Crime News: ಶಿರಸಿ ನಗರ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ, ಅಕ್ರಮವಾಗಿ ಸ್ಕೂಟಿಯಲ್ಲಿ ಕುಮಟಾ ದಿಂದ ಶಿರಸಿಗೆ ಗಾಂಜಾ ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ನೀಲೇಕಣಿ ಕ್ರಾಸ್ ಬಳಿ ಬಂಧಿಸಿದ್ದಾರೆ.
ಅನುರಾಗ ಗುರು ಜೋಗಳೇಕರ್ (23) , ಸೋಹನ್ ಎಲ್. ಭಂಡಾರಿ(23) ಗಾಂಜಾ ಸಾಗಾಟದಲ್ಲಿ ಸಿಕ್ಕಿ ಬಿದ್ದವರು. ಅನುರಾಗ ಶಿರಸಿ ತಾಮೀರ್ ಕೋಅಪರೇಟಿವ್ ಸೊಸೈಟಿ ಹತ್ತಿರದ ನಿವಾಸಿ. ಸೋಹನ್ ಶಿರಸಿ ಬಸ್ ಡಿಪೋ ಹತ್ತಿರದ ನಿವಾಸಿ. ಇವರಿಂದ 101 ಗ್ರಾಂ, ಗಾಂಜಾ, ಸ್ಕೂಟಿ ವಶಪಡಿಸಿ ಕೊಳ್ಳಲಾಗಿದೆ.
ಡಿವೈಎಸ್ಪಿ ಗೀತಾ, ಸಿಪಿಐ ಶಶಿಕಾಂತ ವರ್ಮ ಮಾರ್ಗದರ್ಶನದಲ್ಲಿ, ಪಿಎಸ್ ಐ ನಾಗಪ್ಪ ಬಿ. ಹನುಮಂತ ಕಬಾಡಿ ಹಾಗೂ ಸಿಬ್ಬಂದಿಗಳು ಗಾಂಜಾ ಆರೋಪಿಗಳನ್ನು ಬಂಧಿಸಿ, ಕಾನೂನು ಕ್ರಮ ಕೈಗೊಂಡಿದ್ದಾರೆ.