Student Free Bus Pass;ಕಾರವಾರ; ಪ್ರಸಕ್ತ ಸಾಲಿನ ಶೈಕ್ಷಣಿಕ ಅವಧಿಯು ಪ್ರಾರಂಭವಾಗಿದ್ದು, ಪ್ರಾಥಮಿಕ ವರ್ಗದಿಂದ ಪಿ.ಯು.ಸಿ.ವರ್ಗದವರೆಗೆ ವಿದ್ಯಾರ್ಥಿ ಬಸ್ ಪಾಸ್ ಗಾಗಿ ಇ.ಡಿ.ಸಿ.ಎಸ್ ಇಲಾಖೆಯ ಸೇವಾಸಿಂಧು ಮುಖೇನ ಸಂಸ್ಥೆಯ ಬಸ್ ಪಾಸ್ ಪಡೆಯಲು ಅರ್ಜಿ ಸಲ್ಲಿಸಿ ಕರ್ನಾಟಕ-1/ಗ್ರಾಮ-1 ಕೇಂದ್ರಗಳಲ್ಲಿ ಸ್ಮಾರ್ಟಕಾರ್ಡ ಆಧಾರಿತ ಬಸ್ ಪಾಸ್ ಪಡೆಯಲು ನಿರ್ದೇಶನ ಜಾರಿ ಮಾಡಲಾಗಿತ್ತು.
ಇ.ಡಿ.ಸಿ.ಎಸ್ ಇಲಾಖೆಯ ತಾಂತ್ರಿಕ ದೋಷದಿಂದಾಗಿ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಕರ್ನಾಟಕ-1/ಗ್ರಾಮ-1 ಕೇಂದ್ರಗಳಲ್ಲಿ ಬಸ್ ಪಾಸ್ ಮುದ್ರಣದಲ್ಲಿ ತೊಂದರೆ ಉಂಟಾಗಿರುವುದರಿಂದ ಸದರಿ ಸಮಸ್ಯೆ ನಿವಾರಣೆಯಾಗುವವರೆಗೆ ಅಥವಾ ಇಂದಿನಿಂದ ಗರಿಷ್ಠ ಒಂದು ತಿಂಗಳ ವರೆಗೆ ಮಾತ್ರ ಸೇವಾಸಿಂಧು ಮುಖೇನ ಸಂಸ್ಥೆಯ ವಿದ್ಯಾರ್ಥಿ ಬಸ್ ಪಾಸ್ ಪಡೆಯಲು ಸಲ್ಲಿಸಲಾದ ಸಕಾಲ ಅರ್ಜಿ ಸ್ವೀಕೃತಿ ಮತ್ತು ವಿದ್ಯಾರ್ಥಿ ಮೂಲ ಗುರುತಿನ ಚೀಟಿ (ಉದಾ: ಆಧಾರ/ಶಾಲಾ ಪ್ರಾಂಶುಪಾಲರ ಸಹಿ ಒಳಗೊಂಡ ಪೋಟೊ ಹೊಂದಿರುವ ಗುರುತಿನ ಚೀಟಿ/ದೃಢೀಕೃತ ದಾಖಲೆಗಳನ್ನು ತೋರಿಸಿ, ಸಕಾಲ ಸ್ವೀಕೃತಿಯಲ್ಲಿ ನಮೂದಿಸಿದ ಮಾರ್ಗದಲ್ಲಿ ಕಾರ್ಯಾಚರಿಸುವ ಸಂಸ್ಥೆಯ ನಗರ/ಉಪನಗರ/ಸಾಮಾನ್ಯ/ವೇಗದೂತ ಸಾರಿಗೆಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.