ಮುಂಡಗೋಡ: ತಾಲೂಕಿನ ಇಂದೂರಿನಲ್ಲಿಂದು ಪರಿಸರ ಜಾಗ್ರತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಇಂದೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ, ಪರಿಸರ ಸಂರಕ್ಷಣೆಯ ಕುರಿತು ಜಾಗ್ರತಿ ಮೂಡಿಸಲಾಯಿತು. ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ವಿ.ವಿ.ನಡುವಿನಮನಿ, ಗ್ರಾಮ ಪಂಚಾಯತಿ ಉಪಾಧ್ಯಕ್ಷ ಸಿಖಂದರ್, SDMC ಅಧ್ಯಕ್ಷ ಮಂಜುನಾಥ ನಡಗೇರಿ ಸೇರಿದಂತೆ ಹಲವು ಪದಾಧಿಕಾರಿಗಳು, ಅರಣ್ಯ ಇಲಾಖೆ ಅಧಿಕಾರಿಗಳು, ಗ್ರಾಮಸ್ಥರು ಪಾಲ್ಗೊಂಡಿದ್ದರು.
Top Stories
ಮುಂಡಗೋಡ ಅಜಾದ್ ಬ್ಯಾಂಕ್ ಅಧ್ಯಕ್ಷರಾಗಿ ಮಹ್ಮದ್ ಗೌಸ್ ಧುಂಡಸಿ ಆಯ್ಕೆ..!
ಕುಂಭಮೇಳಕ್ಕೆ ಹೋಗಿದ್ದ ನಾಲ್ವರು ಕನ್ನಡಿಗರು ಕಾಲ್ತುಳಿತಕ್ಕೆ ಬಲಿ..! ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂಧನ..!
ಮುಂಡಗೋಡ ಶಿವಾಜಿ ಸರ್ಕಲ್, ಕೋರ್ಟ ಬಳಿಯೇ ನಡೀತು ಮತ್ತೊಂದು ಅಮಾನುಷ ಹಲ್ಲೆ..! ಅಷ್ಟಕ್ಕೂ, ಆ ವ್ಯಕ್ತಿಗೆ ಅಟ್ಟಾಡಿಸಿ, ಚಪ್ಪಲಿಯಿಂದ ಹೊಡೆದದ್ದು ಯಾರು..?
ಹುಬ್ಬಳ್ಳಿಯಲ್ಲಿ ಮತ್ತೆ ಹರಿದ ನೆತ್ತರು, 24 ವರ್ಷದ ಹುಡುಗನ ಬರ್ಬರ ಹತ್ಯೆ..! ಆರೋಪಿಗಳ ಕಾಲಿಗೆ ಗುಂಡು ಹಾರಿಸಿದ ಪೊಲೀಸ್ರು..!
ಮುಂಡಗೋಡಿನ NMD ಜಮೀರ್ ಕಿಡ್ನ್ಯಾಪ್ ಕೇಸ್: ಮತ್ತಿಬ್ಬರು ಆರೋಪಿಗಳ ಹೆಡೆಮುರಿ ಕಟ್ಟಿದ ಪೊಲೀಸ್ರು..!
ನ್ಯಾಸರ್ಗಿಯಲ್ಲಿ ಶ್ರೀಗಂಧದ ಮರ ಕಡಿದುಕೊಂಡು ಹೋದ್ರು ಕಳ್ಳರು, ಆಮೇಲೆ ಓಡೋಡಿ ಬಂದ್ರು “ಅ”ರಣ್ಯ ಅಧಿಕಾರಿಗಳು..!
ಯಲ್ಲಾಪುರ ಅರಬೈಲು ಘಟ್ಟದಲ್ಲಿ ಭೀಕರ ಅಪಘಾತ, 10 ಜನ ಸ್ಥಳದಲ್ಲೇ ಸಾವು..! 15 ಜನರಿಗೆ ಗಾಯ..!
