ಮುಂಡಗೋಡ: ತಾಲೂಕಿನ ಬಡ್ಡಿಗೇರಿ ಕ್ರಾಸ್ ಬಳಿ ಮಹಿಳೆಯೋರ್ವಳು 108 ಅಂಬ್ಯುಲೆನ್ಸ್ ನಲ್ಲೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಬಡ್ಡಿಗೇರಿಯ ಸೋನುಬಾಯಿ ಜುಮ್ಮು ತೋರವತ್ ಎಂಬ ಮಹಿಳೆಯೇ ಅಂಬ್ಯುಲೆನ್ಸ್ ನಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ.

ಹೆರಿಗೆಗೆ ಅಂತಾ ಸೋಮವಾರ ರಾತ್ರಿ ಮುಂಡಗೋಡ ತಾಲೂಕಾಸ್ಪತ್ರೆಗೆ 108 ಅಂಬ್ಯಲೆನ್ಸ್ ನಲ್ಲಿ ಕರೆದೊಯ್ಯುತ್ತಿದ್ದಾಗ ದಾರಿಮದ್ಯೆ ಹೆರಿಗೆ ನೋವು ತೀವ್ರವಾಗಿದೆ. ಹೀಗಾಗಿ ಅಂಬ್ಯುಲೆನ್ಸ್ ನಲ್ಲೆ ಸುರಕ್ಷಿತವಾಗಿ ಹೆರಿಗೆ ಮಾಡಿಸಿಕೊಳ್ಳಲಾಗಿದೆ.

108 ತುರ್ತು ವೈದ್ಯಕೀಯ ತಂತ್ರಜ್ಞ ಧನರಾಜ, ಚಾಲಕ ಪ್ರಕಾಶ್ ಬಾಗೇವಾಡಿ, ಆಶಾ ಕಾರ್ಯಕರ್ತೆ ಸವಿತಾ ಎಸ್ ಜನ್ನು ತಾಯಿಗೆ ಸೂಕ್ತ ಚಿಕಿತ್ಸೆ ನೀಡುವಲ್ಲಿ ಭಾಗಿಯಾಗಿದ್ರು. ಸದ್ಯ ಮಹಿಳೆಗೆ ತಾಲೂಕಾಸ್ಪತ್ರೆಯಲ್ಲಿ ದಾಖಲಿಸಿ ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿದೆ‌.

error: Content is protected !!