ಮುಂಡಗೋಡ ಪೊಲೀಸರ ಕಾರ್ಯಾಚರಣೆ, ಮಳಗಿಯಲ್ಲಿ ಗಾಂಜಾ ಸಾಗಿಸುತ್ತಿದ್ದವ ಅಂದರ್..!

ಮುಂಡಗೋಡ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದ ಆರೋಪಿಯನ್ನು ಎಳೆದು ತಂದಿದ್ದಾರೆ. ಮಳಗಿ ಸಮೀಪದ ದಾಸನಕೊಪ್ಪ ರಸ್ತೆಯಲ್ಲಿ ಗಾಂಜಾ ಸಾಗಾಟ ‌ಮಾಡುತ್ತಿದ್ದ ಓರ್ವ ಆರೋಪಿ ಸೇರಿದಂತೆ ಅರ್ಧ ಕೇಜಿಯಷ್ಟು ಗಾಂಜಾ ವಶ ಪಡಿಸಿಕೊಳ್ಳಲಾಗಿದೆ.

ಖಚಿತ ಮಾಹಿತಿ ಆಧಾರದಲ್ಲಿ ದಾಳಿ‌ ಮಾಡಿರೋ ಮುಂಡಗೋಡ ಪೊಲೀಸರು, ಶಿವಮೊಗ್ಗ ಜಿಲ್ಲೆ ಸಾಗರದ ಮಹಮದ್ ಫಾರುಕ್ ತಂದೆ ನಜೀರ್ ಅಹಮ್ಮದ್ ಅರಮನಿಕೆರಿ ಎಂಬಾತನನ್ನು ಬಂಧಿಸಿದ್ದಾರೆ. ಈತನಿಂದ ಅರ್ದ ಕೇಜಿ ಗಾಂಜಾ ವಶಕ್ಕೆ ಪಡೆಯಲಾಗಿದೆ.

ಪಿಐ ಸಿದ್ದಪ್ಪ ಸಿಮಾನಿ ನೇತೃತ್ವದಲ್ಲಿ ಪಿಎಸ್ಐ ಯಲ್ಲಾಲಿಂಗ ಕುನ್ನೂರು, ಕ್ರೈಂ ಪಿಎಸ್ ಐ ಎನ್.ಡಿ.ಜಕ್ಕಣ್ಣವರ್, ಸಿಬ್ಬಂದಿಗಳಾದ ರಾಜೇಶ್ ನಾಯಕ್, ಕೊಟೇಶ್ ನಾಗರಳ್ಳಿ, ಅಣ್ಣಪ್ಪ ಬುಡಗೇರ, ತಿರುಪತಿ ಚೌಡಣ್ಣವರ್, ಮಹಾಂತೇಶ್ ಮುದೋಳ್, ಸಂಜು ರಾಠೋಡ್ ದಾಳಿಯಲ್ಲಿ ಭಾಗಿಯಾಗಿದ್ರು.

error: Content is protected !!