ಮಹಾರಾಷ್ಟ್ರದಿಂದ ಕಬ್ಬು ಕಟಾವಿಗೆ ಬಂದಿದ್ದ ಅಪ್ರಾಪ್ತೆಯನ್ನ ಆ ಹುಡುಗ ಅತ್ಯಾಚಾರ ಮಾಡಿದ್ನಾ..? ಹಾಗಿದ್ರೆ ಕೇಸ್ ಏನಾಯ್ತು..?
ಟ್ಯಾಕ್ಸ್ ವಸೂಲಿಯಲ್ಲಿ ಮುಂಡಗೋಡ ತಾಲೂಕು ರಾಜ್ಯಕ್ಕೇ ಪ್ರಥಮ..! ತಾಪಂ ಗ್ರಾಪಂ ಅಧಿಕಾರಿ, ಸಿಬ್ಬಂದಿಗಳ ಸಾಧನೆ..!!
ಮುಂಡಗೋಡ ಬೆಂಡಿಗೇರಿ ಪೆಟ್ರೊಲ್ ಬಂಕ್ ಹತ್ತಿರ ಬೈಕ್ ಅಪಘಾತ, ವೃದ್ದನ ಕಾಲು ಕಟ್..!
ಮಳಗಿ-ಬನವಾಸಿ ರಸ್ತೆಯಲ್ಲಿ ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ, ಓರ್ವ ಸ್ಥಳದಲ್ಲೇ ಓರ್ವ ಸಾವು, ಮತ್ತೋರ್ವ ಗಂಭೀರ..!
NMD ಕಿಡ್ನ್ಯಾಪ್ ಕೇಸ್, ಮತ್ತೆ ಐವರು ಆರೋಪಿಗಳು ಅಂದರ್, ಪೊಲೀಸರು ಆರೋಪಿಗಳಮದ್ಯೆ ಭಾರೀ ಕಾಳಗ..! ಗುಂಡೇಟು..!
NMD ಜಮೀರ್ ಬಾಯ್ ಸೇಫ್..! ಗದಗ ರಿಂಗ್ ರೋಡಲ್ಲಿ ಬಿಟ್ಟು ಹೋದ ಕಿಡ್ನ್ಯಾಪರ್ಸ್..! ಐವರು ಆರೋಪಿಗಳ ಹೆಡೆಮುರಿ ಕಟ್ಟಿದ್ರಾ ಮುಂಡಗೋಡ ಪೊಲೀಸ್ರು..?
ಮುಂಡಗೋಡಿನ NMD ಗ್ರೂಪ್ ಮಾಲೀಕನ ಮೇಲೆ ದುಷ್ಕರ್ಮಿಗಳ ಅಟ್ಯಾಕ್
ಟಿಬೇಟಿಯನ್ ಕಾಲೋನಿ ಬಳಿ ಬೈಕ್ ಗಳ ನಡುವೆ ಡಿಕ್ಕಿ, ಓರ್ವ ಸವಾರ ಸ್ಥಳದಲ್ಲೇ ಸಾವು, ಮತ್ತೋರ್ವ ಗಂಭೀರ..!
ಮುಂಡಗೋಡಿನ ಮುಲ್ಲಾ ಓಣಿಯ ಬಾವಿಯಲ್ಲಿ ವ್ಯಕ್ತಿಯ ಶವ ಪತ್ತೆ..! ಆತ್ಮಹತ್ಯೆನಾ..?
ಮುಂಡಗೋಡಿನ ಅಂಗನವಾಡಿಯಲ್ಲಿ ಹಾವು ಕಚ್ಚಿದ್ದ ಬಾಲಕಿ ಕಿಮ್ಸ್ ನಲ್ಲಿ ಸಾವು..!
ಮುಂಡಗೋಡಿನಲ್ಲಿ ಅಂಗನವಾಡಿಗೆ ಹೋಗಿದ್ದ ಪುಟ್ಟ ಬಾಲಕಿಗೆ ಕಚ್ಚಿದ ಹಾವು..!
