ಮುಂಡಗೋಡ: ಪಟ್ಟಣದಲ್ಲಿ ಮಳೆ ಬಂದ್ರೆ ಸಾಕು ಬಂಕಾಪುರ ರಸ್ತೆಯ ಜನ ಅಂಗೈಯಲ್ಲಿ ಜೀವ ಹಿಡಿದು ಬದುಕುವ ಸ್ಥಿತಿ ಇದೆ. ಪ್ರತೀ ವರ್ಷವೂ ಇಲ್ಲಿನ ನಿವಾಸಿಗಳು ಅಧಿಕಾರಿಗಳಿಗೆ ಹಿಡಿಶಾಪ ಹಾಕುವುದು ಬಿಟ್ಟರೆ ಬೇರೆ ಏನೂ ಮಾಡಲು ಸಾಧ್ಯವಾಗ್ತಿಲ್ಲ. ಹೌದು ನಿನ್ನೆಯಿಂದ ತಾಲೂಕಿನಲ್ಲಿ ಭಾರೀ ಮಳೆಯಾಗ್ತಿದೆ. ಮುಂಡಗೋಡ ಪಟ್ಟಣದಲ್ಲೂ ಮಳೆರಾಯನ ಅರ್ಭಟ ನಿಂತಿಲ್ಲ. ಹೀಗಾಗಿ ಮಳೆರಾಯ ಮುಂಡಗೋಡ ಮಂದಿಗೆ ಇನ್ನಿಲ್ಲದ ಕಿರಿಕಿರಿ ತಂದಿಟ್ಟಿದ್ದಾನೆ. ಅದ್ರಲ್ಲೂ ಪಟ್ಟಣದ ಬಂಕಾಪುರ ರಸ್ತೆಯ ಜನರ ಗೋಳು ಹೇಳತೀರದ್ದು. ಯಾಕಂದ್ರೆ ಇಲ್ಲಿ ಒಂದು ಜೋರು ಮಳೆ ಬಂದ್ರೆ ಸಾಕು ರಸ್ತೆಯೆಲ್ಲ ಕೆರೆಯಂತಾಗತ್ತೆ. ರಸ್ತೆಯಲ್ಲಿನ ಮಳೆಯ ನೀರು ಮನೆಗಳಿಗೆ ನುಗ್ಗತ್ತೆ, ಇನ್ನು ಈ ರಸ್ತೆಯಲ್ಲಿ ಸಂಚರಿಸೋ ವಾಹನ ಸವಾರರ ಪಾಡು ದೇವರಿಗೇ ಪ್ರೀತಿ. ಹೀಗಾಗಿ ಎದ್ನೊ ಬಿದ್ನೊ ಅಂತಾ ಅಂಗೈಯಲ್ಲಿ ಜೀವ ಹಿಡಿದು ಓಡಾಡುವ ಪರಿಸ್ಥಿತಿ ಇಲ್ಲಿನ ನಾಗರೀಕರದ್ದು. ಅಯ್ಯೋ ಇದು ಯಾವಾಗ್ಲೂ ಇದ್ದಿದ್ದೇ ಗೋಳು..! ಅಂದಹಾಗೆ, ಇದು ನಿನ್ನೆ ಮೊನ್ನೆಯ ಪ್ರಶ್ನೆಯಲ್ಲ. ಪ್ರತೀ ವರ್ಷವೂ ಮಳೆಗಾಲದಲ್ಲಿ ಇಲ್ಲಿನ ಜನ್ರ ಗೋಳು...
Top Stories
NMD ಕಿಡ್ನ್ಯಾಪ್ ಕೇಸ್, ಮತ್ತೆ ಐವರು ಆರೋಪಿಗಳು ಅಂದರ್, ಪೊಲೀಸರು ಆರೋಪಿಗಳಮದ್ಯೆ ಭಾರೀ ಕಾಳಗ..! ಗುಂಡೇಟು..!
NMD ಜಮೀರ್ ಬಾಯ್ ಸೇಫ್..! ಗದಗ ರಿಂಗ್ ರೋಡಲ್ಲಿ ಬಿಟ್ಟು ಹೋದ ಕಿಡ್ನ್ಯಾಪರ್ಸ್..! ಐವರು ಆರೋಪಿಗಳ ಹೆಡೆಮುರಿ ಕಟ್ಟಿದ್ರಾ ಮುಂಡಗೋಡ ಪೊಲೀಸ್ರು..?
