ಮುಂಡಗೋಡ: ಪಟ್ಟಣದ ಶಿವಾಜಿ ಸರ್ಕಲ್ ನಲ್ಲಿ ವಿವಿಧ ದಲಿತಪರ ಸಂಘಟನೆಗಳ ಒಕ್ಕೂಟ ಇಂದು ಸಿಡಿದೆದ್ದಿದ್ದವು. ರಾಯಚೂರಿನ ಜಿಲ್ಲಾ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ಡಾ.ಅಂಬೇಡ್ಕರರಿಗೆ ಅವಮಾನ ಮಾಡಿರೋ ಹಿನ್ನೆಲೆಯಲ್ಲಿ ಆ ನ್ಯಾಯಾಧೀಶರನ್ನು ವಜಾ ಮಾಡುವಂತೆ ಆಗ್ರಹಿಸಿ ಪ್ರತಿಭಟಿಸಿದ್ರು.
ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡಾ ರವರ ಪ್ರತಿಕೃತಿ ದಹಿಸಿ ಆಕ್ರೊಶ ಹೊರಹಾಕಿದ್ರು. ಈ ವೇಳೆ ದಲಿತ ಸಂಘಟನೆಗಳು ತಾಲೂಕಿನ ಬಹುತೇಕ ಎಲ್ಲಾ ಮುಖಂಡರು ಹಾಜರಿದ್ದರು.