ಹಳೇ ದ್ವೇಷದ ಹಿನ್ನಲೆ ಇಬ್ಬರಿಗೆ ಚಾಕು ಇರಿತ
ಹುನಗುಂದ ಪ್ರೌಢಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವಕ್ಕೆ ಚಾಲನೆ..!
ಮುಂಡಗೋಡ: ತಾಲೂಕಿನ ಹುನಗುಂದ ಸರಕಾರಿ ಪ್ರೌಢಶಾಲೆಯಲ್ಲಿ ಇಂದು ಶಾಲಾ ಪ್ರಾರಂಭೋತ್ಸವವನ್ನು ಆಚರಿಸಲಾಯಿತು. ಈ ವೇಳೆ ಕೆಲವು ಮಕ್ಕಳಿಗೆ ಪಠ್ಯ ಪುಸ್ತಕ ವಿತರಿಸಲಾಯಿತು. ಟಿಚ್ ಮೆಟ್ ಆಪ್ ಮೂಲಕ ಆನ್ಲೈನ್ ತರಗತಿಗಳನ್ನು ಪ್ರಾರಂಭಿಸಲಾಯಿತು. ಸರಕಾರಿ ಶಾಲೆಗಳು ನೀಡುವ ಸವಲತ್ತು, ಸೌಕರ್ಯಗಳ ಕುರಿತು ತಿಳಿಸಿ ಹೇಳುವ ಜೊತೆಗೆ ಪ್ಲೇಕ್ಸ್ ಬೋರ್ಡ ಅನ್ನು ಅನಾವರಣ ಗೊಳಿಸಲಾಯಿತು. ಕೋವಿಡ್-19 ರ ಹಿನ್ನೆಲೆಯಲ್ಲಿ ಎಲ್ಲಾ ರೀತಿಯ ಮುನ್ನೇಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು. SDMC ಅಧ್ಯಕ್ಷರು, ಸದಸ್ಯರು, ಪಾಲಕರು, ಪ್ರೌಢಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ಸಿಬ್ಬಂದಿ ವರ್ಗ ಹಾಜರಿದ್ದರು. ******************* ಚೌಡಳ್ಳಿಯ ರೈತನ ಮಕ್ಕಳ ಸಾಹಸವನ್ನೂ ಸ್ವಲ್ಪ ನೋಡಿ..
ವರದಕ್ಷಿಣೆ ದುರಾಸೆಗೆ ಬಲಿಯಾದ್ಲಾ ಕೊಪ್ಪದ ಗೃಹಿಣಿ..? ಹಾಗಂತ ಕೇಸು ಕೊಟ್ಟವರಾರು..?
ಮುಂಡಗೋಡ: ತಾಲೂಕಿನ ಕೊಪ್ಪ ಗ್ರಾಮದಲ್ಲಿ ಗೃಹಿಣಿಯೊಬ್ಬಳು ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆಗೆ ಸಂಬಂಧಿಸಿದಂತೆ ಮೃತ ಸ್ವಾತಿ ಪತಿ ಹಾಗೂ ಅತ್ತೆಯ ವಿರುದ್ಧ ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಬುಧವಾರ ರಾತ್ರಿ ಸ್ವಾತಿ ಮಂಜುನಾಥ ಹೊಸೂರ (26) ಎಂಬ ಗೃಹಿಣಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ವರದಕ್ಷಿಣೆ ಕಿರುಕುಳವಾ..? ಅಂದಹಾಗೆ, ಆತ್ಮಹತ್ಯೆ ಮಾಡಿಕೊಂಡಿರೋ ಗೃಹಿಣಿ ಸ್ವಾತಿಗೆ ಮೂವರು ಹೆಣ್ಣುಮಕ್ಕಳು ಜನಿಸಿದ್ದಾರೆ. ಹೀಗಾಗಿ, ಬರೀ ಹೆಣ್ಣುಮಕ್ಕಳನ್ನೇ ಹೆತ್ತಿದ್ದಿಯಾ, ಅಲ್ದೆ ಮದುವೆಯಲ್ಲಿ ವರದಕ್ಷಿಣೆ ಕೂಡ ನೀಡಿಲ್ಲ ಅಂತಾ ಪತಿ ಮಂಜುನಾಥ್ ಹಾಗೂ ಅತ್ತೆ ತಾಯವ್ವ, ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿದ್ರು ಅಂತಾ ಆರೋಪಿಸಲಾಗಿದೆ. ಮೃತಳ ತಾಯಿಯಿಂದ ದೂರು..! ಈ ಕುರಿತು ಮುಂಡಗೋಡ ಪೊಲೀಸ್ ಠಾಣೆಗೆ ದೂರು ನೀಡಿರೋ ಮೃತ ಗೃಹಿಣಿಯ ತಾಯಿ ಮಲ್ಲವ್ವ ಕಬ್ಬೇರ್, ನನ್ನ ಮಗಳ ಸಾವಿಗೆ ಕಾರಣರಾದವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಅಂತಾ ಕೇಸು ದಾಖಲಿಸಿದ್ದಾರೆ. ಇನ್ನು ಮುಂಡಗೋಡ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. *************************”...