ಮುಂಡಗೋಡಿನ NMD ಗ್ರೂಪ್ ಮಾಲೀಕನ ಮೇಲೆ ದುಷ್ಕರ್ಮಿಗಳ ಅಟ್ಯಾಕ್
ಟಿಬೇಟಿಯನ್ ಕಾಲೋನಿ ಬಳಿ ಬೈಕ್ ಗಳ ನಡುವೆ ಡಿಕ್ಕಿ, ಓರ್ವ ಸವಾರ ಸ್ಥಳದಲ್ಲೇ ಸಾವು, ಮತ್ತೋರ್ವ ಗಂಭೀರ..!
ಮುಂಡಗೋಡಿನ ಮುಲ್ಲಾ ಓಣಿಯ ಬಾವಿಯಲ್ಲಿ ವ್ಯಕ್ತಿಯ ಶವ ಪತ್ತೆ..! ಆತ್ಮಹತ್ಯೆನಾ..?
ಮುಂಡಗೋಡಿನ ಅಂಗನವಾಡಿಯಲ್ಲಿ ಹಾವು ಕಚ್ಚಿದ್ದ ಬಾಲಕಿ ಕಿಮ್ಸ್ ನಲ್ಲಿ ಸಾವು..!
ಮುಂಡಗೋಡಿನಲ್ಲಿ ಅಂಗನವಾಡಿಗೆ ಹೋಗಿದ್ದ ಪುಟ್ಟ ಬಾಲಕಿಗೆ ಕಚ್ಚಿದ ಹಾವು..!
ಹಳೇ ದ್ವೇಷದ ಹಿನ್ನಲೆ ಇಬ್ಬರಿಗೆ ಚಾಕು ಇರಿತ
ಇಂದೂರು ಸೊಸೈಟಿ ಚುನಾವಣೆ: ಭರ್ಜರಿ ಗೆಲುವು ಸಾಧಿಸಿದ ಕಾಂಗ್ರೆಸ್ ಬೆಂಬಲಿತರು..! ರೈತ ಒಕ್ಕೂಟಕ್ಕೆ ಮೂರು ಸ್ಥಾನಗಳು ಮಾತ್ರ..!
ಇಂದೂರು ಸೊಸೈಟಿ ಚುನಾವಣೆ ಅಚ್ಚರಿ ಫಲಿತಾಂಶ: ಮಾಜಿ ಜಿಪಂ ಸದಸ್ಯ ರವಿಗೌಡ ಪಾಟೀಲ್ ಸೋಲು..!
ಚವಡಳ್ಳಿ ಸೊಸೈಟಿ ಚುನಾವಣೆ: 11 ರಲ್ಲಿ ಕಾಂಗ್ರೆಸ್ ಬೆಂಬಲಿತರದ್ದೇ ಭರ್ಜರಿ ಗೆಲುವು..! ಬಿಜೆಪಿಗೆ ದಕ್ಕಿದ್ದು ಒಂದೇ ಒಂದು ಸ್ಥಾನ..!
ಮುಂಡಗೋಡ LSMP ಸೊಸೈಟಿ ಚುನಾವಣೆಯಲ್ಲಿ ಕಾಂಗ್ರೆಸ್ ಮೇಲುಗೈ, 12 ರ ಪೈಕಿ 9 ರಲ್ಲಿ ಕೈ ಬೆಂಬಲಿತರ ಗೆಲುವು..!
ಹುಬ್ಬಳ್ಳಿ ಸಿಲಿಂಡರ್ ಬ್ಲಾಸ್ಟ್: ಮತ್ತೋರ್ವ ಅಯ್ಯಪ್ಪ ಮಾಲಾಧಾರಿ ಸಾವು, ಸಾವಿನ ಸಂಖ್ಯೆ ಮೂರಕ್ಕೆ ಏರಿಕೆ..!
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ವಿಧಿವಶ ಹಿನ್ನೆಲೆ, ಶುಕ್ರವಾರ ಸರ್ಕಾರಿ ರಜೆ ಘೋಷಣೆ..! ಶಾಲಾ ಕಾಲೇಜುಗಳಿಗೆ ರಜೆ..!
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ವಿಧಿವಶ..! ನಾಳೆಯ ಬೆಳಗಾವಿ ಕೈ ಕಾರ್ಯಕ್ರಮ ರದ್ದು..!
ಮುಂಡಗೋಡ ಗಡಿ ಭಾಗದ ಹಾನಗಲ್ ತಾಲೂಕಿನ ಕೊಪ್ಪರಸಿಕೊಪ್ಪದಲ್ಲಿ ನಡೀತು ಭಯಾನಕ, ಅಮಾನುಷ ಘಟನೆ
ಹುಬ್ಬಳ್ಳಿ ಸಿಲಿಂಡರ್ ಸ್ಪೋಟದಲ್ಲಿ ಗಾಯಗೊಂಡಿದ್ದ ಇಬ್ಬರು ಅಯ್ಯಪ್ಪ ಮಾಲಾಧಾರಿಗಳು ಸಾವು..!
