Air India Plane Crash: ಅಹಮದಾಬಾದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕ್‌ಆಫ್ ಆದ ಕೆಲವೇ ಕ್ಷಣಗಳಲ್ಲಿ ಏರ್ ಇಂಡಿಯಾದ ಪ್ರಯಾಣಿಕ ವಿಮಾನ AI171 ಭೀಕರವಾಗಿ ಪತನಗೊಂಡಿದೆ. ಇದರ ಬೆನ್ನಲ್ಲೇ ಏರ್‌ಲೈನ್ ಷೇರುಗಳು ತೀವ್ರ ಕುಸಿತ ಕಂಡವು.

ಲಂಡನ್‌ನ ಗ್ಯಾಟ್‌ವಿಕ್‌ಗೆ ಹೊರಟಿದ್ದ ಬೋಯಿಂಗ್ 787-8 ಡ್ರೀಮ್‌ಲೈನರ್, ಟೇಕ್ಆಫ್‌ ಆದ ನಂತರ ಅಪಘಾತ ಸಂಭವಿಸಿದ್ದು, ಇದು ವಾಯುಯಾನ ವಲಯದಲ್ಲಿ ತೀವ್ರ ಆಘಾತವನ್ನುಂಟುಮಾಡಿದೆ. ಇದರ ಪರಿಣಾಮ ಪ್ರಮುಖ ಏರ್‌ಲೈನ್ ಕಂಪನಿಗಳ ಷೇರುಗಳು ಮಧ್ಯಾಹ್ನ ವಹಿವಾಟಿನಲ್ಲಿ ಗಮನಾರ್ಹವಾಗಿ ಕುಸಿತಕ್ಕೆ ಒಳಗಾದವು. ವಿಮಾನದಲ್ಲಿ 242 ಜನರು ಇದ್ದರು ಎಂದು ವಾಯುಯಾನ ನಿಯಂತ್ರಕ DGCA ದೃಢಪಡಿಸಿದೆ.

ಇದನ್ನೂ ಓದಿ👉 ವಿಮಾನ ಪತನ; 242 ಪ್ರಯಾಣಿಕರೂ ಸಾವು, ವಿಮಾನ ಬಿದ್ದಿದ್ದು ಹಾಸ್ಟೆಲ್ ಕಟ್ಟಡದ ಮೇಲೆ; 20ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಗಾಯ..!

ವಿಮಾನ ಪತನದ ಬೆನ್ನಲ್ಲೇ ಏರ್‌ಲೈನ್ ಷೇರುಗಳ ತೀವ್ರ ಕುಸಿತ
ವಿಮಾನ ಅಪಘಾತದ ಸುದ್ದಿ ಹೊರಬಿದ್ದ ಕೂಡಲೇ ಪ್ರಮುಖ ವಾಯುಯಾನ ಕಂಪನಿಗಳ ಷೇರುಗಳು ಕುಸಿತಕ್ಕೆ ಒಳಗಾದವು. TAAL ಎಂಟರ್‌ಪ್ರೈಸಸ್‌ನ ಷೇರುಗಳು ಶೇ.3.84 ರಷ್ಟು ಕುಸಿದರೆ, ಇಂಡಿಗೋದ ಮಾತೃ ಸಂಸ್ಥೆಯಾದ ಇಂಟರ್‌ಗ್ಲೋಬ್ ಏವಿಯೇಷನ್ ಲಿಮಿಟೆಡ್ ಷೇರು ಶೇ. 3.01ರಷ್ಟು ಕುಸಿಯಿತು.

ಸ್ಪೈಸ್‌ಜೆಟ್ ಷೇರು 1.85%, ಗ್ಲೋಬಲ್ ವೆಕ್ಟ್ರಾ ಹೆಲಿಕಾರ್ಪ್ ಲಿಮಿಟೆಡ್ 0.96% ಕುಸಿತಕ್ಕೆ ಒಳಗಾದವು. ಏರ್ ಇಂಡಿಯಾ ಅಪಘಾತದ ಸುದ್ದಿ ಹರಡಿದ ತಕ್ಷಣ ಮಾರುಕಟ್ಟೆ ತೀವ್ರವಾಗಿ ಪ್ರತಿಕ್ರಿಯಿಸಿತು. ಇದು ಏರ್‌ಲೈನ್ ವಲಯದಲ್ಲಿ ಹೂಡಿಕೆದಾರರ ಕಳವಳಕ್ಕೆ ಕಾರಣವಾಯಿತು.

ಇದನ್ನೂ ಓದಿ👉 ಏರ್ ಇಂಡಿಯಾ ವಿಮಾನ ಪತನ, ಜಗತ್ತನ್ನೇ ಬೆಚ್ಚಿ ಬೀಳಿಸಿದ ಬಹುದೊಡ್ಡ ದುರಂತ..! ವಿಮಾನದಲ್ಲಿದ್ದ 242 ಪ್ರಯಾಣಿಕರು ಸಾವು?

