ಅದ್ಯಾಕೋ ಗೊತ್ತಿಲ್ಲ, ಶಿವರಾಮ್ ಹೆಬ್ಬಾರ್ ಅಂದ್ರೆ ಇಷ್ಟವಾಗೋದು ಇದೇ ಕಾರಣಕ್ಕೆ. ಅವ್ರು ಯಾವ ಪಕ್ಷದಲ್ಲಿದ್ದಾರೆ..? ಯಾವ ಹುದ್ದೆಯಲ್ಲಿದ್ದಾರೆ..? ಅಂತೇಲ್ಲ ನೋಡಿ ಬಕೀಟು ಹಿಡಿಯೋ ಸಲುವಾಗಿ ಹೊಗಳುವ, ಅಥವಾ ಅವ್ರಿಂದ ಬೆನ್ನು ತಟ್ಟಿಸಿಕೊಳ್ಳೊ ಇರಾದೆಯ ಜಾಯಮಾನವಂತೂ ನಮಗೆ ಖಂಡಿತ ಇಲ್ಲ. ಆದ್ರೆ, ಯಲ್ಲಾಪುರ ಕ್ಷೇತ್ರದಲ್ಲಿ ಶಿವರಾಮ್ ಹೆಬ್ಬಾರ್ ಒಬ್ಬ ಉತ್ತುಂಗದ ಮಾನವೀಯ ಮೌಲ್ಯಗಳನ್ನ ಮೈಗೂಡಿಸಿಕೊಂಡ ಪಕ್ಷಾತೀತ ನಾಯಕನಾಗಿ ಕಾಣ್ತಾರೆ. ಆ ಕಾರಣಕ್ಕೆ ಅವ್ರನ್ನ ಬಹುಶಃ ಕಾಂಗ್ರೆಸ್ಸಿನ ಅದೇಷ್ಟೋ ಕಾರ್ಯಕರ್ತರೂ ಇಷ್ಟ ಪಡ್ತಾರೆ.

ಅಹಂ ಸುಳಿಯಲ್ಲ..!
ನಿಜ, ಶಿವರಾಮ್ ಹೆಬ್ಬಾರ್, ಎರಡು ಬಾರಿ ಶಾಸಕರಾಗಿ ಆಯ್ಕೆಯಾದವರು. ಅವ್ರ ರಾಜಕೀಯ ಜೀವನದ ಹಾದಿ ಅಷ್ಟೊಂದು ಸುಲಭವಾಗಿದ್ದಲ್ಲ. ಶಾಸಕರಾಗಿ, ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸೋ ಗಳಿಗೆವರೆಗೂ ಅವ್ರು ಕ್ಷೇತ್ರದಲ್ಲಿ ಪಟ್ಟ ಶ್ರಮ, ಕಾರ್ಯಕರ್ತರೊಂದಿಗಿನ ಅವಿನಾಭಾವ ಸಂಬಂಧ, ಅದೇಂತದ್ದೇ ಸಂದರ್ಭ ಬಂದರೂ ಕ್ಷೇತ್ರದ ಜನತೆಯೊಂದಿಗೆ ಸ್ಪಂಧಿಸುವ ಮನೋಭಾವ, ಇದೇಲ್ಲ ಶಿವರಾಮ್ ಹೆಬ್ಬಾರ್ ಇಡೀ ಯಲ್ಲಾಪುರ ಕ್ಷೇತ್ರದಲ್ಲಿ ಮನೆ ಮಾತಾಗುವಂತೆ ಮಾಡಿದೆ. ಹೆಬ್ಬಾರ್ ಸಾಹೇಬ್ರು ಸಚಿವರಾದ ಮೇಲೆ ಕ್ಷೇತ್ರದ ಜನರ ಕೈಗೆ ಸಿಗಲ್ಲ ಅನ್ನೋ ಮಾತುಗಳಿದ್ದವು. ಆದ್ರೆ ಸಚಿವರಾದ ಮೇಲೆನೇ ಶಿವರಾಮ್ ಹೆಬ್ಬಾರ್ ಕ್ಷೇತ್ರದ ಕಟ್ಟಕಡೆಯ ಕಾರ್ಯಕರ್ತನ ಮನಸಿಗೂ ಹತ್ತಿರವಾದ್ರು. ಯಾಕಂದ್ರೆ ಅವ್ರ ಮನಸಲ್ಲಿ ಯಾವತ್ತಿಗೂ “ಅಹಂ” ಭಾವ ಸುಳಿಯಲೇ ಇಲ್ಲ. ಕ್ಷೇತ್ರದ ಯಾವುದೇ ಒಬ್ಬ ಕಾರ್ಯಕರ್ತ ಎದುರು ಸಿಕ್ಕಾಗಲೂ ಆ ಕಾರ್ಯಕರ್ತನ ಹೆಸರು ನೆನಪಿಟ್ಟು, ಹೆಸರಿನ ಮೂಲಕವೇ ಕರೆದು ಸಂತೈಸುವ ಗುಣವಿರೋದು ಬಹುಶಃ ಸಚಿವ ಹೆಬ್ಬಾರ್ ರವರಿಗೆ ಮಾತ್ರ ಅಂದ್ರೆ ಅದು ಅತಿಶಯೋಕ್ತಿ ಅಲ್ಲವೇ ಅಲ್ಲ.