ಚೌಡಳ್ಳಿ ಹುಡುಗರ ಸಾಹಸ, ಕಿರುಚಿತ್ರ ರಚಿಸಿದ್ದೇ ರೋಚಕ..!!
ಮುಂಡಗೋಡ: ಅದೊಂದು ಪುಟ್ಟಗ್ರಾಮ ಆ ಗ್ರಾಮದಲ್ಲಿ ಅನೇಕ ಜನಪದ, ಸಾಂಸ್ಕೃತಿಕ, ನಾಟಕ ಸೇರಿ ಹಲವು ಪ್ರಕಾರಗಳ ಕಲಾವಿಧರಿದ್ದಾರೆ. ಸಾಕಷ್ಟು ಪ್ರತಿಭಾನ್ವಿತ ಮಕ್ಕಳಿದ್ದಾರೆ. ಹಾಗಿರೋ ಚೌಡಳ್ಳಿ ಗ್ರಾಮದಲ್ಲಿ ಈ ಯುವಕರು ಹೊಸ ಸಾಹಸ ಮಾಡಿದ್ದಾರೆ. ಅಪ್ಪಟ ಜವಾರೀ ಕಲಾವಿಧರಾಗಿರೋ ರೈತನ ಮಕ್ಕಳೇ ಕಿರು ಚಿತ್ರ ರಚಿಸಿದ್ದಾರೆ. ಅಚ್ಚರಿಯೆಂದ್ರೆ ಹಾಗೆ ರಚಿಸಿರೋ ಕಿರುಚಿತ್ರದ ಚಿತ್ರೀಕರಣ, ಯಾವುದೇ ತಂತ್ರಜ್ಞಾನದ ಸಹಾಯದಿಂದಲ್ಲ, ಯಾವುದೇ ಡಿಸಿಟಲ್ ಕ್ಯಾಮೆರಾಗಳಿಂದಲ್ಲ, ಬದಲಾಗಿ ತಾವೇ ನಿರ್ಮಿಸಿಕೊಂಡ ಪರಿಕರಗಳಿಂದ.. ಹಾಗಾದ್ರೆ ಹೇಗಿದೆ ಆ ಅನ್ನದಾತನ ಮಕ್ಕಳ ಮೇಕಿಂಗ್ ಕಹಾನಿ..? ಇಲ್ಲಿದೆ ನೋಡಿ.. ಈ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ.. https://youtu.be/YA1p_snqzoQ
ಕೊಪ್ಪ ಗ್ರಾಮದಲ್ಲಿ ನೇಣಿಗೆ ಶರಣಾದ ಗೃಹಿಣಿ..!