ತಡಸ ಕ್ರಾಸ್ ಬಳಿ ಭೀಕರ ಅಪಘಾತ, ಒಂದೇ ಕುಟುಂಬದ ನಾಲ್ವರು ದುರಂತ ಸಾವು..!
ಬೆಡಸಗಾಂವ್ ಸಹಕಾರಿ ಸಂಘದ ಚುನಾವಣೆ ನಡೆದ್ರೂ ಮತ ಎಣಿಕೆಗೆ ಬ್ರೇಕ್..! ಹೈಕೋರ್ಟ್ ತಡೆಯಾಜ್ಞೆ..!
ತೋಟಕ್ಕೆ ಹಾಕಿದ್ದ ವಿದ್ಯುತ್ ಬೇಲಿಗೆ ತಾಗಿ ವ್ಯಕ್ತಿ ದಾರುಣ ಸಾವು..!
ಶಿರಸಿ: ವಿದ್ಯುತ್ ತಂತಿ ಬೇಲಿ ತಗುಲಿ ವ್ಯಕ್ತಿಯೊಬ್ಬ ಸಾವನ್ನಪ್ಪಿದ ಘಟನೆ ಶಿರಸಿ ತಾಲೂಕಿನ ಮತ್ತೀಘಟ್ಟಾ ಸಮೀಪದ ಸೂರಗುಪ್ಪದಲ್ಲಿ ನಡೆದಿದೆ. ಲವ ಗೌಡ (38) ಸಾವನ್ನಪ್ಪಿದ ದುರ್ದೈವಿಯಾಗಿದ್ದು, ಕಾಡು ಪ್ರಾಣಿ ಹಾವಳಿಯಿಂದ ತೋಟವನ್ನು ರಕ್ಷಿಸಿಕೊಳ್ಳುವ ಉದ್ದೇಶಕ್ಕೆ ಹಾಕಿದ್ದ ಐಬೇಕ್ಸ್ ಬೇಲಿಗೆ ತಗುಲಿ ಸ್ಥಳದಲ್ಲೇ ಸಾವು ಕಂಡಿದ್ದಾನೆ. ಕ್ರೈಂ ವಿಭಾಗದ ಪಿಎಸ್ಐ. ಶ್ಯಾಮ ಪಾವಸ್ಕರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶಿರಸಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉತ್ತರ ಕನ್ನಡ ಜಿಲ್ಲೆಯಾಧ್ಯಂತ ಮಳೆಯ ಅರ್ಭಟ..!
ಉತ್ತರ ಕನ್ನಡ ಜಿಲ್ಲೆಯಾದ್ಯಂತ ವರುಣನ ಅರ್ಭಟ ಜೋರಾಗಿದೆ. ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆಯಾಗಿದ್ದು, ಜಿಲ್ಲೆಯ ಮಲೆನಾಡು ಭಾಗಗಳಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ. ಮಲೆನಾಡು ಭಾಗಗಳಾದ ಸಿದ್ದಾಪುರ, ಶಿರಸಿ, ಯಲ್ಲಾಪುರ, ದಾಂಡೇಲಿ ಗಳಲ್ಲಿ ನಿನ್ನೆಯಿಂದ ಗಾಳಿ, ಮಳೆಯ ಅರ್ಭಟ ಜೋರಾಗಿದ್ದು, ಎಡೆಬಿಡದೇ ಮಳೆ ಸುರಿಯುತ್ತಿದೆ. ಭರ್ಜರಿ ಮಳೆಗೆ ಮಲೆನಾಡು ಭಾಗದ ಹಲವು ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿವೆ. ಇನ್ನು ಭಾರೀ ಮಳೆಯಿಂದ ಗದ್ದೆಗಳು ಜಲಾವೃತವಾಗಿದ್ದು ಅನ್ನದಾತನಿಗೆ ಸಂಕಷ್ಟ ಎದುರಾಗಿದೆ.
ಅಯ್ಯೋ, ಎದೆ ಝಲ್ ಅನಿಸತ್ತೆ ಈ ಪುಟ್ಟ ಬಾಲಕ ಮಾಡಿಕೊಂಡಿರೋ ಕಿತಾಪತಿ..! ಜಸ್ಟ್ ಮಿಸ್ಸ್ ಕಣ್ರಿ..!!