ಕೊರೋನಾ ನಡುವೆ..!
ಇನ್ನು, ಕೊರೋನಾ ಅಟ್ಟಹಾಸ ಉತ್ತರ ಕನ್ನಡ ಜಿಲ್ಲೆಯನ್ನು ಹುರಿದು ಮುಕ್ಕಿತ್ತು. ಈ ಸಂದರ್ಭದಲ್ಲಿ ಸಚಿವ ಶಿವರಾಮ್ ಹೆಬ್ಬಾರ್ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಇಡೀ ಜಿಲ್ಲೆಯ ಪ್ರತೀ ತಾಲೂಕಿಗೂ ತಿರುಗಾಡಿದ್ದು, ಅಲ್ಲಿನ ಬೇಕು ಬೇಡಗಳ‌ ಕುರಿತು ಜಾಗ್ರತೆ ವಹಿಸಿದ್ದು ನಿಜಕ್ಕೂ ಸರಿಸಾಟಿಯಿಲ್ಲದ ಕಾರ್ಯ.
ಈ ಕಾರಣಕ್ಕಾಗೇ, ಒಂದು ಹೊತ್ತಲ್ಲಿ ಜಿಲ್ಲೆಯ ಪಾಸಿಟಿವಿಟಿ ರೇಟ್ ಗಗನಕ್ಕೇರಿ ಆತಂಕದ ಸ್ಥಿತಿ ತಲುಪಿದಾಗಲೂ, ಜಿಲ್ಲೆಯ ಯಾವೊಬ್ಬ ಅಧಿಕಾರಿಯೂ ಎದೆಗುಂದದಂತೆ ಅಧಿಕಾರಿಗಳ ಹೆಗಲಿಗೆ, ಹೆಗಲು ಕೊಟ್ಟು ಜಿಲ್ಲೆಯನ್ನು ಆತಂಕದ ಕ್ಷಣಗಳಿಂದ ಮುಕ್ತಗೊಳಿಸುವ ನಿಟ್ಟಿನಲ್ಲಿ ಸಚಿವ ಹೆಬ್ಬಾರ್ ನಿರ್ವಹಿಸಿದ ಕಾರ್ಯವೈಖರಿ, ಬಹುಶಃ ರಾಜ್ಯದಲ್ಲೇ ಮಾದರಿ ಅನಿಸತ್ತೆ.

ಸಾವಿರ ಸಾವಿರ ಬಡವರಿಗೆ..!
ಇನ್ನು ಸಧ್ಯ ಯಲ್ಲಾಪುರ ಕ್ಷೇತ್ರದಾಧ್ಯಂತ ಸಾವಿರಸಾವಿರ ಬಡವರಿಗೆ ದಿನಸಿ ಕಿಟ್ ನೀಡುವ ಯೋಜನೆ ಜಾರಿಯಲ್ಲಿದೆ. “ಹೆಬ್ಬಾರ್ ಕಿಟ್” ನೊಂದವರಿಗೆ ತಲುಪಿಸುವ ಮಹತ್ಕಾರ್ಯಕ್ಕೆ ಇಡೀ ಕ್ಷೇತ್ರದಲ್ಲೇ ಸಮರೋಪಾದಿಯಾಗಿ ನಡೆಯುತ್ತಿದೆ. ಬಿಪಿಎಲ್ ಕುಟುಂಬಗಳಿಗೆ “ಹೆಬ್ಬಾರ್ ಕಿಟ್” ನೀಡುವ ಮೂಲಕ ಲಾಕ್ ಡೌನ್ ಸಂದರ್ಭದಲ್ಲಿ ಬಸವಳೊದು ಹೋಗಿದ್ದ ಬಡ ಕುಟುಂಬಗಳಿಗೆ ಆಸರೆಯಾಗಿದ್ದಾರೆ ಸಚಿವ್ರು.