ಮುಂಡಗೋಡ: ತಾಲೂಕಿನ ಕೊಪ್ಪ (ಇಂದೂರು) ಗ್ರಾಮದಲ್ಲಿ ಗೃಹಿಣಿಯೊಬ್ಬರು ನೇಣಿಗೆ ಶರಣಾದ ಘಟನೆ ನಡೆದಿದೆ. ಸ್ವಾತಿ ಮಂಜುನಾಥ್ ಹೊಸೂರು(26) ನೇಣಿಗೆ ಶರಣಾದ ಗೃಹಿಣಿಯಾಗಿದ್ದಾಳೆ. ತನ್ನ ಮನೆಯ ಕೋಣೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಘಟನೆಗೆ ಕಾರಣ ತಿಳಿದು ಬಂದಿಲ್ಲ. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಹುನಗುಂದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ “ಶಾಲಾ ಪ್ರಾರಂಭೋತ್ಸವ”
ಮುಂಡಗೋಡ: ತಾಲೂಕಿನ ಹುನಗುಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂದು ಶಾಲಾ ಪ್ರಾರಂಭೋತ್ಸವ ಆಚರಿಸಲಾಯಿತು. ಕೋವಿಡ್ ಸಂಕಷ್ಟದಿಂದ ಈಗಷ್ಟೆ ಹೊರ ಬಂದಿರೋ ಕಾರಣಕ್ಕೆ ವಿದ್ಯಾರ್ಥಿಗಳಿಗೆ ಇಂದಿನಿಂದ ಆನ್ ಲೈನ್ ಶಿಕ್ಷಣ ಪ್ರಾರಂಭವಾಗುತ್ತಿದೆ. ಅಲ್ದೆ, ಚಂದನ ವಾಹಿನಿಯ ಸಂವೇದ ಕಾರ್ಯಕ್ರಮದ ಮೂಲಕ ಇಂದಿನಿಂದ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಎಲ್ಲಾ ವಿಷಯಗಳ ತರಗತಿಗಳು ಪ್ರಾರಂಭವಾಗುತ್ತಿವೆ. ಹೀಗಾಗಿ ವಿದ್ಯಾರ್ಥಿಗಳು ಮನೆಯಲ್ಲೇ ಕುಳಿತು ಶಿಕ್ಷಕರು ಈಗಾಗಲೇ ಕಳಿಸಿರೋ ಮಾರ್ಗಸೂಚಿಗಳನ್ನು ಪಾಲಿಸಿ ಪಾಠ ಕೇಳಬೇಕು ಅಂತಾ ಶಿಕ್ಷಕರು ತಿಳಿಸಿದ್ದಾರೆ.
ಸಚಿವ ಶಿವರಾಮ್ ಹೆಬ್ಬಾರ್ ಅಂದ್ರೆ ಇಷ್ಟವಾಗೋದು ಇದೇ ಕಾರಣಕ್ಕೆ..!!
