶಾಪ ಹಾಕ್ತಿದಾರೆ. ಯಾಕಂದ್ರೆ, ಈ ವಾರ್ಡಿನ ರಸ್ತೆಗಳು ಇವತ್ತು ನಡೆದಾಡಲೂ ಆಗದ ಸ್ಥಿತಿಯಲ್ಲಿವೆ. ಚರಂಡಿ ವ್ಯವಸ್ಥೆ ಅನ್ನೋದು ಗಬ್ಬೇದ್ದು ಹೋಗಿದೆ. ಈ ಕಾರಣಕ್ಕಾಗಿ ಈ ವಾರ್ಡಿನ ಜನರಿಗೆ ಸಾಂಕ್ರಾಮಿಕ ರೋಗಗಳ ಭೀತಿ ಶುರುವಾಗಿದೆ. ಹೀಗಾಗಿನೇ ಇಲ್ಲಿನ ಜನ ನಮ್ಮ ಕಡೆ ಗಮನವಹಿಸಿ ಅಂತಾ ಪುರಸಭೆಗೆ ಮನವಿ ಪತ್ರ ಸಲ್ಲಿಸಿದ್ದಾರೆ. ಅಂದಹಾಗೆ, ಇದು ಸಿಎಂ ತವರುಕ್ಷೇತ್ರ..! ನಿಜ, ಶಿಗ್ಗಾವಿಯ ಜಯನಗರದಲ್ಲಿ ಒಳಚರಂಡಿ ಹಾಗೂ ಹಾಳಾದ ರಸ್ತೆಗಳನ್ನು ನೋಡಿದ್ರೆ ಎಂಥವರಿಗೂ ಅಸಹ್ಯ ಅನಿಸತ್ತೆ. ಇಲ್ಲಿನ ಪುರಸಭೆಯ ಅಧಿಕಾರಿಗಳು ಅದೇನು ಕಡೆದು ಗುಡ್ಡೆ ಹಾಕ್ತಿದಾರೋ ಒಂದೂ ಅರ್ಥ ಆಗ್ತಿಲ್ಲ. ಈ ವಾರ್ಡಿನ ಜನರಿಗೆ ಮೂಲಭೂತ ಸಮಸ್ಯೆಗಳದ್ದೇ ಹಾಸುಹೊಕ್ಕಾಗಿದೆ. ಇನ್ನು ಈ ವಾರ್ಡಿನ ಜನಪ್ರತಿನಿಧಿಗಳು ಅದ್ಯಾಕೆ ಈ ಬಗ್ಗೆ ಗಮನ ಹರಿಸ್ತಿಲ್ವೋ ಯಾರಿಗೂ ತಿಳಿದಿಲ್ಲ. ರೋಗಗಳ ಕಾರ್ಖಾನೆ..! ಅಂದಹಾಗೆ, ಶಿಗ್ಗಾವಿ ಪುರಸಭೆ ವ್ಯಾಪ್ತಿಯಲ್ಲಿ ಬರುವ...

error: Content is protected !!