ಚಡಚಣ: ಭೀಮಾತೀರದಲ್ಲಿ ಮತ್ತೆ ಗುಂಡಿನ ಸದ್ದು ಪ್ರತಿಧ್ವನಿಸಿದೆ. ಆ ಗುಂಡಿನ ಸದ್ದಿಗೆ ಒಂದು ಕ್ಷಣ ಇಡೀ ಭೀಮಾತೀರದ ಮಂದಿಯೇ ಬೆಚ್ಚಿಬಿದ್ದಿದ್ದಾರೆ. ಅದೇಷ್ಟೋ ಗುಂಡಿನ ಸದ್ದುಗಳನ್ನು ಕೇಳಿದ್ದ ಇಲ್ಲಿನ ಮಂದಿಗೆ ಇವತ್ತು ಹಾರಿದ್ದ ಗುಂಡು ಮಾತ್ರ ಇನ್ನಿಲ್ಲದಂತೆ ಮೈ ನಡುಗಿಸಿ ಬಿಟ್ಟಿದೆ. ಯಾಕಂದ್ರೆ ಅಂತಹದ್ದೊಂದು ಗುಂಡು ಹಾರಿಸಿದ್ದು ಯಾವುದೇ ರೌಡಿಯಲ್ಲ, ಹಂತಕರೂ ಅಲ್ಲ ಬದಲಾಗಿ ಆತನೊಬ್ಬ ಪುಟ್ಟ ಬಾಲಕ, ಕೇವಲ ನಾಲ್ಕು ವರ್ಷ ವಯಸ್ಸಿನವನು. ಹೌದು, ಇಲ್ಲೊಬ್ಬ ಬಾಲಕ ಆಟವಾಡಲು ಹೋಗಿ ಇನ್ನಿಲ್ಲದ ಕಿತಾಪತಿ ಮಾಡಿಕೊಂಡಿದ್ದಾನೆ. ವಿಜಯಪುರ ಜಿಲ್ಲೆಯ ಚಡಚಣ ಪಟ್ಟಣದ ಮರಡಿ(ಮಡ್ಡಿ) ಪ್ರದೇಶದಲ್ಲಿ ವಾಸವಿರೋ ಕುಟುಂಬದವೊಂದರಲ್ಲಿ ಈ ಘಟನೆ ನಡೆದಿದೆ. ಮನೆಯ ತಿಜೋರಿಯಲ್ಲಿಡಲಾಗಿದ್ದ ಲೋಡೆಡ್ ರಿವಾಲ್ವರ್ ನ್ನು ನಾಲ್ಕು ವರ್ಷದ ಬಾಲಕ ಆಟವಾಡಲು ತೆಗೆದುಕೊಂಡಿದ್ದಾನೆ. ಹಾಗೇ ಆಟವಾಡುತ್ತ ಗುಂಡು ಹಾರಿಸಿದ್ದಾನೆ. ಹಾಗೆ ಹಾರಿಸಿದ ಗುಂಡು ಬಾಲಕನ ತೊಡೆಗೆ ತಾಗಿದೆ. ಹೀಗಾಗಿ, ಗಾಯವಾದ ಹಿನ್ನೆಲೆ ಬಾಲಕ ಅಲ್ಲೆ ಭಯಗೊಂಡು ಬಿದ್ದಿದ್ದಾನೆ. ಇನ್ನು ಗುಂಡಿನ ಸದ್ದು ಕೇಳುತ್ತಲೇ ಕೂಡಲೇ ಓಡಿ ಬಂದ ಪಾಲಕರಿಗೆ ಮುದ್ದು...
ಅಬ್ಬಾ..! ತಾಲೂಕಿನಲ್ಲಿ ಇಂದು ಕೇವಲ 09 ಪಾಸಿಟಿವ್..! 26 ಸೋಂಕಿತರು ಗುಣಮುಖ, ಮಹಾಮಾರಿ ಇಳಿಮುಖ..!
ಮುಂಡಗೋಡ- ಸದ್ಯ ಮುಂಡಗೋಡಿಗರು ನಿಟ್ಟುಸಿರು ಬಿಡುವ ಸುದ್ದಿ ಹೊರಬಿದ್ದಿದೆ. ತಾಲೂಕಿನಲ್ಲಿ ಇಂದು ಕೇವಲ 9 ಕೊರೋನಾ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದ್ದು ಬಹುಬೇಗ ಕೊರೋನಾ ಮುಕ್ತ ತಾಲೂಕು ಅಂತಾ ಘೋಷಣೆಯಾಗೊ ದಿನ ದೂರವಿಲ್ಲವೆನೋ..! ಅಂದಹಾಗೆ, ಇಂದು ತಾಲೂಕಿನಲ್ಲಿ ಹೊಸತಾಗಿ ದೃಢ ಪಟ್ಟ 09 ಪಾಸಿಟಿವ್ ಪ್ರಕರಣಗಳು ಸೇರಿ, ತಾಲೂಕಿನಲ್ಲಿ ಒಟ್ಟೂ 116 ಸಕ್ರೀಯ ಪ್ರಕರಣಗಳು ಉಳಿದಂತಾಗಿದೆ. ಇನ್ನು ಇದ್ರಲ್ಲಿ 29 ಜನ ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 87 ಜನ ಸೋಂಕಿತರು ಹೋಂ ಐಸೋಲೇಶನ್ ನಲ್ಲಿದ್ದಾರೆ. ಬಹುಮುಖ್ಯ ಅಂದ್ರೆ ಇಂದು 26 ಜನರು ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಇಂದು ಯಾವುದೇ ಸೋಂಕಿತರು ಕೋವಿಡ್ ಕೇರ್ ಸೆಂಟರ್ ನಲ್ಲಿ ಚಿಕಿತ್ಸೆ ಪಡೆಯುತ್ತಿಲ್ಲ ಅಂತಾ ಮುಂಡಗೋಡ ತಹಶೀಲ್ದಾರ್ ಶ್ರೀಧರ್ ಮುಂದಲಮನಿ ಮಾಹಿತಿ ನೀಡಿದ್ದಾರೆ.
