ವಿಮಾನ ಪತನ; 242 ಪ್ರಯಾಣಿಕರೂ ಸಾವು, ವಿಮಾನ ಬಿದ್ದಿದ್ದು ಹಾಸ್ಟೆಲ್ ಕಟ್ಟಡದ ಮೇಲೆ; 20ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಗಾಯ..!

Air India Plane Crash:
ಅಹಮದಾಬಾದ್: ಅಹಮದಾಬಾದ್ ವಿಮಾನ ನಿಲ್ದಾಣದಿಂದ ಟೇಕಾಫ್ ಆದ ಕೆಲವೇ ಹೊತ್ತಿನಲ್ಲಿ 242 ಪ್ರಯಾಣಿಕರಿದ್ದ ವಿಮಾನ ಇಂದು ಪತನಗೊಂಡಿದೆ. ವಿಮಾನ ಪತನಕ್ಕೂ ಮುನ್ನ ಪೈಲಟ್ ಕೊನೇಯ ಎಚ್ಚರಿಕೆಯ ಸಂದೇಶ ರವಾನಿಸಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಸದ್ಯ ವಿಮಾನದಲ್ಲಿದ್ದ 242 ಪ್ರಯಾಣಿಕರೂ ಕೂಡ ದುರ್ಮರಣವಾಗಿದ್ದಾರೆ ಅನ್ನೊ ಮಾಹಿತಿ ಲಭ್ಯವಾಗಿದೆ. ಇನ್ನು ಹಾಸ್ಟೆಲ್ ಮೇಲೆ ವಿಮಾನ ಪತನಗೊಂಡಿರೋ ಕಾರಣಕ್ಕೆ ಅಲ್ಲಿನ ಸಾವು ನೋವಿನ ಬಗ್ಗೆ ಇನ್ನೂ ನಿಖರ ಮಾಹಿತಿ ಲಭ್ಯವಾಗಿಲ್ಲ.

ಎಟಿಸಿಗೆ ‘ಮೇ ಡೇ ಕಾಲ್’​ ಮಾಡಿ ತುರ್ತು ಲ್ಯಾಂಡಿಂಗ್​​ಗೆ ಪೈಲಟ್​ ಕೋರಿದ್ದಾರೆ. ಎಟಿಸಿ ಕ್ರಮ ಕೈಗೊಳ್ಳುವ ಹಂತದಲ್ಲಿತ್ತು. ಆದರೆ, ಮೇ ಡೇ ಕಾಲ್​ ಸಿಕ್ಕ ಕೆಲವೇ ಕ್ಷಣಗಳಲ್ಲಿ ವಿಮಾನದ ಸಂಪರ್ಕ ಕಡಿತಗೊಂಡಿದೆ ಎಂದು ತಿಳಿದು ಬಂದಿದೆ.

ಹಾಸ್ಟೆಲ್​ ಕಟ್ಟಡದ ಮೇಲೆ ವಿಮಾನ ಪತನ:          ಮೇಘನಿ ನಗರದಲ್ಲಿರುವ ಬಿಜೆ ಮೆಡಿಕಲ್​ ಕಾಲೇಜಿನ ಹಾಸ್ಟೆಲ್​ ಕಟ್ಟಡದ ಮೇಲೆ ವಿಮಾನ ಪತನಗೊಂಡಿದೆ. ಹಾಸ್ಟೆಲ್​ನ 20ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ. ಹಾಸ್ಟೆಲ್​​ನಲ್ಲಿ ವಿದ್ಯಾರ್ಥಿಗಳು ಊಟ ಮಾಡುವ ವೇಳೆ ವಿಮಾನ ಬಿದ್ದಿದೆ. ಕಟ್ಟಡಕ್ಕೆ ತೀವ್ರ ಹಾನಿಯಾಗಿರುವುದನ್ನು ದೃಶ್ಯಗಳಲ್ಲಿ ನೋಡಬಹುದು.

 ಇದನ್ನೂ ಓದಿ👉 ಏರ್ ಇಂಡಿಯಾ ವಿಮಾನ ಪತನ; ಕುಸಿದು ಬಿದ್ದ ಟಾಟಾ ಸ್ಟಾಕ್ಸ್, ಬೋಯಿಂಗ್ ಷೇರು 8% ಇಳಿಕೆ..!

Air India Plane Crash:

ಬೋಯಿಂಗ್ 787-8 ವಿಮಾನದಲ್ಲಿ 242 ಪ್ರಯಾಣಿಕರು ಮತ್ತು ಸಿಬ್ಬಂದಿ ಇದ್ದರು. ಈ ಪೈಕಿ 169 ಭಾರತೀಯ, 53 ಬ್ರಿಟಿಷ್, ಓರ್ವ ಕೆನಡಾ ಮತ್ತು 7 ಪೋರ್ಚುಗೀಸ್ ಪ್ರಜೆಗಳಿದ್ದರು ಎಂದು ಏರ್​ ಇಂಡಿಯಾ ಎಕ್ಸ್​ ಮೂಲಕ ತಿಳಿಸಿದೆ. ಇದ್ರಲ್ಲಿ ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕೂ ದುರ್ಮರಣ ಕಂಡಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ.

 ಇದನ್ನೂ ಓದಿ👉ಏರ್ ಇಂಡಿಯಾ ವಿಮಾನ ಪತನ, ಜಗತ್ತನ್ನೇ ಬೆಚ್ಚಿ ಬೀಳಿಸಿದ ಬಹುದೊಡ್ಡ ದುರಂತ..! ವಿಮಾನದಲ್ಲಿದ್ದ 242 ಪ್ರಯಾಣಿಕರು ಸಾವು?

ದುರಂತದ ಬಗ್ಗೆ ಮಾಹಿತಿ ಪಡೆದುಕೊಳ್ಳಲು ಏರ್​ ಇಂಡಿಯಾ ಸಹಾಯವಾಣಿ ತೆರೆದಿದೆ. 1800 5691 444 ಕರೆ ಮಾಡಿ ಪ್ರಯಾಣಿಕರ ಬಗ್ಗೆ ಮಾಹಿತಿ ಪಡೆದುಕೊಳ್ಳುವಂತೆ ಏರ್​ ಇಂಡಿಯಾ ಸಹಾಯವಾಣಿ ತೆರೆದಿದೆ. ಇನ್ನು ವಿಮಾನ ಪತನದ ಬಗ್ಗೆ ಗುಜರಾತ್​ ಸರ್ಕಾರ ತನಿಖೆಗೆ ಸೂಚಿಸಿದ್ದು, ತನಿಖೆಗೆ ಸಂಪೂರ್ಣವಾಗಿ ಸಹಕರಿಸುವುದಾಗಿ ಏರ್​ ಇಂಡಿಯಾ ಹೇಳಿದೆ.

error: Content is protected !!