ಮುಂಡಗೋಡಿನಲ್ಲಿ ಅನಾರೋಗ್ಯಕ್ಕೀಡಾಗಿ ಬಳಲುತ್ತಿದ್ದ ಕರು ರಕ್ಷಿಸಿದ ಯುವಕರು..!

ಮುಂಡಗೋಡ: ಪಟ್ಟಣದ ಶಿವಾಜಿ ವೃತ್ತದಲ್ಲಿ ತೀವ್ರ ಅನಾರೋಗ್ಯಕ್ಕೀಡಾಗಿ ಅಸ್ವಸ್ಥಗೊಂಡು ಬಿದ್ದು ಒದ್ದಾಡುತ್ತಿದ್ದ ಆಕಳ ಕರುವನ್ನು ಯುವಕರು ಆರೈಕೆ‌ ಮಾಡಿದ್ದಾರೆ. ಬಿಸಿಲಿನ ತಾಪಕ್ಕೆ ಬಸವಳಿದಿದ್ದ ಕರುವಿಗೆ ಪಶುವೈದ್ಯರನ್ನು ಕರೆಯಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಈ ವೇಳೆ ತನ್ನ ಕಂದನಿಗೆ ತೀವ್ರ ಅನಾರೋಗ್ಯವಾಗಿದೆ ಅಂದು ಅರಿತ ಆಕಳು ಕರುವಿಗಾಗಿ ಗೋಳಾಡುತ್ತಿದ್ದ ದೃಷ್ಯ ಕಂಡು ಬಂತು.. ಈ ವೇಳೆ ಯುವಕರ ಮಾನವೀಯ ಕಾರ್ಯ ಸಾರ್ವಜನಿಕರ ಶ್ಲಾಘನೆಗೆ ಕಾರಣವಾಗಿದೆ.

error: Content is protected !!