ಹುನಗುಂದ ರೈತರ ಜಮೀನುಗಳಿಗೆ ರಸ್ತೆಯ ಸಮಸ್ಯೆ, ಅಧಿಕಾರಿಗಳ ಭೇಟಿ..!

ಮುಂಡಗೋಡ: ತಾಲೂಕಿನ ಹುನಗುಂದ ಗ್ರಾಮದ ರೈತರ ಜಮೀನುಗಳಿಗೆ ಹೋಗಲು ಶಾಶ್ವತ ರಸ್ತೆಯ ಸಮಸ್ಯೆ ಎದುರಾಗಿದೆ. ಹೀಗಾಗಿ ತಹಶೀಲ್ದಾರ ಕಾರ್ಯಾಲಯಕ್ಕೆ ಗ್ರಾಮದ ರೈತರು ಮನವಿ ಸಲ್ಲಿಸಿರೊ ಹಿನ್ನೆಲೆಯಲ್ಲಿ, ಇಂದು ಹುನಗುಂದ ಗ್ರಾಮದ ರೈತರ ಜಮೀನುಗಳಿಗೆ ಭೇಟಿ ನೀಡಿ ರಸ್ತೆಯ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಿದ್ರು. ಕಂದಾಯ ನಿರೀಕ್ಷಕ ಹಾಗೂ ಗ್ರಾಮ ಲೆಕ್ಕಾಧಿಕಾರಿ ಸ್ಥಳ ಪರಿಶೀಲನೆ ಮಾಡಿ ರೈತರೊಂದಿಗೆ ಚರ್ಚಿಸಿದ್ರು. ಸದ್ಯ ಕಬ್ಬಿನ ಕಟಾವು ಮಾಡಿ ಕಬ್ಬು ಸಾಗಿಸಲು ರಸ್ತೆಯ ಸಮಸ್ಯೆ ಎದುರಾಗಿದ್ದು ರೈತರು ಸಮಸ್ಯೆಯಲ್ಲಿದ್ದಾರೆ. ಹೀಗಾಗಿ ರೈತರಿಗೆ ಶೀಘ್ರವಾಗಿ ರಸ್ತೆಯ ವ್ಯವಸ್ಥೆ ಮಾಡಿಕೊಡಬೇಕಿದೆ.

error: Content is protected !!