ಹನುಮಾಪುರ ಕಾಳಿಕಾಮಠದ ಉತ್ತರಾಧಿಕಾರಿ ನೇಮಕಕ್ಕೆ ವಿರೋಧ, ತಹಶೀಲ್ದಾರರಿಗೆ ಮನವಿ..!
ಮುಂಡಗೋಡ: ತಾಲೂಕಿನ ಹನುಮಾಪುರ ಕಾಳಿಕಾದೇವಿ ಮಠದ ಉತ್ತರಾಧಿಕಾರಿ ನೇಮಕ ವಿಚಾರದಲ್ಲಿ ವಿರೋಧ ವ್ಯಕ್ತ ಪಡಿಸಿ ಭಕ್ತರು ತಹಶೀಲ್ದಾರರಿಗೆ ಮನವಿ ಸಲ್ಲಿಸಿದ್ರು.
ಮಠದಲ್ಲಿ ಭಾರೀ ಅವ್ಯವಹಾರದ ವಾಸನೆ ಬರ್ತಿದೆ. ಮಠದ ಆಸ್ತಿ ಕಬಳಿಸಲು ಹುನ್ನಾರ ನಡೀತಿದೆ. ಉತ್ತರಾಧಿಕಾರಿ ಮಠದ ಹಣ, ಒಡವೆ ಕದ್ದುಕೊಂಡು ರಾತ್ರೊ ರಾತ್ರಿ ನಾಪತ್ತೆಯಾಗಿದ್ದಾರೆ. ಅವರ ಕುರಿತು ಈಗಾಗಲೇ ಮುಂಡಗೋಡ ಠಾಣೆಯಲ್ಲಿ ಪ್ರಕರಣ ದಾಖಲಿಸಲು ಮುಂದಾದಾಗ ರಾಜಕೀಯ ಒತ್ತಡದಿಂದ ಕೇಸು ದಾಖಲಾಗದಂತೆ ನೋಡಿಕೊಂಡಿದ್ದಾರೆ.
ಹಿಗಾಗಿ, ಇದ್ರಲ್ಲಿ ಫೀಠಾಧಿಪತಿಗಳು ಉತ್ತರಾಧಿಕಾರಿಗಳ ನೇಮಕ ಮಾಡೋದನ್ನ ನಾವು ಒಪ್ಪುವುದಿಲ್ಲ. ಅಂತಾ ವಿರೋಧಿಸಿ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ತಹಶೀಲ್ದಾರ ಮೂಲಕ ಮನವಿ ಅರ್ಪಿಸಿದ್ದಾರೆ.
ಇನ್ನು ಇದಕ್ಕೂ ಮೊದಲು ಪಟ್ಟಣದ ಬಸವಣ್ಣ ದೇವಸ್ಥಾನದಲ್ಲಿ ಸಭೆ ಸೇರಿದ್ದ ಭಕ್ತರು ಮುಂದಿನ ಹೋರಾಟದ ಬಗ್ಗೆ ಚರ್ಚಿಸಿದ್ರು.