Leopard Attack; ಕಾರವಾರ: ನಿರ್ಮಾಣ ಹಂತದ ಹೊಸ ಮನೆ ಸೇರಿಕೊಂಡಿದ್ದ ಚಿರತೆಯೊಂದು ಯುವಕನ ಮೇಲೆ ದಾಳಿ ಮಾಡಿದ ಘಟನೆ ಅಂಕೋಲಾ ತಾಲ್ಲೂಕಿನ ವಾಸರಕುದ್ರಿಗೆ ಗ್ರಾ.ಪಂ.ವ್ಯಾಪ್ತಿಯ ಉಳಗದ್ದೆ ಗ್ರಾಮದಲ್ಲಿ ನಡೆದಿದೆ. ಸಂತೋಷ್​ ಹೂವಣ್ಣ ಗೌಡ (24) ಎಂಬುವರು ಗಾಯಗೊಂಡಿದ್ದಾರೆ.

ಮನೆಯ ಪಕ್ಕದ ಹೊಸ ಮನೆಯಲ್ಲಿ ಚಿರತೆ ಅವಿತುಕೊಂಡಿತ್ತು. ಅಲ್ಲಿ ಒಣ ಹಾಕಿದ್ದ ಬಟ್ಟೆ ತರಲು ಹೋದ ಯುವತಿ ಚಿರತೆಯನ್ನು ಕಂಡು ಕಿರುಚುತ್ತಾ ಓಡಿ ಹೊರಬಂದಿದ್ದು, ಚಿರತೆಯೂ ಹೊರಗೆ ಬಂದಿದೆ. ಅದೇ ಕ್ಷಣದಲ್ಲಿ ಸಂತೋಷ್​ ಗೌಡ ಕೂಡ ಮನೆಯಿಂದ ಹೊರಬಂದಿದ್ದು, ಚಿರತೆ ದಾಳಿ ಮಾಡಿ ಓಡಿ ಹೆದರಿ ಓಡಿ ಹೋಗಿದೆ. ಸಂತೋಷ್ ಅವರ ಎರಡೂ ಕೈಗಳಿಗೆ ಪರಚಿದ ಗಾಯಗಳಾಗಿದ್ದು, ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಂಕೋಲಾ ಪಿಐ ಚಂದ್ರಶೇಖರ್​ ಮಠಪತಿ ಮತ್ತು ಸಿಬ್ಬಂದಿ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಇದನ್ನೂ ಓದಿ👉ದೇವಿಮನೆ ಘಟ್ಟದಲ್ಲಿ ಮತ್ತೆ ಗುಡ್ಡ ಕುಸಿತ, ರಸ್ತೆ ಮೇಲೆ ಬಿದ್ದ ಮಣ್ಣು, ಕಲ್ಲು, ಶಿರಸಿ-ಕುಮಟಾ ರಸ್ತೆ ಬಂದ್..!

error: Content is protected !!