Dandeli Crime News; ದಾಂಡೇಲಿ ತಾಲ್ಲೂಕಿನ ಕುಳಗಿ ಅರಣ್ಯ ಪ್ರದೇಶದಲ್ಲಿ ಗುಂಡಿನ ಸದ್ದು ಮೊಳಗಿದೆ. ತಪ್ಪಿಸಿಕೊಳ್ಳಲು ಯತ್ನಿಸಿದ ಅತ್ಯಾಚಾರ ಆರೋಪಿಯ ಕಾಲಿಗೆ ಪೊಲೀಸರು ಗುಂಡೇಟು ಕೊಟ್ಟಿದ್ದಾರೆ. 60 ವರ್ಷದ ಅಂಗವಿಕಲ ವೃದ್ಧೆಯ ಮೇಲೆ ಅತ್ಯಾಚಾರ ಮಾಡಿ ತಲೆ ಮೆರಸಿಕೊಂಡಿದ್ದ ಆರೋಪಿಯನ್ನು ದಾಂಡೇಲಿ ನಗರಠಾಣೆ ಪೋಲಿಸರು ಬಂಧಿಸುವ ವೇಳೆ ಈ ಘಟನೆ ನಡೆದಿದೆ. ಬಂಧಿತ ಫೈರೋಜ್ ಯರಗಟ್ಟಿ (23) ಎಂಬುವವನ ಕಾಲಿಗೆ ಗುಂಡು ಹಾರಿಸಲಾಗಿದೆ.

ಗುರುವಾರ ಮಧ್ಯಾಹ್ನ ಬೈಯಲಪಾರು ಐ.ಪಿ.ಎಮ್ ಏರಿಯಾದ ಹತ್ತಿರದ ಅರಣ್ಯ ಪ್ರದೇಶದಲ್ಲಿ 60 ವಯಸ್ಸಿನ ಅಂಗವಿಕಲ ವೃದ್ದೆಯನ್ನು ಕಾಡಿನ ಪ್ರದೇಶಕ್ಕೆ ಎತ್ತಿಕೊಂಡು ಹೋಗಿ ಅತ್ಯಾಚಾರ ಮಾಡಿ ಪರಾರಿಯಾಗಿದ್ದ.
ವಿಷಯ ತಿಳಿದ ಸ್ಥಳೀಯರು ಅತ್ಯಾಚಾರಕ್ಕೊಳಗಾದ ವೃದ್ಧೆಯನ್ನು ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದರು. ಅತ್ಮಾಚಾರ ಮಾಡಿದ ಆರೋಪಿಯ ಭಾವಚಿತ್ರವನ್ನು ಪೊಲೀಸ್ರು ತೋರಿಸಿದಾಗ ಆರೋಪಿಯನ್ನು ಸಂತ್ತಸ್ಥ ವೃದ್ದೆ ಗುರುತಿಸಿದ್ದಾರೆ.
ಹೀಗಾಗಿ, ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸ್ರು, ಕಳೆದ ಎರಡು ದಿನಗಳಿಂದ ಆರೋಪಿಗಾಗಿ ಬಲೆ ಬೀಸಿದ್ದರು. ಕುಳಗಿ ಅರಣ್ಯ ಪ್ರದೇಶದಲ್ಲಿ ಪಿಎಸ್ಐ ಕಿರಣ್ ಪಾಟೀಲ್ ನೇತೃತ್ವದ ತಂಡವು ಆರೋಪಿಯನ್ನು ಪತ್ತೆ ಹಚ್ಚಿತ್ತು. ಹೀಗಾಎ ಪತ್ತೆಯಾದ ಆರೋಪಿಯನ್ನು ಕರೆದುಕೊಂಡು ಬರುತ್ತಿರುವಾಗ ಆರೋಪಿಯು, ಪೋಲಿಸರ ಮೇಲೆ ಏಕಾಏಕಿ ಕಲ್ಲು ಮತ್ತು ಚಾಕುವಿನಿಂದ ದಾಳಿ ಮಾಡಿದ್ದಾನೆ. ಈ ಸಮಯದಲ್ಲಿ ಪೋಲೀಸರು ಎರಡು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ.ಇಷ್ಟಾದ್ರೂ ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿಯ ಕಾಲಿಗೆ ಗುಂಡು ಹಾರಿಸಲಾಗಿದೆ ಅಂತಾ ತಿಳಿದು ಬಂದಿದೆ.
ಗಾಯಗೊಂಡ ಪೋಲೀಸ ಸಿಬ್ಬಂದಿಗಳಾದ ಇಮ್ರಾನ್ ಕಂಬಾರಗಣವಿ ,ಕೃಷ್ಣಪ್ಪ ಬೆಳ್ಳಿವರಿ, ಹಾಗೂ ಆರೋಪಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
Dandeli crime News;
ಜಿಲ್ಲಾ ಪೋಲಿಸ ವರಿಷ್ಠಾಧಿಕಾರಿ ನಾರಾಯಣ್, ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿ ನಂತರ ಪತ್ರಿಕಾಗೋಷ್ಠಿ ನಡೆಸಿ ಸೂಕ್ತ ತನಿಖೆ ಕೈಗೊಂಡು ಆರೋಪಿಗೆ ಗಡಿಪಾರು ಮಾಡಲಾಗುತ್ತದೆ ಎಂದು ತಿಳಿದರು.
ಈ ಕಾರ್ಯಾಚರಣೆಯಲ್ಲಿ ದಾಂಡೇಲಿ ಡಿವೈಎಸ್ಪಿ ಶಿವಾನಂದ ಮದರಖಂಡಿ, ಪ್ರಭಾರಿ ಸಿಪಿಐ ಜಯಪಾಲ್ ಪಾಟೀಲ, ದಾಂಡೇಲಿ ನಗರಠಾಣೆಯ ಪಿಎಸ್ಐ ಅಮೀನ ಅತ್ತಾರ, ಯಲ್ಲಾಪುರ ಪಿಎಸ್ಐ ರಮೇಶ, ಜೊಯಿಡಾ ಸಿಪಿಐ ಚಂದ್ರಶೇಖರ ಹರಿಹರ, ಪಿಎಸ್ಐ ಮಹೇಶ್ ಮಾಳಿ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಇದ್ದರು.