ಉಗ್ಗಿನಕೇರಿಯ ಕಬ್ಬಿನ ಗದ್ದೆಯಲ್ಲಿ ಹೆಣವಾದ ಯುವಕ..! ಅಷ್ಟಕ್ಕೂ ಅಲ್ಲಿ ನಡೆದದ್ದೇನು..?
ಮುಂಡಗೋಡ: ತಾಲೂಕಿನ ಉಗ್ಗಿನಕೇರಿಯಲ್ಲಿ ನಡೆಯಬಾರದ ದುರಂತವೊಂದು ನಡೆದು ಹೋಗಿದೆ. ರಾತ್ರಿ ಕಾಡಿನಲ್ಲಿ ಮರ ಕಡಿಯಲು ಹೋಗಿದ್ದ ಅಂತಾ ಹೇಳಲಾದ ವ್ಯಕ್ತಿಯೋರ್ವ ಹೆಣವಾಗಿದ್ದಾನೆ. ಪ್ರದೀಪ್ ಜುಜೇ ಸಿದ್ಧಿ(35) ಎಂಬುವ ವ್ಯಕ್ತಿ ಪ್ರಾಣ ಕಳೆದುಕೊಂಡವ. ಈತ ಸೋಮವಾರ ತಡರಾತ್ರಿ ತನ್ನ ಮತ್ತೊಬ್ಬ ಸಂಗಡಿಗನೊಂದಿಗೆ ಉಗ್ಗಿನಕೇರಿ ಅರಣ್ಯ ಪ್ರದೇಶದಲ್ಲಿ ಮರ ಕಡಿಯಲು ಹೋಗಿದ್ದ ಎನ್ನಲಾಗಿದೆ. ಈ ವೇಳೆ ಮರ ಕಡಿದು ಮರದ ತುಂಡನ್ನು ಹೊತ್ತು ತರುತ್ತಿದ್ದಾಗ ಉಗ್ಗಿನಕೇರಿ ಗ್ರಾಮದ ಹೊರವಲಯದಲ್ಲಿನ ಕಬ್ಬಿನ ಗದ್ದೆಯಲ್ಲಿ, ಕಾಡು ಪ್ರಾಣಿಗಳ ಹತೋಟಿಗೆ ಹಾಕಲಾಗಿದ್ದ ವಿದ್ಯುತ್ ಲೈನ್ ಮೇಲೆ ಆಕಸ್ಮಿಕವಾಗಿ ಬಿದ್ದು, ವಿದ್ಯುತ್ ಪ್ರವಹಿಸಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಅಂತಾ ಅನುಮಾನ ವ್ಯಕ್ತವಾಗಿದೆ. ಇನ್ನು ಈತನೊಂದಿಗೆ ಬಂದಿದ್ದ ಮತ್ತೋರ್ವ ವ್ಯಕ್ತಿಯೂ ದುರಂತ ನಡೆದ ಬಳಿಕ ಅಲ್ಲಿಂದ ಕಾಲ್ಕಿತ್ತಿದ್ದಾನೆ ಎನ್ನಲಾಗಿದೆ. ಕಬ್ಬಿನ ಗದ್ದೆಗೆ ಹೈ ಪವರ್ ವಿದ್ಯುತ್ ಬೇಲಿ ಹಾಕಲಾಗಿತ್ತಾ..? ಸಹಜವಾಗಿ, ಕಬ್ಬಿನ ಗದ್ದೆಗೆ ಕಾಡುಪ್ರಾಣಿಗಳಿಂದ ರಕ್ಷಣೆಗಾಗಿ ವ್ಯವಸ್ಥಿತವಾಗಿ ಐಬೇಕ್ಸ್ ಹಾಕಲಾಗುತ್ತದೆ. ಆದ್ರೆ ಐಬೇಕ್ಸ್ ಹಾಕಿದ್ರೆ ಅಲ್ಲಿ ಯಾವ ಜೀವ ಹಾನಿಯಾಗುವುದಿಲ್ಲ. ಅದು ಕೇವಲ...
