Mundgod Crime News; ಮುಂಡಗೋಡ ಪೊಲೀಸರು ಬೈಕ್ ಕಳ್ಳತನ ಪ್ರಕರಣವನ್ನು ಭೇದಿಸಿದ್ದಾರೆ. ಬೈಕ್ ಕಳ್ಳತನ ಮಾಡಿದ್ದ ಬೈಕ್ ಕಳ್ಳನನ್ನು ಹೆಡೆಮುರಿ ಕಟ್ಟಿರೋ ಪೊಲೀಸ್ರು ಯಲ್ಲಾಪುರ ತಾಲೂಕಿನ ಮಂಚಿಕೇರಿಯಿಂದ ಎಳೆದು ತಂದಿದ್ದಾರೆ.

ಅಂದಹಾಗೆ, ಬೈಕ್ ಕಳ್ಳತನ ಮಾಡಿದ್ದ ಆರೋಪಿ, ಯಲ್ಲಾಪುರ ತಾಲೂಕಿನ ಮಂಚಿಕೇರಿಯ ನಾಸಿರ್ ಅಹಮ್ಮದ್ ಇಮಾಮಸಾಬ್ ಸಯ್ಯದ್‌ “ಸಿದ್ದಿ”(35) ಎಂಬಾತನನ್ನು ಬಂಧಿಸಿದ್ದಾರೆ.

ಅಂದಹಾಗೆ, ಪಟ್ಟಣ ಪಂಚಾಯತಿಯ ಸಭಾಭವನದ ಹತ್ತಿರ ಕಳೆದ ಮೇ 30 ರಂದು, ಲಾಕ್ ಮಾಡಿ ನಿಲ್ಲಿಸಿದ್ದ ಪ್ಲಾಟಿನಾ ಬೈಕನ್ನು ಕಳ್ಳತನ ಮಾಡಲಾಗಿತ್ತು. ಹಾಗಂತ, ಮುಂಡಗೋಡ ನ್ಯಾಸರ್ಗಿ ಪ್ಲಾಟ್ ನ ಮುತ್ತಣ್ಣ ರಾಮಣ್ಣ ಭೋವಿ ಎಂಬುವವರು ಮುಂಡಗೋಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಹೀಗಾಗಿ, ಕಾರ್ಯಾಚರಣೆಗ ಇಳಿದ ಪೊಲಿಸ್ರು ಪ್ರಕರಣವನ್ನು ಅಚ್ಚುಕಟ್ಟಾಗಿ ಬೇಧಿಸಿದ್ದಾರೆ.

ಇದನ್ನೂ ಓದಿ👉 ಭಾರೀ ಮಳೆ ಮುನ್ನೆಚ್ಚರಿಕೆ ಹಿನ್ನೆಲೆ, ಜಿಲ್ಲೆಯ ಈ ತಾಲೂಕುಗಳ ಅಂಗನವಾಡಿ, ಪ್ರಾಥಮಿಕ, ಪ್ರೌಢ ಶಾಲೆಗಳಿಗೆ ರಜೆ..!

ಈ ಪ್ರಕರಣವನ್ನು ಭೇದಿಸಲು ಉತ್ತರ ಕನ್ನಡ ಎಸ್ಪಿ ಎಂ. ನಾರಾಯಣ್, ಹೆಚ್ಚುವರಿ ಎಸ್ಪಿಗಳಾದ ಕೃಷ್ಣಮೂರ್ತಿ. ಜಿ, ಜಗದೀಶ ನಾಯ್ಕ, ನಿರ್ದೇಶನದಲ್ಲಿ, ಶಿರಸಿ ಡಿವೈಎಸ್ಪಿ ಶ್ರೀಮತಿ ಗೀತಾ ಪಾಟೀಲ್ ರವರ ಮಾರ್ಗದರ್ಶನದಲ್ಲಿ, ಮುಂಡಗೋಡ ಪಿಐ ರಂಗನಾಥ ನೀಲಮ್ಮನವರ್ ನೇತೃತ್ವದಲ್ಲಿ, ಕ್ರೈಂ ಪಿಎಸ್ಐ ವಿನೋದ್ ಎಸ್.ಕೆ, ಪಿಎಸ್ಐ ಪರಶುರಾಮ ಮಿರ್ಜಗಿ ಹಾಗೂ ಸಿಬ್ಬಂದಿಗಳಾದ ಮಂಜು ಚಿಂಚಲಿ, ಕೋಟೇಶ ನಾಗರವಳ್ಳಿ, ಅಣ್ಣಪ್ಪ ಬುಡಿಗೇರ, ತಿರುಪತಿ ಚೌಡಣ್ಣನವರ, ಬಸವರಾಜ ಲಂಬಾಣಿ ಹಾಗೂ ಟೇಕ್ನಿಕಲ್ ಸೆಲ್ ಕಾರವಾರದ ಸಿಬ್ಬಂದಿ ಉದಯ ಗುನಗಾ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಇವರುಗಳಿಗೆ ಮಾನ್ಯ ಪೊಲೀಸ್ ಅಧೀಕ್ಷಕರು ಪ್ರಶಂಸಿಸಿ ಶ್ಲಾಘನೆ ವ್ಯಕ್ತಪಡಿಸಿರುತ್ತಾರೆ.

error: Content is protected !!