ಕಾರ್ಯಕರ್ತರ ಉತ್ಸಾಹ..
ಇನ್ನು “ಹೆಬ್ಬಾರ್ ಕಿಟ್” ಮನೆ ಮನೆಗೆ ತಲುಪಿಸುವ ಕಾರ್ಯದಲ್ಲಿ ಕ್ಷೇತ್ರದ ಕಾರ್ಯಕರ್ತರ ಪಾತ್ರ ನಿಜಕ್ಕೂ ಶ್ಲಾಘನೀಯ. ಪ್ರತೀ ಹಳ್ಳಿಗಳ ಮನೆ ಮನೆಗೂ ತೆರಳಿ, ಟೋಕನ್ ಕೊಟ್ಟು, ಸಂತೈಸುವ ಗುಣ, ಕಾರ್ಯಕರ್ತರ ಉತ್ಸಾಹ ನಿಜಕ್ಕೂ ಮಾದರಿ.
ಯಲ್ಲಾಪುರ ತಾಲೂಕು, ಮುಂಡಗೋಡ ತಾಲೂಕು ಹಾಗೂ ಬನವಾಸಿ ಭಾಗಗಳಲ್ಲಿ ಈಗಾಗಲೇ “ಹೆಬ್ಬಾರ್ ಕಿಟ್” ವಿತರಿಸುವ ಕಾರ್ಯ ಅಚ್ಚುಕಟ್ಟಾಗಿ ನಡೆಯುತ್ತಿದೆ.

ವಿವೇಕ್ ಹೆಬ್ಬಾರ್ ಶ್ರಮ..!
ಅಸಲು, ಸಚಿವ ಹೆಬ್ಬಾರ್ ಅದೇಷ್ಟು ಕ್ರಿಯಾಶೀಲರಾಗಿ ಕೋವಿಡ್ ನಿರ್ವಹಣೆಯಲ್ಲಿ ಬ್ಯುಸಿಯಾಗಿದ್ರೋ ಅಷ್ಟೇ ಅವ್ರ ಪುತ್ರ ವಿವೇಕ್ ಹೆಬ್ಬಾರ್ ಕೂಡ ಇಡೀ ಕ್ಷೇತ್ರದಾಧ್ಯಂತ ತಿರುಗಾಡಿದ್ರು. ತಮ್ಮ ಯುವ ಪಡೆಯ ಮೂಲಕ ಕ್ಷೇತ್ರದ ಬಡವರ ಕಣ್ಣೀರು ಒರೆಸುವ ಕಾರ್ಯದಲ್ಲಿ ಬ್ಯುಸಿಯಾಗಿದ್ರು. ಹೀಗಾಗಿ ಭವಿಷ್ಯದ ನಾಯಕನಾಗಿ ಹೊರಹೊಮ್ಮುವ ಎಲ್ಲಾ ಲಕ್ಷಣಗಳನ್ನೂ ವಿವೇಕ್ ಹೆಬ್ಬಾರ್ ಹೊಂದಿರೋದು ಇಡೀ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಜನ ಕಣ್ಣಾರೆ ಕಂಡಿದ್ದಾರೆ.

ಏನೆ ಇರಲಿ, ಕೋವಿಡ್ ಸಂದರ್ಭದಲ್ಲಿ ಅಕ್ಷರಶಃ ಬಸವಳಿದು ಹೋಗಿದ್ದ ಕ್ಷೇತ್ರದ ಮಂದಿಗೆ ಒಂದಿಷ್ಟು ಸಾಂತ್ವನ ಹೇಳಿ, ನಿಮ್ಮ ಜೊತೆ ನಾನಿದ್ದೀನಿ ಅಂತಾ ಸಚಿವ ಶಿವರಾಮ್ ಹೆಬ್ಬಾರ್ ಪಡೆ ಭರವಸೆಯ ಕಿರಣ ಮೂಡಿಸುತ್ತಿದೆ.

error: Content is protected !!