ಮುಂಡಗೋಡಿನ ನವಚೇತನ “ಪದ್ಮಾಂಬಾ ಪುಟ್ಟಣ್ಣ” ಇನ್ನಿಲ್ಲ..!
ಮುಂಡಗೋಡ: ತಾಲೂಕಿನಲ್ಲಿ ಪದ್ಮಾಂಬಾ ಪುಟ್ಟಣ್ಣ ಅಂತಾನೇ ಖ್ಯಾತಿ ಪಡೆದಿದ್ದ ವೃಷಭರಾಜ್ ಅಂಗಡಿ(54) ವಿಧಿವಶರಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ಅನಾರೋಗ್ಯಕ್ಕೀಡಾಗಿದ್ದ ಪುಟ್ಟಣ್ಣ, ಹುಬ್ಬಳ್ಳಿಯ ಕಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದ್ರೆ ಇಂದು ಚಿಕಿತ್ಸೆ ಫಲಕಾರಿಯಾಗದೆ ಸಂಜೆ ಕೊನೆಯುಸಿರೆಳೆದಿದ್ದಾರೆ. ಮುಂಡಗೋಡಿನ ಹುಬ್ಬಳ್ಳಿ ರಸ್ತೆಯಲ್ಲಿರೋ ಪದ್ಮಾಂಬಾ ಬುಕ್ ಸ್ಟಾಲ್ ಮಾಲೀಕರಾಗಿದ್ದ ಪುಟ್ಟಣ್ಣ, ತಾಲೂಕಾ ಬಿಜೆಪಿಯಲ್ಲಿ ಸಕ್ರೀಯ ಕಾರ್ಯಕರ್ತರಾಗಿ ಜನಾನುರಾಗಿಯಾಗಿದ್ದರು. ಮುಂಡಗೋಡಿನ ಪ್ರತಿಷ್ಟಿತ ನವಚೇತನ ಯುವಕ ಮಂಡಳದಲ್ಲಿ ಸಕ್ರೀಯರಾಗಿದ್ದ ಪುಟ್ಟಣ್ಣ ಹಲವು ಸಾಮಾಜಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲೂ ಭಾಗವಹಿಸುತ್ತಿದ್ದರು. ಇನ್ನು ಪುಟ್ಟಣ್ಣ ಅಂಗಡಿ ನಿಧನಕ್ಕೆ ತಾಲೂಕಿನ ಹಲವು ಗಣ್ಯರು, ಸ್ನೇಹಿತರು ಕಂಬನಿ ಮಿಡಿದಿದ್ದಾರೆ.
ಬಿಜೆಪಿಗೆ ಪಾಕಿಸ್ತಾನದ ಹೆಸ್ರು ಹೇಳದಿದ್ರೆ ರಾಜಕಾರಣ ಮಾಡಲು ಆಗಲ್ಲ: ಬಿ.ಕೆ.ಹರಿಪ್ರಸಾದ್ ಟೀಕೆ..!
ಕಾರವಾರ:ಬಿಜೆಪಿಗೆ ಪಾಕಿಸ್ತಾನದ ಹೆಸರು ಹೇಳದಿದ್ದರೆ ಒಂದು ದಿನವೂ ರಾಜಕಾರಣ ಮಾಡಲಾಗುವುದಿಲ್ಲ ಎಂದು ವಿಧಾನ ಪರಿಷತ್ ಸದಸ್ಯ, ಕಾಂಗ್ರೆಸ್ ಹಿರಿಯ ಮುಖಂಡ ಬಿ. ಕೆ. ಹರಿಪ್ರಸಾದ್ ಟೀಕಿಸಿದ್ದಾರೆ. ನಗರದ ಜಿಲ್ಲಾ ಪತ್ರಿಕಾಭವನದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬಿಜೆಪಿಯ ಆರೋಪಗಳಿಗೆ ಪ್ರತಿಕ್ರಿಯಿಸಿ ಕಾಂಗ್ರೆಸ್ನ ಪ್ರಮುಖರಾದ ಮಾಜಿ ಸಿಎಂ ಸಿದ್ದರಾಮಯ್ಯ, ದಿಗ್ವಿಜಯ ಸಿಂಗ್, ಜಮೀರ್ ಇವರು ಯಾರೂ ಕೂಡ ಪಾಕಿಸ್ತಾನಕ್ಕೆ ಹೋಗಿಲ್ಲ. ಅಲ್ಲದೇ ಅಲ್ಲಿ ಹೋಗೋ ಮನಸ್ಸೂ ಕೂಡ ಅವರಿಗಿಲ್ಲ. ಆದರೆ ಪಾಕಿಸ್ತಾನದ ಆಮಂತ್ರಣವೇ ಇಲ್ಲದೇ ಅಲ್ಲಿ ಹೋಗಿ ಬಿರಿಯಾನಿ ತಿಂದು ಬಂದವರು ಪ್ರಧಾನಿ ಮೋದಿ. ಇದಕ್ಕಿಂತ ಹೆಚ್ಚಿನ ಅವಮಾನ ದೇಶಕ್ಕಿಲ್ಲ ಎಂದರು. ಬಿಜೆಪಿಯವರು ಮನಮೋಹನ್ ಸಿಂಗ್ ಅವರನ್ನು ದುರ್ಬಲ ಪ್ರಧಾನಿ ಎಂದರು. ಆದರೆ ಎಲ್ಲಿಯವರೆಗೆ ಉಗ್ರವಾದ ನಿಲ್ಲುವುದಿಲ್ಲವೋ ಅಲ್ಲಿಯವರೆಗೆ ಪಾಕಿಸ್ತಾನದೊಂದಿಗೆ ಮಾತುಕತೆ ಇಲ್ಲ ಎಂದು ಖಡಾ ಖಂಡಿತವಾಗಿ ಹೇಳಿದವರು ಮನಮೋಹನ್ ಸಿಂಗ್. ಆದರೆ 56 ಇಂಚಿನ ಎದೆ ಇರುವವರು ಮುಷರಫ್ ಮೊಮ್ಮಗಳ ಜನ್ಮ ದಿನಾಚರಣೆಗೆ ಹೋಗಿದ್ದರು ಎಂದು ಟೀಕಿಸಿದರು. ಇನ್ನು ಇದುವರೆಗೆ...
ಹೆಂಡ್ತಿ ಬೇಕು ಹೆಂಡ್ತಿ ಅಂತಾ ಟವರ್ ಏರಿದ ಯುವಕ..! ಕೆಳಗಿಳಿಸುವಲ್ಲಿ ಪೊಲೀಸರು ಸುಸ್ತೋ ಸುಸ್ತು..!!
ಹೆಂಡ್ತಿ ಬೇಕು ಹೆಂಡ್ತಿ ಅಂತಾ ಯುವಕನೋರ್ವ ಟವರ್ ಏರಿ ಕುಳಿತ ಘಟನೆ ವಿಜಯನಗರ ಜಿಲ್ಲೆ ಹೊಸಪೇಟೆ ತಾಲೂಕಿನ ಮರಿಯಮ್ಮನ ಹಳ್ಳಿಯಲ್ಲಿ ನಡೆದಿದೆ. ಚಿರಂಜೀವಿ (23) ಎಂಬುವ ಯುವಕನೇ ಬೇಗ ಮದುವೆ ಮಾಡಿ ಅಂತ ಟವರ್ ಏರಿ ಕುಳಿತಿದ್ದವ. ಅಂದಹಾಗೆ ಈತನಿಗೆ ಈಗ ಹುಡುಗಿ ಫಿಕ್ಸ್ ಆಗಿದೆ. ಆದ್ರೆ ಲಾಕ್ ಡೌನ್ ಹಿನ್ನೆಲೆ ಮನೆಯಲ್ಲಿ ಬೇಗ ಮದುವೆ ಮಾಡಿಲ್ಲ. ಹೀಗಾಗಿ ತಾಳ್ಮೆ ಕಳೆದುಕೊಂಡ ಯುವಕ ನಂಗೆ ಈಗಲೇ ಹೆಂಡ್ತಿ ಬೇಕು ಹೆಂಡ್ತಿ ಅಂತಾ ಮನೆಯವರ ವಿರುದ್ಧ ಆಕ್ರೋಶಗೊಂಡಿದ್ದ. ಹೀಗಾಗಿ ಟವರ್ ಕಂಬದ ಮೇಲೆ ಹತ್ತಿದ್ದಾನೆ. ಅಲ್ಲಿಂದಲೇ ಹೆಂಡ್ತಿ ಬೇಕು ಹೆಂಡ್ತಿ ಅಂತಾ ಕೂಗಿ ಕೂಗಿ ಹೆಳಿದ್ದಾನೆ. ಈಗಾಗಲೇ ಮದುವೆಗೆಂದು ಹುಡುಗಿ ಫೀಕ್ಸ್ ಮಾಡಿ ಮಾತುಕತೆ ಮಾಡಿರೋ ಪೋಷಕರು, ಇಬ್ಬರು ಗಂಡು ಮಕ್ಕಳಿರೋ ಕಾರಣಕ್ಕೆ ಚಿರಂಜೀವಿಗಿಂತ ದೊಡ್ಡ ಹುಡುನ ಮದುವೆ ಆಗಲಿ ಆಮೇಲೆ ನಿನ್ನ ಮದುವೆ ಮಾಡ್ತಿವಿ ಅಂದಿದ್ರಂತೆ, ಆದ್ರೆ ಹಾಗೆ ಹೇಳಿದ್ದ ಕಾರಣ ಟವರ್ ಏರಿರೋ ಸುಪುತ್ರನಿಗೆ ಈಗ ಮದುವೆ ಮಾಡಲು ರೆಡಿಯಾಗಿದ್ದಾರಂತೆ...