ಅದ್ಯಾಕೋ ಗೊತ್ತಿಲ್ಲ, ಶಿವರಾಮ್ ಹೆಬ್ಬಾರ್ ಅಂದ್ರೆ ಇಷ್ಟವಾಗೋದು ಇದೇ ಕಾರಣಕ್ಕೆ. ಅವ್ರು ಯಾವ ಪಕ್ಷದಲ್ಲಿದ್ದಾರೆ..? ಯಾವ ಹುದ್ದೆಯಲ್ಲಿದ್ದಾರೆ..? ಅಂತೇಲ್ಲ ನೋಡಿ ಬಕೀಟು ಹಿಡಿಯೋ ಸಲುವಾಗಿ ಹೊಗಳುವ, ಅಥವಾ ಅವ್ರಿಂದ ಬೆನ್ನು ತಟ್ಟಿಸಿಕೊಳ್ಳೊ ಇರಾದೆಯ ಜಾಯಮಾನವಂತೂ ನಮಗೆ ಖಂಡಿತ ಇಲ್ಲ. ಆದ್ರೆ, ಯಲ್ಲಾಪುರ ಕ್ಷೇತ್ರದಲ್ಲಿ ಶಿವರಾಮ್ ಹೆಬ್ಬಾರ್ ಒಬ್ಬ ಉತ್ತುಂಗದ ಮಾನವೀಯ ಮೌಲ್ಯಗಳನ್ನ ಮೈಗೂಡಿಸಿಕೊಂಡ ಪಕ್ಷಾತೀತ ನಾಯಕನಾಗಿ ಕಾಣ್ತಾರೆ. ಆ ಕಾರಣಕ್ಕೆ ಅವ್ರನ್ನ ಬಹುಶಃ ಕಾಂಗ್ರೆಸ್ಸಿನ ಅದೇಷ್ಟೋ ಕಾರ್ಯಕರ್ತರೂ ಇಷ್ಟ ಪಡ್ತಾರೆ. ಅಹಂ ಸುಳಿಯಲ್ಲ..! ನಿಜ, ಶಿವರಾಮ್ ಹೆಬ್ಬಾರ್, ಎರಡು ಬಾರಿ ಶಾಸಕರಾಗಿ ಆಯ್ಕೆಯಾದವರು. ಅವ್ರ ರಾಜಕೀಯ ಜೀವನದ ಹಾದಿ ಅಷ್ಟೊಂದು ಸುಲಭವಾಗಿದ್ದಲ್ಲ. ಶಾಸಕರಾಗಿ, ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸೋ ಗಳಿಗೆವರೆಗೂ ಅವ್ರು ಕ್ಷೇತ್ರದಲ್ಲಿ ಪಟ್ಟ ಶ್ರಮ, ಕಾರ್ಯಕರ್ತರೊಂದಿಗಿನ ಅವಿನಾಭಾವ ಸಂಬಂಧ, ಅದೇಂತದ್ದೇ ಸಂದರ್ಭ ಬಂದರೂ ಕ್ಷೇತ್ರದ ಜನತೆಯೊಂದಿಗೆ ಸ್ಪಂಧಿಸುವ ಮನೋಭಾವ, ಇದೇಲ್ಲ ಶಿವರಾಮ್ ಹೆಬ್ಬಾರ್ ಇಡೀ ಯಲ್ಲಾಪುರ ಕ್ಷೇತ್ರದಲ್ಲಿ ಮನೆ ಮಾತಾಗುವಂತೆ ಮಾಡಿದೆ. ಹೆಬ್ಬಾರ್ ಸಾಹೇಬ್ರು ಸಚಿವರಾದ ಮೇಲೆ ಕ್ಷೇತ್ರದ ಜನರ...
ಕಳ್ಳತನದ ಆರೋಪ ಹೊರಿಸಿದ ಮನೆ ಮಾಲೀಕ..! ಗೋವಾಕ್ಕೆ ದುಡಿಯಲು ಹೋಗಿದ್ದ ಮೂವರೂ ಹೆಣವಾದರು..!! ಅಯ್ಯೋ ವಿಧಿಯೇ..!
ಕಾರವಾರ: ಕರ್ನಾಟಕದಿಂದ ಹೊಟ್ಟೆ ಪಾಡಿಗಾಗಿ ದುಡಿಯಲು ಗೋವಾಕ್ಕೆ ಹೋಗಿದ್ದ ಒಂದೇ ಕುಟುಂಬದ ಮೂವರು ಗೋವಾದಲ್ಲೇ ನೇಣಿಗೆ ಶರಣಾಗಿರೋ ಮನಕಲುಕುವ ಘಟನೆ ನಡೆದಿದೆ. ಗೋವಾದ ಜುವಾರಿ ನಗರದ ಎಂಇಎಸ್ ಕಾಲೇಜಿನ ಆವರಣದ ಬಾಡಿಗೆ ಮನೆಯೊಂದರಲ್ಲಿ ಘಟನೆ ನಡೆದಿದ್ದು ಇಡೀ ಗೋವಾ ಕನ್ನಡಿಗರನ್ನು ಬೆಚ್ಚಿ ಬೀಳಿಸಿದೆ. ಹೊಟ್ಟೆಪಾಡಿಗಾಗಿ ಹೋಗಿದ್ರು..! ಕಳೆದ ಹಲವು ವರ್ಷಗಳಿಂದೇ ಕೂಲಿ ಮಾಡಿ ಬದುಕುವ ಉದ್ದೇಶದಿಂದ ಗೋವಾದಲ್ಲೇ ಬದುಕು ಸಾಗಿಸುತ್ತಿದ್ದ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಸುಲ್ತಾನಪುರ ಗ್ರಾಮದ ಹುಲಗಪ್ಪ ಅಂಬಿಗೇರ(35), ಪತ್ನಿ ದೇವಮ್ಮ ಅಂಬಿಗೇರ(28) ಹಾಗೂ 29 ವರ್ಷದ ಸಹೋದರ ಗಂಗಪ್ಪ ಅಂಬಿಗೇರ ಎಂಬುವರೇ ನೇಣಿಗೆ ಶರಣಾದ ದುರ್ದೈವಿಗಳು ನೇಣಿನ ನಿರ್ಧಾರ ಹಲವು ಸಂಶಯಗಳಿಗೆ ಎಡೆ ಮಾಡಿಕೊಟ್ಟಿದೆ. ಘಟನೆ ಏನು..? ಕಳೆದ 4-5 ದಿನಗಳಿಂದಷ್ಟೇ ಗೊವಾದ ಜುವಾರಿ ನಗರದ ಶಮಶುದ್ದಿನ್ ಎಂಬ ಮಾಲೀಕನ ಮನೆಯಲ್ಲೇ ದುರ್ದೈವಿಗಳು ವಾಸವಿದ್ದರು, ಮಾಲೀಕ ಶಮಶುದ್ದಿನ್ ನೇಣಿಗೆ ಶರಣಾದವರ ಮೇಲೆ ತನ್ನ ಮನೆಯಲ್ಲಿ ಸಂಗ್ರಹಿಸಿಟ್ಟ ಬಂಗಾರ ಹಾಗೂ ಹಣದ ಒಟ್ಟು ಮೊತ್ತ ಸುಮಾರು 15...
ಬಡವರಿಗೆ ನೀಡಿದ್ದ ನಿವೇಶನಗಳೇ ಅತಿಕ್ರಮಣ..? ತೆರವುಗೊಳಿಸಿ ಕೊಡುವಂತೆ ಸನವಳ್ಳಿ ನಿವಾಸಿಗಳಿಂದ ಎಸಿಗೆ ಮನವಿ..!
ಮುಂಡಗೋಡ: ತಾಲೂಕಿನ ಸನವಳ್ಳಿ ಗ್ರಾಮದ ಕೆಲ ನಿವಾಸಿಗಳು ಶಿರಸಿ ಉಪ ವಿಭಾಗಾಧಿಕಾರಿಗಳ ಕಚೇರಿ ಮೆಟ್ಟಿಲೇರಿದ್ದಾರೆ. ತಮಗೆ ಸರ್ಕಾರ ನೀಡಿದ್ದ ನಿವೇಶನಗಳನ್ನು ವಾಪಸ್ ಕೊಡಿಸುವಂತೆ ಕೋರಿ ಶಿರಸಿ ಉಪವಿಭಾಗಾಧಿಕಾರಿಗಳಿಗೆ ಮನವಿ ನೀಡಿದ್ದಾರೆ. ಮನವಿಯಲ್ಲೇನಿದೆ..? ಮುಂಡಗೋಡ ತಾಲೂಕಿನ ಸನವಳ್ಳಿ ಗ್ರಾಮದ ಕೆಲವು ಬಡವರಿಗೆ ಸೂರು ಕಲ್ಪಿಸಿಕೊಳ್ಳಲು ಸರ್ಕಾರ ಗ್ರಾಮದ ಸರ್ವೆ ನಂಬರ್-51(1-18-0) ರಲ್ಲಿ 