BPL CARD NEWS; ಕಾರವಾರ; ರಾಷ್ಟ್ರೀಯ ಆಹಾರ ಭಧ್ರತಾ ಕಾಯ್ದೆ ಎನ್ಎಫ್ಎಸ್ಎ 2013 ರಡಿಯಲ್ಲಿ ಶೇ.100 ರಷ್ಟು ಅಂತ್ಯೋದಯ ಮತ್ತು ಬಿಪಿಎಲ್ ಪಡಿತರ ಚೀಟಿಯಲ್ಲಿನ ಎಲ್ಲ ಸದಸ್ಯರ ಇಕೆವೈಸಿಯನ್ನು ಜೂ.30 ರೊಳಗಾಗಿ ಪೂರ್ಣಗೊಳಿಸ ಬೇಕಾಗಿರುವುದರಿಂದ ಅಂತ್ಯೋದಯ ಹಾಗೂ ಆದ್ಯತಾ (ಬಿಪಿಎಲ್) ಪಡಿತರ ಚೀಟಿಯಲ್ಲಿನ ಯಾವುದೇ ಸದಸ್ಯರ ಇಕೆವೈಸಿ ಆಗದೇ ಇದ್ದಲ್ಲಿ ಅಂತಹ ಸದಸ್ಯರು ತಕ್ಷಣ ನಿಮ್ಮ ಪಡಿತರ ಚೀಟಿಯಲ್ಲಿ ನಮೂದಿಸಿದ ಹತ್ತಿರದ ನ್ಯಾಯಾಬೆಲೆ ಅಂಗಡಿಗೆ ಅಥವಾ ಗ್ರಾಮ ಒನ್/ ಕರ್ನಾಟಕ ಒನ್ ಕೇಂದ್ರಕ್ಕೆ ತಮ್ಮ ಆಧಾರ್ ಕಾರ್ಡ್ ಹಾಗೂ ಪಡಿತರ ಚೀಟಿಯೊಂದಿಗೆ ಭೇಟಿ ನೀಡಿ ಬೆರಳಚ್ಚು ನೀಡುವ ಮೂಲಕ ಇಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸತಕ್ಕದ್ದು. ಇದು ಅಂತಿಮ ಅವಕಾಶವಾಗಿರುತ್ತದೆ.
ಮುಂದಿನ ದಿನಗಳಲ್ಲಿ ಇಕೆವೈಸಿ ಆಗದೇ ಇರುವ ಸದಸ್ಯರ ಹೆಸರನ್ನು ಪಡಿತರ ಚೀಟಿಗಳಿಂದ ಕಡಿತಗೊಳಿಸಿದ್ದಲ್ಲಿ ಸಂಬಂಧಿಸಿದ ಪಡಿತರ ಚೀಟಿದಾರರೇ ಜವಾಬ್ದಾರರಾಗಿರುತ್ತಾರೆ ಎಂದು ಆಹಾರ ನಾಗರಿಕ ಸರಬರಾಜು ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.