ಟಾಟಾ ಗ್ರೂಪ್ ಷೇರುಗಳಿಗೆ ಭಾರೀ ಹೊಡೆತ
ಏರ್ ಇಂಡಿಯಾದ ಮಾಲೀಕತ್ವವನ್ನು ಹೊಂದಿರುವ ಟಾಟಾ ಗ್ರೂಪ್ ಕಂಪನಿಗಳು ಗುರುವಾರ ತೀವ್ರ ಕುಸಿತಕ್ಕೆ ಸಾಕ್ಷಿಯಾಯಿತು. ಟಾಟಾ ಇನ್ವೆಸ್ಟ್‌ಮೆಂಟ್ ಕಾರ್ಪೊರೇಶನ್ ಷೇರು ಶೇ.3.62 ರಷ್ಟು ಕುಸಿದರೆ, ಟಾಟಾ ಕೆಮಿಕಲ್ಸ್ ಶೇ.2.55 ರಷ್ಟು ಇಳಿಕೆ ಕಂಡಿದೆ.

ಇದಲ್ಲದೆ ಟಾಟಾ ಪವರ್, ಟಾಟಾ ಎಲ್ಕ್ಸಿ, ಟಾಟಾ ಸ್ಟೀಲ್, ಟಾಟಾ ಕನ್ಸ್ಯೂಮರ್ ಪ್ರಾಡಕ್ಟ್ಸ್ ಮತ್ತು ಟಾಟಾ ಟೆಕ್ನಾಲಜೀಸ್ ಸೇರಿದಂತೆ ಇತರೆ ಟಾಟಾ ಗ್ರೂಪ್‌ ಷೇರುಗಳು ಶೇ.2ಕ್ಕೂ ಹೆಚ್ಚು ಕುಸಿತ ಕಂಡವು.

ಬೋಯಿಂಗ್‌ನ ಷೇರುಗಳಲ್ಲಿ 8% ಕುಸಿತ
ದೇಶೀಯ ಬೆಂಚ್‌ಮಾರ್ಕ್‌ ಸೂಚ್ಯಂಕಗಳು ಕುಸಿತಕ್ಕೆ ಒಳಗಾದ ಸಂದರ್ಭದಲ್ಲೇ, ಜಾಗತಿಕವಾಗಿ ಮಾರುಕಟ್ಟೆ ಮೇಲೂ ಇದು ಪರಿಣಾಮ ಬೀರಿದೆ. ವಿಮಾನ ತಯಾರಕ ಕಂಪನಿ ಬೋಯಿಂಗ್‌ನ ಷೇರುಗಳು ಪ್ರೀ-ಮಾರ್ಕೆಟ್‌ ಸೆಷನ್‌ನಲ್ಲಿ ಕುಸಿತಕ್ಕೆ ಒಳಗಾಗಿದ್ದು, ಶೇ.8ರಷ್ಟು ಕುಸಿದಿದೆ.

ವಿಮಾನದ ವಿವರಗಳನ್ನು ದೃಢಪಡಿಸಿದ DGCA
ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್ (DGCA) ಪತನಗೊಂಡ ವಿಮಾನವು ಬೋಯಿಂಗ್ 787-8 ಡ್ರೀಮ್‌ಲೈನರ್ ಎಂದು ದೃಢಪಡಿಸಿದೆ. ಇದರಲ್ಲಿ 2 ಪೈಲಟ್‌ಗಳು ಮತ್ತು 10 ಕ್ಯಾಬಿನ್ ಸಿಬ್ಬಂದಿ ಸದಸ್ಯರು ಸೇರಿದಂತೆ 242 ಜನರು ಇದ್ದರು. “ವಿಮಾನವು ಕ್ಯಾಪ್ಟನ್ ಸುಮೇಶ್ ಸಬರ್‌ವಾಲ್ ಅವರ ಕಮಾಂಡ್‌ನಲ್ಲಿತ್ತು.

ಫಸ್ಟ್ ಆಫೀಸರ್ ಕ್ಲೈವ್ ಕುಂದರ್ ಸಹ ಇದ್ದರು. ಕ್ಯಾಪ್ಟನ್ ಸುಮೇಶ್ ಸಬರ್‌ವಾಲ್ 8200 ಗಂಟೆಗಳ ಅನುಭವ ಹೊಂದಿರುವ ಎಲ್‌ಟಿಸಿ ಆಗಿದ್ದಾರೆ. ಸಹ-ಪೈಲಟ್ 1100 ಗಂಟೆಗಳ ಹಾರಾಟದ ಅನುಭವ ಹೊಂದಿದ್ದರು” ಎಂದು DGCA ತಿಳಿಸಿದೆ.

 

error: Content is protected !!