16 ನಿವೇಶನಗಳನ್ನ ಹಂಚಿತ್ತು. ಹಾಗೆ ಹಂಚಿದ್ದ ನಿವೇಶನಗಳನ್ನು ಪಕ್ಕದ ಜಮೀನು ಅಂದ್ರೆ ಸರ್ವೆ ನಂಬರ್ 50 ಮತ್ತು 52 ರ ಮಾಲೀಕರು, ಅತಿಕ್ರಮಣ ಮಾಡಿಕೊಂಡಿದ್ದಾರೆ ಅಂತಾ ಅಲ್ಲಿನ ನಿವಾಸಿಗಳು ಮನವಿಯಲ್ಲಿ ಆರೋಪಿಸಿದ್ದಾರೆ. ಕೇಳಿದ್ರೆ ಹಲ್ಲೆಗೆ ಬರ್ತಾರಂತೆ..! ಹಾಗೇ, ಹಂಚಿಕೆ ಮಾಡಿದ್ದ ನಿವೇಶನಗಳನ್ನು ಅತಿಕ್ರಮಣ ಮಾಡಿಕೊಂಡಿದ್ದನ್ನು ಬಿಟ್ಟುಕೊಡಿ ಅಂತಾ ಸಾಕಷ್ಟು ಬಾರಿ ಮನವಿ ಮಾಡಿದ್ರೂ ಅವ್ರು ಕ್ಯಾರೇ ಅಂತಿಲ್ಲವಂತೆ, ಅಲ್ದೇ ಹಾಗೆ ಕೇಳಿದ್ರೆ ಮಚ್ಚು, ಕೊಡಲಿಗಳನ್ನ ತಂದು ಹಲ್ಲೆಗೆ ಬರ್ತಾರೆ ಅಂತಾ ಮನವಿಯಲ್ಲಿ ನಿವಾಸಿಗಳು ಅಳಲು ತೋಡಿಕೊಂಡಿದ್ದಾರೆ. ತಹಶೀಲ್ದಾರರಿಂದಲೂ ಕ್ರಮವಿಲ್ಲ..! ಇನ್ನು ಇಂತಹದ್ದೊಂದು ಅತಿಕ್ರಮಣ ಆರೋಪ ಮಾಡಿ ಈಗಾಗಲೇ ಮುಂಡಗೋಡ ತಾಹಶೀಲ್ದಾರರಿಗೆ...
ಅಗಡಿ ಬಳಿ ಬೈಕ್ ಸ್ಕಿಡ್ ಆಗಿ ಬಿದ್ದ ಸವಾರ: ಗಂಭೀರ ಗಾಯ..!
ಮುಂಡಗೋಡ: ತಾಲೂಕಿನ ಅಗಡಿ ಸಮೀಪದ ಶಾಂತಾ ದುರ್ಗಾ ರೈಸ್ ಮಿಲ್ ಬಳಿ ಬೈಕ್ ಸ್ಕಿಡ್ ಆಗಿ ಬೈಕ್ ಸವಾರ ಗಂಭೀರ ಗಾಯಗೊಂಡ ಘಟನೆ ನಡೆದಿದೆ. ಕಲಘಟಗಿ ತಾಲೂಕಿನ ಶಿಗ್ಗಟ್ಟಿ ಗ್ರಾಮದ ಶೇಖಪ್ಪಾ ಲಮಾಣಿ ಗಾಯಗೊಂಡ ಬೈಕ್ ಸವಾರ ಅಂತಾ ತಿಳಿದು ಬಂದಿದೆ. ಬೈಕ್ ನ ಹಿಂದಿನ ಗಾಲಿ ಪಂಕ್ಚರ್ ಆಗಿದ್ದ ಕಾರಣಕ್ಕೆ ಸ್ಕಿಡ್ ಆಗಿ ಬಿದ್ದಿದ್ದು, ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದ. ಹೀಗಾಗಿ, ಸ್ಥಳೀಯರು ಕೂಡಲೇ ಅಂಬ್ಯುಲೆನ್ಸ್ ತರಿಸಿ ಗಾಯಗೊಂಡ ಬೈಕ್ ಸವಾರನನ್ನು ಕಲಘಟಗಿ ತಾಲೂಕಾ ಆಸ್ಪತ್ರೆಗೆ ರವಾನಿಸಿದ್ದಾರೆ.