ಮುಂಡಗೋಡ: ತಾಲೂಕಿನಲ್ಲಿ ಶುಕ್ರವಾರ ಕೊರೋನಾ ಮತ್ತೆ ಅಟ್ಟಹಾಸ ಮೆರೆದಿದೆ. ಇಂದು ಬರೋಬ್ಬರಿ 138 ಪಾಸಿಟಿವ್ ದೃಢ ಪಟ್ಟಿದೆ. ಅಚ್ಚರಿಯ ಸಂಗತಿಯೆಂದ್ರೆ, ಇಂದಿನ ಪ್ರಕರಣಗಳ ಸಂಖ್ಯೆಯಲ್ಲಿ ಬಹುಪಾಲು ವಿದ್ಯಾರ್ಥಿಗಳದ್ದೇ ಆಗಿದೆ.
ಇಂದು ಪಟ್ಟಣದ ಜೂನಿಯರ್ ಕಾಲೇಜಿನಲ್ಲಿ ಅತಿಹೆಚ್ಚು ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಇದೊಂದೇ ಕಾಲೇಜಿನಲ್ಲಿ ಬರೋಬ್ಬರಿ 27 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು ಆತಂಕಕ್ಕೆ ಕಾರಣವಾಗಿದೆ. ಅದ್ರಂತೆ ಇನ್ನು ಹಲವು ಶಾಲೆಗಳು, ಕಾಲೇಜುಗಳಲ್ಲಿ ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು ಪಾಲಕರಿಗೆ ಆತಂಕ ತಂದಿಟ್ಟಿದೆ.
ಇನ್ನು, ತಾಲೂಕಿನ ಬಹುತೇಕ ಶಾಲೆಗಳಲ್ಲಿ ಕೋವಿಡ್ ಪರೀಕ್ಷೆ ಮಾಡಲಾಗುತ್ತಿದೆ. ಹೀಗಾಗಿ ಪ್ರತಿಯೊಂದೂ ಶಾಲೆಗಳಲ್ಲೂ ಹಿಂಡು ಹಿಂಡು ಪಾಸಿಟಿವ್ ಪ್ರಕರಣಗಳು ದಾಖಲಾಗುತ್ತಿವೆ. ಹೀಗಾಗಿ, ತಾಲೂಕಿನಲ್ಲಿ ಕೆಲವು ಶಾಲೆಗಳಿಗೆ ಈಗಾಗಲೇ ರಜೆ ಘೋಷಣೆ ಮಾಡಲಾಗಿದೆ.