Heavy rain Land Slide: ಕುಮಟಾ: ಉತ್ತರ ಕನ್ನಡ ಜಿಲ್ಲೆಯಲ್ಲಿ ನಿರಂತರ ಮಳೆ ಹಿನ್ನೆಲೆಯಲ್ಲಿ ಗುಡ್ಡ ಕುಸಿತಗಳು ಸಂಭವಿಸುತ್ತಿವೆ. ಕುಮಟಾ ತಾಲೂಕಿನಲ್ಲಿ ಸುರಿದ ಮಳೆಗೆ ಕುಮಟಾ ತಾಲೂಕಿನ ದೇವಿಮನೆ ಘಟ್ಟದಲ್ಲಿ ಇಂದು ಬೆಳಿಗ್ಗೆ ಮತ್ತೆ ಗುಡ್ಡ ಕುಸಿದಿದೆ. ಪರಿಣಾಮ ರಸ್ತೆ ಮೇಲೆ ಮಣ್ಣು, ಕಲ್ಲುಗಳು ಬಿದ್ದು ಸಂಚಾರ ಸಂಪೂರ್ಣ ಬಂದ್ ಆಗಿದೆ.

ರಾಷ್ಟ್ರೀಯ ಹೆದ್ದಾರಿ 766E ನಲ್ಲಿ ಕಲ್ಲು ಮಣ್ಣು ಬಿದ್ದ ಪರಿಣಾಮ, ಕುಮಟಾ-ಶಿರಸಿ ಹೆದ್ದಾರಿಯ ರಸ್ತೆ ಸಂಚಾರ ಬಂದ್ ಆಗಿದೆ. ಮೊದಲೇ ರಸ್ತೆ ಕಾಮಗಾರಿ ಪ್ರಗತಿಯಲ್ಲಿ ಇರೋದ್ರಿಂದ ಸಂಚಾರಕ್ಕೆ ಕಿರಿಕಿರಿ ಆಗಿದೆ. ಇನ್ನು, ಗುಡ್ಡ ಕುಸಿತವಾಗಿ ರಸ್ತೆ ಮೇಲೆ ಬಿದ್ದಿರೊ ಮಣ್ಣು, ಕಲ್ಲು ತೆರವು ಕಾರ್ಯ ನಡೆದಿದೆ.

ಆದ್ರೆ, ಶಿರಸಿ ತಾಲೂಕಿನ ಭಾಗದಲ್ಲಿ ಸಂಚಾರಕ್ಕೆ ಯಾವುದೇ ಸಮಸ್ಯೆ ಆಗಿಲ್ಲ ಅಂತಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

☝ದೇವಿಮನೆ ಘಟ್ಟದಲ್ಲಿ ಗುಡ್ಡ ಕುಸಿತದ ತೆರವು ಕಾರ್ಯ

ಇದನ್ನೂ ಓದಿ👉 60 ವರ್ಷದ ಅಂಗವಿಕಲ ವೃದ್ಧೆಯ ಮೇಲೆ ಅತ್ಯಾಚಾರ, ಕಾಡಿನಲ್ಲಿ ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿಯ ಕಾಲಿಗೆ ಗುಂಡೇಟು..!

error: Content is protected !!