ಮುಂಡಗೋಡ ತಾಲೂಕಿನಲ್ಲಿ ಅರಣ್ಯಾಧಿಕಾರಿಗಳ ಕಣ್ಗಾವಲಲ್ಲೇ ನಡೆಯತ್ತಂತೆ ಅರಣ್ಯ ಲೂಟಿ: ಪರಿಸರ ಪ್ರೇಮಿಯೊಬ್ಬರ ಏಕಾಂಗಿ ಧರಣಿ..!
ಮುಂಡಗೋಡ: ತಾಲೂಕಿನ ಅರಣ್ಯ ಲೂಟಿ ಆಗ್ತಿದೆ. ಔಷಧಿ ಸಸ್ಯಗಳೂ ಸೇರಿ ಇಲ್ಲಿನ ಅರಣ್ಯದಲ್ಲಿ ಹೇರಳವಾಗಿರೋ ಅರಣ್ಯ ಸಂಪತ್ತು ಕಳ್ಳರ ಪಾಲಾಗ್ತಿದೆ. ಹೀಗಿದ್ರೂ ಇಲ್ಲಿನ ಅರಣ್ಯ ಇಲಾಖೆಯ ಅಧಿಕಾರಿಗಳು ಮಾತ್ರ ಜಾಣ ಕುರುಡು ತೋರಿಸ್ತಿದಾರೆ ಅಂತಾ ಆರೋಪಿಸಿ, ಮುಂಡಗೋಡ ವಲಯ ಅರಣ್ಯಾಧಿಕಾರಿ ಕಚೇರಿ ಎದುರು ಪರಿಸರ ಪ್ರೇಮಿಯೊಬ್ರು ಏಕಾಂಗಿಯಾಗಿ ಧರಣಿಗೆ ಕುಳಿತಿರೋ ಅಪರೂಪದ ಘಟನೆ ನಡೆದಿದೆ. ಕರ್ನಾಟಕ ವೈಲ್ಡ್ ಲೈಫ್ ಗ್ರೂಪ್ ನ ಅಧ್ಯಕ್ಷ ಶಂಶುದ್ಧೀನ್ ಮಾರ್ಕರ್ ಎನ್ನುವವರೇ ಏಕಾಂಗಿಯಾಗಿ ಮುಂಡಗೋಡ ವಲಯ ಅರಣ್ಯಾಧಿಕಾರಿಗಳ ಕಛೇರಿ ಎದುರು ಧರಣಿ ಕುಳಿತಿದ್ದಾರೆ. ಅಂದಹಾಗೆ, ಇವ್ರು ಆರೋಪಿಸೋ ಪ್ರಕಾರ ಗುಂಜಾವತಿ ಸೇರಿದಂತೆ ತಾಲೂಕಿನ ಬಹುತೇಕ ಅರಣ್ಯ ಪ್ರದೇಶದಲ್ಲಿ ಹೇರಳವಾಗಿರೋ ಬೆಲೆ ಬಾಳುವ ಸಾಗವಾನಿ, ಸೀಸಂ ಶ್ರೀಗಂಧ ಸೇರಿ ಹಲವು ಬಗೆಯ ಅರಣ್ಯ ಸಂಪತ್ತು ಕಳ್ಳರ ಪಾಲಾಗುತ್ತಿದೆ. ನಿತ್ಯವೂ ಕಾಡು ಪ್ರಾಣಿಗಳ ಬೇಟೆ ನಡೆಯುತ್ತಿದೆ. ಇದೇಲ್ಲ ಇಲ್ಲಿನ ಅರಣ್ಯ ಅಧಿಕಾರಿಗಳ ಕಣ್ಣೇದುರೇ ನಡೆಯುತ್ತಿದ್ರೂ ಯಾರೂ ಅದನ್ನ ತಡೆಯುವ ಸಾಹಸ ಮಾಡುತ್ತಿಲ್ಲ.. ಇಲ್ಲಿನ ಅರಣ್ಯ ಅಧಿಕಾರಿಗಳೇಲ್ಲ ರಾಜಕೀಯ ಕೈಗೊಂಬೆಯಾಗಿ...